Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ರುಚಿ ರುಚಿಯ ಮೋತಿಚೂರ್ ಲಾಡು ಮಾಡುವುದು ಹೇಗೆ? ಸಿಂಪಲ್ ಸಿಹಿ ತಿಂಡಿ..!
ಯುಗಾದಿ ಹಬ್ಬಕ್ಕೆ ಹೋಳಿಗೆಯೇ ಸ್ಪೆಷಲ್ ಸಿಹಿ ತಿಂಡಿಯಾಗಿರುತ್ತೆ, ಆದ್ರೆ ಕೆಲವರು ಹೋಳಿಗೆಯ ಜೊತೆಗೆ ಮತ್ತಷ್ಟು ಸಿಹಿಗಾಗಿ ಬೇರೆ ಬೇರೆ ತಿಂಡಿಯನ್ನೂ ಮಾಡುತ್ತಾರೆ. ಅದರಲ್ಲಿ ಲಾಡು ಸಹ ಒಂದು. ಕೆಲವರು ಮಾರುಕಟ್ಟೆ, ಬೇಕರಿಯಲ್ಲಿ ಸಿಗುವ ಲಾಡನ್ನು ಖರೀದಿಸಿ ಮನೆಯಲ್ಲಿ ಹಂಚಿ ಸಂಭ್ರಮಿಸುತ್ತಾರೆ.
ಆದ್ರೆ ಬೇಕರಿಯಲ್ಲಿ ಸಿಗುವ ಲಾಡಿನಂತೆ ಮನೆಯಲ್ಲಿಯೇ ನಾವು ರುಚಿಕರ ಮೋತಿಚೂರ್ ಲಾಡು ಮಾಡಿ ಸವಿಯಬಹುದು. ಸವಿಯಲು ಮೃದು ಮತ್ತು ಅಷ್ಟೆ ರುಚಿಕರವಾಗಿರುತ್ತೆ. ಲಾಡಿನಲ್ಲಿ ಹತ್ತು ಹಲವು ವಿಧಗಳಿವೆ. ನಮಗೆ ಲಾಡು ಎಂದಾಕ್ಷಣ ಬೂಂದಿ ಲಾಡು ಮಾತ್ರವೇ ನೆನಪಿಗೆ ಬರುತ್ತದೆ. ಆದ್ರೆ ಇದರಲ್ಲಿ ರವೆ ಲಾಡು, ಬೇಸನ್ ಲಾಡು ಜನಪ್ರಿಯವಾಗಿವೆ, ಆದರೆ ಮೋತಿಚೂರ್ ಲಾಡು ಇದೆಲ್ಲದಕ್ಕಿಂತ ಹೆಚ್ಚು ರುಚಿ ಮತ್ತು ಮೃದುವಾಗಿರುತ್ತೆ.

ಈ ಯುಗಾದಿ ಮತ್ತು ರಾಮನವಮಿಯ ಸಮಯದಲ್ಲಿ ಈ ಮೋತಿಚೂರ್ ಲಾಡು ಮಾಡಿ ಸವಿಯಬಹುದು. ಹಾಗಾದ್ರೆ ನಾವಿಂದು ಮೋತಿಚೂರ್ ಲಾಡನ್ನು ಮನೆಯಲ್ಲಿಯೇ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮೋತಿಚೂರ್ ಲಾಡು ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನೋಡೋಣ.
ಮೋತಿಚೂರ್ ಲಾಡು ಮಾಡಲು ಬೇಕಾಗುವ ಪದಾರ್ಥಗಳು
- ಕಡಲೆ ಬೇಳೆ - 1 ಕಪ್
- ಸಕ್ಕರೆ - 1 ಕಪ್
- ತುಪ್ಪ - 2 tbs
- ಏಲಕ್ಕಿ ಪುಡಿ- 1/2 ಟೀಸ್ಪೂನ್
- ಕೇಸರಿ ಬಣ್ಣ
- ಲವಂಗ-5
- ಗೋಡಂಬಿ - 10
- ಒಣ ದ್ರಾಕ್ಷಿ -
- ಅಡುಗೆ ಎಣ್ಣೆ
ಮೋತಿಚೂರ್ ಲಾಡು ಮಾಡುವ ವಿಧಾನ
ಮೊದಲು ಕಡಲೆ ಬೇಳೆಯನ್ನು ಒಂದು ಪಾತ್ರೆಗೆ ಹಾಕಿ ನೆನೆಸಿಟ್ಟುಕೊಳ್ಳಬೇಕು. ಸುಮಾರು 2 ಗಂಟೆ ನೆನೆಸಿಡಬೇಕು. ಬಳಿಕ ಈ ಬೇಳೆಯನ್ನು ಮಿಕ್ಸಿ ಜಾರ್ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. ಬಳಿಕ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಅದನ್ನು ಕಾಯಲು ಬಿಡಿ ಎಣ್ಣೆ ಕಾದ ಬಳಿಕ ಈ ರುಬ್ಬಿಕೊಂಡ ಬೇಳೆಯನ್ನು ಸಣ್ಣ ಸಣ್ಣ ಉಂಡೆಗಳಾಗಿ ಎಣ್ಣೆಯಲ್ಲಿ ಬಿಡಬೇಕು.
ಮಧ್ಯಮ ಉರಿಯಲ್ಲಿ ಬೇಳೆಯ ಉಂಡೆ ಕಾಯಲು ಬಿಡಿ. ಬಳಿಕ ಎಣ್ಣೆಯಿಂದ ಎತ್ತಿಕೊಂಡು ತಣ್ಣಗಾಗಲು ಇಡಿ. ಬಳಿಕ ಮತ್ತೊಂದು ಪಾತ್ರೆಗೆ ಸಕ್ಕೆರೆ ಹಾಕಿಕೊಂಡು ಅರ್ಧದಷ್ಟ ನೀರು ಹಾಕಿ ಸಕ್ಕರೆ ಪಾಕ ಮಾಡಲು ಬಿಡಿ. ಸಣ್ಣ ಉರಿಯಲ್ಲಿ ಸಕ್ಕರೆ ಮಾಕ ಮಾಡಿಕೊಳ್ಳಿ. ಮತ್ತೊಂದು ಕಡೆ ಮಿಕ್ಸಿ ಜಾರ್ಗೆ ನೀವು ಹುರಿದುಕೊಂಡಿರುವ ಬೇಳೆಯನ್ನು ಹಾಕಿ ರುಬ್ಬಿಕೊಳ್ಳಿ.
ಈಗ ಈ ರುಬ್ಬಿ ಹಿಟ್ಟಿನಂತೆ ಮಾಡಿಕೊಂಡ ಬೇಳೆಯ ಉಂಡೆಯನ್ನು ಕುದಿಯುತ್ತಿರುವ ಪಾಕಕ್ಕೆ ಹಾಕಿ. ಇದಕ್ಕೆ ಕೇಸರಿ ಬಣ್ಣ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸುಮಾರು 3 ರಿಂದ 5 ನಿಮಿಷ ಮಿಶ್ರಣ ಮಾಡಿ. ಇದಕ್ಕೆ ಏಲಕ್ಕಿ ಪುಡಿ, ಲವಂಗ ಬೇಕಾದರೆ ಹಾಕಿಕೊಳ್ಳಿ. ಇದು ಫ್ರೈ ಆದ ಬಳಿಕ ಇಳಿಸಿಕೊಳ್ಳಿ.
ಇನ್ನೊಂದೆಡೆ ಡ್ರೈ ಫ್ರೂಟ್ಸ್ ಹುರಿದುಕೊಳ್ಳಿ, ಇದನ್ನು ಎಣ್ಣೆ ಅಥವಾ ತುಪ್ಪದಲ್ಲಿ ಹುರಿದುಕೊಳ್ಳಿ. ಈ ಫ್ರೈ ಮಾಡಿದ ವಸ್ತುಗಳನ್ನು ಲಾಡಿನ ಹಿಟ್ಟಿಗೆ ಹಾಕಿಕೊಂಡು ಮಿಕ್ಸ್ ಮಾಡಿ. ಬಳಿಕ ಕೈಗೆ ಎಣ್ಣೆ ಹಚ್ಚಿಕೊಂಡು ಲಾಡುಕಟ್ಟಲು ಮುಂದಾಗಿ. ನಿಮಗೆ ಯಾವ ಗಾತ್ರಕ್ಕೆ ಲಾಡು ಬೇಕೋ ಅಷ್ಟು ಗಾತ್ರಕ್ಕೆ ಲಾಡು ಕಟ್ಟಿಕೊಳ್ಳಿ.
ಲಾಡು ತಣ್ಣಗಾದ ಬಳಿಕ ಸವಿಯಲು ನೀಡಿ. ಇದು ತಿನ್ನಲು ಮೃದು ಮತ್ತು ರುಚಿಕರವಾಗಿರುತ್ತೆ. ಇದನ್ನು ದೇವರ ನೈವೇದ್ಯಕ್ಕೂ ಸಹ ಬಳಸಬಹುದು. ಲಾಡು ಮಾಡುವಾಗ ಸಕ್ಕರೆ ಪಾಕ ಮಾಡಲು ಸರಿಯಾದ ಅಳತೆಯಲ್ಲಿ ಸಕ್ಕರೆ ಹಾಗೂ ನೀರು ಹಾಕಿಕೊಳ್ಳಿ. ಯಾವ ಕಪ್ನಲ್ಲಿ ಸಕ್ಕರೆ ಹಾಕಿದ್ದೀರೋ ಅದೇ ಕಪ್ನ ಅರ್ಧದಷ್ಟು ನೀರು ಬಳಸಿ.



Click it and Unblock the Notifications
