Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
Food: ಅದ್ಭುತ ರುಚಿಯ ಗೋಧಿ ಬರ್ಫಿ ಮಾಡಿದ್ರೆ ನಿಮಿಷದಲ್ಲಿ ಖಾಲಿಯಾಗುತ್ತೆ..! ಮಾಡೋಕೆ 3 ವಸ್ತು ಸಾಕು!
ಮನೆಯಲ್ಲಿ ಸ್ವೀಟ್ ಮಾಡಿ ಸವಿಯುವುದು ಅಂದ್ರೆ ಎಲ್ಲರಿಗೂ ಇಷ್ಟವಾಗುತ್ತೆ. ಅದರಲ್ಲೂ ಬೇಕರಿಯಲ್ಲಿ ಸಿಗುವ ಸ್ವೀಟ್ ಅನ್ನು ಮನೆಯಲ್ಲೇ ಮಾಡಿ ಸವಿಯುವುದು ಮತ್ತೂ ವಿಶೇಷ. ನೀವು ಕೂಡ ಮನೆಯಲ್ಲಿ ಹಲವು ಸ್ವೀಟ್ ಮಾಡಿ ಸವಿದಿರುತ್ತೀರಿ. ಕಡಿಮೆ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಮಾಡಿ ಸವಿಯುವ ಹಲವು ಸ್ವೀಟ್ ಸವಿದಿರುತ್ತೇವೆ.
ಇನ್ನು ಸ್ವೀಟ್ ಅಂದರೆ ಮನೆಯಲ್ಲಿ ಎಲ್ಲರಿಗೂ ಇಷ್ಟವಾಗುತ್ತೆ. ಇನ್ನು ನಾವಿಂದು ಸುಲಭವಾಗಿ ಮಾಡುವಂತಹ ಗೋಧಿ ಹಿಟ್ಟಿನ ಬರ್ಫಿ ಮಾಡುವ ಕುರಿತು ತಿಳಿದುಕೊಳ್ಳೋಣ. ಗೋಧಿ ಹಿಟ್ಟಿನಲ್ಲಿ ಹಲವು ರೀತಿಯ ಸ್ವೀಟ್ ಮಾಡಿ ಸವಿಯಬಹುದು. ಹಾಗೆ ನಾವಿಂದು ಈ ಸಿಹಿಯಾದ ಬರ್ಫಿ ಮಾಡಿ ಸವಿಯುವ ಕುರಿತು ತಿಳಿಯೋಣ. ಸಾಮಾನ್ಯವಾಗಿ ಬರ್ಫಿಗಳು ಅಂದರೆ ಅದನ್ನು ತಯಾರಿಸಲು ಬಹಳಷ್ಟು ವಸ್ತುಗಳ ಬಳಸಬೇಕಾಗುತ್ತದೆ ಎಂಬ ಅಭಿಪ್ರಾಯವಿದೆ. ಆದ್ರೆ ಇಲ್ಲಿ ಕೇವಲ 3 ವಸ್ತುಗಳ ಬಳಸಿ ಇಂದು ಈ ಬರ್ಫಿ ಮಾಡಲಾಗುತ್ತಿದೆ.

ನೀವು ಬೇಕರಿಗಳಲ್ಲಿ ಹಲವು ಬಗೆಯ ಹಲವು ರುಚಿಯ ಬರ್ಫಿಯನ್ನು ಸವಿದಿರುತ್ತೀರಿ. ಆದ್ರೆ ನಾವಿಂದು ಸುಲಭವಾಗಿ ಮನೆಯಲ್ಲಿ ಮಾಡಿ ಸವಿಯಬಹುದಾದ ಗೋಧಿ ಬರ್ಫಿ ಮಾಡುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ಈ ಗೋದಿ ಬರ್ಫಿ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಗೋಧಿ ಹಿಟ್ಟಿನ ಬರ್ಫಿ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಗೋಧಿ ಹಿಟ್ಟು- 1 ಕಪ್
- ತುಪ್ಪ - 1 ಕಪ್
- ಬೆಲ್ಲ - 1 ಕಪ್
- ಏಲಕ್ಕಿ ಪುಡಿ
ಗೋಧಿ ಹಿಟ್ಟಿನ ಬರ್ಫಿ ಮಾಡುವುದು ಹೇಗೆ?
ಮೊದಲು ಒಂದು ಅಳತೆ ಕಪ್ ತೆಗೆದುಕೊಂಡು ಅದರಲ್ಲಿ ಒಂದು ಕಪ್ ಜರಡಿ ಹಿಡಿದಿರುವ ಗೋಧಿ ಹಿಟ್ಟು ತೆಗೆದಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಅಳತೆ ಕಪ್ನಲ್ಲಿ ಅರ್ಧ ಕಪ್ನಷ್ಟು ತುಪ್ಪವನ್ನು ಹಾಕಿ. ನಂತರ ಜರಡಿ ಹಿಡಿದು ಇಟ್ಟಿದ್ದ 1 ಕಪ್ ಗೋಧಿ ಹಿಟ್ಟನ್ನು ಕೂಡ ಇದಕ್ಕೆ ಹಾಕಿಕೊಂಡು ಚೆನ್ನಾಗಿ ಹುರಿದುಕೊಳ್ಳಿ.
ಇದು ತುಪ್ಪ ಹಾಕಿಕೊಳ್ಳುತ್ತಾ ಚೆನ್ನಾಗಿ 20 ನಿಮಿಷ ಮಿಕ್ಸ್ ಮಾಡಬೇಕು. ಅದರ ಘಮಲು ಹರಡುತ್ತಿರುವಾಗ ಏಲಕ್ಕಿ ಪುಡಿ ಸಹ ಹಾಕಿಕೊಂಡು ಮತ್ತೆ ಮಿಕ್ಸ್ ಮಾಡಿಕೊಳ್ಳಿ. ನಂತರ ಒಲೆ ಆಫ್ ಮಾಡಿಕೊಂಡು ಒಂದು ಕಪ್ನ ಪುಡಿ ಬೆಲ್ಲವನ್ನು ಸಹ ಇದಕ್ಕೆ ಹಾಕಿಕೊಂಡು ನಿಧಾನವಾಗಿ ಮಿಕ್ಸ್ ಮಾಡಿಕೊಳ್ಳಿ. ಬಿಸಿಯಲ್ಲಿ ಬೆಲ್ಲ ಕರಗಲಿದೆ.
ಈಗ ಒಂದು ಟ್ರೇಗೆ ತುಪ್ಪ ಸವರಿಕೊಂಡು ಇಟ್ಟುಕೊಳ್ಳಿ. ತಕ್ಷಣ ಈ ಪುಡಿಯನ್ನು ಟ್ರೇಗೆ ಹಾಕಿಕೊಂಡು ಹಿಟ್ಟನ್ನು ಸವರಿಕೊಳ್ಳಿ. ಇದು ಬಿಸಿ ಇದ್ದಾಗಲೇ ಚಾಕುವಿನಿಂದ ಕತ್ತರಿಸಿಕೊಳ್ಳಬೇಕು. ನಿಮಗೆ ಯಾವ ಗಾತ್ರಕ್ಕೆ ಬೇಕೋ ಆ ಗಾತ್ರಕ್ಕೆ ಚೆನ್ನಾಗಿ ಕತ್ತರಿಸಿಕೊಳ್ಳಬೇಕು. ಹೀಗೆ ಕತ್ತರಿಸಿಕೊಂಡ ಬಳಿಕ ತಣ್ಣಗಾಗಲು ಬಿಡಿ. ಇದು ತಣ್ಣಗಾದ ಬಳಿಕ ನೀವು ಬರ್ಫಿಯನ್ನು ಎತ್ತಿ ಬೇರೆ ಪಾತ್ರೆಯಲ್ಲಿ, ಡಬ್ಬದಲ್ಲಿ ಹಾಕಿ ಇಡಬಹುದು. ಇದನ್ನು ನೀವು 1 ತಿಂಗಳ ಕಾಲ ಇಟ್ಟು ಸವಿಯಬಹುದು. ಈ ವಿಧಾನದಲ್ಲಿ ನೀವು ಗೋಧಿ ಬರ್ಫಿಯನ್ನು ಮನೆಯಲ್ಲಿ ಮಾಡಿ ನೋಡಿ.
ಈ ಸ್ವೀಟ್ ಅನ್ನು ನೀವು ಶುಭ ದಿನಗಳಲ್ಲಿ, ಅತಿಥಿಗಳು ಬಂದಾಗ, ಮಕ್ಕಳಿಗೆ ನೀಡಲು ಹೀಗೆ ಹಲವು ಸನ್ನಿವೇಶಕ್ಕೆ ಬಳಸಬಹುದು. ಅದರಲ್ಲೂ ಗೋಧಿ ಹಿಟ್ಟಿನಿಂದ ಮಾಡುವುದರಿಂದ ಆರೋಗ್ಯದ ಕಾಳಜಿಯೂ ಇದೆ. ರುಚಿ ಕೂಡ ಬೇಕರಿಯಲ್ಲಿ ಸಿಗುವಂತಹ ಬರ್ಫಿಗಳಂತೆಯೇ ಇದು ಕೂಡ ನೀಡಲಿದೆ.



Click it and Unblock the Notifications
