Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕ್ಯಾರೆಟ್ ಹಲ್ವಾ ಮಾಡುವುದು ತುಂಬಾ ಸುಲಭ ನೋಡಿ
ಕ್ಯಾರೆಟ್ ಹಲ್ವಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ತಿನ್ನುವ ಒಂದು ಸಿಹಿ ತಿನಿಸು ಆಗಿದೆ. ಇನ್ನು ಇದರಲ್ಲಿ ಹಾಲು, ತುಪ್ಪ, ನಟ್ಸ್ ಬಳಸುವುದರಿಂದ ಇವು ರುಚಿಯ ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶ ನೀಡುತ್ತದೆ. ಈ ಕ್ಯಾರೆಟ್ ಹಲ್ವಾವನ್ನು ಸುಲಭದಲ್ಲಿ ಮಾಡಬಹುದಾಗಿದೆ.

ಕ್ಯಾರೆಟ್ ತ್ವಚೆಗೆ ಹಾಗೂ ಕಣ್ಣಿಗೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೂ ಸಹಕಾರಿ. ಸಿಹಿ ತಿನ್ನಬೇಕೆಂದು ಅನಿಸುವಾಗ ಈ ರೀತಿಯ ವಸ್ತುಗಳನ್ನು ಸುಲಭದಲ್ಲಿ ಮಾಡಿ ಸವಿಯಬಹುದಾಗಿದೆ ನೋಡಿ. ಇಲ್ಲಿ ನಾವು ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಎಂಬ ರೆಸಿಪಿ ನೀಡಿದ್ದೇವೆ ನೋಡಿ:
Recipe By: Reena TK
Recipe Type: Sweet
Serves: 2-3
-
ಬೇಕಾಗುವ ಸಾಮಗ್ರಿ
2-4 ಕ್ಯಾರೆಟ್
ಅರ್ಧ ಲೀಟರ್ ಹಾಲು ಅರ್ಧ ಕಪ್ ಸಕ್ಕರೆ (ನಿಮ್ಮ ಸಿಹಿಗೆ ತಕ್ಕಷ್ಟು)
ನಟ್ಸ್ (ಗೋಡಂಬಿ, ಬಾದಾಮಿ, ಪಿಸ್ತಾ)
ದ್ರಾಕ್ಷಿ
3-4 ಚಮಚ ತುಪ್ಪ
-
ಕ್ಯಾರೆಟ್ ಹಲ್ವಾ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಇಷ್ಟಪಟ್ಟು ತಿನ್ನುವ ಒಂದು ಸಿಹಿ ತಿನಿಸು ಆಗಿದೆ. ಇನ್ನು ಇದರಲ್ಲಿ ಹಾಲು, ತುಪ್ಪ, ನಟ್ಸ್ ಬಳಸುವುದರಿಂದ ಇವು ರುಚಿಯ ಜೊತೆಗೆ ದೇಹಕ್ಕೆ ಬೇಕಾದ ಪೋಷಕಾಂಶ ನೀಡುತ್ತದೆ. ಈ ಕ್ಯಾರೆಟ್ ಹಲ್ವಾವನ್ನು ಸುಲಭದಲ್ಲಿ ಮಾಡಬಹುದಾಗಿದೆ.
ಕ್ಯಾರೆಟ್ ತ್ವಚೆಗೆ ಹಾಗೂ ಕಣ್ಣಿಗೆ ತುಂಬಾನೇ ಒಳ್ಳೆಯದು. ಇದರಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೂ ಸಹಕಾರಿ. ಸಿಹಿ ತಿನ್ನಬೇಕೆಂದು ಅನಿಸುವಾಗ ಈ ರೀತಿಯ ವಸ್ತುಗಳನ್ನು ಸುಲಭದಲ್ಲಿ ಮಾಡಿ ಸವಿಯಬಹುದಾಗಿದೆ ನೋಡಿ. ಇಲ್ಲಿ ನಾವು ಕ್ಯಾರೆಟ್ ಹಲ್ವಾ ಮಾಡುವುದು ಹೇಗೆ ಎಂಬ ರೆಸಿಪಿ ನೀಡಿದ್ದೇವೆ ನೋಡಿ:
{recipe}
- ಕ್ಯಾರೆಟ್ ಹಲ್ವಾಗೆ ಸಕ್ಕರೆ ಬದಲಿಗೆ ಬೆಲ್ಲ ಅಥವಾ ಖರ್ಜೂರ ಬಳಸಿ ಮಾಡಿದರೆ ಮತ್ತಷ್ಟು ಒಳ್ಳೆಯದು.
- ಸರ್ವ್ - 1 ಚಿಕ್ಕ ಕಪ್
- ಕ್ಯಾಲೋರಿ - 115 ಕ್ಯಾ
- ಕೊಬ್ಬು - 3.8ಗ್ರಾಂ
- ಕಾರ್ಬ್ಸ್ - 19.8ಗ್ರಾಂ
- ನಾರಿನಂಶ - 4.2 ಗ್ರಾಂ
ಮಾಡುವ ವಿಧಾನ
* ಕ್ಯಾರೆಟ್ ಅನ್ನು ತುರಿಯಿರಿ.
* ಈಗಕ್ಯಾರೆಟ್ ಅನ್ನು ಚಿಕ್ಕ ಕುಕ್ಕರ್‌ಗೆ ಹಾಕಿ ಬೇಯಲು ತಕ್ಕ ಹಾಲು ಸೇರಿಸಿ
2-3 ವಿಶಲ್ ಬರುವವರೆಗೆ ಬೇಯಿಸಿ.
* ಈಗ ಪ್ಯಾನ್‌ಗೆ ತುಪ್ಪ ಹಾಕಿ (ತುಪ್ಪ ಸ್ವಲ್ಪ ಅಧಿಕವಿದ್ದರೆ ರುಚಿ ಇನ್ನಷ್ಟು
ಚೆನ್ನಾಗಿರುತ್ತದೆ)

* ತುಪ್ಪ ಬಿಸಿಯಾದಾಗ ನಟ್ಸ್ ಹಾಗೂ ದ್ರಾಕ್ಷಿ ಹಾಕಿ ಸ್ವಲ್ಪ ಹುರಿಯಿರಿ.
* ನಂತರ ಬೇಯಿಸಿದ ಕ್ಯಾರೆಟ್ ಹಾಕಿ, ಸಕ್ಕರೆ ಸೇರಿಸಿ ಸೌಟ್‌ನಿಂದ ಆಡಿಸುತ್ತಾ
ಬೇಯಿಸಿ.
* ಹಾಲಿನಂಶ ಇಂಗಿ ಕ್ಯಾರೆಟ್ ಸ್ವಲ್ಪ ಡ್ರೈ ರೀತಿಯಾಗುವವರೆಗೆ ಸೌಟ್‌ನಿಂದ
ಆಡಿಸುತ್ತಾ ಬೇಯಿಸಿ.

Click it and Unblock the Notifications