Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಹಸಿ ಮೆಣಸು-ಮೊಸರು ಕರಿ: ಈ ಬೇಸಿಗೆಗೆ ಇಂಥ ಅಡುಗೆಗಳಿದ್ದರೆ ಆಹಾರ ರುಚಿಸುವುದು
Recipes
oi-Reena TK
Posted By: Reena TK
ಈ ಬೇಸಿಗೆಯಲ್ಲಿ ಊಟಕ್ಕೆ ಈ ಮೊಸರಿನ ಸಾರು ಮಾಡಿದರೆ ಊಟ ತುಂಬಾನೇ ರುಚಿ ಅನಿಸುತ್ತೆ, ಮೊಸರು ಸಾರನ್ನು ಹಲವಾರು ರುಚಿಯಲ್ಲಿ ಮಾಡಬಹುದು, ಇದು ತುಂಬಾನೇ ಸರಳವಾದ ರೆಸಿಪಿಯಾಗಿದೆ, ಅಲ್ಲದೆ ಅಷ್ಟೊಂದು ರುಚಿಯಾಗಿರುತ್ತದೆ. ಈ ಮೊಸರು ಸಾರು, ಒಂದು ಪಲ್ಯವಿದ್ದರ ಸಾಕಾಗುತ್ತೆ ಊಟ ಬಲು ರುಚಿ ಅನಿಸುವುದು, ಊಟ ತುಂಬಾನೇ ತೃಪ್ತಿ ಅನಿಸುವುದು. ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಅರ್ಧ ಲೀಟರ್ ಮೊಸರು
ಸ್ವಲ್ಪ ಕಲ್ಲುಪ್ಪು ಸೇರಿಸಿ ಮಿಕ್ಸ್ ಮಾಡಿ
ಚಿಕ್ಕ ಈರುಳ್ಳಿ 15-20
8-10 ಎಸಳು ಬೆಳ್ಳುಳ್ಳಿ
ಸ್ವಲ್ಪ ಶುಂಠಿ
ಸ್ವಲ್ಪ ಜೀರಿಗೆ
ಅರ್ಧ ಚಮಚ ಕಾಳು ಮೆಣಸು
ಹಸಿಮೆಣಸು 5-6 ( ಖಾರ ಸ್ವಲ್ಪ ಕಡಿಮೆ ಇರುವ ಹಸಿ ಮೆಣಸು 10-12 ಕೂಡ
ಬಳಸಬಹುದು)
ಒಗ್ಗರಣೆಗೆ
2 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಮೆಂತೆ
ಸ್ವಲ್ಪ ಕರಿಬೇವು
ಸ್ವಲ್ಪ ಇಂಗು
ಸ್ವಲ್ಪ ಅರಿಶಿಣ ಪುಡಿ
ಸ್ವಲ್ಪ ಕೊತ್ತಂಬರಿ ಪುಡಿ
ಮಾಡುವ ವಿಧಾನ
- ಅರ್ಧ ಲೀಟರ್ ಮೊಸರನ್ನು ಒಂದು ಬೌಲ್ಗೆ ಹಾಕಿ ಅದಕ್ಕೆ ಅರ್ಧ ಚಮಚ ಮೊಸರು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಡಿ
- ಈಗ ನೀವು ಚಿಕ್ಕ ಈರುಳ್ಳಿ, ಬೆಳ್ಳುಳ್ಳಿ, ಶುಂಠಿ, ಕಾಳು ಮೆಣಸು, ಜೀರಿಗೆ ಇವೆಲ್ಲಾ ಮಿಕ್ಸಿ ಜಾರ್ಗೆ ಹಾಕಿ ತರಿತರಿಯಾಗಿ ರುಬ್ಬಿ ಇಡಿ.
- ಕಲ್ಲಿನಲ್ಲಿಯೂ ಜಜ್ಜಬಹುದು
- ಈಗ ಹಸಿ ಮೆಣಸು ತೊಟ್ಟು ಸಹಿತ ತೆಗೆದುಕೊಂಡು ಅರ್ಧದಷ್ಟು ಕತ್ತರಿಸಿ ಹಸಿ, ಎರಡು ಭಾಗ ಮಾಡಬಾರದು , ಕತ್ತಿಯಿಂದ ಗೀಟು ಹಾಕಿದರೆ ಸಾಕು.
- ಈ ಪಾತ್ರೆ ಬಿಸಿ ಮಾಡಿ (ಮಣ್ಣಿನ ಪಾತ್ರೆಯಾದರೆ ಇನ್ನೂ ಒಳ್ಳೆಯದು)
- ಅದಕ್ಕೆ 2 ಚಮಚ ತೆಂಗಿನೆಣ್ಣೆ ಹಾಕಿ(ನೀವು ತೆಂಗಿನೆಣ್ಣೆ ಬಳಸಲ್ಲ ಅಂದರೆ ನೀವು ಅಡುಗೆಗೆ ಬಳಸುವ ಎಣ್ಣೆ ಹಾಕಬಹುದು)
- ಎಣ್ಣೆ ಬಿಸಿಯಾದಾಗ ಸ್ವಲ್ಪ ಸಾಸಿವೆ ಹಾಕಿ, ಸಾಸಿವೆ ಚಟ್ಪಟ್ ಶಬ್ದ ಮಾಡುತ್ತದೆ
- ಸ್ವಲ್ಪ ಮೆಂತೆ ಹಾಕಿ
- ಈಗ ಹಸಿ ಮೆಣಸು ಹಾಕಿ
- ಹಸಿ ಮೆಣಸು ಸ್ವಲ್ಪ ಫ್ರೈಯಾದರೆ ಸಾಕು
- ಸ್ವಲ್ಪ ಕರಿಬೇವು ಹಾಕಿ
- ಸ್ವಲ್ಪ ಉಪ್ಪು ಸೇರಿಸಿ (ಉಪ್ಪು ಮೊಸರಿನಲ್ಲಿಯೂ ಇರುವುದರಿಂದ ಸ್ವಲ್ಪ ಹಾಕಿದರೆ ಸಾಕು)
- ಸ್ವಲ್ಪ ಅರಿಶಿಣ ಪುಡಿ ಸೇರಿಸಿ
- ಈಗ ಜಜ್ಜಿಟ್ಟಿರುವ ಈರುಳ್ಳಿ ಮಿಶ್ರಣ ಹಾಕಿ
- ಅದರ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ
- ಈಗ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ
- ಸ್ವಲ್ಪ ಇಂಗು ಪುಡಿ ಸೇರಿಸಿ
- ಈಗ ಮೊಸರು ಸೇರಿಸಿ ಒಂದು ನಿಮಿಷ ಬಿಸಿ ಮಾಡಿ ಸ್ಟೌವ್ ಆಫ್ ಮಾಡಿ
- ಇಷ್ಟು ಮಾಡಿದರೆ ಸಾಕು ಮೆಣಸಿನಕಾಯಿ-ಮೊಸರಿನ ಕರಿ ರೆಡಿ.
- ಅನ್ನದ ಜೊತೆ ಕಲೆಸಿಕೊಂಡು ತಿನ್ನಲು ಸೂಪರ್ ಆಗಿರುತ್ತದೆ.
ಸಲಹೆ:
- ಮೊಸರಿಗೆ ಒಂದು ತೊಟ್ಟು ಕೂಡ ನೀರು ಸೇರಿಸಬೇಡಿ
- ಮೊಸರನ್ನು ತುಂಬಾ ಕುದಿಸಬೇಡಿ, ಬೇಕಿದ್ದರೆ ಸ್ಟೌವ್ ಆಫ್ ಮಾಡಿದ ತಕ್ಷಣ ಮೊಸರು ಹಾಕಿದರೂ ಆಗುತ್ತೆ
- 3-4 ಜನರಿಗೆ ತಯಾರು ಮಾಡುವಾಗ ಅರ್ಧ ಲೀಟರ್ ಮೊಸರು ಸಾಕಾಗುತ್ತೆ
- ಇನ್ನೂ ಹೆಚ್ಚಿನ ಜನರಿಗೆ ತಯಾರು ಮಾಡುವುದಾದರೆ ಅದಕ್ಕೆ ತಕ್ಕಂತೆ ಸಾಮಗ್ರಿ ಹೆಚ್ಚು ಬಳಸಿ
- ಹಸಿಮೆಣಸಕಾಯಿ ತುಂಬಾ ಖಾರ ಇರುವುದು, ಖಾರ ಕಡಿಮೆ ಇರುವುದು ಸಿಗುತ್ತೆ, ಹೆಚ್ಚು ಖಾರ ಇರುವ ಹಸಿಮೆಣಸು ಬಳಸುವುದಾದರೆ ನಿಮ್ಮ ಖಾರಕ್ಕೆ ತಕ್ಕಂತೆ ಬಳಸಿದರೆ ಸಾಕಾಗುತ್ತೆ.
- ಇದಕ್ಕೆ ಚಿಕ್ಕ ಈರುಳ್ಳಿಯೇ ಬಳಸಬೇಕು, ದೊಡ್ಡ ಈರುಳ್ಳಿ ಅಷ್ಟು ಟೇಸ್ಟ್ ಅನಿಸಲ್ಲ.
Comments
[ of 5 - Users]
Story first published: Tuesday, March 4, 2025, 13:43 [IST]
Other articles published on Mar 4, 2025



Click it and Unblock the Notifications
