Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನೀವು ಕುಷ್ಕಾ ಹೀಗೆ ರೆಡಿ ಮಾಡಿದರೆ ಮೊಟ್ಟೆ ಬಿರಿಯಾನಿಗೂ ಸೈ, ಚಿಕನ್-ಮಟನ್ ಬಿರಿಯಾನಿಗೂ ಸೈ
ಚಿಕನ್ ಬಿರಿಯಾನಿ ಮಾಡುವಾಗ ನೀವು ಕುಷ್ಕಾ ಸಪರೇಟ್ ಮಾಡಿ ಅದಕ್ಕೆ ನಾನ್ವೆಜ್ ಗ್ರೇವಿ ಮಾಡಿ ಮಿಕ್ಸ್ ಮಾಡಿ ಸರ್ವ್ ಮಾಡಬಹುದ, ಒಂದು ಕುಷ್ಕಾ ಮಾಡಿದರೆ ವೆಜ್ ಬಿರಿಯಾನಿ, ಮೊಟ್ಟೆ ಬಿರಿಯಾನಿ, ಚಿಕನ್ ಬಿರಿಯಾನಿ ಹೀಗೆ ನಿಮಗೆ ಬೇಕಾದ ರುಚಿಯಲ್ಲಿ ಗ್ರೇವಿ ಮಾಡಿ ಸವಿಯಬಹುದು, ಈ ಕುಷ್ಕಾ ರೆಸಿಪಿ ತುಂಬಾ ಸುಲಭವಾಗಿದೆ ನೋಡಿ:

ಬೇಕಾಗುವ ಸಾಮಗ್ರಿ
2 ಚಮಚ ತುಪ್ಪ
1 ಪಲಾವ್ ಎಲೆ
1 ಚಿಕ್ಕ ತುಂಡು ಚಕ್ಕೆ
2-3 ಲವಂಗ
1 ನಕ್ಷತ್ರ ಮೊಗ್ಗು
1/2 ಚಮಚ ಸೋಂಪು
1 ಈರುಳ್ಳಿ
1/4 ಕಪ್ ಮೊಸರು
1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್
1 ಹಸಿ ಮೆಣಸು
/4 ಚಮಚ ಅರಿಶಿಣ ಪುಡಿ
1-2 ಟೊಮೆಟೊ
1/2 ಚಮಚ ಕಾಶ್ಮೀರಿ ಮೆಣಸಿನ ಪಿಡೊ
1 ಚಮಚ ಬಿರಿಯಾನಿ ಮಸಾಲ
1 ಚಮಚ ಉಪ್ಪು
ಅರ್ಧ ಕಟ್ಟು ಪುದೀನಾ ಸೊಪ್ಪು (ಚಿಕ್ಕದಾಗಿ ಕತ್ತರಿಸಿದ್ದು)
ಅರ್ಧ ಕಟ್ಟು ಕೊತ್ತಂಬರಿಸೊಪ್ಪು (ಚಿಕ್ಕದಾಗಿ ಕತ್ತರಿಸಿದ್ದು)
1 ಕಪ್ ಬಾಸುಮತಿ ಅಕ್ಕಿ
2 ಕಪ್ ನೀರು
ಮಾಡುವ ವಿಧಾನ:
ಕುಕ್ಕರ್ಗೆ 2 ಚಮಚ ತುಪ್ಪ ಹಾಕಿ ಬಿಸಿ ಮಾಡಿ
ಸೋಂಪು ಹಾಕಿ, ಸೋಂಪು ಚಟ್ಪಟ್ ಶಬ್ದ ಮಾಡುವಾಗ ನಕ್ಷತ್ರ ಮೊಗ್ಗು, ಚಕ್ಕೆ,
ಲವಂಗ, ಪವಾವ್ ಎಲೆ ಹಾಕಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಒಂದೆರಡು ನಿಮಿಷ ಫ್ರೈ ಮಾಡಿ, ಈರುಳ್ಳಿ ಹಾಕಿ
ಕಂದು ಸ್ವಲ್ಪ ಮೆತ್ತಗಾಗುವವರೆಗೆ ಫ್ರೈ ಮಾಡಿ, ಟೊಮೆಟೊ ಹಾಕಿ ಫ್ರೈ ಮಾಡಿ,
ನಂತರ ಮೊಸರು ಸೇರಿಸಿ, ಮೊಸರು ಹಾಕಿದ ತಕ್ಷಣ ಚೆನ್ನಾಗಿ ಕದಡಿ
ನಂತರ ಅರಿಶಿಣ ಪುಡಿ, ಖಾರದ ಪುಡಿ, ಬಿರಿಯಾನಿ ಮಸಾಲ ಪುಡಿ, ರುಚಿಗೆ ತಕ್ಕ ಉಪ್ಪು
ಹಾಕಿ
ನಂತರ ಬಿರಿಯಾನಿ ಅಕ್ಕಿ ತೊಳೆದು ಹಾಕಿ 2 ಕಪ್ ಅಕ್ಕಿಗೆ 4 ಕಪ್ ನೀರು ಹಾಕಿ
ಮಿಕ್ಸ್ ಮಾಡಿ
ನಂತರ 2 ವಿಶಲ್ ಬರುವವರೆಗೆ ಬೇಯಿಸಿ
ನಂತರ ಕುಕ್ಕರ್ನಿಂದ ಆವಿ ಹೋದ ಮೇಲೆ ನಂತರ ನಿಂಬೆರಸ ಹಾಕಿ ಮಿಕ್ಸ್ ಮಾಡಿದರೆ
ಕುಷ್ಕಾ ರೆಡಿ.
ಈ ಕುಷ್ಕಾ ರೆಡಿಯಾದ ಮೇಲೆ ನಿಮಗೆ ಬೇಕಾಗಿರುವ ನಾನ್ವೆಜ್ನಿಂದ ಬಿರಿಯಾನಿ ಮಸಾಲೆ ರೆಡಿ ಮಾಡಿ ಇದರ ಜೊತೆ ಸರ್ವ್ ಮಾಡಬಹುದು.
ಈಗ ರೆಡಿಯಾದ ಕುಷ್ಕಾವನ್ನು ನೀವು ಮೊಟ್ಟೆ, ಕಬಾಬ್ ಅಥವಾ ಚಿಕನ್ , ಮಟನ್
ಮಸಾಲೆ ಮಾಡಿ ಕೂಡ ಸರ್ವ್ ಮಾಡಬಹುದು.
ಕುಷ್ಕಾ ಮಾಡುವಾಗ ಯಾವುದೇ ನಾನ್ವೆಜ್ ಬಳಸುವುದಿಲ್ಲ, ಹಾಗಾಗಿ ವೆಜ್ ಮತ್ತು
ನಾನ್ವೆಜ್ ಅಡುಗೆ ಮಾಡುವಾಗ ಹೀಗೆ ಮಾಡಿದರೆ ವೆಜ್ಗೆ ಮೊಸರು ಬಜ್ಜಿ ಜೊತೆ ಸರ್ವ್
ಮಾಡಿ, ನಾನ್ವೆಜ್ಗೆ
ಕಬಾಬ್ ಅಥವಾ ಚಿಕನ್ ಮಸಾಲೆ ಮಾಡಿ ಸರ್ವ್ ಮಾಡಿ.



Click it and Unblock the Notifications
