Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಸಂಜೆ ಸ್ನ್ಯಾಕ್ಸ್ ಎಗ್ 65 ಮಾಡಿದರೆ ಹೇಗೆ? ರೆಸಿಪಿ ತುಂಬಾ ಸುಲಭವಿದೆ ಕಣ್ರೀ...
ಸಂಜೆ ಸ್ನ್ಯಾಕ್ಸ್ಗೆ ಎಗ್ 65 ಮಾಡಿದರೆ ಹೇಗೆ? ಇದು ತುಂಬಾ ಕಷ್ಟದ ಸ್ನ್ಯಾಕ್ಸ್ ಅಂದುಕೊಂಡಿದ್ದರೆ ಖಂಡಿತ ಅಲ್ಲ, ತುಂಬಾ ಸುಲಭವಾಗಿ ನೀವು ಈ ಎಗ್ 65 ಮಾಡಬಹುದು, ಅದರಲ್ಲಿ 20 ನಿಮಿಷದೊಳಗಾಗಿ ಈ ಸ್ನ್ಯಾಕ್ಸ್ ರೆಡಿ ಮಾಡಿ ತಿನ್ನಲು ಶುರು ಮಾಡಬಹುದು. ಮತ್ಯಾಕೆ ತಡ ಟೀ ಜೊತೆ ಸವಿಯಲು ಎಗ್ 65 ಮಾಡುವುದು ಹೇಗೆ ಅಂತ ನೋಡೋಣವಾ?

ಬೇಕಾಗುವ ಸಾಮಗ್ರಿ
5 ಮೊಟ್ಟೆ
1/2 ಚಮಚ ಕಾಶ್ಮೀರಿ ಖಾರದ ಪುಡಿ
1/2 ಚಮಚ ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
1/2 ಚಮಚ ಕಾಳು ಮೆಣಸಿನ ಪುಡಿ
ಕೋಟ್ ಮಾಡಲು
4 ಚಮಚ ಕಾರ್ನ್ಫ್ಲೋರ್(ಜೋಳದ ಹಿಟ್ಟು)
2 ಚಮಚ ಮೈದಾ ಹಿಟ್ಟು
1/2 ಚಮಚ ಕೊತ್ತಂಬರಿ ಪುಡಿ
1/2 ಚಮಚ ಖಾರದ ಪುಡಿ
ಸ್ವಲ್ಪ ಗರಂ ಮಸಾಲೆ ಪುಡಿ
ಸ್ವಲ್ಪ ಕರಿಬೇವು
ಅರಿಶಿಣ ಪುಡಿ
ರುಚಿಗೆ ತಕ್ಕ ಉಪ್ಪು
ಕಲೆಸಲು ನೀರು ಅಥವಾ ಮೊಟ್ಟೆ (ಯಾವುದು ಬೇಕಾದರೂ ಬಳಸಬಹುದು)
ಎಣ್ಣೆ
ಮೊಟ್ಟೆ ಈ ರೀತಿ ಬೇಯಿಸಿ
- ನೀವು ಒಂದು ಬೌಲ್ಗೆ 5 ಮೊಟ್ಟೆ ಹಾಕಿ, ಅದರಲ್ಲಿ ಸ್ವಲ್ಪ ಅರಿಶಿಣ ಪುಡಿ, ಕಾಳು ಮೆಣಸಿನ ಪುಡಿ, 1/ 2 ಚಮಚ ಕಾಶ್ಮೀರಿ ಮೆಣಸಿನ ಪುಡಿ ಹಾಕಿ ಹಾಕಿ ಮಿಕ್ಸ್ ಮಾಡಿ
- ಈಗ ಒಂದು ಸ್ಟೀಲ್ ಬೌಲ್ಗೆ ಎಣ್ಣೆ ಸವರಿ ಇದೇ ಮಿಶ್ರಣವನ್ನು ಹಾಕಿ
- ಈಗ ನೀವು ಇದನ್ನು ಒಂದು ಬಾಣಲೆಗೆ ಅರ್ಧದಷ್ಟು ನೀರು ಹಾಕಿ ನಂತರ ಈ ಪಾತ್ರೆಯನ್ನು ಬಾಣಲೆಯೊಳಗೆ ಇಟ್ಟು ಪಾತ್ರೆಯ ಬಾಯಿ ಮುಚ್ಚಿ ಬೇಯಿಸಿ. ಒಂದು 10 ನಿಮಿಷ ಬೇಯಿಸಿದರೆ ಮೊಟ್ಟೆ ಬೆಂದಿರುತ್ತದೆ, ಸ್ಪೂನ್ನಲ್ಲಿ ಚುಚ್ಚಿ ನೋಡಿ, ಅಂಟಿಲ್ಲ ಎಂದರೆ ಬೆಂದಿದೆ ಎಂದರ್ಥ.
ಎಗ್ 65 ಮಾಡುವುದು ಹೇಗೆ?
- ಈಗ ಮತ್ತೊಂದು ಬೌಲ್ಗೆ 4 ಚಮಚ ಕಾರ್ನ್ಫ್ಲೋರ್ ಸೇರಿಸಿ, 2 ಚಮಚ ಮೈದಾ ಹಿಟ್ಟು ಹಾಕಿ
- 1 ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 1/2 ಚಮಚ ಖಾರದ ಪುಡಿ
- 1/2 ಚಮಚ ಅರಿಶಿಣ ಪುಡಿ, 1/2 ಚಮಚ ಗರಂ ಮಸಾಲ ಪುಡಿ, 1 ಚಮಚ ಕೊತ್ತಂಬರಿ ಪುಡಿ, ರುಚಿಗೆ ತಕ್ಕ ಉಪ್ಪು ಸೇರಿಸಿ, ನಂತರ ಮೊಟ್ಟೆ ಒಡೆದು ಹಾಕಿ ಮಿಕ್ಸ್ ಮಾಡಿ, ಅರ್ಧ ನಿಂಬೆರಸ ಹಾಕಿ ಮಿಕ್ಸ್ ಮಾಡಿ, ಕರಿಬೇವು ಸೇರಿಸಿ
- ಈಗ ಬೇಯಿಸಿದ ಮೊಟ್ಟೆಯನ್ನು ಒಂದು ಪ್ಲೇಟ್ಗೆ ಹಾಕಿ ಈ ಪನ್ನೀರ್ ಕಟ್ ಮಾಡುವಂತೆ ಕತ್ತರಿಸಿ ಅದನ್ನು ಹಿಟ್ಟು ಜೊತೆ ಹಾಕಿ ಮಿಕ್ಸ್ ಮಾಡಿ
- ಈಗ ಎಣ್ಣೆ ಕಾಯಿಸಲು ಇಡಿ, ಅದರಲ್ಲಿ ಈ ಮೊಟ್ಟೆ ಪೀಸ್ಗಳನ್ನು ಹಾಕಿ ಡೀಪ್ ಫ್ರೈ ಮಾಡಿ ನಂತರ ಈರುಳ್ಳಿ ಕತ್ತರಿಸಿ ಇಟ್ಟು, ಚಿಕ್ಕ ನಿಂಬೆಪೀಸ್ ಇಟ್ಟು ಸರ್ವ್ ಮಾಡಿ. ಇಷ್ಟು ಮಾಡಿದರೆ ಎಗ್ 65 ರೆಡಿ.
ಇತರ ಸಲಹೆ
ನೀವು ಕಲೆಸುವಾಗ ಮೊಟ್ಟೆ ಬದಲಿಗೆ ನೀರು ಹಾಕಿ ಕಲೆಸಬೇಡಿ
ಹಿಟ್ಟು ತುಂಬಾ ಗಟ್ಟಿ ಮಾಡಬೇಡಿ ಅಥವಾ ತೆಳು ಕೂಡ ಮಾಡಬೇಡಿ
ಖಾರ ಪ್ರಿಯರಾಗಿದ್ದರೆ ಮೊಟ್ಟೆ ಬೇಯಿಸುವಾಗ ಹಸಿಮೆಣಸು ಕತ್ತರಿಸಿ ಹಾಕಿ, ನಂತರ
ಇದು ಡೀಪ್ ಫ್ರೈ ಆಗಿ ಬಾಯಿಗೆ ಸಿಗುವಾಗ ಖಾರ-ಖಾರವಾಗಿ ಚೆನ್ನಾಗಿರುತ್ತದೆ.
ಇನ್ನು ಮೊಟ್ಟೆ ಕೆಲಸುವಾಗ ಕೂಡ ಸ್ವಲ್ಪ ಎಣ್ಣೆ ಹಾಕಿ ಕಲೆಸಿದರೆ ತುಂಬಾ
ಚೆನ್ನಾಗಿರುತ್ತದೆ.



Click it and Unblock the Notifications
