Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಚಿತ್ರಾನ್ನ ಹೀಗೂ ಒಮ್ಮೆ ಮಾಡಿ ನೋಡಿ: ಯಾವ ಬಿರಿಯಾನಿಯೂ ಈ ಚಿತ್ರಾನ್ನ ಟೇಸ್ಟ್ ಮುಂದೆ ನಿಲ್ಲಲ್ಲ
ಚಿತ್ರಾನ್ನ ಬಹುತೇಕ ಮನೆಗಳಲ್ಲಿ ವಾರಕ್ಕೊಮ್ಮೆಯಾದರೂ ಮಾಡುವ ಬ್ರೇಕ್‌ಫಾಸ್ಟ್,ಸುಲಭವಾಗಿ ಮಾಡಬಹುದು ಅಂತ ಇದನ್ನು ಮಾಡುತ್ತಾರೆ ಅಥವಾ ರಾತ್ರಿಯ ಅನ್ನ ಉಳಿದಿದ್ದರೆ ಮಾಡ್ತಾರೆ, ಆದರೆ ನೀವು ಚಿತ್ರಾನ್ನ ಸ್ವಲ್ಪ ಮನಸ್ಸು ಕೊಟ್ಟು ಮಾಡಿದರೆ ಇದೆಯಲ್ಲಾ ಯಾವ ಬಿರಿಯಾನಿಯೂ ಈ ಚಿತ್ರಾನ್ನ ಮುಂದೆ ನಿಲ್ಲಲ್ಲ ಅಷ್ಟೊಂದು ರುಚಿಯಾಗಿ ಮಾಡಬಹುದು. ಈ ಬಾರಿ ನೀವು ಚಿತ್ರಾನ್ನ ಮಾಡುವಾಗ ಹೀಗೆ ಟ್ರೈ ಮಾಡಿ ನೋಡಿ, ಯಾವ ಸ್ಟಾರ್ ರೆಸ್ಟೋರೆಂಟ್‌ಗಳಲ್ಲಿಯೂ ಇಷ್ಟು ರುಚಿಯ ಚಿತ್ರಾನ್ನ ಸಿಗಲ್ಲ, ಅಷ್ಟೊಂದು ರುಚಿಯಲ್ಲಿ ಮಾಡಬಹುದು. ಇದನ್ನು ಮಾಡಲು ಹೆಚ್ಚು ಸಮಯ ಬೇಕಾಗಿಲ್ಲ ಮಾಮೂಲಿ ಚಿತ್ರಾನ್ನ ಮಾಡುವಷ್ಟೇ ಸಮಯ ಸಾಕು ಆದರೆ ಸ್ವಲ್ಪ ಮನಸ್ಸು ಕೊಟ್ಟು ಮಾಡಬೇಕಷ್ಟೇ.............
ಸ್ಟೆಪ್ 1
1 ಕಪ್ ಅಕ್ಕಿ ತೊಳೆದು 2 ಕಪ್ ನೀರು ಹಾಕಿ ಚಿಟಿಕೆಯಷ್ಟು ಉಪ್ಪು, 2 ಹನಿ ಎಣ್ಣೆ
ಹಾಕಿ 2 ವಿಶಲ್ ಬರುವವರೆಗೆ ಬೇಯಿಸಿ.
ಅದೇ ಸಮಯದಲ್ಲಿ ಈ ಮಸಾಲೆ ರೆಡಿ ಮಾಡಿ
ಹಸಿ ಮೆಣಸು 5-6 (ನಿಮ್ಮ ಖಾರಕ್ಕ ತಕ್ಕಂತೆ ಹೆಚ್ಚು ಕಡಿಮೆ ಮಾಡಬಹುದು)
ಒಂದು ಬೆಳ್ಳುಳ್ಳಿ 6-7 ಎಸಳು
ಸ್ವಲ್ಪ ಕೊತ್ತಂಬರಿ ಸೊಪ್ಪು
ಅರ್ಧ ಕಪ್ ತಂಗಿನ ತುರಿ
8-10 ಎಲೆ ಕರಿಬೇವಿನ ಎಲೆ
ಸ್ವಲ್ಪ ಜೀರಿಗೆ
ಇಷ್ಟು ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ
ಈಗ ಚಿತ್ರಾನ್ನ ಮಾಡುವ ವಿಧಾನ
- ನೀವು ಬಾಣಲೆಗೆ 3-4 ಚಮಚ ಎಣ್ಣೆ ಹಾಕಿ, ಸ್ವಲ್ಪ ಸಾಸಿವೆ ಹಾಕಿ. ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಕಡ್ಲೆಬೇಳೆ, ಉದ್ದಿನ ಬೇಳೆ ಹಾಕಿ
- ನೆಲಗಡಲೆ ಹಾಕಿ (ನೆಲಗಡಲೆ ತುಂಬಾ ಬೇಡ, ಸ್ವಲ್ಪ ಹಾಕಿ)
- ಬೇಕಿದ್ದರೆ ಸ್ವಲ್ಪ ಗೋಡಂಬಿ ಸೇರಿಸಬಹುದು
- ನಂತರ 2 ಈರುಳ್ಳಿ ಸೇರಿಸಿ
- ಚಿಟಿಕೆಯಷ್ಟು ಇಂಗು
- ಸ್ವಲ್ಪ ಕರಿಬೇವು ಹಾಕಿ, ಒಣ ಮೆಣಸು ಒಂದು ಮುರಿದು ಹಾಕಿ.
- ಕಡಿಮೆ ಉರಿಯಲ್ಲಿ 5-6 ನಿಮಿಷ ಫ್ರೈ ಮಾಡಿ
- ಈಗ ನೀವುತರಿತರಿಯಾಗಿ ರುಬ್ಬಿಟ್ಟ ಮಸಾಲೆ ಹಾಕಿ ಮತ್ತೆ 2-3 ನಿಮಿಷ ಫ್ರೈ ಮಾಡಿ
- ಉಪ್ಪು ಸೇರಿಸಿ
- ಅರಿಶಿಣ ಪುಡಿ ಹಾಕಿ ಮಿಕ್ಸ್ ಮಾಡಿ ಉರಿ ಆಫ್ ಮಾಡಿ
- ನಂತರ ನಿಂಬೆರಸ ಹಿಂಡಿ
- ಈಗ ಬೇಯಿಸಿಟ್ಟ ಅನ್ನವನ್ನು ಹಾಕಿ ಮಿಕ್ಸ್ ಮಾಡಿ
- ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ಸೂಪರ್ ರುಚಿಯ ಚಿತ್ರಾನ್ನ ರೆಡಿ.
ಇತರ ಸಲಹೆ
ನೀವು ಪೇಸ್ಟ್ ಮಾಡಿ ಖಾರ ಸಾಕಾಗಿಲ್ಲ ಎಂದರೆ ಎಣ್ಣೆ 2 ಮೆಣಸು ಸೇರಿಸಬಹುದು
ನೀವು ಕೊಬ್ಬರಿ ಎಣ್ಣೆ ಬಳಸಿ ಅಡುಗೆ ಮಾಡುವವರಾದರೆ ಅಡುಗೆಗೆ ಕೊಬ್ಬರಿ ಎಣ್ಣೆ
ಬಳಸಿ ಸ್ವಾದ ಇನ್ನೂ ಚೆನ್ನಾಗಿರುತ್ತದೆ.
ಅನ್ನ:ನೀವು ಯಾವುದೇ ಅಕ್ಕಿಯಿಂದ ಅನ್ನ ಮಾಡಬಡಬಹುದು, ಬೇಕಿದ್ದರೆ ರೇಷನ್ ಅಕ್ಕಿಯಿಂದ ಮಾಡಿದ ಅನ್ನ ಕೂಡ ಮಾಡಬಹುದು, ಆದರೆ ಅನ್ನ ಅಂಟು-ಅಂಟಾಗಿರಬಾರದು, ಬಿಡಿ ಬಿಡಿಯಾಗಿರಬೇಕು. ಅನ್ನ ಮಾಡುವಾಗ 2 ಹನಿ ಎಣ್ಣೆ ಸೇರಿಸಿದರೆ ಅನ್ನ ಬಿಡಿ ಬಿಡಿಯಾಗಿರುತ್ತದೆ.



Click it and Unblock the Notifications

