Latest Updates
-
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು!
ವ್ಯಾಲೆಂಟೈನ್ಸ್ ಡೇಗೆ ನಿಮ್ಮವ/ ನಿಮ್ಮವಳಿಗೆ ರೆಡ್ ವೆಲ್ವಟ್ ಕೇಕ್ ಮಾಡಿದರೆ ಆ ಫೀಲ್ ಇನ್ನಷ್ಟು ರೊಮ್ಯಾಂಟಿಕ್ ಅಲ್ವಾ
ವ್ಯಾಲೆಂಟೈನ್ಸ್ ವೀಕ್ ನಿಮ್ಮ ಪ್ರೇಮಿಗೆ ರೆಡ್ ವೆಲ್ವಟ್ ಕೇಕ್ ನಿಮ್ಮ ಕೈಯಾರೆ ಮಾಡಿದರೆ ಆ ಫೀಲ್ ಇನ್ನಷ್ಟು ರೊಮ್ಯಾಂಟಿಕ್ ಅನಿಸುವುದು ಅಲ್ವಾ? ಆದರೆ ಈ ಕೇಕ್ ಮಾಡುವುದು ಕಷ್ಟ ಎಂದು ತಲೆಕೆಡಿಸಿಕೊಳ್ಳಬೇಡಿ, ಸುಲಭವಾಗಿ ಮಾಡಬಹುದಾದ ಕೇಕ್ ರೆಸಿಪಿ ನೀಡಲಾಗಿದೆ ನೋಡಿ:

ಬೇಕಾಗುವ ಸಾಮಗ್ರಿ
3 ಕಪ್ ಮೈದಾ ಹಿಟ್ಟು
2 ಕಪ್ ಸಕ್ಕರೆ
3 ಚಮಚ ಸಿಹಿರಹಿತ ಕೋಕಾ ಪುಡಿ
ಒಂದೂವರೆ ಚಮಚ ಬೇಕಿಂಗ್ ಸೋಡಾ
1/2 ಚಮಚ ಬೇಕಿಂಗ್ ಪುಡಿ
11/4 ಚಮಚ ಉಪ್ಪಿನ ಪುಡಿ
3 ಮೊಟ್ಟೆ
ಒಂದೂವರೆ ಕಪ್ ವೆಜೆಟೇಬಲ್ ಆಯಿಲ್
ಒಂದೂವರೆ ಕಪ್ ಮಜ್ಜಿಗೆ
1/2 ಕಪ್ ಸೋರ್ ಕ್ರೀಮ್ (Sour cream)
2 ಚಮಚ ಫುಡ್ ಕಲರ್
1 ಚಮಚ ವೆನಿಲ್ಲಾ ರಸ
ಒಂದೂವರೆ ಚಮಚ ವೈಟ್ ವಿನೆಗರ್
ಕ್ರೀಮ್ ಚೀಸ್ ಫ್ರಾಸ್ಟಿಂಗ್
2 ಪ್ಯಾಕೇಜ್ ಕ್ರೀಮ್ ಚೀಸ್
1 ಕಪ್ ವೈಟ್ ಸಕ್ಕರೆ
1/4 ಕಪ್ ಮೈದಾ
1 ಕಪ್ ಹಾಲು
1 ಚಮಚ ವೆನಿಲ್ಲಾ ರಸ
ಮಾಡುವ ವಿಧಾನ
ಸ್ಟೆಪ್ 1
ನೀವು ಮೈಕ್ರೋವೇವ್ ಅನ್ನು 350 ಡಿಗ್ರಿ Fಗೆ ಪ್ರೀಹೀಟ್ ಮಾಡಿ. ನಂತರ ಕೇಕ್
ಪ್ಯಾನ್‌ಗೆ ಹಾರ್ಟ್ ಆಕಾರದ ಶೀಟ್ ಹಾಕಿ ಅದರ ಮೇಲೆ ಬೆಣ್ಣೆ ಸವರಿ
ಸ್ಟೆಪ್ 2
ಒಂದು ಬೌಲ್‌ಗೆ 3 ಕಪ್ ಮೈದಾ, 2 ಕಪ್ ಸಕ್ಕರೆ, ಕೋಕಾ ಪುಡಿ, ಬೇಕಿಂಗ್ ಸೋಡಾ,
ಬೇಕಿಂಗ್ ಪುಡಿ, ಒಂದೂವರೆ ಚಮಚ ಮಿಕ್ಸ್ ಮಾಡಿ ಬದಿಯಲ್ಲಿಡಿ.
ಸ್ಟೆಪ್ 3
ಒಂದು ಬೌಲ್‌ನಲ್ಲಿ ಮೊಟ್ಟೆಯನ್ನು ಹಾಕಿ ಚೆನ್ನಾಗಿ ಕದಡಿ, ಅದಕ್ಕೆ ಎಣ್ಣೆ,
ಮಜ್ಜಿಗೆ, ಸೋರ್ ಕ್ರೀಮ್(ಹುಳಿ ಕ್ರೀಮ್), ಫುಡ್ ಕಲರ್. 1 ಚಮಚ ವೆನಿಲ್ಲಾ ರಸ,
ವಿನಗೆರ್ ಹಾಕಿ ಚೆನ್ನಾಗಿ ಕದಡಿ,
ಮೊದಲು ಕೈಯಿಂದ ಮಿಕ್ಸ್ ಮಾಡಿ, ನಂತರ ಎಲೆಕ್ಟ್ರಿಕ್ ಮಿಕ್ಸರ್‌ನಿಂದ ಕೂಡ
ಚೆನ್ನಾಗಿ ಮಿಕ್ಸ್ ಮಾಡಿ
ಸ್ಟೆಪ್ 4
ನಂತರ ಈ ಮಿಶ್ರಣವನ್ನು ಬೇಕಿಂಗ್ ಪ್ಯಾನ್‌ಗೆ ಹಾಕಿ 35-40 ನಿಮಿಷ ಬೇಯಿಸಿ,
ಸ್ಪೂನ್‌ನಿಂದ ಚುಚ್ಚಿ ನೋಡಿದಾಗ ಹಿಟ್ಟು ಸ್ಪೂನ್‌ಗೆ ಅಂಟಬಾರದು. ನಂತರ ಬೆಂದ
ಹಿಟ್ಟನ್ನು ಹೊರತೆಗೆದು ತಣ್ಣಗಾಗಲು ಅರ್ಧ ಗಂಟೆ ಇಡಿ.
ಸ್ಟೆಪ್ 6
ಇದೇ ಸಮಯದಲ್ಲಿ ಒಂದು ಬೌಲ್‌ಗೆ Whip cream ಚೀಸ್ ಹಾಕಿ, ನಂತರ ಚೆನ್ನಾಗಿ
ಕದಡಬೇಕು.
ಸ್ಟೆಪ್ 7'
ಈಗ ಒಂದು ಬೌಲ್‌ಗೆ 1 ಕಪ್ ಸಕ್ಕರೆ, 1/4 ಕಪ್ ಮೈದಾ, ಅರ್ಧ ಚಮಚ ಉಪ್ಪು ಈ
ಮಿಶ್ರಣಕ್ಕೆ ಹಾಕಿ ಬಿಸಿ ಮಾಡಿ, ನಂತರ ಚಿಕ್ಕ ಬೌಲ್‌ಗೆ ಹಾಲು ಮತ್ತು ವೆನಿಲ್ಲಾ
ರಸ ಸೇರಿಸಿ ಮಿಕ್ಸ್ ಮಾಡಿ ನಿಧಾನಕ್ಕೆ ಸೇರಿಸಿ, ಗಂಟು-ಗಂಟಾಗಬಾರದು, ಹಾಗಾಗಿ
ಹಾಲನ್ನು ನಿಧಾನಕ್ಕೆ ಒಂದು ಕೈಯಲ್ಲಿ ಸುರಿದರೆ ಮತ್ತೊಂದು ಕೈಯಲ್ಲಿ ಸೌಟ್ ಹಿಡಿದು
ಆಡಿಸುತ್ತಾ ಇರಿ. ಮಿಶ್ರಣ ಸ್ವಲ್ಪ ಕ್ರೀಮಿ-ಕ್ರೀಮಿ ಹಾಗೂ ಗಟ್ಟಿಯಾಗುವವರೆಗೆ
ಬೇಯಿಸಿ ಉರಿ ಆಫ್ ಮಾಡಿ, ನಂತರ ಫ್ರಿಡ್ಜ್‌ನಲ್ಲಿ 10 ನಿಮಿಷ ಇಡಿ.
ಸ್ಟೆಪ್ 8
ನಂತರ ಫ್ರಿಡ್ಜ್‌ನಲ್ಲಿಟ್ಟ ಕ್ರೀಮಿ ಮಿಶ್ರಣ ಹೊರತೆಗೆದು ಮತ್ತೆ 5 ನಿಮಿಷ ಕದಡಿ,
ಬೇಯಿಸಿದ ಕೇಕ್ ಮೇಲೆ ನಿಧಾನಕ್ಕೆ ಮೆತ್ತಿ ನಂತರ ಫ್ರಿಡ್ಜ್‌ನಲ್ಲಿ 3-4 ಗಂಟೆ
ಇಟ್ಟರೆ ರೆಡ್ ವೆಲ್ವಟ್ ಕೇಕ್ ರೆಡಿ.



Click it and Unblock the Notifications
