Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಹಿಂದಿನವರ ಆರೋಗ್ಯದ ಗುಟ್ಟು ಇಂಥ ಆಹಾರವಾಗಿತ್ತು ನೋಡಿ: ಜೋಳದ ಉಸಲಿ ದೇಹಕ್ಕೆ ಪುಷ್ಠಿ ರುಚಿಯೂ ಸೂಪರ್
ಈಗ ವಯಸ್ಸು 25 ದಾಟಿದರೆ ಸಾಕು ಹಲವಾರು ಆರೋಗ್ಯ ಸಮಸ್ಯೆ, ಅದೇ ಮನೆಯಲ್ಲಿ 70 ವರ್ಷ ದಾಟಿದ ಊರು ಕಡೆ ಅಜ್ಜ-ಅಜ್ಜಿಯಿದ್ದರೆ ನಮಗಿಂತ ಚುರುಕಾಗಿ ಕೆಲಸ ಕಾರ್ಯ ಮಾಡ್ತಾ ಇರ್ತಾರೆ, ಅವರನ್ನು ನೋಡಿ ಅವರ ಆ ಕಾಲದ ಆಹಾರದ ಪವರ್ ಅದು ಅಂತ ನಾವು ಹೇಳ್ತೀವಿ, ಆದರೆ ನಮ್ಮ ಬಾಯಿಗೆ ರುಚಿ ಅನಿಸುವುದು ಈ ಪಿಜ್ಜಾ ಬರ್ಗರ್‌ನಂಥ ಆಹಾರಗಳೇ ಅಲ್ವಾ? ಆದರೆ ನೀವು ಹಳೆಯ ಆಹಾರ ಪದ್ಧತಿ ಟ್ರೈ ಮಾಡಿ ನೋಡಿ ಆ ಆಹಾರಗಳ ರುಚಿಗೆ ಅರೇ ಇಷ್ಟೊಂದು ರುಚಿಯಾಗಿದ್ದ ಆಹಾರ ತಿನ್ನದೇ ಇದ್ದೆ ಅಲ್ವಾ ಎಂಬ ಪಶ್ಚಾತಾಪವಾಗುತ್ತೆ, ಅಲ್ಲದೆ ಅಂಥ ಆಹಾರಗಳನ್ನು ನಮ್ಮ ಆಹಾರಕ್ರಮದಲ್ಲಿ ಸೇರಿಸಿದ್ದೇವೆ ಅಂದರೆ ಗುಂಡು ಕಲ್ಲಿನಂತೆ ತುಂಬಾ ಚೆನ್ನಾಗಿ ಇರುತ್ತೇವೆ, ಅಂಥದ್ದೇ ಒಂದು ಆಹಾರ ಜೋಳದ ಉಸಲಿ.
ಜೋಳದ ಉಸಲಿ ಇದನ್ನು ಜೋಳದ ಅರಳು ಎಂದು ಕರೆಯುವ ಧಾನ್ಯದಿಂದ ಮಾಡುವುದು, ಸಿರಿಧಾನ್ಯ ಸಿಗುವ ಕಡೆ ಸಿಗುತ್ತೆ, ಸೂಪರ್ ಮಾರ್ಕೆಟ್‌ನಲ್ಲಿ ಸಿಗುತ್ತೆ, ಇದನ್ನು ತಂದು ಈ ರೀತಿ ಉಸಲಿ ಮಾಡಿ ತಿಂದು ನೋಡಿ ರುಚಿ ಸೂಪರ್ ಆಗಿರುತ್ತೆ
ಬೇಕಾಗುವ ಸಾಮಗ್ರಿ
ಜೋಳ-ಜೋಳದ ಅರಳು 1 ಕಪ್
ತುಪ್ಪ 2 ಚಮಚ ಅಥವಾ ತೆಂಗಿನೆಣ್ಣೆ 2 ಚಮಚ
1/2 ಚಮಚ ಅರಿಶಿಣ ಪುಡಿ
ಸ್ವಲ್ಪ ಇಂಗು
ಹಸಿ ಮೆಣಸಿನಕಾಯಿ 3-4 (ನಿಮ್ಮ ಖಾರಕ್ಕೆ ತಕ್ಕಷ್ಟು)
ಈರುಳ್ಳಿ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು
ಕರಿಬೇವಿನ ಸೊಪ್ಪು
ಸ್ವಲ್ಪ ಬೆಳ್ಳುಳ್ಳಿ
ಜೀರಿಗೆ
ಶುಂಠಿ
ಸ್ವಲ್ಪ ತುರಿದ ಕ್ಯಾರೆಟ್
ಸ್ವಲ್ಪ ನೆಲಗಡಲೆ
ಮಾಡುವ ವಿಧಾನ
- ಜೋಳದ ಅರಳು ನೀವು 10-12 ಗಂಟೆ ನೀರಿನಲ್ಲಿ ನೆನೆ ಹಾಕಿ
- ನಂತರ ಇದನ್ನು ಕುಕ್ಕರ್‌ಗೆ ಹಾಕಿ 2 ಕಪ್ ನೀರು ಸೇರಿಸಿ, ಸ್ವಲ್ಪ ಉಪ್ಪು ಸೇರಿಸಿ 5-6 ವಿಶಲ್ ಬರುವವರೆಗೆ ಬೇಯಿಸಿ.
- ನಂತರ ಈಗ ಬಾಣಲೆಗೆ ಎಣ್ಣೆ ಅಥವಾ ತುಪ್ಪ ಹಾಕಿ, ನಂತರ ಅದಕ್ಕೆ ಸ್ವಲ್ಪ ಸಾಸಿವೆ ಹಾಕಿ , ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಇಂಗು ಹಾಕಿ, ನಂತರ ಬೆಳ್ಳುಳ್ಳಿ, ಶುಂಠಿ ಸೇರಿಸಿ, ಒಣ ಮೆಣಸು ಮುರಿದು ಹಾಕಿ, ಕರಿಬೇವು ಹಾಕಿ
- ಈಗ ನೆಲಗಡಲೆ ಸೇರಿಸಿ 2 ನಿಮಿಷ ಫ್ರೈ ಮಾಡಿ
- ಅದಾದ ಬಳಿಕ ಈರುಳ್ಳಿ ಸೇರಿಸಿ, ಹಸಿ ಮೆಣಸು ಸೇರಿಸಿ ಈರುಳ್ಳಿ ಸ್ವಲ್ಪ ಮೆತ್ತಗಾಗುವವರೆಗೆ ಫ್ರೈ ಮಾಡಿ, ತುರಿದ ಕ್ಯಾರೆಟ್ ಸೇರಿಸಿ.
- ಅದಾದ ಬಳಿಕ ಬೇಯಿಸಿದ ಜೋಳದ ಅರಳು ಸೇರಿಸಿ, ರುಚಿಗೆ ತಕ್ಕ ಉಪ್ಪು, ಅರಿಶಿಣ ಪುಡಿ ಸೇರಿಸಿ ಮಿಕ್ಸ್ ಮಾಡಿ,.
- ನೀವು ಜೋಳದ ಅರಳು ಮಾತ್ರ ಹಾಕಿ, ಅದರ ಜೊತೆ ಬೇಯಿಸಿದ ನೀರು ಸೇರಿಸಬೇಡಿ.
- ಬೇಕಿದ್ದರೆ ಸ್ವಲ್ಪ ತೆಂಗಿನ ತುರಿ ಸೇರಿಸಿ
- ನಂತರ ಟೇಸ್ಟ್ ಮಾಡಿ ನೋಡಿ ರುಚಿ ಅಷ್ಟೊಂದು ಚೆನ್ನಾಗಿರುತ್ತದೆ.
ಇತರ ಸಲಹೆ:
ಇಲ್ಲಿ ನೀವು ಕ್ಯಾರೆಟ್ ಹಾಕಲೇಬೇಕು ಎಂದೇನು ಇಲ್ಲ. ನೀವು ಹೆಸರುಕಾಳು ಬೇಯಿಸಿ
ಉಸಲಿ ಮಾಡ್ತೀರಲ್ಲಾ, ಅದೇ ರೀತಿ ಮಾಡಬಹುದು.



Click it and Unblock the Notifications

