Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಈ ದೋಸೆ ತಿಂದ್ರೆ ಸಕ್ಕರೆಯಂಶ ಹೆಚ್ಚಾಗಲ್ಲ, ರುಚಿಯೂ ಸೂಪರ್, ಪುಡಿ ಹೀಗೆ ಮಾಡಿಟ್ಟರೆ ಸಾಕು, ನಿಮಿಷಗಳಲ್ಲಿ ದೋಸೆ ರೆಡಿ
ಇದೊಂದು ಅತ್ಯಂತ ಆರೋಗ್ಯಕರವಾದ ದೋಸೆಯಾಗಿದೆ, ಏಕೆಂದರೆ ಮೆಂತೆ, ಗೋಧಿ, ಅಕ್ಕಿ, ಉದ್ದು ಹಾಕಿ ಮಾಡುವ ದೋಸೆಯಾಗಿದ್ದು, ನೀವು ಈ ದೋಸೆ ತಿನ್ನುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಕೂಡ ನಿಯಂತ್ರಣದಲ್ಲಿಡಬಹುದು, ಅಲ್ಲದೆ ಇದನ್ನು ನೀವ್ ಯಾಆಗ ಬೇಕು ಆವಾಗ ತತ್ ತಕ್ಷಣ ಮಾಡಿ ಸವಿಯಬಹುದು, ಅಕ್ಕಿ ನೆನೆಹಾಕಬೇಕು ಅಂತೇನೂ ಇಲ್ಲ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ಕಪ್ ಗೋಧಿ
ಮುಕ್ಕಾಲು ಕಪ್ ಮೆಂತೆ ಬೀಜ
ಅರ್ಧ ಕಪ್ ಅಕ್ಕಿ
ಒಂದೂವರೆ ಕಪ್ ಉದ್ದು (ಸಿಪ್ಪೆ ಸಹಿತ)
ಸ್ವಲ್ಪ ಗೋಡಂಬಿ ದ್ರಾಕ್ಷಿ
ಒಂದು ಲೋಟ ಅಳತೆಯಲ್ಲಿ ಗೋಧಿ ತೆಗೆದು ಹುರಿಯಿರಿ
ಅರ್ಧ ತೊಳೆದು ಒಣಗಿಸಿ ಅಕ್ಕಿಯನ್ನು ತೆಗೆದು ಒಣಗಿಸಿ
ಮುಕ್ಕಾಲು ಲೋಟ ಮೆಂತೆಯನ್ನು ಹುರಿದಿಡಿ
ಒಂದೂವರೆ ಲೋಟ ಕಪ್ಪು ಸಿಪ್ಪೆ ಇರುವ ಉದ್ದನ್ನು ಹಾಕಿ ಹುರಿದುಕೊಳ್ಳಿ
8-10 ಗೋಡಂಬಿ-ದ್ರಾಕ್ಷಿ ಕೂಡ ಹುರಿದು ಇಡಿ.
ಈಗ ಈ ಎಲ್ಲಾ ಸಾಮಗ್ರಿ ತಣ್ಣಗಾಗಲು ಬಿಡಿ, ಸಂಪೂರ್ಣ ತಣ್ಣಗಾದ ಮೇಲೆ ಪುಡಿ
ಪುಡಿ ನೀವು ಮಿಕ್ಸಿಯಲ್ಲಿಯ ಮಾಡಬಹುದು, ಮಿಲ್‌ನಲ್ಲಿಯೂ ಮಾಡಿಸಬಹುದು.
ಈಗ ನೀಡಿರುವ ಸಾಮಗ್ರಿಯಷ್ಟೇ ಆದರೆ ಮಿಕ್ಸಿಯಲ್ಲಿಯೇ ಮಾಡಬಹುದು, ಇಲ್ಲಾ ನೀವು
ಹೆಚ್ಚಿನ ಅಳತೆಯಲ್ಲಿ ಮಾಡುವುದಾದರೆ ಮಿಲ್‌ಗೆ ಹೋಗಿ ಪುಡಿ ಮಾಡಿ ಬನ್ನಿ.
ನಂತರ ಪುಡಿಯನ್ನು ಡಬ್ಬದಲ್ಲಿ ಹಾಕಿಡಿ, ನಂತರ ನೀವು ಮುದ್ದೆ ಅಥವಾ ದೋಸೆಯನ್ನು
ಮಾಡುವಾಗ ಹಿಟ್ಟು ಬಳಸಿ
ದೋಸೆ ಮಾಡುವ ವಿಧಾನ:
ಈಗ ಹಿಟ್ಟನ್ನು ತೆಗೆದು ನೀರು ಹಾಕಿ ದೋಸೆ ಹದಕ್ಕೆ ಕಲೆಸಿ ದೋಸೆ ಹುಯ್ಯಿರಿ.
ದೋಸೆ ತುಂಬಾನೇ ರುಚಿಯಾಗಿರುತ್ತದೆ
ಇದನ್ನು ಇನ್‌ಸ್ಟಾಂಟ್ ದೋಸೆಯಂತೆ ಸವಿಯಬಹುದು.
ಮಧುಮೇಹಿಗಳಿಗೆ ಚಪಾತಿಗಿಂತಲೂ ಈ ದೋಸೆ ಅಥವಾ ಮುದ್ದೆ ತುಂಬಾನೇ ಒಳ್ಳೆಯದು.
ಇದೇ ಹಿಟ್ಟಿನಿಂದ ನೀವು ಮುದ್ದೆ ಮಾಡಿ
ಇದೇ ಹಿಟ್ಟಿನಿಂದ ನೀವು ಮುದ್ದೆ ಕೂಡ ಮಾಡಬಹುದು, ಮುದ್ದೆ ತುಂಬಾನೇ
ರುಚಿಯಾಗಿರುತ್ತದೆ.
ಈ ಮುದ್ದೆ ಕೂಡ ರಾಗಿ ಮುದ್ದೆಗಿಂತಲೂ ತುಂಬಾ ಟೇಸ್ಟಿಯಾಗಿರುತ್ತದೆ.
ಮುದ್ದೆ ಸ್ವಲ್ಪ ಕಹಿ ಅನಿಸಿದರೂ ರುಚಿ ಸೂಪರ್, ಮಧುಮೇಹವನ್ನು ನಿಯಂತ್ರಿಸುವಲ್ಲಿ
ತುಂಬಾನೇ ಸಹಕಾರಿ.



Click it and Unblock the Notifications
