Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಮಧುಮೇಹ, ಕೊಲೆಸ್ಟ್ರಾಲ್ ಮತ್ತಿತರ ಹತ್ತು ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ ಮೆಂತೆ ಗಂಜಿ, ಮಾಡುವುದು ಹೇಗೆ?
ನೀವು ಮೆಂತೆ ಗಂಜಿ ಟೇಸ್ಟ್ ಮಾಡಿದ್ದೀರಾ? ತಿನ್ನಲು ತುಂಬಾನೇ ರುಚಿಯಾಗಿರುತ್ತದೆ, ಇದರ ಆರೋಗ್ಯಕರ ಗುಣಗಳು ಕೂಡ ಅಷ್ಟೊಂದು ಅದ್ಭುತವಾಗಿದೆ, ತಿಂಗಳಿಗೆ ಒಂದೆರಡು ಬಾರಿಯಾದರೂ ಇದನ್ನು ಮಾಡಿ ಕುಡಿಯುತ್ತಿದ್ದರೆ ನಮ್ಮ ದೇಹವನ್ನು ಈ ಮಧುಮೇಹ, ಕೊಲೆಸ್ಟ್ರಾಲ್ ಈ ಬಗೆಯ ಸಮಸ್ಯೆಯಿಂದ ರಕ್ಷಿಸಬಹುದು, ಇನ್ನು ಸೊಂಟ ನೋವು ಇರುವವರು ಈ ಗಂಜಿ ಕುಡಿದರೆ ತುಂಬಾ ಒಳ್ಳೆಯದು. ಎದೆಹಾಲು ಕಡಿಮೆ ಇರುವ ಬಾಣಂತಿಯರಿಗೆ ಈ ಗಂಜಿ ಮಾಡಿ ಕೊಟ್ಟರೆ ಎದೆಹಾಲಿನ ಉತ್ಪತ್ತಿ ಹೆಚ್ಚಾಗುವುದು.

ಈ ಮೆಂತೆಗಂಜಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಮೆಂತೆ 1/4 ಕಪ್
ಕೆಂಪಕ್ಕಿ 1 ಕಪ್ (ಮಟ್ಟಾ ರೈಸ್ ಕೂಡ ಬಳಸಬಹುದು)
ಚಿಕ್ಕ ಈರುಳ್ಳಿ 7-8
ಜೀರಿಗೆ ಅರ್ಧ ಚಮಚ
ತೆಂಗಿನತುರಿ 1 ಕಪ್ (ಫ್ರೆಷ್ ತೆಂಗಿನತುರಿ ಬಳಸಿ, ತುರಿದು
ಫ್ರಿಡ್ಜ್‌ನಲ್ಲಿಟ್ಟ ತೆಂಗಿನತುರಿ ಬಳಸಬೇಡಿ)
ರುಚಿಗೆ ತಕ್ಕ ಉಪ್ಪು
ನೀರು 4-5 ಲೋಟ
ಮಾಡುವ ವಿಧಾನ
- ಮೆಂತೆಯನ್ನು ತೊಳೆದು ನಂತರ ನೀರಿನಲ್ಲಿ 8 ಗಂಟೆ ಕಾಲ ನೆನೆಸಿ ಇಡಿ
- ನಂತರ ಅಕ್ಕಿಯನ್ನು ತೊಳೆದು ಕುಕ್ಕರ್‌ಗೆ ಹಾಕಿ, ನಂತರ ನೆನೆಹಾಕಿದ ಮೆಂತೆಯನ್ನು ನೀರು ಸಹಿತ ಸೇರಿಸಿ
- ಇದಕ್ಕೆ ಚಿಕ್ಕ ಈರುಳ್ಳಿ 7-8 ಸೇರಿಸಿ
- 4-5 ಕಪ್ ನೀರು ಸೇರಿಸಿ
- ಕಲ್ಲುಪ್ಪು ಅಥವಾ ಪಿಂಕ್ ಸಾಲ್ಟ್ ಸ್ವಲ್ಪ ಸೇರಿಸಿ
- ನಂತರ 4-5 ವಿಶಲ್ ಬರುವವರೆಗೆ ಬೇಯಿಸಿ
- ಅಕ್ಕಿಯನ್ನು ಅರ್ಧ ಗಂಟೆ ನೆನೆ ಹಾಕಿ ಬೇಯಿಸಿದರೆ ಒಳ್ಳೆಯದು
- ಈಗ ಒಂದು ಕಪ್ ತೆಂಗಿನ ತುರಿ, 1/2 ಚಮಚ ಜೀರಿಗೆ, ಕಾಯಿಸಿ ಆರಿಸಿದ ನೀರು ಸೇರಿಸಿ ರುಬ್ಬಿ ( ಹಸಿ ಹಾಲು ಸೇರಿಸಬಾರದು)
- ನಂತರ ಈ ಮಿಶ್ರಣವನ್ನು ಸೇರಿಸಿ ಮಿಕ್ಸ್ ಮಾಡಿ ಕಾಯಿಸಿ, ತೆಂಗಿನಕಾಯಿ ಮಿಶ್ರಣ ಸೇರಿಸಿದ ಮೇಲೆ ಕುದಿಸಬೇಡಿ, ಕಾಯಿಸಿದರೆ ಸಾಕು, ಇದನ್ನು ಖಾಲಿ ಹೊಟ್ಟೆಯಲ್ಲಿ ತಿನ್ನಿ ಹತ್ತು ಹಲವು ಕಾಯಿಲೆಗಳಿಗೆ ರಾಮಬಾಣ ಈ ಮೆಂತೆ ಗಂಜಿ.
ಇದನ್ನು ನಿರಂತರವಾಗಿ 7 ದಿನ ಮಾಡಿ ಕುಡಿದರೆ ಇನ್ನೂ ಒಳ್ಳೆಯದು, ಅಪರೂಪಕ್ಕೆ ಈ ರೀತಿ ಗಂಜಿ ಮಾಡಿ ಕುಡಿಯತ್ತಾ ಇದ್ದರೆ ಈ ಸೊಂಟನೋವು ಸಮಸ್ಯೆ ಇರುವವರು ತುಂಬಾ ಒಳ್ಳೆಯ ಪ್ರಯೋಜನ ಪಡೆಯಬಹುದು, ಈ ಮೆಂತೆ ಗಂಜಿ ಏಳು ದಿನ ಕುಡಿದರೆ ಸೊಂಟನೋವು ಕಡಿಮೆಯಾಗುವುದು.
ಈ ಮೆಂತೆ ಗಂಜಿ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ: ಕೊಲೆಸ್ಟ್ರಾಲ್ ಇರುವವರು ಇದನ್ನು ಆಗಾಗ ಮಾಡಿ ಕುಡಿಯುತ್ತಾ ಇದ್ದರೆ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡಬಹುದು.
ಮಧುಮೇಹಿಗಳಿಗಂತೂ ತುಂಬಾ ಒಳ್ಳೆಯ ಆಹಾರ:ಈ ಮೆಂತೆ ಗಂಜಿ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗುವುದನ್ನು ತಡೆಗಟ್ಟಲು ತುಂಬಾನೇ ಸಹಕಾರಿ
ಆಯುರ್ವೇದ ಚಿಕಿತ್ಸೆಯಲ್ಲಿ ಈ ಗಂಜಿ ನೀಡಲಾಗುವುದು
ಕೇರಳ ಆಯುರ್ವೇದ ಚಿಕಿತ್ಸೆಯಲ್ಲಿ ಕೂಡ ಈ ಗಂಜಿ ಬಳಸಲಾಗುವುದು, ವ್ಯಕ್ತಿಯನ್ನು
ರೋಗದಿಂದ ಚೇತರಿಸುವಂತೆ ಮಾಡುವಲ್ಲಿ ಈ ಗಂಜಿ ತುಂಬಾನೇ ಪರಿಣಾಮಕಾರಿ, ಇದು ಔಷಧೀಯ
ಗುಣಗಳಿರುವ ಗಂಜಿಯಾಗಿದೆ.



Click it and Unblock the Notifications
