Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಈ ಪುಳಿಯೊಗರೆ ಗೊಜ್ಜು ನೀವು 4-5 ತಿಂಗಳು ಇಟ್ಟರೂ ಹಾಳಾಗಲ್ಲ: ಸುಲಭವಾಗಿ ಮಾಡ ಬಹುದಾದ ರೆಸಿಪಿ
ಕರ್ನಾಟಕದಲ್ಲಿ ಪಟ್ ಅಂತ ಮಾಡುವ ಬ್ರೇಕ್ಫಾಸ್ಟ್ ಅಡುಗೆಗಳಲ್ಲೊಂದು ಪುಳಿಯೊಗರೆ. ಹಿಂದೆಯೆಲ್ಲಾ ಈ ಪುಳಿಯೊಗರೆ ಗೊಜ್ಜು ಮನೆಗಳಲ್ಲಿಯೇ ಮಾಡಿಡುತ್ತಿದ್ದರೆ, ಆದರೆ ಈಗ ರೆಡಿಮೇಡ್ ಗೊಜ್ಜು ಬಳಸುವವರ ಸಂಖ್ಯೆ ಹೆಚ್ಚಾಗಿದೆ. ಇದನ್ನು ಮಾಡುವುದು ಶ್ರಮದ ಕೆಲಸವೆಂದೇ ಹೆಚ್ಚಿನವರು ಅಂದುಕೊಂಡಿರುತ್ತಾರೆ. ಆದರೆ ಪುಳಿಯೊಗರೆ ತುಂಬಾನೇ ರುಚಿಯಾಗಿರಬೇಕೆಂದರೆ ಅದರ ಗೊಜ್ಜು ಮನೆಯಲ್ಲಿಯೇ ಮಾಡಬೇಕು.
ನಾವಿಲ್ಲಿ ನೀವು ಸ್ವಲ್ಪ ಫ್ರೀ ಇದ್ದಾಗ ಮಾಡಿ ಇಡಬಹುದಾದ ಪುಳಿಯೊಗರೆ ಗೊಜ್ಜು ರೆಸಿಪಿ ನೀಡಿದ್ದೇವೆ. ಇದನ್ನು ಒಮ್ಮೆ ಮಾಡಿದರೆ 4-5 ತಿಂಗಳು ಇಟ್ಟರೂ ಕೆಡುವುದಿಲ್ಲ, ಹಾಗಾಗಿ ಹೊರಗಡೆಯಿಂದ ಪುಳಿಯೊಗರೆ ತಂದು ಮಾಡುವ ಅವಶ್ಯಕತೆಯೂ ಬೀಳಲ್ಲ, ರುಚಿ ಮಾತ್ರ ಅದ್ಭುತವಾಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
150 ಗ್ರಾಂ ಹುಣಸೆ ಹಣ್ಣು
150 ಗ್ರಾಂ ಬೆಲ್ಲ
10-15 ಬ್ಯಾಡಗಿ ಮೆಣಸು
ಒಂದೂವರೆ ಚಮಚ ಮೆಂತೆ
1 ಚಮಚ ಜೀರಿಗೆ
1 ಚಮಚ ಸಾಸಿವೆ
1 ಚಮಚ ಕಾಳುಮೆಣಸು
1 ಚಮಚ ಉದ್ದಿನ ಬೇಳೆ
1 ಚಮಚ ಕಡ್ಲೆ ಬೇಳೆ
ಇಂಗು
ಅರಿಶಿಣಪುಡಿ
ಕರಿಬೇವು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- ನೀವು 100-150 ಗ್ರಾಂ ಹುಣಸೆ ಹಣ್ಣು ತೆಗೆದು ಬಿಸಿ ನೀರಿನಲ್ಲಿ ನೆನೆ ಹಾಕಿ, ಬಿಸಿ ನೀರು ಅರ್ಧ ಕಪ್ ಹಾಕಿದರೆ ಸಾಕಾಗುತ್ತೆ, ಇಲ್ಲದಿದ್ದರೆ ಹುಣಸೆ ರಸ ತುಂಬಾ ನೀರು ನೀರಾಗುವುದು.
- ಈಗ ಒಂದು ಪ್ಯಾನ್ಗೆ ಒಣ ಮೆಣಸು ಹಾಕಿ (ಬ್ಯಾಡಗಿ ಮೆನಸು ಜೊತೆಗೆ 5-6 ಖಾರ ಹೆಚ್ಚಿರುವ ಒಣ ಮೆಣಸು ಕೂಡ ಸೇರಿಸಬಹುದ), ಸ್ವಲ್ಪ ಕರಿಬೇವು ಹಾಕಿ ಅದಕ್ಕೆ 1ಚಮಚ ಎಣ್ಣೆ ಸೇರಿಸಿ ರೋಸ್ಟ್ ಮಾಡಿ, ಮೆಣಸು ಸೀದು ಹೋಗಬಾರದು, ಕಡಿಮೆ ಉರಿಯಲ್ಲಿ ರೋಸ್ಟ್ ಮಾಡಿ, ಕರಿಬೇವು ಗರಿಗರಿಯಾಗುವಷ್ಟು ಹೊತ್ತು ರೋಸ್ಟ್ ಮಾಡಿ
- ಈಗ ಅದೇ ಪ್ಯಾನ್ಗೆ ಒಂದು ಚಮಚ ಎಣ್ಣೆ ಸೇರಿಸಿ ಅದಕ್ಕೆ ಒಂದೂವರೆ ಚಮಚ ಮೆಂತೆ, 1 ಚಮಚ ಜೀರಿಗೆ ಹಾಕಿ, 1 ಚಮಚ ಕಾಳು ಮೆಣಸು, 1 ಚಮಚ ಸಾಸಿವೆ, ಒಂದು ಚಮಚ ಕಡ್ಲೆಬೇಳೆ, ಒಂದು ಚಮಚ ಉದ್ದಿನ ಬೇಳೆ, 4 ಚಮಚ ಕೊತ್ತಂಬರಿ ಬೀಜ, ಇಂಗು, ಹಾಕಿ ಹಾಕಿ ಕಡಿಮೆ ಉರಿಯಲ್ಲಿ ರೋಸ್ಟ್ ಮಾಡಿ ಉರಿಯಿಂದ ಇಳಿಸಿ.
- ಈಗ ಇವೆಲ್ಲಾ ಒಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ, ಸಂಪೂರ್ಣವಾಗಿ ತಣ್ಣಗಾಗಲಿ
- ಇದೇ ಸಮಯದಲ್ಲಿ ನೀವು ಹುಣಸೆ ರಸ ಚೆನ್ನಾಗಿ ಕಿವುಚಿ, ಅದಕ್ಕೆ 150 ಗ್ರಾಂ ಬೆಲ್ಲ, ರುಚಿಗೆ ತಕ್ಕ ಉಪ್ಪು, ಒಂದು ಚಮಚ ಅರಿಶಿಣ ಪುಡಿ ಸೇರಿಸಿ ಮಿಕ್ಸ್ ಮಾಡಿ
- ಮಸಾಲೆಯನ್ನು ನುಣ್ಣನೆ ಪುಡಿ ಮಾಡಿ.
- ಈ ಹುಣಸೆರಸ ಮಿಶ್ರಣ ಕುದಿಸಿ, ಹುಣಸೆ ಸ್ವಲ್ಪ ಗಟ್ಟಿಯಾಗುತ್ತಾ ಬರುವಾಗ ನೀವು ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ ಮತ್ತೆ 5 ನಿಮಿಷ ಕಡಿಮೆ ಉರಿಯಲ್ಲಿ ಸೌಟ್ನಿಂದ ತಿರುಗಿಸುತ್ತಾ ಬೇಯಿಸಿ. ನಂತರ ಸ್ಟೌವ್ ಆಫ್ ಮಾಡಿ ಈ ಮಿಶ್ರಣ ತಣ್ಣಗಾಗಲು ಬಿಡಿ, ಈಗ ನೀವು ಈ ಮಿಶ್ರಣವನ್ನು ಒಂದು ಗಾಜಿನ ಡಬ್ಬದಲ್ಲಿ ಗಾಳಿಯಾಡದಂತೆ ಹಾಕಿಟ್ಟರೆ ಇದನ್ನು ನೀವು 3-4 ತಿಂಗಳವೆರೆಗ ಇಡಬಹುದು.
ಪುಳಿಯೊಗರೆ ಮಾಡಬೇಕೆಂದು ಅನಿಸಿದಾಗ ಪಟ್ ಅಂತ ಮಾಡಬಹುದು, ರುಚಿಯೂ ಸೂಪರ್ ಆಗಿರುತ್ತದೆ.



Click it and Unblock the Notifications
