Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಗೋಧಿ ರವೆ ಉಪ್ಪಿಟ್ಟು ಹುಡಿ ಹುಡಿಯಾಗಲು ಹೀಗೆ ಮಾಡಿ..! ಇಲ್ಲಿದೆ ಸುಲಭದ ರೆಸಿಪಿ
ನೀವು ಬೆಳಗ್ಗೆ ತಿಂಡಿಗೆ ಉಪ್ಪಿಟ್ಟು ಮಾಡಿ ಸವಿಯುವುದು ಕಾಮನ್. ಆದ್ರೆ ಕೆಲವರಿಗೆ ಉಪ್ಪಿಟ್ಟು ರುಚಿ ಹಿಡಿಸುವುದಿಲ್ಲ. ಅವರು ಉಪ್ಪಿಟ್ಟು ಅಂದರೆ ಮೂಗು ಮುರಿಯುತ್ತಾರೆ. ನೀವು ಉಪ್ಪಿಟ್ಟಿನಲ್ಲಿ ಎಷ್ಟೇ ರುಚಿಯಾಗಿ ತಿಂಡಿ ಮಾಡಿದರೂ ಕೂಡ ಅವರಿಗೆ ಇಷ್ಟವಾಗದೆ ಇರಬಹುದು. ಉಪ್ಪಿಟ್ಟಿನಲ್ಲೂ ಹಲವು ಬಗೆ ಇರುವುದು ನೋಡಬಹುದು, ರವೆ ಉಪ್ಪಿಟ್ಟು, ಮಸಾಲೆ ಉಪ್ಪಿಟ್ಟು, ತರಕಾರಿಗಳ ಹಾಕಿ ಮಾಡುವಂತಹ ರುಚಿ ರುಚಿಯ ಉಪ್ಪಿಟ್ಟು ನೀವು ಸಹ ಸವಿದಿರಬಹುದು.
ಇನ್ನು ಸುಲಭವಾಗಿ ಮಾಡಬಹುದಾದ ಹಲವು ರೀತಿಯ ಉಪ್ಪಿಟ್ಟುಗಳು ಕೂಡ ಇವೆ. ಅದರಲ್ಲಿ ನಾವಿಂದು ಸುಲಭವಾಗಿ ಗೋಧಿ ರವೆಯ ಉಪ್ಪಿಟ್ಟು ಮಾಡುವ ಕುರಿತು ತಿಳಿದುಕೊಳ್ಳೋಣ. ಗೋಧಿ ರವೆಯ ಈ ಉಪ್ಪಿಟ್ಟು ಹುಡಿ ಹುಡಿಯಾಗಿ ಅದ್ಭುತ ರುಚಿ ನೀಡಲಿದೆ, ನೀವು ಕೂಡ ಈ ಉಪ್ಪಿಟ್ಟು ಮಾಡಿದರೆ ಎಲ್ಲರಿಗೂ ಖಂಡಿತ ಇಷ್ಟವಾಗುತ್ತೆ, ನಾವಿಂದು ಈ ಉಪ್ಪಿಟ್ಟು ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.

ಗೋಧಿ ರವೆ ಉಪ್ಪಿಟ್ಟು ಮಾಡುವಾಗ ಸಾಮಾನ್ಯವಾಗಿ ನೀರಿನ ಅಳತೆ ಸರಿಯಾಗಿರಬೇಕು. ಇಲ್ಲದಿದ್ದರೆ ಉಪ್ಪಿಟ್ಟು ಹದ ತಪ್ಪಿ ಸರಿಯಾಗಿ ಬರುವುದಿಲ್ಲ. ಹೀಗಾಗಿ ನಾವಿಂದು ಗೋಧಿ ರವೆಯಿಂದ ಅದ್ಭುತ ರುಚಿಯ ಈ ಉಪ್ಪಿಟ್ಟು ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ಗೋಧಿ ರವೆ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಧಿ ರವೆ ಉಪ್ಪಿಟ್ಟು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಗೋಧಿ ರವೆ 2 ಕಪ್
- ಈರುಳ್ಳಿ 2
- ಟೊಮೆಟೊ 3
- ಹಸಿಮೆಣಸಿನಕಾಯಿ 5
- ಕರಿಬೇವು
- ಶುಂಠಿ
- ಕೊತ್ತಂಬರಿ ಸೊಪ್ಪು
- ತೆಂಗಿನಕಾಯಿ ತುರಿ
- ಜೀರಿಗೆ
- ಸಾಸಿವೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ರುಚಿಗೆ ತಕ್ಕಷ್ಟು ಉಪ್ಪು
- ಎಣ್ಣೆ
ಗೋಧಿ ರವೆ ಉಪ್ಪಿಟ್ಟು ಮಾಡುವ ವಿಧಾನವೇನು?
ಗೋಧಿ ನುಚ್ಚು ಮಿಕ್ಸಿಗೆ ಹಾಕಿಕೊಂಡು ಪುಡಿ ಮಾಡಿಕೊಂಡು ಗೋಧಿ ರವೆ ಮಾಡಿಕೊಳ್ಳಬಹುದು. ಅಥವಾ ಗೋಧಿ ರವೆ ಅಂಗಡಿಯಲ್ಲೂ ಕೂಡ ಸಿಗುತ್ತದೆ. ಈಗ ಮಾಡುವುದು ಹೇಗೆ ಅನ್ನೋದನ್ನು ನೋಡಿ. ಮೊದಲಿಗೆ ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿಕೊಂಡು ಬಳಿಕ ಸಾಸಿವೆ, ಜೀರಿಗೆ, ಕಡಲೆ ಬೇಳೆ, ಉದ್ದಿನ ಬೇಳೆ ಹಾಕಿಕೊಳ್ಳಿ.
ನಂತರ ಇದಕ್ಕೆ ಶುಂಠಿ ಹಾಗೂ ಕರಿಬೇವು ಹಾಕಿಕೊಂಡು ಕೆಲ ಸಮಯ ಹುರಿದು ಮತ್ತೆ ಅದಕ್ಕೆ ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಬೇಕು. ಈರುಳ್ಳಿಯನ್ನು 3 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಟೊಮೆಟೋವನ್ನು ಚೆನ್ನಾಗಿ ಹೆಚ್ಚಿಕೊಂಡು ಇದಕ್ಕೆ ಹಾಕಿಕೊಳ್ಳಿ. ಈಗ ಅಳತೆ ಪ್ರಕಾರವಾಗಿ ಬಿಸಿ ನೀರು ಹಾಕಿಕೊಳ್ಳಬೇಕು. 2 ಕಪ್ ರವೆಗೆ 5 ಕಪ್ ನೀರು ಹಾಕಿಕೊಂಡು ಮಿಕ್ಸ್ ಮಾಡಿ ಕುದಿಯಲು ಬಿಡಿ.
ಈಗ ರುಚಿಗೆ ತಕ್ಕಷ್ಟು ಉಪ್ಪು ಹಾಕಿಕೊಂಡು ಕುದಿಬರಲು ಬಿಡಬೇಕು. ಅನಂತರ ನೀರು ಕುದಿ ಬರುವಾಗ ಗೋಧಿ ರವೆಯನ್ನು ಹಾಕಿಕೊಳ್ಳಬೇಕು. ಈ ರವೆಯನ್ನು ಎಣ್ಣೆಯಲ್ಲಿ ಹುರಿದಿಟ್ಟುಕೊಂಡಿರಬೇಕು. ಈಗ ಸಣ್ಣ ಉರಿಯಲ್ಲಿ ತಟ್ಟೆ ಮುಚ್ಚಿ ಬೇಯಲು ಬಿಡಿ. ಹಾಗೆ ಬೇಯುವಾಗ ಕೊತ್ತಂಬರಿ ಸೊಪ್ಪು, ಕಾಯಿ ತುರಿ, ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಸ್ವಲ್ಪ ನೀರಾಗಿದ್ದರೆ ಮತ್ತೆ 2ರಿಂದ 3 ನಿಮಿಷ ಒಲೆಯಲ್ಲಿ ಇಟ್ಟುಕೊಳ್ಳಿ. ಹಾಗೆ ನೀರು ಒಳಗಿ ಗಟ್ಟಿಯಾದಾಗ ಒಲೆ ಆಫ್ ಮಾಡಿಕೊಂಡರೆ ನಿಮ್ಮ ಮುಂದೆ ಈ ರುಚಿ ರುಚಿಯ ಗೋಧಿ ರವೆ ಉಪ್ಪಿಟ್ಟು ರೆಡಿಯಾಗುತ್ತದೆ. ನೀವು ಕೂಡ ಈ ಗೋಧಿ ರವೆ ಉಪ್ಪಿಟ್ಟು ಮಾಡಿ ಸವಿದು ನೋಡಿ.



Click it and Unblock the Notifications
