Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಆಹಾ! ಬೆಳ್ಳುಳ್ಳಿ- ಒಣಮೆಣಸಿನ ಚಟ್ನಿ ಹೀಗೆ ಮಾಡಿದರೆ ಎಷ್ಟೊಂದು ರುಚಿ ಗೊತ್ತಾ?
ನೀವು ಒಣಮೆಣಸು ಹಾಗೂ ಬೆಳ್ಳುಳ್ಳಿ ಹಾಕಿ ಮಾಡುವ ಈ ಸಿಂಪಲ್ ಚಟ್ನಿ ಮಾಡಿ ನೋಡಿ ಅನ್ನದ, ಪರೋಟ, ಚಪಾತಿ ಹೀಗೆ ಯಾವುದೇ ಆಹಾರವಾಗಲಿ ಅದರ ಜೊತೆ ಸವಿಯಲು ತುಂಬಾನೇ ಸೂಪರ್ ಆಗಿರುತ್ತದೆ, ಇನ್ನು ಈ ಚಟ್ನಿ ಮಾಡಿದರೆ ನೀವು ತಿಂಗಳವರೆಗೆ ಇಟ್ಟು ಬಳಸಬಹುದು, ರುಚಿ ತುಂಬಾನೇ ಟೇಸ್ಟ್ ಆಗಿರುತ್ತದೆ.
ಅಲ್ಲದೆ ಇದನ್ನು ಮಾಡುವುದು ಕೂಡ ತುಂಬಾ ಸುಲಭವಾಗಿದೆ, ಈ ರೆಸಿಪಿ ನಿಮಗೆ ಯಾವಾಗ ಮಾಡಬೇಕು ಆವಾಗ ಬಳಸಬಹುದು ಅಥವಾ ಮಾಡಿಟ್ಟರೆ ಬೇಕಾದಾಗ ಬಳಸಬಹುದು, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ಬ್ಯಾಡಗಿ ಮೆಣಸು 10-15
ಬೆಳ್ಳುಳ್ಳಿ 8-10 (ಎಸಳು ಅಲ್ಲ, ಇಡಿ ಬೆಳ್ಳುಳ್ಳಿ)
ಸ್ವಲ್ಪ ಕೊತ್ತಂಬರಿ ಸೊಪ್ಪು
ಸ್ವಲ್ಪ ಇಂಗು ರುಚಿಗೆ ತಕ್ಕ ಉಪ್ಪು
ಅರಿಶಿಣ ಪುಡಿ
2 ಚಮಚ ಎಣ್ಣೆ (ಸಾಸಿವೆಯೆಣ್ಣೆಯಾದರೆ ಇನ್ನೂ ಟೇಸ್ಟಿಯಾಗಿರುತ್ತದೆ)
ಸ್ವಲ್ಪ ಹುಣಸೆಹಣ್ಣು
ಮಾಡುವ ವಿಧಾನ
ಬ್ಯಾಡಗಿ ಮೆಣಸನ್ನು 10 ನಿಮಿಷ ಬಿಸಿ ನೀರಿನಲ್ಲಿ ಹಾಕಿ
ಇದೇ ಸಮಯದಲ್ಲಿ 8-10 ಬೆಳ್ಳುಳ್ಳಿ ಸಿಪ್ಪೆ ಸುಲಿಯಿರಿ (8-10 ಎಸಳು ಅಲ್ಲ, ಅರ್ಧ
ಕಪ್ಗೂ ಅಧಿಕ ಬರುವಷ್ಟು ಬೆಳ್ಳುಳ್ಳಿ)
ಸ್ವಲ್ಪ ಕೊತ್ತಂಬರಿ ಸೊಪ್ಪು, ಹುಣಸೆ ಹಣ್ಣು ಹಾಕಿ
ನಂತರ ಸ್ವಲ್ಪ ನೀರು ಹಾಕಿ ನುಣ್ಣನೆ ರುಬ್ಬಿ.
ಈಗ ಪ್ಯಾನ್ಗೆ 2 ಚಮಚ ಎಣ್ಣೆ ಹಾಕಿ ನಂತರ ಸ್ವಲ್ಪ ಇಂಗು ಹಾಕಿ, ಜೀರಿಗೆ
ಹಾಕಿ
ನಂತರ 8-10 ಎಸಳು ಬೆಳ್ಳುಳ್ಳಿ (ಅದನ್ನು ಕೂಡ ಕತ್ತರಿಸಿ) ಹಾಕಿ ಫ್ರೈ ಮಾಡಿ
ನಂತರ ಈ ಪೇಸ್ಟ್ ಹಾಕಿ, ಅರಿಶಿಣ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ಫ್ರೈ
ಮಾಡಿ
ಎಣ್ಣೆಯಂಶ ಮೇಲ್ಭಾಗದಲ್ಲಿ ತೇಲಿ ಬರುವಷ್ಟು ಹೊತ್ತು ಬಿಸಿ ಮಾಡಿ.
ಇದನ್ನು ನೀವು ಒಂದು ಟಿಫಿನ್ ಬಾಕ್ಸ್ನಲ್ಲಿ ಹಾಕಿಟ್ಟು ಫ್ರಿಡ್ಜ್ನಲ್ಲಿಟ್ಟರೆ
ತಿಂಗಳವರೆಗೆ ಇಟ್ಟು ಬಳಸಬಹುದು.
ಇತರ ಸಲಹೆ
- ನೀವು ಕಾಶ್ಮೀರಿ ಮೆಣಸು ಕೂಡ ಬಳಸಬಹುದು
- ತುಂಬಾ ಖಾರ ಇರುವ ಒಣ ಮೆಣಸು ಬೇಡ, ಬ್ಯಾಡಗಿ ಅಥವಾ ಕಾಶ್ಮೀರಿ ಮೆಣಸು ಬಳಸಿ
- ಬೆಳ್ಳುಳ್ಳಿ ರುಬ್ಬುವಾಗ ಹಸಿ ಹಾಕಬಹುದು ಅಥವಾ ಎಣ್ಣೆಯಲ್ಲಿ ಫ್ರೈ ಮಾಡಿ ಹಾಕಿದರೆ ಇನ್ನೂ ರುಚಿ ಭಿನ್ನವಾಗಿರುತ್ತದೆ.
- ಎಣ್ಣೆ ಯಾವುದೇ ಅಡುಗೆಯೆಣ್ಣೆ ಬಳಸಬಹುದು
- ಈ ಚಟ್ನಿ ಮಾಡಿ 1 ಚಮಚ ತೆಂಗಿನೆಣ್ಣೆ ಬೇಕಿದ್ದರೆ ಸೇರಿಸಬಹುದು (ಆದರೆ ಸಾಸಿವೆಯೆಣ್ಣೆ ಬಳಸಿದರೆ ತೆಂಗಿನೆಣ್ಣೆ ಹಾಕಬೇಡಿ)



Click it and Unblock the Notifications
