Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಎಷ್ಟೊಂದು ರುಚಿ ಗೊತ್ತಾ ಈ ಫ್ರೈಡ್ ಚಪಾತಿ: ಎಗ್ ರೈಸ್ ಮೀರಿಸುವ ರುಚಿ ಇದಕ್ಕಿದೆ
Recipes
oi-Reena TK
Posted By: Reena TK
ಬೆಳಗ್ಗೆ ಬ್ರೇಕ್ಫಾಸ್ಟ್ಗ ಆದರೂ ಸೈ ಸಂಜೆ ಸ್ನ್ಯಾಕ್ಸ್ಗೆ ಆದರೂ ಸೈ, 4-5 ಚಪಾತಿ ಬಾಕಿಯುಳಿದಿದ್ದರೆ ಸೂಪರ್ ಆದ ಚಪಾತಿ ಫ್ರೈಡ್ ತಯಾರಿಸಬಹುದು. ಇನ್ನು ಮಕ್ಕಳು ಅಮ್ಮಾ ನೂಡಲ್ಸ್, ಫ್ರೈಡ್ ರೈಸ್ ಅಂತ ಬೇಡಿಕೆ ಇಟ್ಟಾಗ ಕೂಡ ಈ ರೀತಿ ಮಾಡಿಕೊಟ್ಟರೆ ತುಂಬಾನೇ ಇಷ್ಟಪಟ್ಟು ತಿನ್ನುತ್ತಾರೆ. ಇದರಲ್ಲಿ ಮೊಟ್ಟೆ ಸೇರಿಸಿ ಮಾಡಲಾಗಿದೆ, ನೀವು ಮೊಟ್ಟೆ ತಿನ್ನದಿದ್ದರೆ ಮೊಟ್ಟೆ ಹಾಕದೆಯೂ ಮಾಡಬಹುದು.
ಬಾಕಿಯುಳಿದ ಚಪಾತಿಯಿಂದ ಇಷ್ಟೊಂದು ಸೂಪರ್ ಆದ ಅಡುಗೆ ರೆಡಿಯಾಗುತ್ತೆ ಎಂದ ಮೇಲೆ ಈ ರೀತಿ ಮಾಡುವುದಕ್ಕಾಗಿಯೇ ಚಪಾತಿ ಮಾಡುವಾಗ 4-5 ಚಪಾತಿ ಅಧಿಕ ಮಾಡುತ್ತೀರಿ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
- ಬಾಕಿಯುಳಿದ ಚಪಾತಿ 4-5
- 2 ಈರುಳ್ಳಿ
- ಹಸಿ ಮೆಣಸು 2
- ಒಂದು ಚಮಚ ಶುಂಠಿ ತುರಿ
- 8-10 ಎಸಳು ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದು)
- 2 ಕ್ಯಾರೆಟ್ (ಉದ್ದುದ್ದವಾಗಿ ಕತ್ತರಿಸಿದ್ದು)
- 1 ಕಪ್ ಕ್ಯಾಬೇಜ್
- 2 ಟೊಮೆಟೊ
- ಒಂದು ಚಮಚ ಕಾಳು ಮೆಣಸಿನ ಪುಡಿ
- ಕೊತ್ತಂಬರಿ ಮೆಣಸಿನ ಪುಡಿ
- ಗರಂ ಮಸಾಲ ಪುಡಿ
- 4 ಮೊಟ್ಟೆ
- 1/4 ಚಮಚ ಅರಿಶಿಣ ಪುಡಿ
- ರುಚಿಗೆ ತಕ್ಕ ಉಪ್ಪು
- ಕ್ಯಾಪ್ಸಿಕಂ (ಉದ್ದುದ್ದವಾಗಿ ಕತ್ತರಿಸಿದ್ದು)
- ಸ್ವಲ್ಪ ಕೊತ್ತಂಬರಿ ಸೊಪ್ಪು)
- ರುಚಿಗೆ ತಕ್ಕ ಉಪ್ಪು
ಮಾಡುವ ವಿಧಾನ
- 5-6 ಚಪಾತಿ ತೆಗೆದು ನೂಡಲ್ಸ್ ರೀತಿ ಉದ್ದುದ್ದವಾಗಿ ಕತ್ತರಿಸಿ.
- ನಂತರ ಪಾತ್ರೆ ಬಿಸಿ ಮಾಡಿ 2 ಚಮಚ ಎಣ್ಣೆ ಹಾಕಿ 2 ಈರುಳ್ಳಿ ಹಾಕಿ, ಈರುಳ್ಳಿ ಸ್ವಲ್ಪ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ ನೋಡಿ
- ಒಂದು ಚಮಚ ಶುಂಠಿ ತುರಿ ಅಥವಾ ಜಜ್ಜಿದ ಶುಂಠಿ ಹಾಕಿ
- ಈಗ ಸ್ವಲ್ಪ ಬೆಳ್ಳುಳ್ಳಿ (ಚಿಕ್ಕದಾಗಿ ಕತ್ತರಿಸಿದ್ದಿ) ಸೇರಿಸಿ
- ಹಸಿ ಮೆಣಸು ಕತ್ತರಿಸಿ ಹಾಕಿ (ನಿಮ್ಮ ಖಾರಕ್ಕೆ ತಕ್ಕಂತೆ ಹಸಿ ಮೆಣಸು ಬಳಸಿ)
- ಸ್ವಲ್ಪ ಕರಿಬೇವು ಸೇರಿಸಿ 2-3 ನಿಮಿಷ ಸೌಟು ಆಡಿಸುತ್ತಾ ಫ್ರೈ ಮಾಡಿ
- ಈಗ ನೀವು ಕ್ಯಾರೆಟ್ ಸೇರಿಸಿ
- ಒಂದು ಕಪ್ ಕ್ಯಾಬೇಜ್ ಸೇರಿಸಿ
- 2 ಟೊಮೆಟೊ ಸೇರಿಸಿ
- ಅರ್ಧ ಚಮಚ ಕಾಳು ಮೆಣಸಿನ ಪುಡಿ ಸೇರಿಸಿ
- ಕಾಶ್ಮೀರಿ ಮೆಣಸಿನ ಪುಡಿ ಅರ್ಧ ಚಮಚ ಸೇರಿಸಿ
- ಅರ್ಧ ಚಮಚ ಕೊತ್ತಂಬರಿ ಪುಡಿ ಸೇರಿಸಿ
- ಸ್ವಲ್ಪ ಗರಂ ಮಸಾಲ ಹಾಕಿ
- ಈಗ ಇವುಗಳನ್ನು ಪಾತ್ರೆಯ ಒಂದು ಬದಿಗೆ ಸೇರಿಸಿ
- 4 ಮೊಟ್ಟೆ ಒಡೆದು ಹಾಕಿ ಅದಕ್ಕೆ ಸ್ವಲ್ಪ ಪ್ಪು, 1/ 4 ಚಮಚ ಅರಿಶಿಣ ಪುಡಿ, ಸ್ವಲ್ಪ ಕಾಳು ಮೆಣಸಿನ ಪುಡಿ ಸೇರಿಸಿ ನಂತರ ಅದು ಪುಡಿ-ಪುಡಿಯಾಗುವವರೆಗೆ ಪ್ರೈ ಮಾಡಿ (2-3 ನಿಮಿಷಕ್ಕೆ ಮೊಟ್ಟೆ ಪುಡಿ-ಪುಡಿಯಾಗುವುದು)
- ನಂತರ ಸೈಡ್ನಲ್ಲಿ ಮಾಡಿಟ್ಟ ಮಸಾಲೆ ಹಾಕಿ ಮಿಕ್ಸ್ ಮಾಡಿ
- ಉಪ್ಪು, ಖಾರ ಸರಿಯಾಗಿದೆಯೇ ನೋಡಿ ಏನು ಬೇಕೋ ಅದಕ್ಕೆ ಸೇರಿಸಿ
- ಈಗ ಇದಕ್ಕೆ 1/4 ಕಪ್ ನೀರು ಸೇರಿಸಿ ಮತ್ತೊಮ್ಮೆ ಮಿಕ್ಸ್ ಮಾಡಿ (ತುಂಬಾ ನೀರು ಹಾಕಬೇಡಿ)
- ಈಗ ನೀವು ಕಟ್ ಮಾಡಿಟ್ಟ ಚಪಾತಿ ಪೀಸ್ಗಳ್ನು ಸೇರಿಸಿ ಮಿಕ್ಸ್ ಮಾಡಿ, ಒಂದು ನಿಮಿಷ ಸೌಟುನಿಂದ ಆಡಿಸುತ್ತಾ ಮಿಕ್ಸ್ ಮಾಡಿ
- ಈಗ ಇದರ ಮೇಲೆ ಕ್ಯಾಪ್ಸಿಕಂ ಅನ್ನು ಚಿಕ್ಕದಾಗಿ ಕತ್ತರಿಸಿ ಸೇರಿಸಿ
- ಈಗ ನೀವು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದರೆ ರುಚಿಯಾದ ಚಪಾತಿ ಫ್ರೈಡ್ ರೆಡಿ, ಟೊಮೆಟೊ ಸಾಸ್ ಜೊತೆ ಸವಿಯಿರಿ.
Comments
[ of 5 - Users]
Story first published: Saturday, March 8, 2025, 18:32 [IST]
Other articles published on Mar 8, 2025



Click it and Unblock the Notifications
