Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಕೇರಳ ಸ್ಟೈಲ್ ಘಮ ಘಮಿಸುವ ಸಾಂಬಾರ್ ಪುಡಿ ಮಾಡಿ..! ಇಲ್ಲಿದೆ ಸಿಂಪಲ್ ರೆಸಿಪಿ
ಮನೆಯಲ್ಲಿ ಊಟಕ್ಕೆ ಸಾಂಬಾರ್ ಮಾಡುವುದು ಸಾಮಾನ್ಯ. ತರಕಾರಿಗಳ ಬಳಸಿ ಸಾಂಬಾರ್ ಮಾಡಿದರೆ ಮನೆ ಮಂದಿಯಲ್ಲ ಇಷ್ಟಪಟ್ಟು ಸವಿಯುತ್ತಾರೆ. ಅದರಲ್ಲೂ ಹಬ್ಬದ ಸಮಯದಲ್ಲಿ ಸಾಂಬಾರ್ ರುಚಿ ರುಚಿಯಾಗಿ ಮಾಡಬೇಕು ಎಂಬುದು ಎಲ್ಲರ ಆಸೆಯಾಗಿರುತ್ತೆ. ಹಾಗೆ ಸಾಂಬಾರ್ ಘಮ ಘಮ ಎನ್ನುವಂತೆ ಸುವಾಸನೆಯುಕ್ತವಾಗಿರಬೇಕು ಎಂದು ಹಲವು ರೀತಿ ಮಸಾಲೆಗಳ ಹಾಕಿ ಅದ್ಭುತವಾಗಿ ಮಾಡುವುದು ಸಹ ನೋಡಬಹುದು.
ಅದರಲ್ಲೂ ನಾವು ಮನೆಯಲ್ಲೇ ಮಾಡಿರುವ ಸಾಂಬಾರ್ ಪುಡಿಯನ್ನು ಬಳಸಿಕೊಂಡು ಈ ಸಾಂಬಾರ್ ಮಾಡಿದರೆ ಅದರ ರುಚಿ ಮತ್ತೂ ಹೆಚ್ಚಾಗಿರಲಿದೆ. ಆದ್ರೆ ನಾವು ಸಾಂಬಾರ್ ಮಾಡಲು ಹೆಚ್ಚಾಗಿ ಅಂಡಿಯಲ್ಲಿ ಸಿಗುವಂತಹ ಸಾಂಬಾರ್ ಪುಡಿಯನ್ನು ಹೆಚ್ಚಾಗಿ ಬಳಸುವುದು ನೋಡಬಹುದು. ಅದರಲ್ಲೂ ಕೂಡ ರುಚಿ ರುಚಿಯಾಗಿ ಮಾಡಬಹುದು, ಆದ್ರೆ ನಾವು ಮನೆಯಲ್ಲಿಯೇ ಈ ಪುಡಿ ಮಾಡಿಕೊಂಡರೆ ನಮಗೆ ಬೇಕಾದಾಗ, ಹಾಗೆ ಬೇಕಾದ ರುಚಿಯಲ್ಲಿ ಸಾಂಬಾರ್ ಮಾಡಿ ಸವಿಯಬಹುದು.

ಸಾಂಬಾರ್ ಪುಡಿಯನ್ನು ಮನೆಯಲ್ಲಿ ಮಾಡಲು ಸಹ ಹಲವು ವಿಧಾನಗಳಿವೆ. ಒಂದೊಂದು ಕಡೆಗಳಲ್ಲಿ ಒಂದೊಂದು ರೀತಿಯ ಸಾಂಬಾರ್ ಪುಡಿ ಬಳಸುವುದು ನೋಡಬಹುದು. ಆದ್ರೆ ನಾವಿಂದು ಕೇರಳದಲ್ಲಿ ಬಳಸುವಂತಹ ಸಾಂಬಾರ್ ಪುಡಿ ಹೇಗಿರಲಿದೆ? ಅದನ್ನು ಮನೆಯಲ್ಲಿ ನಾವು ಮಾಡಿಕೊಳ್ಳುವುದು ಹೇಗೆ ಅನ್ನೋದನ್ನು ಇಲ್ಲಿ ತಿಳಿದುಕೊಳ್ಳೋಣ.
ಕೇಳರಳದಲ್ಲಿನ ಸಾಂಬಾರ್ ಸವಿಯಲು ಎಷ್ಟು ರುಚಿಕರವಾಗಿರುತ್ತದೆ ಅನ್ನೋದನ್ನು ನೀವು ಸಹ ಕೇಳಿರಬಹುದು. ದಪ್ಪವಾಗಿ ಘಮ ಘಮ ಎನ್ನುವಂತೆ ಅವರು ಸಾಂಬಾರ್ ಮಾಡುತ್ತಾರೆ. ಅದರಲ್ಲೂ ವಿಶೇಷವಾಗಿ ಹಬ್ಬದ ಊಟಕ್ಕೆ ಅವರು ಮಾಡುವ ಸಾಂಬಾರ್ ಬಾಯಿ ಚಪ್ಪರಿಸಿಕೊಂಡು ಸವಿಯುವಂತಿರಲಿದೆ. ಹಾಗಾದ್ರೆ ಈ ಕೇರಳ ಸಾಂಬಾರ್ ಪುಡಿ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕೇರಳ ಸಾಂಬಾರ್ ಪುಡಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಕೆಂಪು ಮೆಣಸಿನಕಾಯಿ
- ಧನಿಯಾ ಬೀಜಗಳು
- ಜೀರಿಗೆ
- ಮೆಣಸು
- ಅರಶಿಣ
- ಮೆಂತ್ಯ
- ತೊಗರಿ ಬೇಳೆ
- ಕಾಳು ಮೆಣಸು
ಕೇರಳ ಸಾಂಬಾರ್ ಪುಡಿ ಮಾಡುವುದು ಹೇಗೆ?
ಸಾಂಬಾರ್ ಪುಡಿ ಮಾಡಲು ಗುಂಟೂರು ಮೆಣಸಿನಕಾಯಿ ಅಥವಾ ಖಾರ ಇರುವಂತಹ ಮೆಣಸು ಬಳಸಿ, ಬ್ಯಾಡಗಿ ಮೆಣಸು ಅದ್ಭುತ ಬಣ್ಣ ಬರಲಿದೆ. ಮೊದಲಿಗೆ ಬಾಣಲೆಯಲ್ಲಿ ಒಣ ಮೆಣಸುಗಳನ್ನು ಮಧ್ಯಮ ಉರಿಯಲ್ಲಿ ಹುರಿದುಕೊಳ್ಳಿ. ಹುರಿಯುವಾಗ ಅರ್ಧ ಚಮಚ ಎಣ್ಣೆ ಹಾಕಿಕೊಳ್ಳಿ. ಚೆನ್ನಾಗಿ ಹುರಿದುಕೊಂಡ ಬಳಿಕ ಮೆಣಸನ್ನು ತೆಗೆದಿಟ್ಟುಕೊಳ್ಳಿ.
ಈಗ ಅದೇ ಬಾಣಲೆಗೆ ಜೀರಿಗೆ, ಕಾಳು ಮೆಣಸ, ತೊಗರಿ ಬೇಳೆ, ಧನಿಯಾ ಕಾಳುಗಳನ್ನು ಹಾಕಿಕೊಂಡು ಹುರಿದುಕೊಳ್ಳಬೇಕು. ಸಣ್ಣ ಉರಿಯಲ್ಲಿ ನಿಧಾನವಾಗಿ ಈ ಎಲ್ಲಾ ಅಂಶಗಳ ಹುರಿದುಕೊಳ್ಳಿ. ಇದರಿಂದ ಅರೋಮ ಬರುವಂತೆ ಆದಾಗ ಒಲೆ ಆಫ್ ಮಾಡಿಕೊಳ್ಳಿ. ಈಗ ಒಂದು ದೊಡ್ಡ ಮಿಕ್ಸಿ ಜಾರ್ ತೆಗೆದುಕೊಂಡು ಈ ಎಲ್ಲಾ ಹುರಿದುಕೊಂಡ ವಸ್ತುಗಳ ಹಾಕಿಕೊಳ್ಳಿ. ಹುರಿದ ಮೆಣಸು ಕೂಡ ಹಾಕಿ ಒಂದು ಸ್ಪೂನ್ ಅರಶಿಣ ಹಾಕಿಕೊಂಡು ರುಬ್ಬಿಕೊಳ್ಳಬೇಕು.
ಎಷ್ಟು ನುಣ್ಣಗೆ ರುಬ್ಬಿಕೊಳ್ಳಲು ಸಾಧ್ಯವೋ ಅಷ್ಟು ನುಣ್ಣಗೆ ರುಬ್ಬಿಕೊಳ್ಳಬಹುದು. ರುಬ್ಬಿಕೊಂಡ ಬಳಿಕ ಇದನ್ನು ಜರಡಿ ಹಿಡಿದು ಬರೀ ನುಣ್ಣಗೆ ಆಗಿರುವ ಮಸಾಲೆಯನ್ನು ತೆಗೆದು ಇಟ್ಟುಕೊಳ್ಳಿ. ಈ ಪುಡಿಯಿಂದ ಸಾಂಬಾರ್ ಮಾಡಿದರೆ ಘಮ ಘಮ ಎನ್ನುತ್ತದೆ. ಕೇವಲ ಒಂದರಿಂದ 2 ಸ್ಪೂನ್ ಸಾಂಬಾರ್ ಪುಡಿ ಬಳಸಿಕೊಂಡು ಕೇರಳ ಸ್ಟೈಲ್‌ನ ಸಾಂಬಾರ್ ಮಾಡಬಹುದು, ನೀವು ಕೂಡ ಈ ಹಬ್ಬದಲ್ಲಿ ಈ ರೀತಿ ಸಾಂಬಾರ್ ಪುಡಿಯಲ್ಲಿ ರುಚಿ ರುಚಿಯ ಸಾಂಬಾರ್ ಮಾಡಿ ನೋಡಿ.



Click it and Unblock the Notifications
