Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ತರಕಾರಿ ಒಗ್ಗರಣೆ ದೋಸೆ ಮಾಡಿದ್ದೀರಾ? ಬಾಯಲ್ಲಿ ನೀರು ತರಿಸುವ ರುಚಿ ಇದು..!
ನೀವು ಬೆಳಗ್ಗೆ ಬ್ರೇಕ್ ಫಾಸ್ಟ್ಗೆ ರುಚಿ ರುಚಿ ಖಾದ್ಯ ಸವಿಯುವ ಮನಸ್ಸು ಮಾಡಿದ್ದರೆ ಖಂಡಿತ ನೀವು ದೋಸೆ ತಿನ್ನೋಕೆ ಯಾವಾಗಲು ಇಷ್ಟಪಡುತ್ತೀರಿ. ದೋಸೆ ಎಲ್ಲರ ಮೆಚ್ಚಿನ ತಿಂಡಿ ಅನ್ನೋದ್ರಲ್ಲಿ ಯಾವ ಅನುಮಾನವೂ ಇಲ್ಲ. ಏಕೆಂದರೆ ಎಲ್ಲರಿಗೂ ಇದು ಇಷ್ಟವಾಗುತ್ತೆ. ಹಾಗೆ ಎಲ್ಲಾ ಸಮಯದಲ್ಲೂ ಇದನ್ನು ಸವಿಯುತ್ತಾರೆ. ಬೆಳಗ್ಗ, ಮಧ್ಯಾಹ್ನ, ಸಂಜೆಯ ಸಮಯದಲ್ಲೂ ದೋಸೆ ಇಷ್ಟಪಟ್ಟು ಸವಿಯುವುದು ನೋಡಬಹುದು. ಹಾಗೆ ದೋಸೆಯಲ್ಲಿನ ಹತ್ತಾರು ವಿಧಗಳು ಜನರನ್ನು ತನ್ನತ್ತ ಸೆಳೆಯುತ್ತೆ.
ಒಂದೊಂದು ವಿಧವು ಒಂದೊಂದು ರೀತಿಯ ರುಚಿ ನೀಡುವ ಕಾರಣ ದೋಸೆಯ ರುಚಿ ಎಲ್ಲರಿಗೂ ಇಷ್ಟವಾಗೋದು. ದೋಸೆಯ ಸವಿಯಲು ಜನರು ಹೋಟೆಲ್ಗಳ ಮುಂದೆ ಕ್ಯಾಂಟೀನ್ಗಳ ಮುಂದೆ ಸಾಲಿನಲ್ಲಿ ನಿಲ್ಲುವುದು ಕೂಡ ನಾವು ನೋಡಬಹುದು. ಹಾಗೆ ಕೆಲವೊಂದು ಹೋಟೆಲ್ಗಳು ಈ ದೋಸೆಯ ಕಾರಣದಿಂದಾಗಿಯೇ ಫೇಮಸ್ ಆಗಿರುತ್ತವೆ.

ಹಾಗೆ ನಾವು ಮನೆಯಲ್ಲಿ ಕೂಡ ವಿವಿಧ ಬಗೆಯ ದೋಸೆ ಮಾಡಿ ಸವಿದಿರುತ್ತೇವೆ. ಅದರಲ್ಲೂ ಉದ್ದಿನ ದೋಸೆಯೇ ಬಹಳ ಫೇಮಸ್ ಆಗಿರುತ್ತದೆ. ಹಾಗೆ ಕೆಲವೊಂದು ವಿಭಿನ್ನ ದೋಸೆಗಳನ್ನು ಕೂಡ ನಾವು ಮಾಡಿ ಸವಿದಿರುಯತ್ತೇವೆ. ಅದರಲ್ಲೂ ಕೆಲವೊಂದು ವಿಧಗಳು ನಮ್ಮ ಬಾಯಲ್ಲಿ ನೀರು ತರಿಸುತ್ತವೆ. ಮಸಾಲ ದೋಸೆ, ಸೆಟ್ ದೋಸೆಗಳ ಸವಿ ಬಾಯಲ್ಲಿ ನೀರು ತರಿಸುತ್ತೆ.
ಹಾಗೆ ನೀವು ಬಗೆ ಬಗೆಯ ದೋಸೆಯ ನಡುವೆ ತರಕಾರಿಗಳ ಹಾಕಿ ಮಾಡುವಂತಹ ಸೆಟ್ ದೋಸೆ ಸವಿಯಲೇಬೇಕು. ಈರುಳ್ಳಿ ಹಾಗೆ ಕೆಲವು ತರಕಾರಿ ಬಳಸಿ ಮಾಡುವ ಈ ದೋಸೆಗಳು ಅದ್ಭುತ ರುಚಿ ನೀಡುತ್ತವೆ. ಮನೆ ಮಂದಿಗೆಲ್ಲಾ ಇದು ಇಷ್ಟವಾಗುತ್ತೆ. ಹಾಗಾದ್ರೆ ನಾವಿಂದು ಈ ಈರುಳ್ಳಿ ಹಾಗೆ ತರಕಾರಿಗಳ ಹಾಕಿ ಹಾಗೆ ಒಗ್ಗರಣೆ ಹಾಕಿ ಮಾಡುವಂತಹ ಈ ಸೆಟ್ ದೋಸೆ ಮಾಡುವುದು ಹೇಗೆ ಅನ್ನೋದನ್ನು ನೋಡೋಣ.
ತರಕಾರಿ ಸೆಟ್ ದೋಸೆ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಈ ಸೆಟ್ ದೋಸೆ ಮಾಡುವ ವಿಧಾನವೇನು? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಂದು ತಿಳಿದುಕೊಳ್ಳೋಣ.
ತರಕಾರಿ ಸೆಟ್ ದೋಸೆ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಸಾಸಿವೆ
- ಕಡಲೆ ಬೇಳೆ
- ಉದ್ದಿನ ಬೇಳೆ
- ಕರಿಬೇವು
- ಹಸಿ ಮೆಣಸು
- ಕ್ಯಾರೆಟ್
- ತೆಂಗಿನಕಾಯಿ
- ಈರುಳ್ಳಿ
- ಸೋಡಾ
- ಉಪ್ಪು
- ಎಣ್ಣೆ
- ಕೊತ್ತಂಬರಿ ಸೊಪ್ಪು
ತರಕಾರಿ ಒಗ್ಗರಣೆ ಸೆಟ್ ದೋಸೆ ಮಾಡುವ ವಿಧಾನವೇನು?
ಈ ದೋಸೆ ಮಾಡಲು ಹಿಂದಿನ ದಿನವೇ ಉದ್ದು, ಮೆಂತ್ಯ, ಅಕ್ಕಿ ಹಾಕಿ ಹಿಟ್ಟು ರೆಡಿ ಮಾಡಿಕೊಳ್ಳಿ. ಸಾಮಾನ್ಯವಾಗಿ ಎಲ್ಲಾ ದೋಸೆಗೂ ನೀವು ಮಾಡಿಕೊಳ್ಳುವಂತೆಯೇ ಈ ಹಿಟ್ಟು ಕೂಡ ಮಾಡಿಟ್ಟುಕೊಳ್ಳಿ.
ಒಂದು ಬಾಣಲೆ ಒಲೆ ಮೇಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಳಿಕ ಸಾಸಿವೆ, ಕಡಲೆಬೇಳೆ, ಉದ್ದಿನ ಬೇಳೆ, ಸಣ್ಣದಾಗಿ ಕತ್ತರಿಸಿದ ಕರಿಬೇವು, ಹಸಿ ಮೆಣಸು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಈಗ ಎರಡು ಈರುಳ್ಳಿ ಹಾಕಿ ಅರ್ಧ ನಿಮಿಷ ಫ್ರೈ ಮಾಡಿ. ಈಗ ತುರಿದ ಕ್ಯಾರೆಟ್, ಸಣ್ಣ ಸಣ್ಣದಾಗಿ ಕತ್ತರಿಸಿಕೊಂಡ ತೆಂಗಿನಕಾಯಿ ಕೂಡ ಇದಕ್ಕೆ ಹಾಕಿ ಮತ್ತೆ ಅರ್ಧ ನಿಮಿಷ ಫ್ರೈ ಮಾಡಿಕೊಳ್ಳಿ.
ಫ್ರೈ ಆಗಿರುವ ಎಲ್ಲಾ ಅಂಶಗಳು ತಣ್ಣಗಾಗಲು ಬಿಡಿ. ಈಗ ಮೊದಲೇ ರೆಡಿ ಮಾಡಿಕೊಂಡಿರುವ ದೋಸೆ ಹಿಟ್ಟು ತೆಗೆದುಕೊಂಡು ಅದಕ್ಕೆ ಸ್ವಲ್ಪ ರವೆ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ನಂತರ ತಣ್ಣಗಾಗಿರುವ ಒಗ್ಗರಣೆ, ಉಪ್ಪು, ಅಡುಗೆ ಸೋಡಾ ಕೂಡ ಹಾಕಿಕೊಂಡು ಕೈಯಿಂದ ಮಿಕ್ಸ್ ಮಾಡಿಕೊಳ್ಳಿ. ಕೊನೆಯದಾಗಿ ಕೊತ್ತಂಬರಿ ಸೊಪ್ಪು ಸ್ವಲ್ಪ ನೀರು ಕೂಡ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ನಂತರ ಒಲೆ ಮೇಲೆ ದೋಸೆ ಕಾವಲಿ ಇಟ್ಟು ಬಿಸಿಯಾಗಲು ಬಿಡಿ. ನಂತರ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಮಧ್ಯದಲ್ಲಿ ಈ ಹಿಟ್ಟು ಹಾಕಿಕೊಂಡು ಸ್ವಲ್ಪ ತೆಳುವಾಗಿ ಹರಡಿಕೊಳ್ಳಿ. ದಪ್ಪವಾಗಿದ್ದರೂ ಕೂಡ ನಡೆಯುತ್ತದೆ. ಒಂದೇ ಕಡೆ ಅಥವಾ ಎರಡು ಕಡೆ ಕೂಡ ಬೇಯಿಸಿಕೊಳ್ಳಬಹುದು, ಈ ದೋಸೆಯ ಜೊತೆ ಚಟ್ನಿ ಇದ್ದರೆ ಇದರ ರುಚಿ ದುಪ್ಪಟ್ಟಾಗುತ್ತೆ. ಒಗ್ಗರಣೆಯ ಘಮಲಿನಲ್ಲಿ ದೋಸೆ ರುಚಿ ಸವಿದರೆ ಮತ್ತೆ ಮತ್ತೆ ಸವಿಯೋದು ಖಚಿತ.



Click it and Unblock the Notifications
