Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಎಗ್ ಬೋಂಡಾ ಮಾಡುವುದು ಸುಲಭನೇ ಆದರೆ ಟೇಸ್ಟಿಯಾಗಿ ಬರಬೇಕೆಂದರೆ ಅದಕ್ಕೆ ಈ ಟಿಪ್ಸ್ ಗೊತ್ತಿರಬೇಕು
ಮೊಟ್ಟೆ ಬೋಂಡಾ ಈ ಬಜ್ಜಿ ಬೋಂಡಾದಂತೆ ರುಚಿ ಅನಿಸಲ್ಲ, ಏಕೆಂದರೆ ಬೇಯಿಸಿದ ಮೊಟ್ಟೆಯನ್ನು ಈ ಕಡ್ಲೆಹಿಟ್ಟಿಗೆ ಅದ್ದಿ ನಂತರ ಎಣ್ಣೆಯಲ್ಲಿ ಡೀಪ್ ಫ್ರೈ ಮಾಡಿ ಕೊಟ್ತಾರೆ, ಆದರೆ ಎಗ್ ಬೋಂಡಾ ತಿಂದಾಗ ಮತ್ತೆ ಮತ್ತೆ ತಿನ್ನಬೇಕೆಂದರೆ ಅದನ್ನು ಮಾಡುವ ವಿಧಾನದಲ್ಲಿ ಈ ಸ್ವಲ್ಪ ಬದಲಾವಣೆ ತಂದರೆ ಸಾಕು, ಆಹಾ ಆ ಮಸಾಲೆ, ಮೊಟ್ಟೆ ಎರಡು ಸೇರಿಸಿದರೆ ಸೂಪರೋ ಸೂಪರ್ ಅನಿಸುವುದು.
ಹಾಗಾಗಿ ಇನ್ಮೇಲೆ ಮೊಟ್ಟೆ ಬೋಂಡಾ ಮಾಡುವಾಗ ಮಾಮೂಲಿಯಾಗಿ ಸಿಂಪಲ್ ಆಗಿ ಮಾಡುವುದಕ್ಕಿಂತ ಸ್ವಲ್ಪ ಭಿನ್ನವಾಗಿ ರುಚಿಯಾಗಿ ಮಾಡಿ ನೋಡಿ ತುಂಬಾನೇ ಸೂಪರ್ ಅನಿಸುತ್ತೆ.
ಬನ್ನಿ ಈ ಸ್ಪೆಷಲ್ ಎಗ್ ಬೋಂಡಾ ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
2 ಈರುಳ್ಳಿ
ಹಸಿ ಮೆಣಸು 2-3
ಶುಂಠಿ
ಕೊತ್ತಂಬರಿ ಸೊಪ್ಪು
ಅರ್ಧ ಕಪ್ ಕಡ್ಲೆಹಿಟ್ಟು
2-3 ಅಕ್ಕಿಹಿಟ್ಟು
1/2 ಚಮಚ ಖಾರದ ಪುಡಿ
1/4 ಚಮಚ ಅರಿಶಿಣ ಪುಡಿ
ಗರಂ ಮಸಾಲ 1/4 ಪುಡಿ
ರುಚಿಗೆ ತಕ್ಕ ಉಪ್ಪು
ಸ್ವಲ್ಪ ಕರಿಬೇವು
ಮೊಟ್ಟೆ 4-5
ಮಾಡುವ ವಿಧಾನ
- ಮೊಟ್ಟೆಯನ್ನು ಬೇಯಿಸಿ
- ಈರುಳ್ಳಿ, ಹಸಿಮೆಣಸು, ಶುಂಠಿ, ಕೊತ್ತಂಬರಿ ಸೊಪ್ಪು ಇವುಗಳನ್ನು ಹಾಕಿ ಪೇಸ್ಟ್ ಮಾಡಿ
- ಈಗ ಈ ಮಿಶ್ರಣವನ್ನು ಒಂದು ಬೌಲ್ಗೆ ಹಾಕಿ, ನಂತರ ಕಡ್ಲೆಹಿಟ್ಟು, ಅಕ್ಕಿ ಪುಡಿ ಹಾಗೂ ಮಸಾಲೆ ಸಾಮಗ್ರಿ ಪುಡಿ ಹಾಕಿ, ಸ್ವಲ್ಪ ನೀರು ಹಾಕಿ ಮಿಕ್ಸ್ ಮಾಡಿ
- ಮೊಟ್ಟೆಯನ್ನು ಅರ್ಧವಾಗಿ ಕತ್ತರಿಸಿ
- ಈಗ ಎಣ್ಣೆಯನ್ನು ಕಾಯಿಸಿ
- ಕಾದ ಎಣ್ಣೆಗೆ ಬೇಯಿಸಿದ ಮೊಟ್ಟೆಯನ್ನು ಕಡ್ಲೆ ಹಿಟ್ಟಿನ ಮಿಶ್ರಣದಲ್ಲಿ ಹಾಕಿ ಚೆನ್ನಾಗಿ ಕೋಟ್ ಮಾಡಿ ನಂತರ ಎಣ್ಣೆಯಲ್ಲಿ ಹಾಕಿ ಫ್ರೈ ಮಾಡಿದರೆ ಮೊಟ್ಟೆ ಬೋಂಡಾ ರೆಡಿ. ಈಗ ಮೊಟ್ಟೆ ಬೋಂಡಾವನ್ನು ನೀವು ಕೊತ್ತಂಬರಿ ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಟ್ರೈ ಮಾಡಿ ನೋಡಿ ರುಚಿ ಸೂಪರ್ ಆಗಿರುತ್ತದೆ.
ಸಲಹೆ:
ನೀವು ಮೊಟ್ಟೆಯನ್ನು ಎರಡು ಅಥವಾ ನಾಲ್ಕು ಭಾಗ ಮಾಡಿ ಬಳಸಬಹುದು
ಇಡಿ ಮೊಟ್ಟೆ ಹಾಕಿ ಮಾಡುವುದಾದರೆ ಮೊಟ್ಟೆಯನ್ನು ಚಾಕುವಿನಿಂದ ಗೀರಿ ನಂತರ ಮಾಡಿ
ರುಚಿ ಚೆನ್ನಾಗಿರುತ್ತದೆ.
ಇದನ್ನು ಕೊತ್ತಂಬರಿ ಚಟ್ನಿ ಜೊತೆ ನೆಚ್ಚಿಕೊಂಡು ತಿನ್ನಿ, ಮಕ್ಕಳಿಗೆ ಸಾಸ್ ಹಾಕಿ
ಕೊಡಬಹುದು



Click it and Unblock the Notifications
