Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಪಾಲಾಕ್ ಸೊಪ್ಪಿನ ಈ ಗಸಿ , ಬಿಸಿ ಬಿಸಿ ಅನ್ನ ಸೂಪರ್ ಕಾಂಬಿನೇಷನ್: ಪಟ್ ಅಂತ ಮಾಡಬಹುದಾದ ಗಸಿ
Recipes
oi-Reena TK
Posted By: Reena TK
ಪಾಲಾಕ್ ಸೊಪ್ಪು ನೀವು ಹಲವು ರೀತಿಯಲ್ಲಿ ಮಾಡಬಹುದು, ಆದರೆ ಒಮ್ಮೆ ಈ ರೀತಿ ಟ್ರೈ ಮಾಡಿ ನೋಡಿ, ತುಂಬಾನೇ ರುಚಿಯಾಗಿರುತ್ತದೆ, ಇನ್ನು ಈ ರೆಸಿಪಿ ತುಂಬಾನೇ ಸುಲಭವಾಗಿದ್ದು ಅನ್ನದ ಜೊತೆ ಕೆಲಸಿಕೊಂಡು ತಿನ್ನಲು ತುಂಬಾನೇ ರುಚಿಯಾಗಿರುತ್ತೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
2 ಕಟ್ಟು ಪಾಲಾಕ್
2 ಈರುಳ್ಳಿ
2 ಟೊಮೆಟೊ
2 ಹಸಿ ಮೆಣಸು (ಮೆಣಸಿನ ಪುಡಿ)
ಅರಿಶಿಣ ಪುಡಿ
4-5 ಎಸಳು ಬೆಳುಳ್ಳಿ
ಸ್ವಲ್ಪ ಹುಣಸೆಹಣ್ಣು
2 ಚಮಚ ತುಪ್ಪ
ಸ್ವಲ್ಪ ಸಾಸಿವೆ
ಸ್ವಲ್ಪ ಒಣಮೆಣಸು
ಸ್ವಲ್ಪ ಜೀರಿ
ಸ್ವಲ್ಪ ಉದ್ದಿನ ಬೇಳೆ
ಸ್ವಲ್ಪ ಕಡ್ಲೆಬೇಳೆ
ಪಾಲಾಕ್ ಸೊಪ್ಪಿನ ಗಸಿ ಮಾಡುವುದು ಹೇಗೆ?
- 2 ಕಟ್ಟು ಪಾಲಾಕ್ ತೊಳೆದು ಶುಚಿಗೊಳಿಸಿ ಕತ್ತರಿಸಿ ಇಡಿ
- ಎರಡು ಈರುಳ್ಳಿ, ಎರಡು ಟೊಮೆಟೊ ಕತ್ತರಿಸಿ ಮಿಕ್ಸಿ ಜಾರ್ಗೆ ಹಾಕಿ
- 4-5 ಎಸಳು ಬೆಳ್ಳುಳ್ಳಿ, ಸ್ವಲ್ಪ ಹುಣಸೆ ಹಣ್ಣು ಹಾಕಿ, 2 ಹಸಿ ಮೆಣಸು ಹಾಕಿ ಗ್ರೈಂಡ್ ಮಾಡಿ
- ಈಗ ನೀವು 2 ಚಮಚ ತುಪ್ಪವನ್ನು ಬಿಸಿ ಮಾಡಿ, ಸಾಸಿವೆ ಹಾಕಿ, 2 ಒಣ ಮೆಣಸು ಮುರಿದು ಹಾಕಿ, ಜೀರಿಗೆ ಹಾಕಿ, ಸ್ವಲ್ಪ ಉದ್ದಿನ ಬೇಳೆ, ಸ್ವಲ್ಪ ಕಡ್ಲೆಬೇಳೆ ಹಾಕಿ, ಕರಿಬೇವು ಹಾಕಿ.
- ಈಗ ನೀವು ರುಬ್ಬಿದ ಮಸಾಲೆ ಸೇರಿಸಿ, 5 ನಿಮಿಷ ಕುದಿಸಿ
- ಈಗ ಪಾಲಾಕ್ ಹಾಕಿ ಮಿಕ್ಸ್ ಮಾಡಿ, 5-10 ನಿಮಿಷ ಬೇಯಿಸಿ
- ಈಗ ಈ ಎಲ್ಲಾ ಮಿಶ್ರಣ ಮಿಕ್ಸ್ ಮಾಡಿದರೆ ಸೂಪರ್ ಆದ ಪಾಲಾಕ್ ಗಸಿ ರೆಡಿ.
- ಇದನ್ನು ಬಿಸಿ-ಬಿಸಿ ಅನ್ನದ ಜೊತೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.
- ಸಲಹೆ: ನೀವು ಹುಣಸೆ ಹಣ್ಣು ಈ ಚಟ್ನಿಯೆಲ್ಲಾ ಮಾಡುವಾಗ ಬಳಸುವಂತೆ ಸ್ವಲ್ಪ ಬಳಸಿದರೆ ಸಾಕು.
- ಹಸಿ ಮೆಣಸು ಬೇಕಾದರೆ ಬಳಸಬಹುದು, ಖಾರದ ಪುಡಿ ಬೇಕಾದರೆ ಬಳಸಬಹುದು.
- ಕಡ್ಲೆಬೇಳೆ ಸ್ವಲ್ಪ ಫ್ರೈ ಮಾಡಿ, ಹಸಿ ಹಸಿ ಇರಬಾರದು, ಕಡ್ಲೆ 1-2 ಸ್ಪೂನ್ ಹಾಕಬಹುದು
- ಮಸಾಲೆ ರೆಡಿ ಮಾಡುವಾಗ ಸ್ವಲ್ಪ ನೀರು ಸೇರಿಸಿ ಗ್ರೈಂಡ್ ಮಾಡಿದ ಬಳಿಕ ಇನ್ನೂ ಸ್ವಲ್ಪ ನೀರು ಹಾಕಿ ಮಸಾಲೆ ಕುದಿಸಬಹುದು.
- ಪಾಲಾಕ್ ನೀವು ಕೊನೆಯ ಹಂತದಲ್ಲಿ ಹಾಕಿ ಕುದಿಸಿದರೆ ಸಾಕು
- ಈ ಗಸಿಗೆ ಸ್ವಲ್ಪ ಗರಂ ಮಸಾಲೆ ಬೇಕಾದರೆ ಸೇರಿಸಬಹುದು.
- ಪಾಲಾಕ್ನಲ್ಲಿರುವ ಪೋಷಕಾಂಶಗಳು
ಕ್ಯಾಲ್ಸಿಯಂ
ವಿಟಮಿನ್ ಎ
ಕೆರೋಟಿನ್ಸ್
ನಾರಿನಂಶ
ಕಬ್ಬಿಣದಂಶ
ಪ್ರೊಟೀನ್
ಸತು
ಫೋಲೆಟ್
ವಿಟಮಿನ್ ಸಿ
ಪಾಲಾಕ್ನಲ್ಲಿರುವ ಗುಣಗಳು
ಕಣ್ಣಿನ ಆರೋಗ್ಯಕ್ಕ ಒಳ್ಳೆಯದು
ದೇಹಕ್ಕೆ ಶಕ್ತಿ ದೊರೆಯುತ್ತದೆ
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ಕ್ಯಾನ್ಸರ್ಕಣಗಳ ವಿರುದ್ಧ ಹೋರಾಡುತ್ತದೆ
ನಾರಿಂಶ ಅಧಿಕವಿದೆ
ಕಬ್ಬಿಣದಂಶವಿಎ
ತೂಕ ನಿಯಂತ್ರಣಕ್ಕೆ ಸಹಕಾರಿ
ನಮ್ಮ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು.
Comments
[ of 5 - Users]



Click it and Unblock the Notifications
