Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ರಾಗಿ ದೋಸೆ ಹೀಗೆ ಮಾಡಿದರೆ ಟೇಸ್ಟ್ ಅಧಿಕ
ರಾಗಿ ದೋಸೆ ಇತರ ದೋಸೆಯಂತೆಯೇ ತುಂಬಾನೇ ರುಚಿಯಾಗಿರುತ್ತದೆ. ಅಲ್ಲದೆ ಮಧುಮೇಹಿಗಳೂ ಈ ದೋಸೆಯನ್ನು ಸವಿಯಬಹುದು, ದೇಹದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ ಹಾಗೂ ರಾಗಿ ಪೌಷ್ಠಿಕ ಆಹಾರವಾಗಿರುವುದರಿಂದ ದೇಹಕ್ಕೆ ತುಂಬಾನೇ ಒಳ್ಳೆಯದು, ರಾಗಿ ದೋಸೆ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
1 ಕಪ್ ಇಡ್ಲಿ ರೈಸ್(200ಗ್ರಾಂ)
1/2 ಕಪ್ ಉದ್ದಿನ ಬೇಳೆ
1/2 ಕಪ್ ಅವಲಕ್ಕಿ
1 ಕಪ್ ರಾಗಿ ಹಿಟ್ಟು
1 ಚಮಚ ಮೆಂತೆ
1/4 ಕಪ್ ನೀರು (ಉದ್ದು ರುಬ್ಬಲು)
ಅಕ್ಕಿ ರುಬ್ಬಲು ಸ್ವಲ್ಪ ನೀರು
1/2 ಕಪ್ ನೀರು (ರಾಗಿ ಕಲಿಸಲು)
1 ಚಮಚ ಕಲ್ಲುಪ್ಪು
ಎಣ್ಣೆ
ರಾಗಿ ದೋಸೆ ಮಾಡುವ ವಿಧಾನ
ಅಕ್ಕಿಯನ್ನು ತೊಳೆದು ನಂತರ ಅಕ್ಕಿ ಮತ್ತು ಅವಲಕ್ಕಿಯನ್ನು ನೀರಿನಲ್ಲಿ 3-
ಗಂಟೆ ನೆನೆಹಾಕಿ.
ಮತ್ತೊಂದು ಬೌಲ್‌ನಲ್ಲಿ ಉದ್ದಿನ ಬೇಳೆ ತೊಳೆದು 3-4 ಗಂಟೆ ನೆನೆಹಾಕಿ.
ಹಿಟ್ಟು ಮಾಡುವ ವಿಧಾನ
ಅಕ್ಕಿ, ಅವಲಕ್ಕಿ ನೆನೆಹಾಕಿದ ನೀರು ಹೆಚ್ಚಿದ್ದರೆ ಸ್ವಲ್ಪ ಸೋಸಿ ರುಬ್ಬಿ.
ರುಬ್ಬುವಾಗ ನುಣ್ಣನೆ ರುಬ್ಬಿಕೊಳ್ಳಿ.
ಉದ್ದಿನ ಬೇಳೆ, ಮೆಂತೆಯನ್ನು ರುಬ್ಬಿಕೊಳ್ಳಿ.
ರುಬ್ಬಿದ ಉದ್ದಿನ ಬೇಳೆಯನ್ನು ರುಬ್ಬಿದ ಅಕ್ಕಿ ಹಿಟ್ಟಿನ ಜೊತೆ ಮಿಕ್ಸ್ ಮಾಡಿ
ಇಡಿ.
ನಂತರ ನೀರಿಗೆ ರಾಗಿ ಹಿಟ್ಟು ಹಾಕಿ ಕಲೆಸಿ, ಗಂಟು ಗಂಟಾಗಿ ಇರಬಾರದು.
ನಂತರ ಅಕ್ಕಿ ಹಿಟ್ಟಿ ರಾಗಿ ಹಿಟ್ಟು ಹಾಕಿ.
ನಂತರ ಚೆನ್ನಾಗಿ ಮಿಕ್ಸ್ ಮಾಡಿ 2 ಚಮಚ ಮೊಸರು ಸೇರಿಸಿ, ಉಪ್ಪು ಸೇರಿಸಿ ಮಿಕ್ಸ್
ಮಾಡಿ ಇಡಿ.
ನಂತರ ಬೆಳಗ್ಗೆ ರಾಗಿ ದೋಸೆ ಮಾಡಿ.
ರಾಗಿ ದೋಸೆ ಮಾಡುವಾಗ ಈ ಟಿಪ್ಸ್ ಬಳಸಿ
ಕಲ್ಲಿನ ದೋಸೆಯನ್ನು ಬಿಸಿ ಮಾಡಿ, ನಂತರ ಈರುಳ್ಳಿಯನ್ನು ಉಜ್ಜಿ, ನಂತರ ಎಣ್ಣೆ
ಹಚ್ಚಿ.
ನಾನ್‌ಸ್ಟಿಕ್ ಪ್ಯಾನ್ ಆದರೆ ಎಣ್ಣೆ ಹಾಕಬೇಡಿ
ಕಲ್ಲು ಬಿಸಿಯಾದಾಗ ದೋಸೆ ಹಾಕಿದಂತೆ ಹಾಕಿ.
ಎರಡೂ ಬದಿ ಬೆಂದ ಮೇಲೆ ಬಿಸಿ ಬಿಸಿಯಾದ ದೋಸೆಯನ್ನು ಚಟ್ನಿ ಜೊತೆ ಸವಿಯಿರಿ.
ಇತರ ಟಿಪ್ಸ್
ನೀವು ಈ ಹಿಟ್ಟು ಫ್ರಿಡ್ಜ್‌ನಲ್ಲಿಟ್ಟರೆ 2-3 ದಿನ
ಬಳಸಬಹುದು.
ಪ್ರಯೋಜನಗಳು
ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ರಾಗಿ ತುಂಬಾ ಒಳ್ಳೆಯದು
ಮಧುಮೇಹಿಗಳಿಗೆ ರುಚಿಕರವಾದ ಬ್ರೇಕ್‌ಫಾಸ್ಟ್ ಆಗಿದೆ.
ಮಧುಮೇಹ ಬಾರದಂತೆ ತಡೆಗಟ್ಟಲು ಸಹಕಾರಿ
ಮೈ ತೂಕ ನಿಯಂತ್ರಿಸಲು ಸಹಕಾರಿ.
ತಕ್ಷಣವೇ ರಾಗಿ ದೋಸೆ ಮಾಡಬಹುದೇ?
ನೀವು ಅಕ್ಕಿ, ಉದ್ದು ನೆನೆಹಾಕಿ ಹುದುಗು ಬರಿಸಿ ರಾಗಿ ದೋಸೆ ಮಾಡಲು ಟೈಮ್ ಸಿಗದಿದ್ದರೆ ರಾಗಿ ಹಿಟ್ಟು ಮತ್ತು ಗೋಧಿ ಹಿಟ್ಟು ಇವುಗಳನ್ನು ಮಿಶ್ರ ಮಾಡಿ ಸ್ವಲ್ಪ ನೀರು, ಉಪ್ಪು ಹಾಕಿ ಕಲೆಸಿ, ನಂತರ ದೋಸೆ ಕಾವಲಿಗೆ ಹಾಕಿ ದೋಸೆ ಮಾಡಬಹುದು. ಗೋಧಿ ಹಿಟ್ಟು ಮಿಕ್ಸ್ ಮಾಡುವುದರಿಂದ ದೋಸೆ ಕಾವಲಿಗೆ ಅಂಟುವುದಿಲ್ಲ.
ರಾಗಿಯ ಪ್ರಯೋಜನಗಳು
- ರಾಗಿಯಲ್ಲಿ ಪ್ರೊಟೀನ್ ಅಧಿಕವಿದೆ
- ರಾಗಿಯನ್ನು ಇತರ ಧಾನ್ಯಗಳಂತೆ ಸಂಸ್ಕರಿಸಲು ಸಾಧ್ಯವಿಲ್ಲ, ಹಾಗಾಗಿ ರಾಗಿಯಲ್ಲಿರುವ ಅಷ್ಟೂ ಪೋಷಕಾಂಶಗಳು ದೊರೆಯುತ್ತದೆ.
- ತೂಕವನ್ನು ನಿಯಂತ್ರಿಸಬಹುದು
- ರಾಗಿ ಸೇವನೆಯಿಂದ ಮೈ ತೂಕ ಹೆಚ್ಚಾಗುವುದರಿಂದ ಹಿಡಿದು ಮಧುಮೇಹದಂಥ ಸಮಸ್ಯೆ ತಡೆಗಟ್ಟಬಹುದು
- ತ್ವಚೆ ಸೌಂದರ್ಯ ಕಾಪಾಡುತ್ತದೆ
- ರಾಗಿ ಸೇವನೆಯಿಂದ ಮುಖದಲ್ಲಿ ಬೇಗನೆ ಸುಕ್ಕು ಬೀಳುವುದನ್ನು ತಡೆಗಟ್ಟಬಹುದು.
- ರಾಗಿಯಲ್ಲಿ ಕ್ಯಾಲ್ಸಿಯಂ ಅಧಿಕವಿದೆ
- ರಾಗಿ ಸೇವನೆಯಿಂದ ಮೂಳೆಗಳು ಬಲವಾಗುವುದು, ಏಕೆಂದರೆ ದೇಹಕ್ಕೆ ಅವಶ್ಯಕವಾದ ಕ್ಯಾಲ್ಸಿಯಂ ರಾಗಿಯಿಂದ ದೊರೆಯುವುದು.
- ಎದೆ ಹಾಲುಣಿಸುವ ತಾಯಿಗೆ ಒಳ್ಳೆಯದು
- ಎದೆಹಾಲಿನ ಉತ್ಪತ್ತಿ ಹೆಚ್ಚಿಸಲು ಸಹಕಾರಿ.
- ರಾಗಿ ಜೀರ್ಣಕ್ರಿಯೆ ತುಂಬಾನೇ ಒಳ್ಳೆಯದು, ಇದರಲ್ಲಿ ನಾರಿನಂಶ ಅಧಿಕವಿರುವುದರಿಂದ ಮಲಬದ್ಧತೆ ಸಮಸ್ಯೆ ತಡೆಗಟ್ಟುತ್ತದೆ.
- ಮಧುಮೇಹಿಗಳಿಗೆ ಅತ್ಯುತ್ತಮವಾದ ಆಹಾರವಾಗಿದೆ, ರಾಗಿ ಆಹಾರ ಹೊಟ್ಟೆ ತುಂಬಾ ತಿಂದರೂ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದಿಲ್ಲ.



Click it and Unblock the Notifications
