Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಕುಕ್ಕರ್ ಬಳಸಿ ಸುಲಭವಾಗಿ ಮಾಡಿ ಬದನೆಕಾಯಿ ಎಣ್ಣೆಗಾಯಿ! ಹೇಗೆ ಗೊತ್ತಾ?
ನೀವು ಚಪಾತಿ, ರೊಟ್ಟಿ ಅಥವಾ ಅನ್ನ ಸವಿಯುವಾಗ ಅದಕ್ಕೆ ರುಚಿ ನೀಡುವ ಒಂದು ಬಗೆಯ ಪಲ್ಯ, ಗೊಜ್ಜು, ಚಟ್ನಿ, ಸಾಂಬಾರ್ ಹೀಗೆ ಏನಾದರು ಬಳಸುತ್ತೀರಿ. ಚಪಾತಿ, ರೊಟ್ಟಿಗೆ ರುಚಿ ರುಚಿಯಾಗಿ ಏನಾದರು ಇರಲೇಬೇಕು. ಇಲ್ಲದಿದ್ದರೆ ಅದರ ರುಚಿ ಸಿಗದಂತಾಗುತ್ತದೆ. ಹೀಗಿರುವಾಗ ನಾವು ಚಪಾತಿ ಹಾಗೂ ರೊಟ್ಟಿಯ ಜೊತೆ ಸವಿಯಲೆಂದೇ ಎಣ್ಣೆಗಾಯಿ ಮಾಡುತ್ತೇವೆ.
ಎಣ್ಣೆಗಾಯಿ ಅಂದ ಕೂದಲೇ ಕೆಲವರ ಬಾಯಲ್ಲಿ ನೀರು ಬರುತ್ತದೆ. ಏಕೆಂದರೆ ನೀವು ಯಾವುದೇ ರೊಟ್ಟಿ, ಚಪಾತಿ, ಪಲಾವ್, ರುಮಾಲ್ ರೋಟಿಯಂತಹ ವಿಶೇಷ ಖಾದ್ಯಗಳಿಗೆ ಈ ಎಣ್ಣೆಗಾಯಿ ಪಲ್ಯ ಹೇಳಿ ಮಾಡಿಸಿದ ಖಾದ್ಯವಾಗಿದೆ. ಆದ್ರೆ ಹಲವರು ಇದನ್ನು ಮಾಡುವುದು ಕಷ್ಟ ಎಂದು ತಿಳಿದಿರುತ್ತಾರೆ. ಅಲ್ಲದೆ ಬದನೆಕಾಯಿಯ ಲಾಭ ತಿಳಿಯದೆ ಸುಮ್ಮನಾಗಿರುತ್ತಾರೆ.

ಆದ್ರೆ ಒಮ್ಮೆ ನೀವು ಎಣ್ಣೆಗಾಯಿ ಪಲ್ಯದ ರುಚಿ ನೋಡಿದರೆ ಮತ್ತೆ ಪದೇ ಪದೇ ಅದರ ರುಚಿ ನೋಡಲು ಬಯಸುತ್ತೀರಿ. ಅದ್ರಲ್ಲೂ ನೀವು ಎಣ್ಣೆಗಾಯಿ ಪಲ್ಯವನ್ನು ಕುಕ್ಕರ್‌ನಲ್ಲಿಯೂ ಮಾಡಿ ಸವಿಯಬಹುದು. ಆದ್ರೆ ಕೆಲವರು ಕುಕ್ಕರ್‌ನಲ್ಲಿ ಮಾಡಲು ಹೋಗಿ ತಳ ಹಿಡಿಯುವ ಸಮಸ್ಯೆಗೆ ಒಳಗಾಗಿರುತ್ತಾರೆ. ಆದ್ರೆ ಸರಿಯಾದ ವಿಧಾನದಲ್ಲಿ ಮಾಡಿದರೆ ಕುಕ್ಕರ್‌ನಲ್ಲಿ ಸುಲಭವಾಗಿ ಮಾಡಬಹುದಾಗಿದೆ.
ಹಾಗಾದ್ರೆ ನಾವಿಂದು ಕುಕ್ಕರ್‌ನಲ್ಲಿ ಸುಲಭವಾಗಿ ಬದನೆಕಾಯಿ ಎಣ್ಣೆಗಾಯಿ ಪಲ್ಯವನ್ನು ಮಾಡುವುದು ಹೇಗೆ ಎಂಬುದನ್ನು ನೋಡೋಣ. ಎಣ್ಣೆಗಾಯಿ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ಸರಿಯಾದ ವಿಧಾನವೇನು? ಮಾಡುವಾಗ ಯಾವ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಣ್ಣೆಗಾಯಿ ಬದನೆಕಾಯಿ ಮಾಡಲು ಬೇಕಾಗುವ ಪದಾರ್ಥಗಳು
- ಬದನೆಕಾಯಿ - 5
- ಮೆಂತ್ಯ
- ಜೀರಿಗೆ
- ಸಾಸಿವೆ
- ಕಡಲೆ ಬೀಜ
- ಬಿಳಿ ಎಳ್ಳು
- ಕರಿಬೇವು
- ಧನಿಯಾ
- ಗರಂ ಮಸಾಲ
- ಖಾರದ ಪುಡಿ
- ಒಣ ಮೆಣಸು
- ಎಣ್ಣೆ
- ತೆಂಗಿನ ಕಾಯಿ
- ಹುಣಸೆ ಹಣ್ಣು
- ಈರುಳ್ಳಿ
- ಟೊಮೆಟೋ
- ಉಪ್ಪು
- ಉದ್ದಿನ ಬೇಳೆ
- ಅರಶಿನ
ಬದನೆಕಾಯಿ ಎಣ್ಣೆಗಾಯಿ ಮಾಡುವ ವಿಧಾನ
ಮೊದಲು ಎಲ್ಲಾ ಬದನೆಕಾಯಿಯನ್ನೂ ತೊಟ್ಟು ಸ್ವಲ್ಪ ಉದ್ದ ಇಟ್ಟು 4 ಭಾಗವಾಗ ಕತ್ತರಿಸಿಕೊಳ್ಳಿ. ಬದನೆಕಾಯಿ ಇಡಿಯಾಗಿರಲಿ. ಬಳಿಕ ಅದನ್ನು ನೀರಿನಲ್ಲಿ ಹಾಕಿ ಇಡಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಳ್ಳಿ. ಎಣ್ಣೆ ಕಾದ ಬಳಿಕ ಅದಕ್ಕೆ ಮೆಂತ್ಯ, ಧನಿಯಾ, ಜೀರಿಗೆ, ಕಡಲೆ ಬೀಜ, ಕಡಲೆ ಬೇಳೆ, ಬಿಳಿ ಎಳ್ಳು, ಹುರಿಗಡಲೆ ಹಾಕಿಕೊಂಡು ಸಣ್ಣ ಉರಿಯಲ್ಲಿ ಫ್ರೈ ಮಾಡಿಕೊಳ್ಳಿ.
ಇದಕ್ಕೆ ಬೆಳ್ಳುಳ್ಳಿ ಹಾಕಿಕೊಂಡಿ 2 ನಿಮಿಷ ಫ್ರೈ ಮಾಡಿಕೊಳ್ಳಿ. ಈ ಮಸಾಲೆಯನ್ನು ಪಾತ್ರೆಯಿಂದ ತೆಗೆದು ಬದಿಗಿಟ್ಟುಕೊಳ್ಳಿ. ಈಗ ಅದೇ ಪಾತ್ರೆಗೆ ಮತ್ತೊಂದು ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಒಣ ಮೆಣಸು, ಕರಿಬೇವು ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದಕ್ಕೆ ಎರಡೂ ಪದಾರ್ಥಗಳನ್ನು ಹಾಕಿಕೊಳ್ಳಿ, ಮೊದಲು ಫ್ರೈ ಮಾಡಿಕೊಂಡ ಪದಾರ್ಥಗಳು ಹಾಗೂ ಒಣ ಮೆಣಸು ಕರಿಬೇವಿನ ಮಿಶ್ರಣವನ್ನು ಹಾಕಿ. ಅದಕ್ಕೆ ತೆಂಗಿನ ಕಾಯಿ, ಹುಣಸೆ ಹಣ್ಣು, ಗರಂ ಮಸಾಲೆ, ಈರುಳ್ಳಿ, ಉಪ್ಪು, ಸ್ವಲ್ಪ ನೀರು ಹಾಕಿಕೊಂಡು ಚೆನ್ನಾಗಿ ರುಬ್ಬಿಕೊಳ್ಳಿ.
ಈಗ ಈ ರುಬ್ಬಿರುವ ಖಾರವನ್ನು ಬದನೆಕಾಯಿಯ ಮಧ್ಯದಲ್ಲಿ ತುಂಬಿಸಿಕೊಳ್ಳಿ. ಎಲ್ಲಾ ಬದನೆಕಾಯಿಗೆ ಖಾರ ತುಂಬಿದ ಬಳಿಕ, ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ 1 ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಬಳಿಕ ಸಾಸಿವೆ, ಉದ್ದಿನ ಬೇಳೆ, ಕಡಲೆ ಬೇಳೆ, ಕರಿಬೇವು, ಅರಶಿನ ಹಾಕಿ ಮಿಕ್ಸ್ ಮಾಡಿ ಇದಕ್ಕೆ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ.
ಇದಕ್ಕೆ ಟೊಮೆಟೋ ಸಹ ಹಾಕಿಕೊಂಡು ಫ್ರೈ ಮಾಡಿ. ಈಗ ಬದನೆಕಾಯಿಗೆ ಹಾಕಿ ಉಳಿದಿರುವ ಖಾರವನ್ನು ಇದಕ್ಕೆ ಹಾಕಿ ಸ್ವಲ್ಪ ನೀರು ಹಾಕಿಕೊಂಡು ಬಿಡಿ. ಬಳಿಕ ಮಸಾಲೆ ತುಂಬಿರುವ ಬದನೆಕಾಯಿಯನ್ನು ಒಂದೊಂದಾಗಿ ಇಡುತ್ತಾ ಬನ್ನಿ. ಬಳಿಕ ಮಿಕ್ಸ್ ಮಾಡಿ ಕುಕ್ಕರ್ ಮುಚ್ಚಳ ಮುಚ್ಚಿ, ಬಳಿಕ 2 ಸೀಟಿ ಹೊಡೆಯುವವರೆಗೂ ಬಿಡಿ. ಬಳಿಕ ಗ್ಯಾಸ್ ಪೂರ್ತಿ ಹೋದ ಬಳಿಕ ಕುಚ್ಚಳ ತೆಗೆದು ಮಿಕ್ಸ್ ಮಾಡಿಕೊಂಡರೆ ನಿಮ್ಮ ಮುಂದೆ ರುಚಿಕರ ಎಣ್ಣೆಗಾಯಿ ಪಲ್ಯ ರೆಡಿಯಾಗಿರುತ್ತೆ.



Click it and Unblock the Notifications
