Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮಕ್ಕಳಿಗೂ ಇಷ್ಟವಾಗುವ ತರಕಾರಿ ದೋಸೆ: ಒಮ್ಮೆ ಸವಿದರೆ ಪದೇ ಪದೇ ಸವಿಯುತ್ತೀರಿ
ನೀವು ಬೆಳಗ್ಗೆ ತಿಂಡಿಗೆ ಹಲವು ರೀತಿಯ ತಿಂಡಿಗಳ ಮಾಡಿ ಸವಿಯೋದು ಕಾಮನ್, ಅದ್ರಲ್ಲೂ ದೋಸೆ ಮಾಡುವುದು ಎಲ್ಲರ ಮನೆಯ ನಿತ್ಯದ ಕೆಲಸ ಎನ್ನಬಹುದು. ಹಾಗೆ ದೋಸೆಯಲ್ಲಿನ ವಿವಿಧ ಬಗೆಯ ಹಾಗೆ ವಿವಿಧ ರೀತಿಯ ತಿಂಡಿ ಮಾಡಿಯೇ ಮಾಡುತ್ತೀರಿ. ಅದ್ರಲ್ಲೂ ದೋಸೆಯ ವಿಧಗಳಲ್ಲಿ ಹಲವು ರೀತಿಯ ರುಚಿ ನೋಡಬಹುದು.
ದೋಸೆಯಲ್ಲಿ ನಾವು ಹಲವು ರೀತಿಯಾಗಿ ಸುಲಭವಾಗಿ ಮಾಡುವ ಹಲವು ರೀತಿ ದೋಸೆಗಳ ಮಾಡಿ ಸವಿದಿರುವುದು ನೋಡಬಹುದು. ಇನ್ನು ತಿಂಡಿಯ ಸಮಯದಲ್ಲಿ ಸರಿಯಾಗಿ ನಾವಿಂದು ತರಕಾರಿಯಿಂದ ಮಾಡುವಂತಹ ದೋಸೆಯ ಕುರಿತು ತಿಳಿದುಕೊಳ್ಳೋಣ. ಈ ದೋಸೆ ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಮನೆಯಲ್ಲಿ ವಿಶೇಷ ಹಬ್ಬ ಇದ್ದರೆ, ಅತಿಥಿಗಳಿದ್ದರೆ ಈ ದೋಸೆ ಮಾಡಿ ನೀಡಿ.

ನೀವು ಮನೆಯಲ್ಲಿ ಉದ್ದು ನೆನೆಸಿ ಮಾಡುವುದು ಬೇಸರ ತರಿಸಿರಬಹುದು. ಹಾಗಾದ್ರೆ ಈ ರೀತಿ ತರಕಾರಿ ಬಳಸಿ ಮಾಡುವ ರುಚಿ ರುಚಿಯ ದೋಸೆ ಮಾಡುವ ಕುರಿತು ಇಲ್ಲಿ ತಿಳಿದುಕೊಳ್ಳೋಣ. ತರಕಾರಿ ದೋಸೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಹಾಗೆ ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ತರಕಾರಿ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
ದೋಸೆ ಹಿಟ್ಟು
ಎಲೆಕೋಸು
ಬೀನ್ಸ್
ಕ್ಯಾರೆಟ್
ಈರುಳ್ಳಿ
ಹಸಿ ಮೆಣಸು
ಕರಿಬೇವು
ಉಪ್ಪು
ಸಾಸಿವೆ
ಕಡಲೆ ಬೇಳೆ
ಕೊತ್ತಂಬರಿ
ಎಣ್ಣೆ
ತರಕಾರಿ ದೋಸೆ ಮಾಡುವುದು ಹೇಗೆ?
ನೀವು ಇದಕ್ಕೆ ಮೊದಲೇ ದೋಸೆ ಹಿಟ್ಟು ಮಾಡಿಟ್ಟುಕೊಳ್ಳಿ. ಇಲ್ಲವೆ ಹಿಂದಿನ ದಿನ ಸಾಮಾನ್ಯ ದೋಸೆಗಾಗಿ ಮಾಡುವಂತೆಯೇ ಇದಕ್ಕೂ ಹಿಟ್ಟು ಮಾಡಿಟ್ಟುಕೊಳ್ಳಿ. ಈಗ ಒಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಕಡಲೆ ಬೇಳೆ, ಹಾಕಿ ಹುರಿದುಕೊಳ್ಳಿ. ನಂತರ ಇದಕ್ಕೆ ಹಸಿ ಮೆಣಸು, ಕರಿಬೇವು ಕೂಡ ಹಾಕಿ ಫ್ರೈ ಮಾಡಿಕೊಳ್ಳಿ.
ಅನಂತರ ಇದಕ್ಕೆ ಈರುಳ್ಳಿ ಸಹ ಹಾಕಿಕೊಂಡು 1 ನಿಮಿಷ ಫ್ರೈ ಮಾಡಿ. ಈಗ ತರಕಾರಿಗಳಾದ ಬೀನ್ಸ್, ಕ್ಯಾರೆಟ್, ಎಲೆಕೋಸು ಒಂದರ ನಂತರ ಒಂದರಂತೆ ಹಾಕಿಕೊಳ್ಳುತ್ತಾ ಫ್ರೈ ಮಾಡಿಕೊಳ್ಳಿ. ಎಲ್ಲಾ ಪದಾರ್ಥಗಳನ್ನು ಸಣ್ಣದಾಗಿ ಕತ್ತರಿಸಿಕೊಳ್ಳಿ. ಈ ಸಮಯದಲ್ಲಿ ಉಪ್ಪು ಸಹ ಹಾಕಿಕೊಂಡು ಫ್ರೈ ಮಾಡಿ.
ಈಗ ಕೊತ್ತಂಬರಿ ಸೊಪ್ಪು ಸಹ ಹಾಕಿಕೊಳ್ಳಬೇಕು. ಈಗ ಇದನ್ನೆಲ್ಲಾ ಸ್ವಲ್ಪ ತಣ್ಣಗಾಗಲು ಬಿಡಬೇಕು. ತಣ್ಣಗಾದ ಬಳಿಕ ಇದನ್ನು ದೋಸೆ ಹಿಟ್ಟಿಗೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು. ಸ್ವಲ್ಪ ದಪ್ಪವಾದರೆ ನೀರು ಹಾಕಿ ದೋಸೆ ಮಾಡಿ. ಈಗ ಕಾವಲಿ ಇಟ್ಟು ಬಿಸಿಯಾದಾಗ ದೋಸೆ ಹಾಕಿಕೊಳ್ಳಿ. ಇದನ್ನು ಸವಿಯಲು ಯಾವುದಾದರು ಚಟ್ನಿ ಬಳಸಿ ನೋಡಿ. ಇಷ್ಟಾದರೆ ತರಕಾರಿ ದೋಸೆ ಸಿದ್ದವಾಗುತ್ತೆ. ನೀವು ಕೂಡ ಇದನ್ನು ಮನೆಯಲ್ಲಿ ಮಾಡಿ ಸವಿದು ನೋಡಿ. ಮಕ್ಕಳಿಗೆ ಬಹಳ ಇಷ್ಟವಾಗುವ ದೋಸೆ ಇದು.
ಒಂದು ವೇಳೆ ದೋಸೆ ಹಿಟ್ಟು ಉಳಿದರೆ ಕೂಡ ಇದನ್ನು ಮಾಡಿ ಸವಿಯಬಹುದು. ಸಂಜೆ ಸಮಯದಲ್ಲಿ ಸ್ನ್ಯಾಕ್ಸ್ ಆಗಿಯೂ ಇದನ್ನು ಸವಿಯಬಹುದು.



Click it and Unblock the Notifications
