Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಸ್ಕ್ಯಾಂಡಿ ತೆಂಗಿನಕಾಯಿ ಹಾಲಿನಿಂದ ಮಾಡಿ ನೋಡಿ, ಮಕ್ಕಳೂ ತುಂಬಾ ಇಷ್ಟಪಡುತ್ತಾರೆ, ಆರೋಗ್ಯಕ್ಕೂ ಒಳ್ಳೆಯದು
ಬೇಸಿಗೆ ಕಾಲದಲ್ಲಿ ಜ್ಯೂಸ್, ಐಸ್ಕ್ಯಾಂಡಿ, ಕುಲ್ಫಿ ಅಂತ ಸವಿಯಲ ತುಂಬಾನೇ ಖುಷಿ ಅನಿಸುವುದು, ಅದೇ ಮಕ್ಕಳಂತೂ ಐಸ್ ಡಬ್ಬ ಕಂಡರೆ ಸಾಕು ಐಸ್ ಕ್ಯಾಂಡಿ ಬೇಕು, ಐಸ್ ಕ್ರೀಮ್ ಬೇಕು ಅಂತ ಅವರ ಬೇಡಿಕೆಗೆ ಕರಗುವವರೆಗೆ ಮುಷ್ಕರ ಶುರು ಮಾಡುತ್ತಾರೆ. ಆ ಐಸ್ ತಯಾರಿಸಲು ಯಾವ ನೀರು ಬಳಸಿರಬಹುದು ಎಂಬ ಆತಂಕ ತಾಯಂದಿರಲ್ಲಿ ಇರುತ್ತದೆ, ಏಕೆಂದರೆ ಒಂದೆರಡು ಐಸ್ಕ್ಯಾಂಡಿ ತಿಂದರೆ ಮತ್ತೆ ಶೀತ ಕೆಮ್ಮು ಅಂತ ಶುರುವಾಗುವುದು.
ಆದರೆ ನೀವೇ ಐಸ್ ಕ್ಯಾಂಡಿ ಸುಲಭವಾಗಿ ಮಾಡಬಹುದು, ಇದನ್ನು ತಿಂದರೆ ಮಕ್ಕಳಿಗೆ ಪೌಷ್ಠಿಕಾಂಶಗಳು ಹೊಟ್ಟೆಯನ್ನೂ ಸೇರುತ್ತದೆ, ಇದರ ರುಚಿ ನಿಮಗೆ ಹೊರಗಡೆ ಸಿಗುವ ಐಸ್ಕ್ಯಾಂಡಿಯಲ್ಲಿ ಸಿಗಲು ಸಾಧ್ಯವಿಲ್ಲ. ಇಲ್ಲಿ ತೆಂಗಿನಕಾಯಿ ಹಾಕಿ ಮಾಡುವ ಐಸ್ಕ್ಯಾಂಡಿ ರೆಸಿಪಿ ನೀಡಿದ್ದೇವೆ ಇದನ್ನೊಮ್ಮೆ ಟ್ರೈ ಮಾಡಿ ನೋಡಿ ತುಂಬಾನೇ ಇಷ್ಟವಾಗುವುದು, ಮಕ್ಕಳು ಹೊರಗಡೆಯ ಐಸ್ಕ್ಯಾಂಡಿ ಬೇಡ, ನೀನು ಮಾಡುವ ಐಸ್ಕ್ಯಾಂಡಿ ಸಾಕು ಎಂದು ಹೇಳುವಷ್ಟು ರುಚಿಯಾಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
1 ತೆಂಗಿನಕಾಯಿ
1 ಮಿಲ್ಕ್ಮೇಡ್
ಅರ್ಧ ಕಪ್ ತೆಂಗಿನತುರಿ
1/2 ಕಪ್ ಹಾಲಿನ ಪುಡಿ
ಮಾಡುವ ವಿಧಾನ:
- ನೀವು ತೆಂಗಿನಕಾಯಿ ಹೊಡೆದು ಅದರ ನೀರು ಒಂದು ಬೌಲ್ನಲ್ಲಿ ತೆಂಗಿನಕಾಯಿ ನೀರು ಸಂಗ್ರಹಿಸಿ
- ನಂತರ ತೆಂಗಿನಕಾಯಿ ತುರಿ ಬೇಡಿ, ಕತ್ತರಿಸಿ ತೆಗೆಯಿರಿ, ನಂತರ ಅದರ ಮೇಲಿನ ಸಿಪ್ಪೆ ತೆಗೆಯಿರಿ (ಕಪ್ಪು ಬಣ್ಣದಲ್ಲಿ ಇರುತ್ತದೆ ಅಲ್ವಾ ಅದು, ಬರಿ ಬಿಳಿ ಭಾಗವನ್ನು ಮಾತ್ರ ಬಳಸಿ)
- ನಂತರ ಅದನ್ನು ಚಿಕ್ಕ-ಚಿಕ್ಕ ತುಂಡುಗಳಾಗಿ ಕತ್ತರಿಸಿ, ಅದಕ್ಕೆ ತೆಂಗಿನಕಾಯಿ ನೀರು (ಎಳನೀರಿದ್ದರೆ ಅದನ್ನು ಹಾಕಬಹುದು) ಸೇರಿಸಿ ಗ್ರೈಂಡ್ ಮಾಡಿ. ನಂತರ ಅದರ ಹಾಲನ್ನು ತೆಗೆಯಿರಿ
- ನಂತರ ಆ ಹಾಲಿಗೆ ಹಾಲಿನ ಪುಡಿ ಸೇರಿಸಿ ಕಲೆಸಿ, ಮಿಲ್ಕ್ ಮೇಡ್ ಸೇರಿಸಿ
- ನಂತರ ಸ್ವಲ್ಪ ತೆಂಗಿನ ತುರಿ ಸೇರಿಸಿ
- ನಂತರ ಮಿಕ್ಸ್ ಮಾಡಿ (ಸಿಹಿ ನೋಡಿ, ಮಿಲ್ಕ್ ಮೇಡ್ ಹಾಕಿರುವುದರಿಂದ ಸಿಹಿ ಇರುತ್ತದೆ, ಸಿಹಿ ಬೇಕಿದ್ದರೆ ಸಕ್ಕರೆ ಹಾಕಿ ಸೇರಿಸಿದರೆ ಸಾಕು)
- ನಂತರ ಮಿಕ್ಸ್ ಮಾಡಿ, ಕ್ಯಾಂಡಿ ಮೋಲ್ಡ್ಗೆ ಹಾಕಿ, ಕ್ಯಾಂಡಿ ಮೋಲ್ಡ್ ಇಲ್ಲದಿದ್ದರೆ ನೀವು ಪ್ಲಾಸ್ಟಿಕ್ ಲೋಟ ಬರುತ್ತೆ ಅಲ್ವಾ ಅದರಲ್ಲಿ ಹಾಕಿದರೆ ಸಾಕು.
- ನಂತರ ಕಡ್ಡಿ ಚುಚ್ಚಿ
- ನಂತರ ಫ್ರೀಝರ್ನಲ್ಲಿ 8 ಗಂಟೆಗಳ ಕಾಲ ಇಟ್ಟು ತೆಗೆಯಿರಿ
- ನಂತರ ತೆಗೆದು ಸವಿದು ನೋಡಿ, ಖಂಡಿತ ಇಷ್ಟವಾಗುತ್ತೆ.
ಇತರ ಸಲಹೆ:
ಇದನ್ನು ತೆಂಗಿನಕಾಯಿ, ಹಾಲಿನ ಪುಡಿ, ಮಿಲ್ಕ್ ಮೇಡ್ ಹಾಕಿ ಮಾಡುವುದರಿಂದ ಇದು
ಆರೋಗ್ಯಕ್ಕೂ ಒಳ್ಳೆಯದು
ಇದಕ್ಕೆ ಬೇಕಿದ್ದರೆ ಎಳನೀರಿನ ತಿರುಳು ಸೇರಿಸಬಹುದು, ಇತರ ಡ್ರೈ ಫ್ರೂಟ್ಸ್, ಡ್ರೈ
ಪೆಡಲ್ಸ್ ಕೂಡ ಬಲಸಬಹುದು
ಈ ತೆಂಗಿನಕಾಯಿಯಿಂದ ಮಾಡಿದ ಐಸ್ಕ್ಯಾಂಡಿ ತಿನ್ನಲು ತುಂಬಾನೇ
ರುಚಿಯಾಗಿರುತ್ತದೆ.



Click it and Unblock the Notifications
