Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಉತ್ತರ ಕರ್ನಾಟಕ ಶೈಲಿಯ ಎಣ್ಣೆಗಾಯಿ ಪಲ್ಯ ಮಾಡೋದು ಹೇಗೆ?
ನಾವು ತಿಂಡಿಯಲ್ಲಿ ಹಲವು ರೀತಿಯ ವಿಧವನ್ನು ನೋಡುತ್ತಿರುತ್ತೇವೆ. ಆದ್ರೆ ಊಟದ ವಿಚಾರದಲ್ಲಿ ಬಹಳಷ್ಟು ವಿಧವನ್ನು ನಾವು ನೋಡುವುದಿಲ್ಲ. ತಿಂಡಿಯಲ್ಲಿ ನೂರಾರು ವಿಧಗಳು, ಬಗೆ ಬಗೆಯ ಖಾದ್ಯಗಳು ಬಾಯಲ್ಲಿ ನೀರು ತರಿಸುತ್ತವೆ. ತಿಂಡಿಯಲ್ಲಿ ಉತ್ತರ ಕರ್ನಾಟಕ ಶೈಲಿಯ ಖಾದ್ಯಗಳಂತು ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿ ಹೆಚ್ಚಾಗಿ ರೊಟ್ಟಿಗಳು.
ರೊಟ್ಟಿ ಉತ್ತರ ಕರ್ನಾಟಕ ಭಾಗದ ನಿತ್ಯದ ತಿಂಡಿ. ಅವರು ಜೋಳ, ರಾಗಿ, ಅಕ್ಕಿ ಹಿಟ್ಟಿನಿಂದ ಬಹಳ ಅದ್ಭುತ ರುಚಿಯ ರೊಟ್ಟಿ ಮಾಡುತ್ತಾರೆ. ಸಾಮಾನ್ಯವಾಗಿ ಈ ರೊಟ್ಟಿಗಳನ್ನು ಒಮ್ಮೆ ಸವಿದರೆ ಮತ್ತೆ ಮತ್ತೆ ಸವಿಯಬೇಕು ಎನ್ನುವಂತಹ ರುಚಿ ನೀಡುತ್ತವೆ. ಅದರಲ್ಲೂ ಅಕ್ಕಿ ರೊಟ್ಟಿ ಎಣ್ಣೆಗಾಯಿ ಪಲ್ಯ ಅದ್ಭುತ ರುಚಿ ನೀಡುವ ಖಾದ್ಯ.

ಈ ಎರಡರ ಕಾಂಬಿನೇಷನ್‌ನಲ್ಲಿ ಬೆಳಗ್ಗಿನ ಖಾದ್ಯ ಸವಿಯೋಕೆ ಸಖತ್ ರುಚಿ ನೀಡುತ್ತದೆ. ಹೀಗಾಗಿ ಅಕ್ಕಿ ರೊಟ್ಟಿ ಮಾಡಿದರೆ ಅದಕ್ಕೆ ಎಣ್ಣೆಗಾಯಿ ಪಲ್ಯ ಕಡ್ಡಾಯ. ಅಕ್ಕಿ ರೊಟ್ಟಿ ಆರೋಗ್ಯದ ದೃಷ್ಟಿಯಲ್ಲು ಬಹಳ ಒಳ್ಳೆಯದು. ಇದರಲ್ಲಿ ಕಡಿಮೆ ಎಣ್ಣೆ ಬಳಸಲಾಗುತ್ತದೆ. ಹೆಚ್ಚಿನ ಫೈಬರ್ ಸಹ ಇರುವ ಕಾರಣ ಜೀರ್ಣಕ್ರಿಯೆಗೆ ಉತ್ತಮ.
ಹಾಗಾದ್ರೆ ನಾವಿಂದು ಉತ್ತರ ಕರ್ನಾಟಕ ಶೈಲಿಯ ಎಣ್ಣೆಗಾಯಿ ಪಲ್ಯ ಮಾಡುವ ಕುರಿತು ತಿಳಿದುಕೊಳ್ಳೋಣ. ಅಕ್ಕಿ ರೊಟ್ಟಿ ಜೊತೆ ಸವಿಯುವ ಎಣ್ಣೆಗಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳೇನು? ಮಾಡುವ ವಿಧಾನವೇನು? ಮಾಡಲು ಎಷ್ಟು ಸಮಯ ಬೇಕು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಎಣ್ಣೆಗಾಯಿ ಪಲ್ಯ ಮಾಡಲು ಬೇಕಾಗುವ ಪದಾರ್ಥಗಳು
- ಬದನೆಕಾಯಿ
- ಜೀರಿಗೆ
- ಸಾಸಿವೆ
- ಎಣ್ಣೆ
- ಹುಚ್ಚೆಳ್ಳು
- ಕಡಲೆ ಬೀಜ
- ಈರುಳ್ಳಿ
- ಇಂಗು
- ಅರಶಿನ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಬೆಳ್ಳುಳ್ಳಿ
- ಒಣ ಕೊಬ್ಬರಿ
ಎಣ್ಣೆಗಾಯಿ ಪಲ್ಯ ಮಾಡುವ ವಿಧಾನವೇನು?
ಮೊದಲು ಇದಕ್ಕೆ ಮಸಾಲೆ ಮಾಡಿಕೊಳ್ಳಲು ತಯಾರಿ ಮಾಡೋಣ. ಮೊದಲು ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಕಡಲೆ ಬೀಜ ಹಾಕಿ ಹುರಿದುಕೊಳ್ಳಿ. ಎಣ್ಣೆ ಹಾಕದೆ ಹಾಗೆ ಹುರಿದುಕೊಳ್ಳಿ. ಬಳಿಕ 2 ಚಮಚ ಗೊರೆಳ್ಳು ಅಥವಾ ಹುಚ್ಚೆಳ್ಳು ಹಾಕಿ ಹುರಿದು ತೆಗೆದಿಟ್ಟುಕೊಳ್ಳಿ. ಈಗ ಒಂದು ಸ್ಪೂನ್ ಎಣ್ಣೆ ಹಾಕಿ ಜೀರಿಗೆ, ಬೆಳ್ಳುಳ್ಳಿ, ಕರಿಬೇವು, ಕೊತ್ತಂಬರಿ ಸೊಪ್ಪು, ಹಸಿ ಮೆಣಸು ಹಾಕಿ ಫ್ರೈ ಮಾಡಿಕೊಳ್ಳಿ.
ಈಗ ಫ್ರೈ ಮಾಡಿದ ವಸ್ತುಗಳನ್ನು ತಣ್ಣಗಾಗಲು ಬದಿಗೆ ಇಡಿ. ಈಗ ಮೊದಲು ಹುರಿದುಕೊಂಡಿರುವ ಕಡಲೆ ಬೀಜ, ಹುಚ್ಚೆಳ್ಳು ಹಾಕಿಕೊಂಡು ರುಬ್ಬಿಕೊಳ್ಳಿ. ನೀರು ಹಾಕದೆ ರುಬ್ಬಬೇಕು. ರುಬ್ಬಿಕೊಂಡ ಬಳಿಕ ಈಗ ಫ್ರೈ ಮಾಡಿಕೊಂಡಿದ್ದ ಬೆಳ್ಳುಳ್ಳಿ, ಜೀರಿಗೆ ಸೇರಿ ಎಲ್ಲಾ ವಸ್ತುಗಳನ್ನು ಸಹ ಇದಕ್ಕೆ ಹಾಕಿ ಮತ್ತೆ ರುಬ್ಬಿಕೊಳ್ಳಿ.
ಹೀಗೆ ರುಬ್ಬಿಕೊಳ್ಳುವಾಗ ಸ್ವಲ್ಪ ಒಣ ಕೊಬ್ಬರಿಯನ್ನು ಸಹ ಹಾಕಿಕೊಂಡು ರುಬ್ಬಿಕೊಳ್ಳಿ. ಈಗ ಬೇಕಾದರೆ ಸ್ವಲ್ಪ ನೀರು ಹಾಕಿಕೊಂಡು ತರಿ ತರಿಯಾಗಿ ರುಬ್ಬಿಕೊಳ್ಳಬೇಕು.
ಈಗ ಒಲೆ ಮೇಲೆ ಇರುವ ಪಾತ್ರೆಗೆ 4 ಸ್ಪೂನ್ ಎಣ್ಣೆ ಹಾಕಿಕೊಂಡು ಅದಕ್ಕೆ ಇಂಗು, ಸಾಸಿವೆ, ಜೀರಿಗೆ, ಒಣ ಮೆಣಸು, ಕರಿಬೇವು ಹಾಕಿಕೊಂಡು ಫ್ರೈ ಮಾಡಿ. 1 ನಿಮಿಷದ ಬಳಿಕ ಇದಕ್ಕೆ ಈರುಳ್ಳಿ ಹಾಕಿ 3 ನಿಮಿಷ ಫ್ರೈ ಮಾಡಿ. ನಂತರ ಕತ್ತರಿಸಿ ಇಟ್ಟುಕೊಂಡಿರುವ ಬದನೆಕಾಯಿಯನ್ನು ಹಾಕಿ, ನೀವು ಉದ್ದವಾಗಿ ಹೆಚ್ಚಿಕೊಳ್ಳಬಹುದು.
ಬಳಿಕ ಇದಕ್ಕೆ ಅರ್ಧ ಚಮಚ ಅರಶಿನ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿ ಬದನೆಕಾಯಿ ಬೇಯಲು ಬಿಡಬೇಕು. ಚೆನ್ನಾಗಿ ಬೇಯಲು ಮುಚ್ಚಳ ಮುಚ್ಚಿ ಹಾಗೆ ಬಿಡಿ. 10 ನಿಮಿಷ ಬೇಯಿಸಿಕೊಂಡ ಬಳಿಕ ಮುಚ್ಚಳ ತೆಗೆದು ಚೆನ್ನಾಗಿ ತಿರುಗಿಸಿಕೊಳ್ಳಿ. ಇಗ ಇದಕ್ಕೆ ಹುಣಸೆ ಹುಳಿ, ಹಾಗೂ ರುಬ್ಬಿಕೊಂಡಿರುವ ಮಸಾಲೆಯನ್ನು ಸೇರಿಸಿ ಚೆನ್ನಾಗಿ ತಿರುಗಿಸಿ.
ಸಣ್ಣ ಉರಿಯಲ್ಲಿ 8 ನಿಮಿಷ ಬೇಯಿಸಿಕೊಳ್ಳಿ. ಈಗ ಮೊದಲು ಹುರಿದುಕೊಂಡಿದ್ದ ಹುಚ್ಚೆಳ್ಳಿ, ಕಡಲೇಬೀಜದ ಪುಡಿಯನ್ನು ಹಾಕಿಕೊಂಡು ತಿರುಗಿಸಿಕೊಳ್ಳಿ. ಹಾಗೆ 10 ನಿಮಿಷ ಬಿಡಿ. ಆಗಾಗ ತಿರುಗಿಸುತ್ತಾ ಇರಿ. ಇಷ್ಟಾದರೆ ನಿಮ್ಮ ಮುಂದೆ ಎಣ್ಣೆಗಾಯಿ ಪಲ್ಯ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಇದನ್ನು ಒಮ್ಮೆ ಟ್ರೈ ಮಾಡಿ ನೋಡಿ.



Click it and Unblock the Notifications
