Latest Updates
-
ಬಿಸಿಲು ಅಥವಾ ಮಳೆ: ಹವಾಮಾನದ ಅಬ್ಬರದ ನಡುವೆಯೂ ನಿಮ್ಮ ಮದುವೆ ಸಂಭ್ರಮವನ್ನು ಅಚ್ಚುಕಟ್ಟಾಗಿ ಪ್ಲಾನ್ ಮಾಡುವುದು ಹೇಗೆ? -
ಬಿಸಿಲ ಧಗೆಗೆ ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ನಿಮ್ಮ ಮನೆಯನ್ನು ತಂಪಾಗಿರಿಸಲು ಮತ್ತು ಗಿಡಗಳನ್ನು ಉಳಿಸಲು ಇಲ್ಲಿವೆ ಅದ್ಭುತ ಟಿಪ್ಸ್! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಅಡುಗೆ ಮನೆಯಲ್ಲಿರುವ ಈ ಪದಾರ್ಥಗಳೇ ಸಾಕು, ಇಂದೇ ಟ್ರೈ ಮಾಡಿ! -
ಕಾನ್ 2026 ರೆಡ್ ಕಾರ್ಪೆಟ್ನಲ್ಲಿ ಭಾರತೀಯ ತಾರೆಯರ ಮಿಂಚಿನ ಸಂಚಲನ: ಈ ಫ್ಯಾಷನ್ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ! -
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಚಿತ್ರಾನ್ನ ಇಷ್ಟವಿಲ್ಲದವರು ಕೂಡ ಇಷ್ಟಪಟ್ಟು ತಿಂತೀರಿ ಈ ಮಾವಿನಕಾಯಿ ಚಿತ್ರಾನ್ನ, ಅಬ್ಬಾಬ್ಬ ಎಂಥ ರುಚಿಯ ಬ್ರೇಕ್ಫಾಸ್ಟ್!
ಮಾವಿನಕಾಯಿ ಚಿತ್ರಾನ್ನ ಏನು ರುಚಿ ಅಂತೀರಿ, ನಂಗೆ ಚಿತ್ರಾನ್ನ ಇಷ್ಟವಿಲ್ಲ ಎಂದು ಹೇಳುವವರು ಕೂಡ ಈ ಚಿತ್ರಾನ್ನ ಇಷ್ಟಪಟ್ಟು ತಿಂತಾರೆ. ಮಾವಿನಕಾಯಿ ಸೀಸನ್ ಮುಗಿಯುವರೆಗೆ ಈ ಚಿತ್ರಾನ್ನ ಮಿಸ್ ಮಾಡಲು ಮನಸ್ಸಾಗಲ್ಲ, ವಾರದಲ್ಲಿ ಒಂದೆರಡು ಬಾರಿ ಮಾಡಿದರೆ ಬೋರ್ ಅನಿಸಲ್ಲ, ಇದನ್ನು ಸ್ವಲ್ಪ ಖಾರ-ಖಾರವಾಗಿ ಮಾಡಿದರೆ ಸಕತ್ ಆಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅಕ್ಕಿ 1 ಲೋಟ (ಯಾವ ಅಕ್ಕಿ ಬೇಕಾದರು ಬಳಸಬಹುದು, ನೀವು ಅನ್ನ ಮಾಡಲು ಬಳಸುವ
ಅಕ್ಕಿ ಬಳಸಿ)
ನೀವು ರಾತ್ರಿ ಮಾಡಿದ ಅನ್ನ ಉಳಿದಿದ್ದರೆ ಅದನ್ನು ಬಳಸಬಹುದು ಅಥವಾ ನೀವು ಬೆಳಗ್ಗೆ
ಬಿಸಿ ಬಿಸಿ ಅನ್ನ ಮಾಡಿ ಅದರಿಂದಲೂ ಮಾವಿನಕಾಯಿ ಚಿತ್ರಾನ್ನ ತಯಾರಿಸಬಹುದು
ಒಂದು ಮಾವಿನಕಾಯಿ 1 (ಹುಳಿ ಕಡಿಮೆ ಇರುವ ಮಾವಿನಕಾಯಿಯಾಗಿದ್ದರೆ 2)
3-4 ಈರುಳ್ಳಿ
2-3 ಹಸಿ ಮೆಣಸು (ನಿಮ್ಮ ಖಾರಕ್ಕೆ ತಕ್ಕಂತೆ)
1/4 ಕಪ್ ತೆಂಗಿನಕಾಯಿ ತುರಿ
ಸ್ವಲ್ಪ ಶೇಂಗಾ ಬೀಜ
1 ಚಮಚ ಉದ್ದಿನ ಬೇಳೆ
1 ಚಮಚ ಕಡ್ಲೆಬೇಳೆ
1/4 ಚಮಚ ಅರಿಶಿಣ ಪುಡಿ
ಒಂದೂವರೆ ಚಮಚ ಉಪ್ಪು ಪುಡಿ
2 ಚಮಚ ಎಣ್ಣೆ
ಸ್ವಲ್ಪ ಕರಿಬೇವು
ಸ್ವಲ್ಪ ಕೊತ್ತಂಬರಿಸೊಪ್ಪು
ಇತರ ಸಲಹೆ: ಟೊಮೆಟೊ ಬೇಕಿದ್ದರೆ ಬಳಸಬಹುದು
ಮಾಡುವ ವಿಧಾನ
ಮಾವಿನಕಾಯಿಯ ಸಿಪ್ಪೆ ಸುಲಿದು ತುರಿಯಿರಿ
ಈರುಳ್ಳಿ, ಹಸಿ ಮೆಣಸು ಕತ್ತರಿಸಿ ಇಡಿ, ಟೊಮೆಟೊ ಬಳಸುವುದಾದರೆ ಅದನ್ನು ಕತ್ತರಿಸಿ
ಇಡಿ
- ಈಗ ನೀವು ಬಾಣಲೆ ತೆಗೆದು ಅದಕ್ಕೆ 2 ಚಮಚ ಎಣ್ಣೆ ಹಾಕಿ (ನೀವು ತೆಂಗಿನೆಣ್ಣೆ ಬಳಸುವವರಾದರೆ ತೆಂಗಿನೆಣ್ಣೆ ಬಳಸಬಹುದು)
- ಎಣ್ಣೆ ಬಿಸಿಯಾದಾಗ ಉದ್ದಿನ ಬೇಳೆ, ಕಡ್ಲೆ ಬೇಳೆ, ಕರಿಬೇವಿನ ಎಲೆ ಹಾಕಿ ( ಉದ್ದಿನ ಬೇಳೆ, ಕಡ್ಲೆ ಬೇಳೆ ಸೀದು ಹೋಗಲು ಬಿಡಬೇಡಿ)
- ಈಗ ನೀವು ಶೇಂಗಾ ಬೀಜ ಹಾಕಿ ಸ್ವಲ್ಪ ರೋಸ್ಟ್ ಮಾಡಿ
- ನಂತರ ಈರುಳ್ಳಿ, ಹಸಿ ಮೆಣಸು ಹಾಕಿ, ಈರುಳ್ಳಿ ಸ್ವಲ್ಪ ಮೆತ್ತಗಾಗಿ ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ, ನಂತರ ಮಾವಿನ ತುರಿ ಸೇರಿಸಿ ಫ್ರೈ ಮಾಡಿ, ಈಗ ನೀವು ಉಪ್ಪು ಮತ್ತು ಅರಿಶಿಣ ಪುಡಿ ಸೇರಿಸಿ ಮಿಕ್ಸ್ ಮಾಡಿ, ಕಾಯಿ ತುರಿ ಸೇರಿಸಿ, ಇಷ್ಟು ಮಾಡಿದರೆ ಮಾವಿನಕಾಯಿ ಚಿತ್ರಾನ್ನ ಗೊಜ್ಜು ರೆಡಿ. ಉರಿ ಆಫ್ ಮಾಡಿ.
ಗೊಜ್ಜು ಬಿಸಿ ಬಿಸಿ ಇರುವಾಗಲೇ ಅನ್ನ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ, ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಒಂದು 20 ನಿಮಿಷ ಬಿಡಿ, ಮಾವಿನಕಾಯಿ ಹುಳಿ ಅನ್ನಕ್ಕೆ ಸೇರಬೇಕು, ನಂತರ ಒಂದು ಸ್ಪೂನ್ ತೆಗೆದು ಟೇಸ್ಟ್ ಮಾಡಿ ನೋಡಿ ಸೂಪರ್ ಆಗಿರುತ್ತದೆ. ಹುಳಿ ಇನ್ನೂ ಸ್ವಲ್ಪ ಬೇಕೆಂದು ಅನಿಸಿದರೆ ನೀವು ಸ್ವಲ್ಪ ನಿಂಬೆರಸ ಹಾಕಬಹುದು ಅಥವಾ ಮತ್ತೊಂದು ಮಾವಿನಕಾಯಿ ತೆಗೆದು ತುರಿದು ಎಣ್ಣೆಯಲ್ಲಿ ಬಾಡಿಸಿ ಸೇರಿಸಬಹುದು.
ನೀವು ಬಾಡಿದ ಮಾವಿನಕಾಯಿ ಬಳಸಬೇಡಿ, ತಾಜಾ ಮಾವಿನಕಾಯಿ ಬಳಸಿ ಮಾಡಿ, ಈ ಮಾವಿನಕಾಯಿ ಗೊಜ್ಜು ಮಾಡಿ ಫ್ರಿಡ್ಜ್ನಲ್ಲಿಟ್ಟರೆ ಒಂದು ವಾರದವರೆಗೆ ಬಳಸಬಹುದು.
ಮಾವಿನಕಾಯಿ ಚಿತ್ರಾನ್ನ ವಿಶೇಷತೆ ಏನು?
- ಈ ಚಿತ್ರಾನ್ನ ನಿಂಬೆ ಚಿತ್ರಾನ್ನದಂತೆ ಅಲ್ವೇ ಅಲ್ಲ. ಇದು ಹುಳಿ ಸ್ವಲ್ಪ ಜಾಸ್ತಿಯಾದರೂ ತಿನ್ನಬಹುದು, ಅಲ್ಲದೆ ಒಂದೊಂದು ತುತ್ತು ಬಾಯಿಗೆ ಇಡುತ್ತಿದ್ದಂತೆ ತುಂಬಾನೇ ಟೇಸ್ಟ್ ಅನಿಸುವುದು, ಹೊಟ್ಟೆ ತುಂಬಿದರೂ ಇನ್ನೂ ಸ್ವಲ್ಪ ಟೇಸ್ಟ್ ಮಾಡುವ ಎಂದನಿಸುವುದು ಅಷ್ಟೊಂದು ರುಚಿಯಾಗಿರುತ್ತದೆ.
- ಇನ್ನು ನೀವು ಈ ಚಿತ್ರಾನ್ನ ಮಾಡಲು ಹುಳಿ ಹೆಚ್ಚಾಗಿರುವ ಮಾವಿನಕಾಯಿ ಬಳಸಿದರೆ ಇನ್ನೂ ಟೇಸ್ಟ್ ಆಗಿರುತ್ತದೆ, ನಾವು ಉಪ್ಪು ನೆಚ್ಚಿ ತಿನನ್ನಲು ಬಳಸುವ ತೋತಪುರಿ ಮುಂತಾದ ಮಾವಿನಕಾಯಿ ಅಷ್ಟೊಂದು ಟೇಸ್ಟ್ ಅನಿಸಲ್ಲ
- ಇನ್ನು ಇದರ ಸಿಪ್ಪೆ ಸುಲಿಯುವುದು ಬೇಡ, ಅದರಲ್ಲಿನ ವಿಟಮಿನ್ಸ್ ಕೂಡ ಬೇಕೆಂದರೆ ಚಿಕ್ಕದಾಗಿ ಕತ್ತರಿಸಿ ಬಳಸಬಹುದು, ಹೀಗೆ ಮಾಡಿದರೆ ತಿನ್ನುವಾಗ ಬಾಯಿಗೆ ಕಚ್ಚಲು ಸಿಗುವುದು.
- ಇನ್ನು ಈ ಚಿತ್ರಾನ್ನ ಮಾಡಿದಾಗ ಸೈಡ್ಗೆ ಚಟ್ನಿ ಏನೂ ಬೇಕಾಗಿಲ್ಲ, ಬರಿಈ ಚಿತ್ರಾನ್ನ ಒಂದಿದ್ದರೆ ಸಾಕು.
- ನೀವು ಮಧ್ಯಾಹ್ನ ಲಂಚ್ ಬಾಕ್ಸ್ಗೆ ತೆಗೆದುಕೊಂಡು ಹೋಗುವುದಾದರೆ ಸ್ವಲ್ಪ ಗೊಜ್ಜು ತೆಗೆದು ಪ್ರತ್ಯೇಕವಾಗಿ ಮಿಕ್ಸ್ ಮಾಡಿಡಿ, ಏಕೆಂದರೆ ಬೆಳಗ್ಗೆ ತಿನ್ನುವಾಗ ನಿಮ್ಮ ಬಾಯಿ ರುಚಿಗೆ ತಕ್ಕ ಹುಳಿ ಇದ್ದರೆ ಅದು ಮಧ್ಯಾಹ್ನದ ಹೊತ್ತಿಗೆ ಇನ್ನಷ್ಟು ಹುಳಿಯಾಗುವುದು, ಹಾಗಾಗಿ ಲಂಚ್ ಬಾಕ್ಸ್ಗೆ ಚಿತ್ರಾನ್ನ ತುಂಬುವಾಗ ಅಷ್ಟೊಂದು ಹುಳಿಯಾಗಿರಬಾರದು. ಇದು ಮಧ್ಯಾಹ್ನ ಹೊತ್ತಿಗೆ ಸೂಪರ್ ಆಗಿರುತ್ತದೆ.
- ಮಾವಿನಕಾಯಿಯಲ್ಲಿ ಹಲವಾರು ಆರೋಗ್ಯವರ್ಧಕ ಗುಣಗಳಿವೆ
ಮಾವಿನಕಾಯಿಯಲ್ಲಿ ವಿಟಮಿನ್ ಸಿ ಹೇರಳವಾಗಿದೆ: ಮಾವಿನಕಾಯಿಯ್ಲಿ ವಿಟಮಿನ್ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿಯಾಗಿದೆ, ಅಲ್ಲದೆ ಈ ಮಾವಿನಕಾಯಿ ತ್ವಚೆಯ ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.
ನಾರಿನಂಶ ಅಧಿಕವಿರುತ್ತದೆ
ಇದು ಜೀರ್ಣಕ್ರಿಯೆಗೆ ಒಳ್ಳೆಯದು, ಈ ಮಲಬದ್ಧತೆಯಂಥ ಸಮಸ್ಯೆ ತಡೆಗಟ್ಟಲು
ಸಹಕಾರಿಯಾಗಿದೆ, ಹಾಗಾಗಿ ಮಾವಿನಕಾಯಿ ಸೇವನೆಯಿಂದ ಹೊಟ್ಟೆಯ ಆರೋಗ್ಯ
ವೃದ್ಧಿಸುವುದು.
ಇದರಲ್ಲಿ ಖನಿಜಾಂಶಗಳಾದ ಪೊಟಾಷ್ಯಿಯಂ, ಮೆಗ್ನಿಷ್ಯಿಯಂ ಈ ಬಗೆಯ ಖನಿಜಾಂಶಗಳಿವೆ.
ದೇಹದಲ್ಲಿ ನೀರಿನಂಶ ಕಡಿಮೆಯಾಗದಂತೆ ಕಾಪಾಡುವಲ್ಲಿ ಸಹಕಾರಿಯಾಗಿದೆ: ಮಾವಿನ ಕಾಯಿ ಬೇಸಿಗೆಯಲ್ಲಿ ದೊರೆಯುವ ಸೀಸನ್ ಫುಡ್, ಇದು ದೇಹಕ್ಕೆ ರಕ್ಷಣೆ ನೀಈಡುವ ಆಹಾರವಾಗಿದೆ.
ಲಿವರ್ನ ಆರೋಗ್ಯಕ್ಕೆ ಒಳ್ಳೆಯದು: ಮಾವಿನಕಾಯಿ ಲಿವರ್ ಆರೋಗ್ಯ ವೃದ್ಧಿಸುತ್ತದೆ.
ಮಾವಿನಕಾಯಿಯಲ್ಲಿ ವಿಟಮಿನ್ಗಳ ಪ್ರಯೋಜನಗಳು
ವಿಟಮಿನ್ ಸಿ: ರಕ್ತನಾಳಗಳಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು ಸಹಕಾರಿ
ವಿಟಮಿನ್ ಕೆ: ರಕ್ತ ಹೆಪ್ಪುಗಟ್ಟುವುದನ್ನು ತಡೆಗಟ್ಟಲು ಸಹಕಾರಿ
ವಿಟಮಿನ್ ಎ: ಕಣ್ಣಿಗೆ ಒಳ್ಳೆಯದು, ತ್ವಚೆ ಹಾಗೂ ಹಲ್ಲಿಗೆ ಒಳ್ಳೆಯದು
ಫೋಲೆಟ್: ಜೀವನಕಣಗಳಿಗೆ ಒಳ್ಳೆಯದು
ಇದರಲ್ಲಿರುವ ಪೊಟಾಷ್ಯಿಯಂ ನರಗಳ ಆರೋಗ್ಯಕ್ಕೆ ಒಳ್ಳೆಯದು.



Click it and Unblock the Notifications