Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಬಾಕಿಯುಳಿದ ಚಪಾತಿಯಿಂದ ಮಾಡಬಹುದು ರುಚಿಯಾದ ಬರ್ಫಿ: ಮಾಡುವುದು ಬಲು ಸುಲಭ
ಮನೆಯಲ್ಲಿ ಚಪಾತಿ ಉಳಿದರೆ ಅದನ್ನು ಬಿಸಾಡಿಬೇಡಿ, ಅದರಿಂದ ಸೂಪರ್ ಬರ್ಫಿ ತಯಾರಿಸಬಹುದು, ಇನ್ನು ಮಕ್ಕಳ ಹುಟ್ಟು ಹಬ್ಬ ವಿಶೇಷ ಸಂದರ್ಭದಲ್ಲಿಯೂ ಈ ವಿಶೇಷ ಬರ್ಫಿ ತಯಾರಿಸಬಹುದು, ನೀವು ಬೇಕರಿಯಿಂದ ಖರಿದಿಸುವ ಬರ್ಫಿಯಂತೆಯೇ ರುಚಿಕರವಾಗಿರುತ್ತದೆ, ಇನ್ನು ಇದನ್ನು ನೀವು ಸುಲಭವಾಗಿ ತಯಾರಿಸಬಹುದು, ಯಾವ ಓವನ್ ಬೇಕಾಗಿಲ್ಲ, ಉಳಿದ ಚಪಾತಿಯಿಂದ ಇಷ್ಟೊಂದು ರುಚಿಯಾದ ಬರ್ಫಿ ಮಾಡಬಹುದಾ ಎಂದು ಅಚ್ಚರಿಪಡುವಷ್ಟು ರುಚಿಯಾಗಿರುತ್ತೆ ನೋಡಿ:

ಬೇಕಾಗುವ ಸಾಮಗ್ರಿ
ಉಳಿದಿರುವ ಚಪಾತಿ 4-5 (ಕಡಿಮೆಯಿದ್ದರೂ ಆಗುತ್ತೆ)
ಎಣ್ಣೆ 1 ಕಪ್
1 ಕಪ್ ನೆಲಗಡಲೆ
ಸಕ್ಕರೆ ಅರ್ಧ ಕಪ್
ಸಕ್ಕರೆ ಅರ್ಧ ಕಪ್
1 -2 ಏಲಕ್ಕಿ
1/4 ಕಪ್ ಕಡ್ಲೆ ಹಿಟ್ಟು
ತುಪ್ಪ 2 ಚಮಚ
ಮಾಡುವ ವಿಧಾನ
- ನೀವು ಒಂದು ಕಪ್ ಎಣ್ಣೆ ಬಿಸಿ
- ಎಣ್ಣೆಯಾದಾಗ ಚಪಾತಿಯನ್ನು ಎಣ್ಣೆಗೆ ಹಾಕಿ
- ನೆಲಗಡಲೆಯನ್ನು ಎಣ್ಣೆಗೆ ಹಾಕಿ ಫ್ರೈ ಮಾಡಿ ಪಾತ್ರೆಗೆ ಹಾಕಿಡಿ
- ನಂತರ ಮಿಕ್ಸಿ ಜಾರ್ಗೆ ಚಪಾತಿಯನ್ನು ಪುಡಿ ಮಾಡಿ ಹಾಕಿ
- ನಂತರ ಒಂದು ಪಾತ್ರೆಗೆ ಸ್ವಲ್ಪ ನೀರು ಹಾಕಿ ಅದಕ್ಕೆ ಬೆಲ್ಲ ಮತ್ತು ಸಕ್ಕರೆ ಹಾಕಿ ಪಾಕ ಬೇಡಿ
- ಈಗ ಪಾತ್ರೆಗೆ 2 ಚಮಚ ತುಪ್ಪ ಹಾಕಿ ಅದಕ್ಕೆ ಕಡ್ಲೆಹಿಟ್ಟು ಹಾಕಿ ರೋಸ್ಟ್ ಮಾಡಿ,ನಂತರ ಪುಡಿ ಮಾಡಿದ ಚಪಾತಿ ಮತ್ತು ಕಡ್ಲೆಬೇಳೆಯ ಪುಡಿ ಮಿಶ್ರಣ ಹಾಕಿ ನಂತಗರ ಬೆಲ್ಲ ಮತ್ತು ಸಕ್ಕರೆಯ ಪಾಕ ಸೇರಿಸಿ, 2 ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ
- ನಂತರ ಬಿಳಿ ಹಾಳೆಗೆ ಬೆಣ್ಣೆ ಸವರಿ ಅದನ್ನು ಒಂದು ತಟ್ಟೆ ಅಥವಾ ಚೌಕಾಕಾರದ ತಟ್ಟೆಯಲ್ಲಿ ಸುರಿದು ನಂತರ ಹರಡಿ ತಣ್ಣಗಾದ ಮೇಲೆ ನಿಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ.
ಈಗ ರೆಡಿಯಾದ ಬರ್ಫಿ ಡಬ್ಬದಲ್ಲಿ ಹಾಕಿಟ್ಟು ಸವಿಯಿರಿ. ಇದನ್ನು ಎರಡು ವಾರದವರೆಗೆ ಇಟ್ಟು ಸವಿಯಬಹುದು.
ಇತರ ಸಲಹೆ:
ಈ ಈ ಬರ್ಫಿ ಮಾಡುವಾಗ ಡ್ರೈ ಫ್ರೂಟ್ಸ್ ಬೇಕಿದ್ದರೆ ಸೇರಿಸಬಹುದು
ಇದು ತುಂಬಾ ಮೃದುವಾಗಿ ಬೇಕೆಂದರೆ ಅದರಂತೆ ಮಾಡಬಹುದು ತುಪ್ಪ ಸ್ವಲ್ಪ ಅಧಿಕ ಹಾಕಿ,
ಇಲ್ಲಾ ಗಟ್ಟಿ ಬರ್ಫಿ ಮಾಡಿ ಎರಡೂ ಮಾಡಬಹುದು.
ಈ ಬರ್ಫಿಗೆ ಚಪಾತಿ ಬೇಕೇಬೇಕೆ?
ಹೌದು ಇದು ಒಣ ಚಪಾತಿಯಿಂದ ಮಾಡುವ ಬರ್ಫಿಯಾಗಿದೆ, ಇಲ್ಲ ನೀವು ಚಪಾತಿ ಮಾಡಿ ಅದನ್ನು ಮತ್ತೆ ಎಣ್ಣೆಯಲ್ಲಿ ಕರಿದು ಮಾಡಬೇಕು, ಚಪಾತಿ ಡ್ರೈಯಾದರೆ ಮಾತ್ರ ಅದರ ಪುಡಿ ಚೆನ್ನಾಗಿ ಬರುತ್ತದೆ.
ಇನ್ನು ಸಿಹಿಗೆ ಇಲ್ಲಿ ಸಕ್ಕರೆ ಮತ್ತು ಬೆಲ್ಲ ಮಿಕ್ಸ ಮಾಡಿ ಮಾಡಲಾಗಿದೆ, ನೀವು ಸಕ್ಕರೆ ಮಾತ್ರ ಅಥವಾ ಬೆಲ್ಲ ಮಾತ್ರ ಬಳಸಿಯೂ ಪಾಕ ತಯಾರಿಸಬಹುದು. ಪಾಕವನ್ನು ಸುರಿಯುವಾಗ ಹಿಟ್ಟು ಣೀರು-ನೀರಾಗಬಾರದು, ಈ ಬಗ್ಗೆ ಜಾಗ್ರತೆವಹಿಸಿ.



Click it and Unblock the Notifications