Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಹೋಟೆಲ್ ರುಚಿಯ ಗೋಧಿ ಪರೋಟ ಮನೆಯಲ್ಲೇ ಮಾಡಿ..! ಇಲ್ಲಿದೆ ರೆಸಿಪಿ
ಸ್ವಲ್ಪ ತಿಂದರೆ ಸಾಕು, ಜಾಸ್ತಿ ಹೊತ್ತು ಹಸಿವು ನೀಗಿಸುವ ತಿಂಡಿ ಅಂದ್ರೆ ಅದು ಪರೋಟ. ಪರೋಟವನ್ನು ಕೆಲವರು ಗೋಧಿಯಿಂದ ತಯಾರಿಸಿದರೆ, ಕೆಲವರು ಮೈದಾ ಬಳಸಿ ತಯಾರಿಸುತ್ತಾರೆ. ಆದರೆ ಮೈದಾ ಬಳಸಿ ಮಾಡುವ ಪರೋಟಕ್ಕಿಂತ, ಗೋಧಿಯಿಂದ ಮಾಡುವ ಪರೋಟ ಒಳ್ಳೆಯದು.
ಪರೋಟದಲ್ಲಿ ಇತರ ಮಸಾಲೆ ಪದಾರ್ಥಗಳನ್ನು ತುಂಬಿ ತಯಾರಿಸಿದರಂತೂ ತುಂಬಾ ರುಚಿಯಾಗಿರುತ್ತದೆ. ಈ ರೀತಿ ಮಸಾಲೆ ತುಂಬಿ ಮಾಡುವ ಪರೋಟಗಳಲ್ಲಿ ಆಲೂ ಪರೋಟವಂತೂ ತುಂಬಾ ಫೇಮಸ್. ನೀವು ಕೇರಳ ಹೋಟೆಲ್‌ಗೆ ಹೋಗಿದ್ದೀರಿ ಎಂದಾದಲ್ಲಿ ಮಲಬಾರ್ ಪರೋಟ ಅಥವಾ ಕೇರಳ ಪರೋಟದ ಸ್ವಾದವನ್ನು ಮಿಸ್ ಮಾಡಿಕೊಳ್ಳಬೇಡಿ.

ಪರೋಟ ರೆಸಿಪಿ ಅತಿ ಸರಳ ಮತ್ತು ಕಡಿಮೆ ಸಮಯದಲ್ಲಿ ತಯಾರಿಸಬಹುದು. ನೀವು ಇದಕ್ಕಾಗಿ ಮಾಡುವ ವಿಧಾನವನ್ನು ಸ್ವಲ್ಪ ಕಲಿತುಕೊಂಡರೆ ಸಾಕು, ಚಿಟಿಕೆ ಹೊಡೆದಷ್ಟು ಸರಳವಾಗಿ ಈ ಪರೋಟವನ್ನು ನಿಮ್ಮದೇ ಪಾಕ ವೈವಿಧ್ಯದಲ್ಲಿ ತಯಾರಿಸಬಹುದು. ಹಾಗಿದ್ದರೆ ನಾವಿಂದು ಹೋಟೆಲ್‌ನಲ್ಲಿ ಸಿಗುವ ಪರೋಟದಂತೆ ಮನೆಯಲ್ಲಿ ಗೋಧಿ ಹಿಟ್ಟು ಬಳಸಿ ಮಾಡುವುದು ಹೇಗೆ ಎಂದು ತಿಳಿಯೋಣ.
ಈ ಗೋಧಿ ಹಿಟ್ಟಿನ ಪರೋಟ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಗೋಧಿ ಹಿಟ್ಟಿನ ಪರೋಟ ಮಾಡುವ ವಿಧಾನವೇನು? ಅದಕ್ಕೆ ತೆಗೆದುಕೊಳ್ಳುವ ಸಮಯವೇನು ಎಂಬುದನ್ನು ನಾವಿಂದು ತಿಳಿಯೋಣ.
ಗೋಧಿ ಹಿಟ್ಟಿನ ಪರೋಟ ಮಾಡಲು ಬೇಕಾಗುವ ಪದಾರ್ಥಗಳು
ಗೋಧಿ ಹಿಟ್ಟು- 1/4 ಕೆಜಿ
ತುಪ್ಪ - 1/4 ಕಪ್
ಸಕ್ಕರೆ - 1 ಟೀಸ್ಪೂನ್
ಅಡುಗೆ ಎಣ್ಣೆ
ಗೋಧಿ ಹಿಟ್ಟಿನ ಪರೋಟ ಮಾಡೋದು ಹೇಗೆ?
ಮೊದಲು ಹಿಟ್ಟು ಮಾಡಿಕೊಳ್ಳುವುದು ಹೇಗೆ ನೋಡಿ
ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ಸಕ್ಕರೆ, ಉಪ್ಪು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಕಲಸಿಕೊಳ್ಳಿ. ಇದಕ್ಕೆ ಸ್ವಲ್ಪ ಎಣ್ಣೆ ಹಾಕಿಕೊಂಡು ಮಿಕ್ಸ್ ಮಾಡಿದರೆ ಉತ್ತಮ. ಚಪಾತಿ ಹಿಟ್ಟಿನಂತೆ ಹಿಟ್ಟು ಮಾಡಿಕೊಳ್ಳಿ, ಎಣ್ಣೆ ಬಳಸುವುದರಿಂದ ಪರೋಟ ಮೃದುವಾಗಲಿದೆ. ಹಿಟ್ಟು ಕಲಸಿ 15ರಿಂದ 20 ನಿಮಿಷ ಹಾಗೆಯೇ ಬಿಡಿ.
ಬಳಿಕ ಹಿಟ್ಟು ತೆಗೆದುಕೊಂಡು ಎಲ್ಲಾ ಒಂದೇ ಗಾತ್ರದ ಉಂಡೆಗಳ ಮಾಡಿಕೊಳ್ಳಿ. ಬಳಿಕ ಇದಕ್ಕೆ ಗೋಧಿ ಹಿಟ್ಟು ಹಚ್ಚಿಕೊಂಡು ಅದನ್ನು ಚಪಾತಿಯಂತೆಯೇ ಲಟ್ಟಿಸಿಕೊಳ್ಳಿ. ಎಷ್ಟು ತೆಳು ಮಾಡಿಕೊಳ್ಳಲು ಸಾಧ್ಯವೋ ಅಷ್ಟು ತೆಳುವಾಗಿ ಲಟ್ಟಿಸಿಕೊಳ್ಳಿ. ಇದರ ಮೇಲೆ ತುಪ್ಪ ಅಥವಾ ಬೆಣ್ಣೆ ಹಚ್ಚಿಕೊಳ್ಳಿ. ನಂತರ ಇದನ್ನು ಬರ್ಫಿ ಕತ್ತರಿಸುವಂತೆ ಒಂದೇ ನೇರವಾಗಿ ಕತ್ತರಿಸಿಕೊಳ್ಳಬೇಕು. ಕತ್ತರಿಸಿಕೊಂಡ ಲೇಯರ್‌ಗಳನ್ನು ಒಂದರ ಮೇಲೆ ಒಂದರಂತೆ ಇಟ್ಟು ಅದನ್ನು ಮತ್ತೆ ಸುತ್ತಿ ಉಂಡೆ ಮಾಡಬೇಕು.
ಬಳಿಕ ಈ ಉಂಡೆಯನ್ನು ಮತ್ತೆ ನಿಮ್ಮ ಕೈ ಮೂಲಕ ಪ್ರೆಸ್ ಮಾಡಿಕೊಳ್ಳಿ. ಒಂದು ಅಂಗೈ ಅಗಲಕ್ಕಿಂತ ದೊಡ್ಡದಾಗಿ ಲಟ್ಟಿಸಿ ಕಾವಲಿ ಮೇಲೆ ಹಾಕಿಕೊಂಡು ಎರಡೂ ಕಡೆಯು ಚೆನ್ನಾಗಿ ಕಾಯಿಸಿಕೊಳ್ಳಿ. ಇದನ್ನು ಬಿಸಿ ಬಿಸಿಯಾಗಿ ಸವಿಯಲು ಬಹಳ ರುಚಿಕರವಾಗಿರುತ್ತೆ. ಇದರ ಜೊತೆಗೆ ಕುರ್ಮ ಅಥವಾ ಮಾಂಸಹಾರಿ ಖಾದ್ಯ ಯಾವುದೇ ಇದ್ದರೂ ರುಚಿ ಅದ್ಭುತವಾಗಿರುತ್ತೆ. ಇನ್ನು ಪರೋಟದ ಜೊತೆ ಕಾಯಿ ಚಟ್ನಿ ಸಹ ಉತ್ತಮ ರುಚಿ ನೀಡಲಿದೆ.
ಇನ್ನು ಗೋಧಿ ಹಿಟ್ಟಿದನ ಬದಲು ಮೈದಾ ಹಿಟ್ಟು ಬಳಸಿಯೂ ಪರೋಟ ಮಾಡುತ್ತಾರೆ. ಆದರೆ ಮೃದುವಾದ ಮತ್ತು ಹೆಚ್ಚು ಸಮಯ ಇಟ್ಟು ಸೇವಿಸಬೇಕೆಂದರೆ ಗೋಧಿ ಹಿಟ್ಟು ಉತ್ತಮ. ಈ ಪರೋಟವನ್ನು ಜಿಪ್ ಲಾಕ್ ಕವರ್‌ನಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಟ್ಟರೆ ವಾರಗಳ ವರೆಗೆ ಇಟ್ಟು ಸೇವಿಸಬಹುದು.



Click it and Unblock the Notifications
