Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಈ ಚಟ್ನಿ ಪುಡಿ ತಿಂಗಳುಗಟ್ಟಲೆ ಇಟ್ಟರೆ ಹಾಳಾಗಲ್ಲ, ಮೊಸರೆ ಜೊತೆ ಕಲೆಸಿ ತಿಂದರೆ ಸ್ವರ್ಗ ರುಚಿ
ನೀವು ಚಟ್ನಿ ಪುಡಿ ನೂರಕ್ಕೂ ಹೆಚ್ಚು ರುಚಿಯಲ್ಲಿ ಮಾಡಬಹುದು, ನಾವಿಲ್ಲಿ ತುಂಬಾ ಸರಳವಾಗಿ ಮಾಡಬಹುದಾದ, ಅಷ್ಟೇ ರುಚಿಯಾದ, ಅಲ್ಲದೆ ತುಂಬಾ ಸಮಯ ಇಟ್ಟು ಬಳಸಬಹುದಾದ ( 1-2 ತಿಂಗಳು ಇಡಬಹುದು) ಚಟ್ನಿ ಪುಡಿ ಇದಾಗಿದೆ, ಈ ಚಟ್ನಿ ಪುಡಿ ನೀವು ಅನ್ನದ ಜೊತೆ ಸವಿಯಬಹುದು, ಮೊಸರು ಜೊತೆ ಮಿಕ್ಸ್ ಮಾಡಿದರೆ ಇಡ್ಲಿ, ರೊಟ್ಟಿ, ಚಪಾತಿಗೆ ಸೂಪರ್ ಆಗಿರುತ್ತದೆ, ಬನ್ನಿ ಇದನ್ನು ಮಾಡುವುದು ಹೇಗೆ ಎಂದು ನೋಡೋಣ:

ಬೇಕಾಗುವ ಸಾಮಗ್ರಿ
ತೆಂಗಿನತುರಿ (1-2 ತೆಂಗಿನಕಾಯಿ)
2 ಚಮಚ ಕೊತ್ತಂಬರಿ ಬೀಜ
ಒಣ ಮೆಣಸು 8-10
1 ಚಮಚ ಕಾಳು ಮೆಣಸು
ಸ್ವಲ್ಪ ಶುಂಠಿ ತುಂಡು
ಹುಣಸೆಹಣ್ಣು
ಸ್ವಲ್ಪ ಕರಿಬೇವು
ಮಾಡುವ ವಿಧಾನ:
- ತೆಂಗಿನ ತುರಿ ( ಒಂದು ತೆಂಗಿನ ಕಾಯಿ, ಚಿಕ್ಕ ತೆಂಗಿನಕಾಯಿ ಆದರೆ 2 ತೆಂಗಿನಕಾಯಿ ಬೇಕಾಗುತ್ತೆ)
- ಚೆನ್ನಾಗಿ ಬಲಿತಿರುವ ತೆಂಗಿನಕಾಯಿ ಬಳಸಬೇಕು, ಕೊಬ್ಬರಿಯಲ್ಲ, ನೀರುವ ತೆಂಗಿನಕಾಯಿ ಚೆನ್ನಾಗಿ ಬಲಿತಿರಬೇಕು.
- ಈಗ ನೀವು ದಪ್ಪ ತಳವಿರುವ ಪಾತ್ರೆ ಇಟ್ಟು ಅದರಲ್ಲಿ ತೆಂಗಿನ ತುರಿ ಹಾಕಿ 3-5ಮಿಷ ಫ್ರೈ ಮಾಡಿ
- ನಂತರ ಅದಕ್ಕೆ 2 ಚಮಚ ಕೊತ್ತಂಬರಿ ಬೀಜ, 1 ಚಮಚ ಕಾಳು ಮೆಣಸು, ನಂತರ ಚಿಕ್ಕ ತುಂಡು ಶುಂಠಿಯನ್ನು ಕತ್ತರಿಸಿ ಸೇರಿಸಿ
- ನಂತರ 8-10 (ಖಾರಕ್ಕೆ ತಕ್ಕಂತೆ) ಒಣ ಮೆಣಸು ಸೇರಿಸಿ
ಈಗ ಸ್ಟೌವ್ ಅನ್ನು ಮೀಡಿಯಂ ಫ್ಲೇಮ್ನಲ್ಲಿಟ್ಟು ಫ್ರೈ ಮಾಡಿ, ತಳ ಹಿಡಿಯಬಾರದು, ಹಾಗಾಗಿ ಸೌಟ್ನಿಂದ ಆಡಿಸುತ್ತಾ ಇರಬೇಕು
ತೆಂಗಿನ ತುರಿ ಸ್ವಲ್ಪ ಕಂದು ಬಣ್ಣ ಬರುವಾಗ ಹುಣಸೆ ಹಣ್ಣು ಸೇರಿಸಿ, ಸ್ವಲ್ಪ
ಕರಿಬೇವು ಹಾಕಿ ಫ್ರೈ ಮಾಡಿ, ನಂತರ ಕಣ್ಣು ಬರುವಾಗ ಸ್ಟೌವ್ ಆಫ್ ಮಾಡಿ
ತಣ್ಣಗಾಗಲು ಒಂದು ಪಾತ್ರೆಗೆ ಹಾಕಿ
ನಂತರ ರುಬ್ಬುವಾಗ ಕಲ್ಲುಪ್ಪು ಸೇರಿಸಿ
ನಂತರ ಮಿಕ್ಸಿಯಲ್ಲಿ 2-3 ರೌಂಡ್ ತಿರುಗಿಸಿದರೆ ಚಟ್ನಿ ಪುಡಿ ರೆಡಿ.
ಸಲಹೆ: ನೀವು ಚಟ್ನಿಯನ್ನು ತುಂಬಾ ರುಬ್ಬಬಾರದು, ಏಕೆಂದರೆ ತೆಂಗಿನಕಾಯಿ
ಎಣ್ಣೆಯಂಶ ಬಿಡುತ್ತದೆ, ಹಾಗಾಗಿ 2-3 ರೌಂಡ್ ತಿರುಗಿಸಿದರೆ ಸಾಕಾಗುತ್ತೆ.
ನೀವು ಬ್ಯಾಡಗಿ ಮೆಣಸು ಹಾಗೂ ಇತರ ಖಾರ ಮೆಣಸು ಮಿಕ್ಸ್ ಮಾಡಬಹುದು
ಕಾಳು ಮೆಣಸು ಬದಲಿಗೆ ಗಾಂಧಾರಿ ಮೆಣಸು (ಒಣಗಿದ್ದು) (bird chilli) ಅದನ್ನು
ಬೇಕಾದರೆ ಸೇರಿಸಬಹುದು
ಹುಣಸೆ ಹಣ್ಣು ಮತ್ತು ಕರಿಬೇವು ಕೊನೆಯ ಹಂತದಲ್ಲಿ ಹಾಕಿದರೆ ಸಾಕು, ಮೊದಲೇ ಹಾಕಿ
ಕರಿಬೇವು ಒಣಗಿ ಹೋಗುತ್ತೆ, ಆವಾಗ ಫ್ಲೇವರ್ ಅಷ್ಟು ಚೆನ್ನಾಗಿರಲ್ಲ, ಅದಕ್ಕಿಂತ
ಉರಿಯಿಂದ ಇಳಿಸುವ 3-4 ನಿಮಿಷ ಮುನ್ನ ಹಾಕಿದರೆ ಒಳ್ಳೆಯದು.



Click it and Unblock the Notifications
