Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬೆಳ್ಳುಳ್ಳಿ ಚಟ್ನಿ ರೆಸಿಪಿ: ಶೀತ, ಕೆಮ್ಮು ತಡೆಗಟ್ಟುತ್ತೆ ಈ ಚಟ್ನಿ
ಖಾರ-ಬೆಳ್ಳುಳ್ಳಿ ಚಟ್ನಿ ಎಷ್ಟೊಂದು ರುಚಿಯೆಂದರೆ ಅನ್ನ,ದೋಸೆ ಜೊತೆ ಸವೊಯಲು ತುಂಬಾನೇ ಸೂಪರ್. ಬೆಳ್ಳುಳ್ಳಿ ಚಟ್ನಿ ಆಗಿರುವುದರಿಂದ ಶೀತ-ಕೆಮ್ಮು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ. ಈ ಬೆಳ್ಳುಳ್ಳಿ ಚಟ್ನಿಯನ್ನು ನೀವು ಸುಲಭದಲ್ಲಿ ಮಾಡಬಹುದು, ಬನ್ನಿ ಈ ಬೆಳ್ಳುಳ್ಳಿ ಚಟ್ನಿ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:

ಬೇಕಾಗುವ ಸಾಮಗ್ರಿ
2 ಬೆಳ್ಳುಳ್ಳಿ (ಒಂದು 18-20 ಎಸಳು ಇರುತ್ತದೆ)
4-6 ಒಣ ಮೆಣಸು
1 ಚಮಚ ಹುಣಸೆಹಣ್ಣು
ಚಿಕ್ಕ ತುಂಡು ಬೆಲ್ಲ
1 ಚಮಚ ಎಣ್ಣೆ
1/2 ಚಮಚ ಉಪ್ಪು
ಒಗ್ಗರಣೆಗೆ
1 ಚಮಚ ಎಣ್ಣೆ
ಸ್ವಲ್ಪ ಸಾಸಿವೆ
ಸ್ವಲ್ಪ ಕರಿಬೇವು
ಮಾಡುವ ವಿಧಾನ
ಬಿಸಿ ನೀರಿನಲ್ಲಿ ಒಣ ಮೆಣಸನ್ನು 10 ನಿಮಿಷ ಹಾಕಿಡಿ
ನಂತರ ತಗೆದು ಪ್ಲೇಟ್‌ನಲ್ಲಿ ಇಡಿ
ನಂತರ ಒಣಮೆಣಸು, ಬೆಳ್ಳುಳ್ಳಿ, ಹುಣಸೆಹಣ್ಣು, ಉಪ್ಪು, ಒಂದು ತುಂಡು ಬೆಲ್ಲ
ಸೇರಿಸಿ ರುಬ್ಬಿ.
ನಂತರ ಒಗ್ಗರಣೆ ಹಾಕಿ
1 ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಸಾಸಿವೆ ಹಾಕಿ, ಸಾಸಿವೆ ಚಟ್‌ಪಟ್ ಶಬ್ದ
ಮಾಡುವಾಗ ಕರಿಬೇವಿನ ಎಲೆ ಹಾಕಿ.
ಬೆಳ್ಳುಳ್ಳಿ ಚಟ್ನಿಯ ಮತ್ತೊಂದು ರೆಸಿಪಿ
ಬೇಕಾಗುವ ಸಾಮಗ್ರಿ
20 ಎಸಳು ಬೆಳ್ಳುಳ್ಳಿ ಎಸಳು
2 ಚಮಚ ಖಾರದ ಪುಡಿ
2 ಚಮಚ ಕೊತ್ತಂಬರಿ ಪುಡಿ
1 ಚಮಚ ಜೀರಿಗೆ ಪುಡಿ
ಒಂದೂವರೆ ಚಮಚ ಸಕ್ಕರೆ
1/2 ಚಮಚ ಉಪ್ಪು
ಸ್ವಲ್ಪ ನೀರು
1 ಚಮಚ ಎಣ್ಣೆ
ಅರ್ಧ ನಿಂಬೆರಸ
1ಚಮಚ ಎಣ್ಣೆ
ಮಾಡುವ ವಿಧಾನ:
ಬೆಳ್ಳುಳ್ಳಿ ಎಸಳು, ಖಾರದ ಪುಡಿ, ಜೀರಿಗೆ ಪುಡಿ, ಉಪ್ಪು ನೀರು ಹಾಕಿ ರುಬ್ಬಿ,
ತುಂಬಾ ನುಣ್ಣನೆ ರುಬ್ಬಿ
ಈಗ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ, ನಂತರ ರುಬ್ಬಿದ ಪೇಸ್ಟ್ ಹಾಕಿ,
ಎಣ್ಣೆಯಂಶ ಚಟ್ನಿಯ ಮೇಲ್ಭಾಗದಲ್ಲಿ ತೇಲುವಂತೆ ಬರುವಷ್ಟು ಹೊತ್ತು ಕಡಿಮೆ
ಉರಿಯಲ್ಲಿ ಕಾಯಿಸಿ
ನಂತರ ನಿಂಬೆರಸ ಹಿಂಡಿ ಸರ್ವ್ ಮಾಡಿ.
ಬೆಳ್ಳುಳ್ಳಿಯ ಪ್ರಯೋಜನಗಳು
ಕೆಮ್ಮು-ಶೀತ ತಡೆಗಟ್ಟಲು ಸಹಕಾರಿ
ಬೆಳ್ಳುಳ್ಳಿ ಸೇವಿಸುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು, ಹಾಗಾಗಿ
ಕೆಮ್ಮು-ಶೀತ ತಡೆಗಟ್ಟಲು ತುಂಬಾನೇ ಸಹಕಾರಿಯಾಗಿದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು
ಬೆಳ್ಳುಳ್ಳಿ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ, ಒಳ್ಳೆಯ ಕೊಲೆಸ್ಟ್ರಾಲ್
ಹೆಚ್ಚಿಸುತ್ತದೆ.
ಸಂಧಿವಾತದ ಸಮಸ್ಯೆ ತಡೆಗಟ್ಟುತ್ತದೆ
ಬೆಳ್ಳುಳ್ಳಿ ಸೇವಿಸುವುದರಿಂದ ಸಂಧಿವಾತದ ಸಮಸ್ಯೆ ತಡೆಗಟ್ಟಬಹುದು, ದೇಹದ ಆರೋಗ್ಯ ವೃದ್ಧಿಸಲು ಸಹಕಾರಿ.
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು
ಬೆಳ್ಳುಳ್ಳಿ ಮೆದುಳು ಚುರುಕಾಗಿರಲು ಸಹಾಯ ಮಾಡುತ್ತದೆ,ಇದನ್ನು ಪ್ರತಿದಿನ
ಸೇವಿಸುವುದರಿಂದ ಮರೆವಿನ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಬಹುದು.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು
ಬೆಳ್ಳುಳ್ಳಿ ಸೇವಿಸುವುದರಿಂದ ತಿಂದ ಆಹಾರ ತುಂಬಾ ಚೆನ್ನಾಗಿ ಜೀರ್ಣವಾಗುತ್ತದೆ,
ಅಲ್ಲದೆ ಹೊಟ್ಟೆಯಲ್ಲಿರುವ ಕೆಟ್ಟ ಬ್ಯಾಕ್ಟಿರಿಯಾ ತಡೆಗಟ್ಟುತ್ತದೆ.
ತೂಕವನ್ನು ನಿಯಂತ್ರಣದಲ್ಲಿಡುತ್ತದೆ
ಬೆಳ್ಳುಳ್ಳಿಯಲ್ಲಿರುವ ಪೋಷಕಾಂಶ
ಮ್ಯಾಂಗನೀಸ್'ವಿಟಮುನ್ ಬಿ6
ವಿಟಮಿನ್ ಸಿ
ಸೆಲೆನಿಯಂ
ನಾರಿನಂಶ
ಕ್ಯಾಲ್ಸಿಯಂ, ಸತು, ಪೊಟಾಷ್ಯಿಯಂ, ಕಬ್ಬಿಣದಂಶ



Click it and Unblock the Notifications