Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗಾರ್ಲಿಕ್ ರೈಸ್(ಬೆಳ್ಳುಳ್ಳಿ ಅನ್ನ) ತುಂಬಾನೇ ರುಚಿ, ಮಾಡುವುದು ಕೂಡ ಸುಲಭ ನೋಡಿ
ಲೆಮನ್ ರೈಸ್ ಅಥವಾ ಚಿತ್ರಾನ್ನ ಎಲ್ಲರಿಗೆ ಗೊತ್ತಿರುತ್ತದೆ, ಆದರೆ ಬೆಳ್ಳುಳ್ಳಿ ಅನ್ನ ಅಥವಾ ಗಾರ್ಲಿಕ್ ರೈಸ್ ತುಂಬಾ ಜನರಿಗೆ ಗೊತ್ತಿರುವುದಿಲ್ಲ, ಇದು ತುಂಬಾ ರುಚಿಕರವಾಗಿರುತ್ತದೆ. ಬೆಳಗ್ಗಿನ ಬ್ರೇಕ್‌ಫಾಸ್ಟ್ ಸೂಪರ್ ಆಹಾರ, ಇದರ ರುಚಿಗೆ ನೀವು ತಿನ್ನುವುದಕ್ಕಿಂತಲೂ ತುಸು ಹೆಚ್ಚೇ ತಿನ್ನುವಿರಿ, ಅಲ್ಲದೆ ಇದನ್ನು ಮಾಡುವುದು ಸುಲಭ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
2 ಕಪ್ ಅನ್ನ (ಬಿಸಿ ಅನ್ನ)
6 ಬೆಳ್ಳುಳ್ಳು(ಎಸಳು ಬಿಡಿಸಿ ಸಿಪ್ಪೆ ಸುಲಿಯಿರಿ)
ಸ್ವಲ್ಪ ತೆಂಗಿನ ತುರಿ
5 ಒಣ ಮೆಣಸು
2 ಚಮಚ ತೆಂಗಿನೆಣ್ಣೆ ಅಥವಾ ತುಪ್ಪ
1/2 ಚಮಚ ಸಾಸಿವೆ
2 ಚಮಚ ಉದ್ದಿನ ಬೇಳೆ
1 ಚಮಚ ಜೀರಿಗೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ:
- ಬಾಣಲೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಬಿಸಿ ಮಾಡಿ, ನಂತರ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ ಮಾಡುವಾಗ ಜೀರಿಗೆ ಹಾಕಿ, ನಂತರ ಉದ್ದಿನ ಬೇಳೆ ಹಾಕಿ.
- ಉದ್ದಿನ ಬೇಳೆ ಸ್ವಲ್ಪ ಕಂದು ಬಣ್ಣಕ್ಕೆ ತಿರುಗುವಾಗ ಒಣಮೆಣಸು ಮುರಿದು ಹಾಕಿ, ನಂತರ ಬೆಳ್ಳುಳ್ಳಿ ಹಾಕಿ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ, ನಂತರ ಕರಿ ಬೇವು ಹಾಕಿ, ರುಚಿಗೆ ತಕ್ಕ ಉಪ್ಪು(ಒಂದು ಚಮಚ) ಉರಿ ಆಫ್ ಮಾಡಿ.
- ಬಳಿಕ ಅನ್ನವನ್ನು ಹಾಕಿ ಮಿಕ್ಸ್ ಮಾಡಿ.
- ರುಚಿ ನೋಡಿ ಉಪ್ಪು ಬೇಕಿದ್ದರೆ ಸ್ವಲ್ಪ ಉಪ್ಪು ಪುಡಿ ಉದುರಿಸಿ ಮಿಕ್ಸ್ ಮಾಡಿ, ನಂತರ ಅನ್ನ ಬಿಸಿ ಬಿಸಿ ಇರುವಾಗಲೇ ಸವಿಯಿರಿ.
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶಗಳು
ಮ್ಯಾಂಗನೀಸ್
ವಿಟಮಿನ್ ಬಿ6
ಸೆಲೆನಿಯಂ
ನಾರಿನಂಶ
ಬೆಳ್ಳುಳ್ಳಿ ತಿನ್ನುವುದರಿಂದ ದೊರೆಯುವ ಪ್ರಯೋಜನಗಳಿವು
ಶೀತ ಮುಂತಾದ ಸಾಮಾನ್ಯ ಕಾಯಿಲೆ ತಡೆಗಟ್ಟುತ್ತದೆ
ಶೀತ, ಕೆಮ್ಮು ಈ ಬಗೆಯ ಸಾಮಾನ್ಯ ಶೀತ ತಡೆಗಟ್ಟುವ ಸಾಮರ್ಥ್ಯ ಬೆಳ್ಳುಳ್ಳಿಗಿದೆ,
ಇದನ್ನು ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಬೆಳ್ಳುಳ್ಳಿಯನ್ನು
ಮನೆಮದ್ದಾಗಿ ಬಳಸಲಾಗುವುದು, ಹೊಟ್ಟೆ ಉಬ್ಬುವಿಕೆ ತಡೆಗಟ್ಟಲು, ಜೀರ್ಣಕ್ರಿಯೆಗೂ
ಒಳ್ಳೆಯದು.
ರಕ್ತದೊತ್ತಡ ನಿಯಂತ್ರಿಸಲು ಸಹಕಾರಿ
ಅತ್ಯಧಿಕ ರಕ್ತದೊತ್ತಡದಿಂದ ಹೃದಯಾಘಾತ ಅಪಾಯ, ಈ ಬೆಳ್ಳುಳ್ಳಿ ದೇಹದಲ್ಲಿ
ರಕ್ತದೊತ್ತಡ ನಿಯಂತ್ರಣದಲ್ಲಿಡಲು ಸಹಕಾರಿ. ರಕ್ತದೊತ್ತಡ ಇರುವವರು ದಿನಾ ಎರಡು
ಎಸಳು ಬೆಳ್ಳುಳ್ಳಿ ಸೇವಿಸಿ.
ಕೊಲೆಸ್ಟ್ರಾಲ್ ನಿಯಂತ್ರಣಕ್ಕೂ ಸಹಕಾರಿ
ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಉಂಟಾದರೆ ಅನೇಕ ರೀತಿಯ ಸಮಸ್ಯೆ ಉಂಟಾಗುವುದು,
ದೇಹದಲ್ಲಿ ಕೊಲೆಸ್ಟ್ರಾಲ್ ನಿಯಂತ್ರಿಸಲು ಬೆಳ್ಳುಳ್ಳಿ ಸಹಾಯ ಮಾಡುತ್ತದೆ. ಇದು
ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟ್ರಾಲ್
ಹೆಚ್ಚಿಸುತ್ತದೆ.
ಅಲ್ಜೈಮರ್ಸ್ , ಮರೆವು ಈ ಬಗೆಯ ಸಮಸ್ಯೆ
ತಡೆಗಟ್ಟುತ್ತದೆ
ವಯಸ್ಸಾಗುತ್ತಿದ್ದಂತೆ ಅಂದರೆ 60 ವರ್ಷ ದಾಟುತ್ತಿದ್ದಂತೆ ಕೆಲವರಿಗೆ ಮರೆವು ಅಥವಾ
ಅಲ್ಜೈಮರ್ಸ್ ಕಾಯಿಲೆ ಕಂಡು ಬರುವುದು, ಅದನ್ನು ತಡೆಗಟ್ಟಲೂ ಬೆಳ್ಳುಳ್ಳಿ
ಸಹಕಾರಿಯಾಗಿದೆ.
ಲಿವರ್‌ನ ಆರೋಗ್ಯಕ್ಕೂ ಒಳ್ಳೆಯದು
ಬೆಳ್ಳುಳ್ಳಿ ಸೇವನೆಯಿಂದ ಲಿವರ್‌ನ ಆರೋಗ್ಯಕ್ಕೂ ಒಳ್ಳೆಯದು, ಲಿವರ್‌ನ
ಆರೋಗ್ಯಕ್ಕೆ ದಿನಾ ಒಂದರಿಂದ ಎರಡು ಎಸಳು ಬೆಳ್ಳುಳ್ಳಿ ಸೇವನೆ ಒಳ್ಳೆಯದು.
ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಸಹಕಾರಿ
ನಾವು ತಿನ್ನುವ ಆಹಾರಗಳಲ್ಲಿಯೇ ಕೆಲವೊಂದು ಬೇಡದ ಖನಿಜಾಂಶ ದೇಹವನ್ನು ಸೇರುತ್ತದೆ,
ಇದನ್ನು ಹೊರಹಾಕಲು ಬೆಳ್ಳುಳ್ಳಿ ಸಹಕಾರಿಯಾಗಿದೆ.
ಬೆಳ್ಳುಳ್ಳಿ ಮೂಳೆಯ ಆರೋಗ್ಯಕ್ಕೆ ಒಳ್ಳೆಯದು
ಪ್ರತಿದಿನ 2 ಗ್ರಾಂ ಬೆಳ್ಳುಳ್ಳಿ ನಮ್ಮ ದೇಹವನ್ನು ಸೇರಿದರೆ ಹೊಟ್ಟೆಯ
ಆರೋಗ್ಯಕ್ಕೆ ಒಳ್ಳೆಯದು.
ಬೆಳ್ಳುಳ್ಳಿಯನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿ
ಕೆಲವರು ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯಲ್ಲಿ ಸೇವಿಸುತ್ತಾರೆ, ಹಾಗೆ ತಿನ್ನಲು
ಸಾಧ್ಯವಾಗದಿದ್ದರೆ ನೀವು ಮಾಡುವ ಅಡುಗೆಯಲ್ಲಿ ಸೇರಿಸಿ.
ಯಾರು ತಿನ್ನಬಾರದು?
ಕೆಲವರಿಗೆ ರಕ್ತ ತೆಳುವಾಗುವ ಸಮಸ್ಯೆ ಇರುತ್ತದೆ ಅವರಿಗೆ ಬೆಳ್ಳುಳ್ಳಿ
ಒಳ್ಳೆಯದಲ್ಲ.



Click it and Unblock the Notifications
