Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಮಾವಿನಕಾಯಿ ಉಪ್ಪಿನಕಾಯಿ ಹೀಗೆ ಹಾಕಿದರೆ ಒಂದು ವರ್ಷ ಇಟ್ಟರೂ ಹಾಳಾಗಲ್ಲ
ಈಗ ಮಾವಿನಕಾಯಿ ಸಮಯ, ಈ ಸಮಯದಲ್ಲಿ ಉಪ್ಪಿನಕಾಯಿ ರೆಡಿ ಮಾಡಿಟ್ಟರೆ ನೀವು ವರ್ಷದವರೆಗೆ ಇಟ್ಟು ಬಳಸಬಹುದು. ಈ ಮಾವಿನಕಾಯಿ ಉಪ್ಪಿನಕಾಯಿ ಊಟದ ಜೊತೆಗಿದ್ದರೆ ಊಟದ ರುಚಿ ಮತ್ತಷ್ಟು ಸೂಪರ್ ಆಗಿರುತ್ತದೆ. ಕೆಲವರು ಮಾವಿನಕಾಯಿ ಉಪ್ಪಿನಕಾಯಿ ದೂರ್ಘ ಸಮಯ ಇಟ್ಟಾಗ ಹಾಳಾಗುತ್ತದೆ , ತುಂಬಾ ಸಮಯ ಬಾಳಿಕೆ ಬರಲು ಏನು ಮಾಡಬೇಕೆಂದು ಕೇಳುತ್ತಾರೆ, ನೀವು ಹೀಗೊಮ್ಮೆ ಉಪ್ಪಿನಕಾಯಿ ಹಾಕಿಟ್ಟರೆ ಮುಂದಿನ ವರ್ಷ ಮಾವಿನಕಾಯಿ ಸೀಸನ್ ಬರುವವರೆಗೆ ಇಟ್ಟರೂ ಹಾಳಾಗಲ್ಲ ನೋಡಿ:

ಬೇಕಾಗುವ ಸಾಮಗ್ರಿ
ಮಾವಿನಕಾಯಿ 4-5 ಕೆಜಿ
2 ಚಮಚ ಮೆಂತೆ, 3 ಚಮಚ ಸಾಸಿವೆ, 8-10 ಒಣ ಮೆಣಸು
ಅರ್ಧ ಲೀಟರ್ ಸಾಸಿವೆಯೆಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಬೆಳ್ಳುಳ್ಳಿ
ಸ್ವಲ್ಪ ಕರಿಬೇವು
ಖಾರದ ಪುಡಿ 7-8 ಚಮಚ
2-3 ಚಮಚ ಅರಿಶಿಣ ಪುಡಿ
4 ಚಮಚ ವಿನೆಗರ್
2 ಚಮಚ ಇಂಗು ಪುಡಿ
ರುಚಿ ತಕ್ಕ ಉಪ್ಪು
ಮಾಡುವ ವಿಧಾನ
- ನೀವು ಮಾವಿನಕಾಯಿಯ ತೊಟ್ಟು ಭಾಗ ಕೆತ್ತಿ, ನಂತರ ನೀರಿನಲ್ಲಿ ಹಾಕಿ ತೊಳೆಯಿರಿ, ನಂತರ ಅದರ ನೀರಿನಂಶ ಹೋಗಲು ಬಟ್ಟೆ ಮೇಲೆ ಹರಡಿ ಇಡಿ.
- ಸ್ಟೆಪ್ 1
- ನಂತರ ಮಾವಿನಕಾಯಿ ಕತ್ತರಿಸಿ
- ನಂತರ ಚಿಕ್ಕದಾಗಿ ಕತ್ತರಿಸಿ
- ನಂತರ ಒಂದು ಚಮಚ ಉಪ್ಪು ಹಾಕಿ ಮಿಕ್ಸ್ ಮಾಡಿ (ತುಂಬಾ ಉಪ್ಪು ಹಾಕಬೇಡಿ)
- ನಂತರ ಚೆನ್ನಾಗಿ ಮಿಕ್ಸ್ ಮಾಡಿ
- ನಂತರ ಬಿಸಿಲಿನಲ್ಲಿ ಬಟ್ಟೆ ಅಥವಾ ಚಾಪೆ ಮೆಲೆ ಹರಡಿ ಬಿಸಿಲಿನಲ್ಲಿ ಒಣಗಿಸಿ, ಈ ರೀತಿ 3-4 ದಿನ ಒಣಗಿಸಿ.
ಸ್ಟೆಪ್ 2
ಈಗ ಪ್ಯಾನ್ಗೆ 3 ಚಮಚ ಮೆಂತೆ ಹಾಕಿ, 3 ಚಮಚ ಸಾಸಿವೆ ಹಾಕಿ ರೋಸ್ಟ್
ಮಾಡಿ
8-10 ಒಣ ಮೆಣಸು ಹಾಕಿ ಸ್ವಲ್ಪ ರೋಸ್ಟ್ ಮಾಡಿ ತಟ್ಟೆಗೆ ಹಾಕಿ ಅದರ ಬಿಸಿ ಸ್ವಲ್ಪ
ಆರಿದಾಗ ಪುಡಿ ಮಾಡಿ (ಪುಡಿ ಮಾಡುವಾಗ ಸ್ವಲ್ಪ ಬಿಸಿ ಇರಬೇಕು)
ಸ್ಟೆಪ್ 3
- ಈಗ ನೀವು ದಪ್ಪ ತಳವಿರುವ ಪಾತ್ರೆಗೆ ಅರ್ಧ ಲೀಟರ್ ಎಣ್ಣೆ ಹಾಕಿ
- ನಂತರ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಬೆಳ್ಳುಳ್ಳಿ ಎಸಳು ಹಾಕಿ, ನಂತರ ಸ್ವಲ್ಪ ಕರಿಬೇವು ಹಾಕಿ, ನಂತರ ಉರಿ ಆಫ್ ಮಾಡಿ ಮಾಡಿಟ್ಟ ಪುಡಿಯನ್ನು ಹಾಕಿ. ನಂತರ 8 ಚಮಚ ಹೆಚ್ಚು ಖಾರವಿಲ್ಲದ ಮೆಣಸಿನ ಪುಡಿ, 2 ಚಮಚ ಅರಿಶಿಣ ಪುಡಿ ಸೇರಿಸಿ ನಂತರ ಚೆನ್ನಾಗಿ ಮಿಕ್ಸ್ ಮಾಡಿ
- ನಂತರ ಕುದಿಸಿ ಆರಿದ ನೀರು 4 ಚಮಚ ವಿನೆಗರ್ ಸೇರಿಸಿ ಸ್ಟೌವ್ ಮತ್ತೆ ಆನ್ ಮಾಡಿ, 2 ಚಮಚ ಇಂಗು ಪುಡಿ ಸೇರಿಸಿ, ನಂತರ ರುಚಿಗೆ ತಕ್ಕ ಉಪ್ಪು ಸೇರಿಸಿ
- ನಂತರ ಬಿಸಿಲಿನಲ್ಲಿ ಸ್ವಲ್ಪ ಒಣಗಿಸಿದ ಮಾವಿನಕಾಯಿ ಸೇರಿಸಿ ಮಿಕ್ಸ್ ಮಾಡಿ, ಸ್ಟೌವ್ ಆಫ್ ಮಾಡಿ, ಈ ಸೂಪರ್ ರುಚಿಯ ಮಾವಿನಕಾಯಿ ಉಪ್ಪಿನಕಾಯಿ ರೆಡಿ, ಅಲ್ಲದೆ ಈ ಉಪ್ಪಿನಕಾಯಿ ದೀರ್ಘ ಸಮಯದವರೆಗೆ ಇಡಬಹುದು ಕೂಡ.



Click it and Unblock the Notifications
