Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಉಡುಪಿ ಶೈಲಿಯ ಹೆಸರು ಬೇಳೆ ಕಟ್ಟು ಸಾರು ಇದ್ದರೆ ಊಟ ಬಲು ರುಚಿ
Recipes
oi-Reena TK
Posted By: Reena TK
ಹೆಸರುಬೇಳೆ ಕಟ್ಟು ಸಾರು ಅನ್ನದ ಜೊತೆ ತಿನ್ನಲು ಸೂಪರ್ ಆಗಿರುತ್ತದೆ. ಈ ಸಾರಿದ್ದು, ಸ್ವಲ್ಪ ಮೊಸರಿದ್ದರೆ ಮತ್ತೇನೂ ಬೇಕಾಗಿಲ್ಲ ಊಟ ಮಾಡಲು ಅಷ್ಟೊಂದು ರುಚಿಯಾಗಿರುತ್ತದೆ, ಬನ್ನಿ ಈ ಹೆಸರುಬಳೆ ಕಟ್ಟು ಸಾರು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಕಪ್ ಹೆಸರು ಬೇಳೆ
1 ಟೊಮೆಟೊ
2 ಹಸಿ ಮೆಣಸು
ಸ್ವಲ್ಪ ಶುಂಠಿ-ಬೆಳ್ಳುಳ್ಳಿ
ಸ್ವಲ್ಪ ಇಂಗು
2 ಚಮಚ ಎಣ್ಣೆ
ಸಾಸಿವೆ
ಜೀರಿಗೆ
2 ಹಸಿ ಮೆಣಸು
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ
- ಅರ್ಧ ಕಪ್ ಹೆಸರು ಬೇಳೆ ನೀರು ಹಾಕಿ ತೊಳೆದು ಕುಕ್ಕರ್‌ಗೆ ಹಾಕಿ ಒಂದು ಕಪ್ ನೀರು ಸೇರಿಸಿ, ಅರ್ಧ ಚಮಚ ಅರಿಶಿಣ , 2 ಹನಿ ಎಣ್ಣೆ ಹಾಕಿ, 1 ಟೊಮೆಟೊ ಹಾಕಿ, ಸ್ವಲ್ಪ ಉಪ್ಪು ಸೇರಿಸಿ ವಿಶಲ್ ಬರುವವರೆಗೆ ಬೇಯಿಸಿ, ನಂತರ ಆವಿ ಹೋದ ಮೇಲೆ ಚೆನ್ನಾಗಿ ಮ್ಯಾಶ್ ಮಾಡಿ.
- ಈಗ ಸಾರು ಪಾತ್ರೆ ಬಿಸಿ ಮಾಡಿ ಅದಕ್ಕೆ 1 ಚಮಚ ಎಣ್ಣೆ ಹಾಕಿ, ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ , ಸ್ವಲ್ಪ ಜೀರಿಗೆ ಹಾಕಿ, ಜೀರಿಗೆ ಚಟ್‌ಪಟ್ ಶಬ್ದ ಮಾಡುವಾಗ ಇಂಗು, 2 ಹಸಿ ಮೆಣಸು, ಸ್ವಲ್ಪ ಶುಂಠಿ-ಬೆಳ್ಳುಳ್ಳಿ ಜಜ್ಜಿ ಸೇರಿಸಿ
- ಸ್ವಲ್ಪ ಕರಿಬೇವು ಸೇರಿಸಿ
- ಈಗ ಸ್ವಲ್ಪ ಹುಣಸೆ ಹಣ್ಣಿನ ರಸ ಸೇರಿಸಿ
- ಸ್ವಲ್ಪ ಬೆಲ್ಲ ಅಥವಾ ಸಕ್ಕರೆ ಸೇರಿಸಿ
- ಸ್ವಲ್ಪ ಅರಿಶಿಣ ಸೇರಿಸಿ ಕುದಿಸಿ
- ಮಿಶ್ರಣ ಚೆನ್ನಾಗಿ ಕುದಿ ಬರುವಗ ಮ್ಯಾಶ್ ಮಾಡ ಹೆಸರು ಬೇಳೆ ಸೇರಿಸಿ, ನಂತರ ಸ್ವಲ್ಪ ನೀರು ಸೇರಿಸಿ, ರುಚಿಗೆ ತಕ್ಕ ಉಪ್ಪು ಸೇರಿಸಿ ಕುದಿಸಿ.
- ಮಿಶ್ರಣ ಚೆನ್ನಾಗಿ ಕುದಿ ಬಂದ ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ಉರಿಯಿಂದ ಉಳಿಸಿದರೆ ಹೆಸರುಬೇಳೆ ಕಟ್ಟು ಸಾರು ರೆಡಿ.
ಇತರ ಸಲಹೆ
- ನೀವು ಹೆಸರುಬೇಳೆ ಬದಲಿಗೆ ತೊಗರಿಬೇಳೆಯಿಂದಲೂ ಇದನ್ನು ಮಾಡಬಹುದು
- ಈ ಸಾರು ಸ್ವಲ್ಪ ಗಟ್ಟಿ ಬೇಕೆಂದರೆ ಮಾಡಬಹುದು, ಇದು ನೀರು-ನೀರಾಗಿ ರಸಂ ರೀತಿ ಇದ್ದರೆ ಸೂಪರ್
- ಹುಣಸೆರಸ ಬದಲಿಗೆ ಸ್ವಲ್ಪ ನಿಂಬೆ ರಸ ಸೇರಿಸಿ
Comments
[ of 5 - Users]
Story first published: Wednesday, February 26, 2025, 21:28 [IST]
Other articles published on Feb 26, 2025



Click it and Unblock the Notifications
