Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಬೆಳಗ್ಗೆ ತಿಂಡಿ ಜೊತೆ ಸವಿಯಲು ಇಲ್ಲಿದೆ ಸಾಗು..! ಮಾಡಿ ನೋಡಿ
ಮನೆಯಲ್ಲಿ ಬೆಳಗ್ಗೆ ತಿಂಡಿ ಮಾಡಿದರೆ ಅದಕ್ಕೆ ಅದಕ್ಕೆ ಒಂದು ಚಟ್ನಿ, ಸಾಂಬಾರ್ ಅಥವಾ ಸಾಗು ಮಾಡುತ್ತಾರೆ. ಚಪಾತಿ, ರೊಟ್ಟಿ, ದೋಸೆ, ಪೂರಿ, ಪರೋಟಾ ಮಾಡಿದರೆ ಅದಕ್ಕೆ ತರಕಾರಿ ಸಾಗು ಮಾಡುತ್ತೇವೆ. ಇನ್ನು ಹೋಟಲ್‌ನಲ್ಲಿ ನೀವು ಪೂರಿ ತೆಗೆದುಕೊಂಡರೆ ಅದರ ಜೊತೆಗೆ ನೀಡುವ ಸಾಗು ಅದ್ಭುತ ರುಚಿ ನೀಡುತ್ತದೆ. ಆದ್ರೆ ಆ ರೀತಿ ರುಚಿಯ ಸಾಗು ಹೇಗೆ ಮಾಡುತ್ತಾರೆ?
ಹೋಟೆಲ್‌ನಲ್ಲಿ ನೀಡುವ ಈ ಸಾಗು ರೀತಿಯ ರುಚಿಯನ್ನ ಮಾಡಲು ನೀವು ಸಹ ಮನೆಯಲ್ಲಿ ಟ್ರೈ ಮಾಡಿರಬಹುದು. ಆದ್ರೆ ಆ ರೀತಿ ಮಾಡಲು ಪರದಾಡುತ್ತಿರುತ್ತೀರಿ. ಎಷ್ಟೇ ಪ್ರಯತ್ನ ಮಾಡಿದರು ಆ ರೀತಿ ರುಚಿ ಬರುವುದಿಲ್ಲ. ಹಾಗಾದ್ರೆ ಈ ಸಾಗುವನ್ನು ಮನೆಯಲ್ಲಿ ಮಾಡೋದು ಹೇಗೆ?

ತರಕಾರಿ ಸಾಗು ಮಾಡಲು ಯಾವ ಪದಾರ್ಥಬೇಕು? ಈ ಸಾಗು ಮಾಡುವ ವಿಧಾನವೇನು? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಾಗು ಮಾಡಲು ಬೇಕಾಗುವ ಪದಾರ್ಥಗಳು
- ಈರುಳ್ಳಿ
- ಟೊಮೊಟೋ - 1
- ಕ್ಯಾರೆಟ್ - 2
- ನವಿಲು ಕೋಸು - 1
- ಬೆಳ್ಳುಳ್ಳಿ
- ಹಸಿ ಶುಂಠಿ
- ಲವಂಗ 2
- ಏಲಕ್ಕಿ
- ಸೋಂಪು ಕಾಳು
- ಕಸೂರಿ ಮೆಂತ್ಯ
- ಗೋಡಂಬಿ
- ಗಸಗಸೆ 1 ಟೀ ಸ್ಪೂನ್
- ಖಾರದ ಪುಡಿ
- ದನಿಯಾ ಪುಡಿ-1 ಟೀ ಸ್ಪೂನ್
- ಹುರುಳಿಕಾಯಿ 10 ರಿಂದ 15
- ಹಸಿ ಬಟಾಣಿ - ಮುಕ್ಕಾಲು ಕಪ್
- ತೆಂಗಿನಕಾಯಿ ತುರಿ - ಅರ್ಧ ಕಪ್
- ಪುದಿನ ಸೊಪ್ಪು
- ಕೊತ್ತಂಬರಿ ಸೊಪ್ಪು
- ಹಸಿಮೆಣಸಿನಕಾಯಿ
- ಅರಿಶಿನದ ಪುಡಿ
- ಚಕ್ಕೆ
- ಎಣ್ಣೆ
- ಉಪ್ಪು
ಸಾಗು ಮಾಡುವ ವಿಧಾನ
ಮೊದಲು ಒಂದು ಮಿಕ್ಸಿ ಜಾರ್‌ಗೆ ಏಲಕ್ಕಿ, ಲವಂಗ, ಚಕ್ಕೆ, ನೀರಿನಲ್ಲಿ ನೆನೆಸಿಟ್ಟಿದ್ದ ಗಸಗಸೆ, ಗೋಡಂಬಿ, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, ಖಾರದ ಪುಡಿ, ಅರಶಿನ, ಧನಿಯಾಪುಡಿ, ತುರಿದ ಕಾಯಿ, ಪುದಿನ, ಕೊತ್ತಂಬರಿ ಸೊಪ್ಪು ಸ್ವಲ್ಪ ನೀರು ಹಾಕಿಕೊಂಡು ರುಬ್ಬಿಕೊಳ್ಳಬೇಕು. ನುಣ್ಣಗೆ ರುಬ್ಬಿಕೊಂಡ ಬಳಿಕ ಅದನ್ನು ಬದಿಗಿಟ್ಟುಕೊಳ್ಳಿ.
ಈಗ ಒಂದು ಕುಕ್ಕರ್ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಜೊತೆಗೆ ಸೋಂಪು ಕಾಳು ಕಸೂರಿ ಮೇತಿ, ಈರುಳ್ಳಿ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ಬಳಿಕ ಇದಕ್ಕೆ ಟೊಮೆಟೋ ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಮೊದಲು ರುಬ್ಬಿಕೊಂಡಿದ್ದ ಮಸಾಲೆಯನ್ನು ಇದಕ್ಕೆ ಹಾಕಿ 2 ನಿಮಿಷ ಬೇಯಿಸಿಕೊಳ್ಳಿ. ಈ ವೇಳೆ ನೀರು ಹಾಕಿಕೊಳ್ಳಬೇಡಿ.
2 ನಿಮಿಷದ ಬಳಿಕ ತರಕಾರಿಗಳಾದ ಬೀನ್ಸ್, ಕ್ಯಾರೇಟ್, ನವಿಲು ಕೋಸು, ಬಟಾಣಿ, ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಈಗ ನಿಮಗೆ ಅಳತೆಗೆ ತಕ್ಕಂತೆ 1 ಗ್ಲಾಸ್ ನೀರು ಹಾಕಿಕೊಳ್ಳಿ. ಬಳಿಕ ಮತ್ತೆ ಮಿಕ್ಸ್ ಮಾಡಿ. ಈಗ ಕುಕ್ಕರ್ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. 2 ಸೀಟಿಯ ಬಳಿಕ ತಣ್ಣಗಾಗಲು ಬಿಟ್ಟು ಮುಚ್ಚಳ ತೆಗೆಯಿರಿ. ಇಷ್ಟಾದರೆ ನಿಮ್ಮ ಮುಂದೆ ತರಕಾರಿ ಸಾಗು ರೆಡಿಯಾಗಿರುತ್ತದೆ. ಇದನ್ನು ಪೂರಿ, ಚಪಾತಿ ಜೊತೆ ಸವಿದರೆ ಅದರ ರುಚಿಯೇ ಬೇರೆ. ನೀವು ಸಹ ಒಮ್ಮೆ ಮನೆಯಲ್ಲಿ ಈ ಸಾಗು ಟ್ರೈ ಮಾಡಿ ನೋಡಿ.



Click it and Unblock the Notifications
