Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮಯೋನೈಸ್ ಮಾಡುವುದು ತುಂಬಾನೇ ಸುಲಭ ನೋಡಿ
ಸಾಮಾನ್ಯವಾಗಿ ಗ್ರಿಲ್ಡ್, ಟಿಕ್ಕಾ ಈ ರೀತಿ ಸ್ಟಾಟರ್ಸ್ ಸರ್ವ್ ಮಾಡುವಾಗ ಮಯೋನೈಸ್ ಕೊಡ್ತಾರೆ, ಆ ಮಯೋನೈಸ್ ಜೊತೆ ಅದ್ದಿ ತಿನ್ನುವಾಗ ರುಚಿ ತುಂಬಾನೇ ಸೂಪರ್ ಅನಿಸುವುದು, ಮಯೋನೈಸ್ ರೆಡಿಮೇಡ್ ಸಿಗುತ್ತೆ, ಅದು ಅಷ್ಟೊಂದು ಟೇಸ್ಟ್ ಅನಿಸಲ್ಲ, ಆದರೆ ನೀವು ಮಯೋನೈಸ್ ಮನೆಯಲ್ಲಿಯೇ ಟ್ರೈ ಮಾಡಬಹುದು.
ನಾವು ಇಲ್ಲಿ ನೀಡಿರುವುದು ಮೊಟ್ಟೆ ಬಳಸಿ ಮಾಡುವ ಮಯೋನೈಸ್. ನೀವು ಚಿಕನ್ ಕಬಾಬ್, ಚಿಕನ್ ಟಿಕ್ಕಾ, ಗ್ರಿಲ್ಡ್ ಎಲ್ಲಾ ಮಾಡಿದಾಗ ಅದನ್ನು ನೆಚ್ಚಿಕೊಂಡು ತಿನ್ನಲು ಈ ಮಯೋನೈಸ್ ಕೂಡ ಟ್ರೈ ಮಾಡಬಹುದು. ಎಗೆಟೇರಿಯನ್ ಕೂಡ ವೆಜ್ ಸ್ಟಾಟರ್ಸ್ ಜೊತೆ ಸವಿಯಲು ಈ ಮಯೋನೈಸ್ ಟ್ರೈ ಮಾಡಬಹುದು:

ಬೇಕಾಗುವ ಸಾಮಗ್ರಿ
ಆಫ್ ಬಾಯ್ಲ್ಡ್ ಎಗ್ 2
ವಿನೆಗರ್ 2 ಚಮಚ
2-3 ಎಸಳು ಬೆಳ್ಳುಳ್ಳಿ
1/2 ಚಮಚ ಖಾರದ ಪುಡಿ
ಬೇಯಿಸಿದ ಆಲೂಗಡ್ಡೆ 1
1/2 ಲೋಟ ಹಾಲಲು
ಸ್ವಲ್ಪ ಉಪ್ಪು
2-3 ಚಮಚ ಎಣ್ಣೆ
ಮಾಡುವ ವಿಧಾನ:
ನೀವು ಮೊಟ್ಟೆಯನ್ನು ತವಾಗೆ ಹಾಕಿ ಆಫ್ ಬಾಯ್ಲ್ಡ್ ಆಮ್ಲೆಟ್ ಹಾಕಿ, ಈ ರೀತಿ
ಎರಡು ಮೊಟ್ಟೆ ಆಮ್ಲೆಟ್ ರೆಡಿ, ಮೊಟ್ಟೆಯ ಬಿಳಿಯಷ್ಟೇ ಸ್ವಲ್ಪ ಬೇಯಬೇಕು, ಆದರೆ
ಮೊಟ್ಟೆಯ ಹಳದಿ ತುಂಬಾನೇ ಬೇಯಿಸಬಾರದು.
ಈಗ ಇದನ್ನು ಮಿಕ್ಸಿ ಜಾರ್ನಲ್ಲಿ ಸೇರಿಸಿ, ನಂತರ ಬೇಯಿಸಿದ ಆಲೂಗಡ್ಡೆ,
ವಿನೆಗರ್, ಖಾರದ ಪುಡಿ, ಸ್ವಲ್ಪ ಉಪ್ಪು ಹಾಕಿ ಗ್ರೈಂಡ್ ಮಾಡಿ
ಬಳಿಕ 3 ಚಮಚ ಸೂರ್ಯಕಾಂತಿ ಎಣ್ಣೆ ಹಾಕಿ ಮತ್ತೊಮ್ಮೆ ಗ್ರೈಂಡ್ ಮಾಡಿದರೆ
ಮಯೋನೈಸ್ ರೆಡಿ. ಈ ಮಯೋನೈಸ್ ಟೇಸ್ಟ್ ಸೂಪರ್ ಆಗಿರುತ್ತದೆ.
ಈ ಮಯೋನೈಸ್ ಮಾಡಿ ಎಷ್ಟು ದಿನ ಇಡಬಹುದು?
ಇದನ್ನು ನೀವು ಒಂದು ದಿನಕ್ಕಿಂತ ಹೆಚ್ಚು ಇಡುವಂತಿಲ್ಲ, ಏಕೆಂದರೆ ಮೊಟ್ಟೆ ಮತ್ತು
ಆಲೂಗಡ್ಡೆ ಹಾಕಿರುವುದರಿಂದ ಇದನ್ನು ಒಂದು ದಿನಕ್ಕಿಂತ ಹೆಚ್ಚು ಇಟ್ಟು ಬಳಸುವುದು
ಸೂಕ್ತವಲ್ಲ.
ಮಯೋನೈಸ್ ಈ ರೀತಿಯಲ್ಲಿಯೂ ಮಾಡಬಹುದು:
2 ಮೊಟ್ಟೆ
2 ಚಮಚ ವೈಟ್ ವಿನೆಗರ್
1/2 ಚಮಚ ಸಾಸಿವೆ ಪುಡಿ
1/4 ಚಮಚ ಉಪ್ಪು
2-3 ಚಮಚ ಎಣ್ಣೆ
ಮಾಡುವ ವಿಧಾನ
ಮೊಟ್ಟೆ,ಸಾಸಿವೆ ಪುಡಿ, ಉಪ್ಪು, ವಿನೆಗರ್, ಆಲೂಗಡ್ಡೆ, ಇವುಗಳನ್ನು ಒಂದು
ಬೌಲ್ನಲ್ಲಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಎಣ್ಣೆ ಹಾಕಿ ಚೆನ್ನಾಗಿ
ಮಿಕ್ಸ್ ಮಾಡಿ, ನಂತರ ಎಣ್ಣೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ
ನೀವು ಮಿಕ್ಸಿ ಜಾರ್ನಲ್ಲಿ ಹಾಕಿ ತಿರುಗಿಸಬಹುದು.
ಸಲಹೆ: ಈ ಮಯೋನೈಸ್ನಲ್ಲಿ ಹಸಿ ಮೊಟ್ಟೆ ಬಳಸಿರುವುದರಿಂದ ಮಕ್ಕಳು, ಗರ್ಭಿಣಿಯರು ಬಳಸಬೇಡಿ,ಫುಡ್ ರಿಯಾಕ್ಷನ್ ಆದರೆ ಕಷ್ಟ.



Click it and Unblock the Notifications
