Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಊಟದ ಸ್ವಾದ ಹೆಚ್ಚಿಸುತ್ತೆ ಈ ಶುಂಠಿಕರಿ, ಮಾಡಿಟ್ಟರೆ ತಿಂಗಳವರೆಗೆ ಇಟ್ಟು ಉಪ್ಪಿನಕಾಯಿಯಂತೆ ಬಳಸಬಹುದು
ನೀವು ಓಣಂ ಸದ್ಯ ಸೇವಿಸಿದರೆ ಅದರಲ್ಲಿ ಉಪ್ಪಿನಕಾಯಿಯಂತೆ ಒಂದು ಚಮಚ ಇಂಜಿಕರಿ ಅಂಯತ ಬಡಿಸುತ್ತಾರೆ, ತಿನ್ನಲು ತುಂಬಾನೇ ರುಚಿಯಾಗಿರುತ್ತದೆ, ಅದು ಶುಂಠಿಯಿಂದ ಮಾಡುವ ಸಾರು, ಇದನ್ನು ಮಾಡಿದರೆ ಒಂದು ತಿಂಗಳವರೆಗೆ ಫ್ರಿಡ್ಜ್ನಲ್ಲಿಟ್ಟು ಬಳಸಬಹುದು.
ಇದನ್ನು ಮಾಡುವುದು ಸ್ವಲ್ಪ ಶ್ರಮದ ಕೆಲಸ, ಆದರೆ ರುಚಿ ಆ ಶ್ರಮ ಸಾರ್ಥಕ ಎಂದನಿಸುವಂತೆ ಮಾಡುವುದು, 1 ಚಮಚ ಶುಂಠಿಕರಿ ಇದ್ದರೆ ಸಾಕು, ಊಟದ ರುಚಿ ಹೆಚ್ಚುವುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಸಲಹೆ: ಇದನ್ನು ಕೇರಳಶೈಲಿಯಲ್ಲಿ ತೆಂಗಿನೆಣ್ಣ ಬಳಸಲಾಗುವುದು, ಆದರೆ ನಿಮಗೆ ತೆಂಗಿನೆಣ್ಣೆ ಇಷ್ಟವಿಲ್ಲದಿದ್ದರೆ ಬೇರೆ ಅಡುಗೆಯೆಣ್ಣೆ ಬಳಸಬಹುದು, ಆದರೆ ಇಂಜಿಕರಿಯ ನಿಜವಾದ ಸ್ವಾದ ಸಿಗುವುದು ಅದನ್ನು ತೆಂಗಿನೆಣ್ಣೆ ಬಳಸಿ ಮಾಡಿದಾಗಲೇ (ತೆಂಗಿನೆಣ್ಣೆ ಬಳಸುವುದಾದರೆ ತಲೆಗೆ ಹಾಕಲು ಸಿಗುವ ಎಣ್ಣೆಯಲ್ಲ, ಅಡುಗೆಗೆ ಶುದ್ಧ ತೆಂಗಿನೆಣ್ಣೆ ಬಳಸಿ.
ಬೇಕಾಗುವ ಸಾಮಗ್ರಿ
ಶುಂಠಿ 1/2 ಕೆಜಿ
ಈರುಳ್ಳಿ 5-6
ಹಸಿ ಮೆಣಸು 4-4
ಮೆಂತೆ ಪುಡಿ 1/2 ಚಮಚ
ಇಂಗು ಸ್ವಲ್ಪ
ನಿಂಬೆಹಣ್ಣು ಗಾತ್ರದಷ್ಟು ಹುಣಸೆಹಣ್ಣು
ಬೆಲ್ಲ 2 ಚಮಚ
ಸ್ವಲ್ಪ ಕರಿಬೇವಿನ ಎಲೆ
ಸ್ವಲ್ಪ ಸಾಸಿವೆ
ಒಣ ಮೆಣಸು 2
ತೆಂಗಿನೆಣ್ಣೆ 11/4 ಕಪ್ (ಶುಂಠಿ ಹುರಿಯಲು ಬೇಕಾಗುವಷ್ಟು
ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ:
- ಶುಂಠಿ ಸಿಪ್ಪೆ ಕೆತ್ತಿ ನಂತರ ಅದನ್ನು ಚಿಕ್ಕದಾಗಿ ಕತ್ತರಿಸಿ.
- ಈಗ ಪ್ಯಾನ್ಗೆ ಎಣ್ಣೆ ಬಿಸಿ ಮಾಡಿ ಅದರಲ್ಲಿ ಶುಂಠಿ ಹಾಕಿ ಶುಂಠಿ ಕಂದು ಬಣ್ಣಕ್ಕೆ ಬರುವವರೆಗೆ ಹುರಿಯಬೇಕು, ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತೆ. ನಂತರ ಅದನ್ನು ತೆಗೆದು ತಟ್ಟೆಗೆ ಹಾಕಿಡಿ
- ಹುಣಸೆ ಹಣ್ಣನ್ನು ಬಿಸಿ ನೀರಿನಲ್ಲಿ ಹಾಕಿಡಿ
- ಈಗ ದಪ್ಪವಾದ ಕಡಾಯಿಯಲ್ಲಿ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ ನಂತರ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುವಾಗ ಅದಕ್ಕೆ ಒಣ ಮೆಣಸು ಹಾಕಿ, ಕರಿಬೇವು ಹಾಕಿ. ಈರುಳ್ಳಿ ಹಾಕಿ ಫ್ರೇ ಮಾಡಿ, ಈರುಳ್ಳಿ ಕೂಡ ಕಂದು ಬಣ್ಣಕ್ಕೆ ಬರುವಾಗ ಈರುಳ್ಳಿ ಸೇರಿಸಿ, ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.
- ನಂತರ ಅದದಕ್ಕೆ ಹುಣಸೆ ರಸ ಸೇರಿಸಿ, ಹುಣಸೆ ರಸ ಕುದಿ ಬರುವಾಗ ಉಪ್ಪು, ಖಾರದ ಪುಡಿ, ಮೆಂತೆ ಪುಡಿ, ಹೀಂಗು ಸೇರಿಸಿ, ನಂತರ ಶುಂಠಿ ಮತ್ತು ಬೆಲ್ಲ ಸೇರಿಸಿ. ನಂತರ ಕಡಿಮೆ ಉರಿಯಲ್ಲಿ 15-20 ನಿಮಿಷ ಬೇಯಿಸಿ. ನಿಮಗೆ ಗ್ರೇವಿ ಸ್ವಲ್ಪ ತೆಳ್ಳಗೆ ಬೇಕೆಂದರೆ ಸ್ವಲ್ಪ ನೀರು ಸೇರಿಸಿ ಕುದಿಸಿ.
- ನಂತರ ಉರಿಯಿಂದ ಇಳಿಸಿ ಡಬ್ಬದಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಳಳದಿಂದ ಮುಚ್ಚಿದರೆ ತಿಂಗಳುಗಟ್ಟಲೆ ಇಟ್ಟು ಬಳಸಬಹುದು.



Click it and Unblock the Notifications
