Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬೆಳಗ್ಗೆ ತಿಂಡಿಗೆ ಅದ್ಭುತ ರುಚಿಯ ಈ ಗೋಧಿ ಪಡ್ಡು ಮಾಡಿ..! ಮಕ್ಕಳು ಕೂಡ ಮನಸೋಲುತ್ತಾರೆ!!
ಬೆಳಗ್ಗೆ ತಿಂಡಿಗೆ ನೀವು ಎಷ್ಟೋ ಬಗೆಯ ತಿಂಡಿಗಳನ್ನು ಮಾಡಿರುತ್ತೀರಿ. ಗೋಧಿ ಹಿಟ್ಟಿನಿಂದ ಹಲವು ರೀತಿಯ ತಿಂಡಿಗಳು ಎಲ್ಲರಿಗೂ ಇಷ್ಟವಾಗುತ್ತೆ. ಅದಲ್ಲೂ ಗೋಧಿ ಹಿಟ್ಟಿನ ಚಪಾತಿಯಿಂದ ಹಿಡಿದು ಒಂದಿಷ್ಟು ರುಚಿಕರ ಖಾದ್ಯಗಳ ಮಾಡುತ್ತಿರುತ್ತೇವೆ. ಇದರಲ್ಲಿ ಗೋಧಿ ಹಿಟ್ಟನ್ನು ಬಳಸಿ ದೋಸೆ ಮಾಡುವುದು ಕೂಡ ಒಂದು. ಹಾಗೆ ನಾವಿಂದು ಗೋಧಿಯಿಂದ ಹೊಸ ರುಚಿಯ ಖಾದ್ಯ ಮಾಡುವ ಕುರಿತು ತಿಳಿಯೋಣ.
ನಾವು ಗೋಧಿ ಹಿಟ್ಟಿನಿಂದ ಪಡ್ಡು ಮಾಡುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ನೀವು ಉದ್ದು ಹಾಗೂ ಅಕ್ಕಿ ಹಿಟ್ಟು ಬಳಸಿ ಮಾಡುವಂತಹ ಪಡ್ಡು ಸವಿದಿರುತ್ತೇವೆ. ಆದರೆ ನಾವಿಂದು ಗೋಧಿ ಹಿಟ್ಟಿನಿಂದ ಮಾಡುವ ಪಡ್ಡು ಕುರಿತು ತಿಳಿಯೋಣ. ಈ ಗೋಧಿ ಹಿಟ್ಟಿನ ಪಡ್ಡು ಬಹಳಷ್ಟು ರುಚಿ ಹಾಗೆ ಆರೋಗ್ಯಕರ ತಿಂಡಿಯಲ್ಲಿ ಒಂದಾಗಿದೆ.

ಗೋಧಿ ಹಿಟ್ಟಿನ ಪಡ್ಡು ಕಡಿಮೆ ಸಮಯದಲ್ಲಿ ಅದ್ಭುತ ರುಚಿಯಲ್ಲಿ ಮಾಡಬಹುದು. ಹಾಗಾದ್ರೆ ನಾವಿಂದು ಈ ಗೋಧಿ ಹಿಟ್ಟಿನಿಂದ ಪಡ್ಡು ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಗೋಧಿ ಪಡ್ಡು ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ಗೋಧಿ ಹಿಟ್ಟು - 2 ಕಪ್
- ಈರುಳ್ಳಿ - 2
- ಶುಂಠಿ
- ಸೋಡಾ
- ಮೊಸರು
- ರವೆ
- ಉಪ್ಪು
- ಎಣ್ಣೆ
- ಕೊತ್ತಂಬರಿ ಸೊಪ್ಪು
- ಕರಿಬೇವು
ಗೋಧಿ ಪಡ್ಡು ಮಾಡುವ ವಿಧಾನ ಏನು?
ಮೊದಲು ಒಂದು ಬೌಲ್ ತೆಗೆದುಕೊಂಡು ಅದಕ್ಕೆ 2 ಕಪ್ ಗೋಧಿ ಹಿಟ್ಟು ಹಾಕಿಕೊಳ್ಳಿ. ಇದಕ್ಕೆ ಅರ್ಧ ಕಪ್ ಮೊಸರು, ಕಾಲು ಕಪ್ ರವೆ, ಉಪ್ಪು 1 ಕಪ್ ನೀರು ಹಾಕಿಕೊಂಡು ಗಂಟುಗಳು ಇಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈ ಹಿಟ್ಟಿಗೆ ನಂತರ ಸೋಡಾ ಸಹ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ನಂತರ ಈ ಹಿಟ್ಟಿಗೆ ಮುಚ್ಚಳ ಮುಚ್ಚಿ 15 ನಿಮಿಷ ನೆನೆಯಲು ಬಿಡಬೇಕು.
15 ನಿಮಿಷದ ಬಳಿಕ ಮತ್ತೆ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಇದಕ್ಕೆ ತುರಿದುಕೊಂಡಿದ್ದ ಸಣ್ಣದಾಗಿ ಕತ್ತರಿಸಿಕೊಂಡಿರುವ ಈರುಳ್ಳಿ, ಕ್ಯಾರೆಟ್, ಶುಂಠಿ, ಕರಿಬೇವು, ಕೊತ್ತಂಬರಿ ಸೊಪ್ಪು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಪಡ್ಡು ಸ್ವಲ್ಪ ಗಟ್ಟಿಯಾಗಿರಬೇಕು. ಅನಂತರ ಇದಕ್ಕೆ ಬೇಕಾದರೆ ನೀರು ಹಾಕಿ ಮಿಕ್ಸ್ ಮಾಡಿಕೊಂಡು ಹದ ಮಾಡಿಕೊಳ್ಳಿ.
ಈಗ ಪಡ್ಡು ಮಾಡುವ ಕಾವಲಿಯನ್ನು ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಚ್ಚಿಕೊಂಡು ಇದು ಬಿಸಿಯಾದ ಬಳಿಕ ಹಿಟ್ಟನ್ನು ಮುಕ್ಕಾಲು ಭಾಗದಷ್ಟು ಹಾಕಿಕೊಳ್ಳಬೇಕು. ಅನಂತರ ಮುಚ್ಚಳ ಮುಚ್ಚಿ ಹಾಗೆ ಬಿಡಿ. 2 ನಿಮಿಷದ ಬಳಿಕ ಇದನ್ನು ತಿರುವಿ ಹಾಕಿಕೊಂಡು ಮತ್ತೆ ಕರಿದುಕೊಳ್ಳಿ. ಎಲ್ಲವನ್ನು ಇದೇ ರೀತಿ ಮಾಡಿಕೊಳ್ಳಿ. ಅಕ್ಕಿ ಹಿಟ್ಟಿನ ಪಡ್ಡಿಗಿಂತ ಇದು ಮತ್ತಷ್ಟು ರುಚಿಕರವಾಗಿರುತ್ತೆ. ಮಕ್ಕಳಿಗಂತು ಇದು ಅದ್ಬುತ ರುಚಿ ನೀಡುತ್ತದೆ.



Click it and Unblock the Notifications
