Latest Updates
-
ದೆಹಲಿ ವಾಯುಮಾಲಿನ್ಯದ ಭೀತಿ: ಮನೆಯಲ್ಲೇ 12 ನಿಮಿಷದ ಸರಳ ವರ್ಕೌಟ್ ಮೂಲಕ ಆರೋಗ್ಯ ಕಾಪಾಡಿಕೊಳ್ಳಿ -
ವಾಟ್ಸಾಪ್ನಲ್ಲಿ ದೀಪಾವಳಿ ಬೋನಸ್ ಲಿಂಕ್ ಬಂದಿದೆಯೇ? ಮೋಸ ಹೋಗುವ ಮುನ್ನ ಈ 30 ಸೆಕೆಂಡ್ ಕೆಲಸ ಮಾಡಿ! -
ದೆಹಲಿ ಮಾಲಿನ್ಯದ ಭೀತಿ: ₹150 ಬಜೆಟ್ನಲ್ಲಿ ನಿಮ್ಮ ಆರೋಗ್ಯ ರಕ್ಷಿಸುವ ಆಂಟಿ-ಸ್ಮಾಗ್ ಡಯಟ್ ಪ್ಲಾನ್ ಇಲ್ಲಿದೆ! -
ದೀಪಾವಳಿ 2026: ಬೆಂಗಳೂರು, ದೆಹಲಿ, ಮುಂಬೈನಲ್ಲಿ ಪಟಾಕಿ ಸಿಡಿಸಲು ಹೊಸ ನಿಯಮಗಳು, ಸಮಯದ ಮಿತಿ! -
ದಕ್ಷಿಣ ಭಾರತದಲ್ಲಿ ಮಳೆ ಅಲರ್ಟ್: ಮನೆಯಲ್ಲೇ ಫಿಟ್ ಆಗಿರಲು ಈ 10 ನಿಮಿಷದ ವರ್ಕೌಟ್ ಟ್ರೈ ಮಾಡಿ! -
ದೀಪಾವಳಿ ಹಬ್ಬದ ಡ್ರಾಮಾ ತಪ್ಪಿಸಿ: ದಂಪತಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಪ್ಲಾನ್ ಮತ್ತು ಮೆಸೇಜ್ ಟಿಪ್ಸ್ -
ದೀಪಾವಳಿ ಪಾರ್ಟಿ ಜೋರಾಗಿದೆಯಾ? ₹30ರೊಳಗೆ ಸಿಗುವ 12 ಆರೋಗ್ಯಕರ ಹೈ-ಪ್ರೋಟೀನ್ ಸ್ನ್ಯಾಕ್ಸ್ ಇಲ್ಲಿದೆ! -
ಧನ್ತೇರಸ್ ಮುನ್ನವೇ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ: ಇಂದೇ ಖರೀದಿಸಬೇಕಾ ಅಥವಾ ನಾಳೆ ಕಾಯಬೇಕಾ? -
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ?
ಎಣ್ಣೆ ಬೇಡ, ಹೆವಿ ಮಸಾಲೆ ಬೇಡ! ವೆಜಿಟೇಬಲ್ ಪೋಹಾ ಕಿಚಡಿ ಹೇಗೆ ಮಾಡೋದು?
ಎಣ್ಣೆ ಬೇಡ, ಹೆವಿ ಮಸಾಲೆ ಬೇಡ! ಟ್ರೈ ಮಾಡಿ ಟೇಸ್ಟಿ ವೆಜಿಟೇಬಲ್ ಪೋಹಾ ಕಿಚಡಿ. ಹೌದು, ನೀವು ಎಣ್ಣೆ ಮತ್ತು ಮಸಾಲೆಗಳನ್ನು ತ್ಯಜಿಸಲು ಬಯಸುವಿರಾ? ಹಾಗಿದ್ದರೆ, 'ವೆಜಿಟೇಬಲ್ ಪೋಹಾ ಕಿಚಡಿ' (Vegetable Poha Khichdi) ನಿಮಗೆ ಅತ್ಯುತ್ತಮ ಆಯ್ಕೆಯಾಗಬಹುದು. ಆರೋಗ್ಯಕರ ಮತ್ತು ರುಚಿಕರವಾದ ಈ ಖಾದ್ಯವನ್ನು ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಅಥವಾ ರಾತ್ರಿಯ ಲಘು ಭೋಜನಕ್ಕೂ ತಯಾರಿಸಬಹುದು. ಇದು ದೇಹಕ್ಕೆ ಹಗುರವಾಗಿರುವ, ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವಾಗಿದೆ.
ಪೋಹಾ (ಅವಲಕ್ಕಿ), ಅಕ್ಕಿ, ಬೇಳೆ ಮತ್ತು ತಾಜಾ ತರಕಾರಿಗಳ ಸಂಯೋಜನೆಯಾಗಿರುವ ಈ ಕಿಚಡಿ ಎಲ್ಲಾ ವಯಸ್ಸಿನವರಿಗೂ ಪ್ರಿಯವಾಗಿದೆ. ಇದನ್ನು ತಯಾರಿಸಲು ಹೆಚ್ಚು ಶ್ರಮ ಅಥವಾ ಸಮಯ ಬೇಕಾಗುವುದಿಲ್ಲ. ಇದರಲ್ಲಿರುವ ತರಕಾರಿಗಳು ವಿಟಮಿನ್ ಮತ್ತು ಖನಿಜಗಳನ್ನು ಒದಗಿಸಿದರೆ, ಹೆಸರು ಬೇಳೆ ಮತ್ತು ಪೋಹಾ ಪ್ರೋಟೀನ್ ಹಾಗೂ ಫೈಬರ್ ಅನ್ನು ನೀಡುತ್ತವೆ. ಸುಲಭವಾಗಿ ತಯಾರಿಸಬಹುದಾದ ವೆಜಿಟೇಬಲ್ ಪೋಹಾ ಕಿಚಡಿ ರೆಸಿಪಿ (Vegetable Poha Khichdi Recipe) ಇಲ್ಲಿದೆ.

ವೆಜಿಟೇಬಲ್ ಪೋಹಾ ಕಿಚಡಿಗೆ ಬೇಕಾಗುವ ಸಾಮಗ್ರಿಗಳು
• ಪೋಹಾ ಅಥವಾ ಅವಲಕ್ಕಿ - 1 ಕಪ್
• ಅಕ್ಕಿ - ಕಾಲು ಕಪ್
• ಹೆಸರು ಬೇಳೆ - 2 ಸ್ಪೂನ್
• ಹಸಿ ಬಟಾಣಿ - ಕಾಲು ಕಪ್
• ಕ್ಯಾರೆಟ್ - 1 ಚಿಕ್ಕದು, ಸಣ್ಣದಾಗಿ ಹೆಚ್ಚಿದ್ದು
• ಬೀನ್ಸ್ - 5 ರಿಂದ 6, ಸಣ್ಣದಾಗಿ ಹೆಚ್ಚಿದ್ದು
• ಹಸಿ ಮೆಣಸಿನಕಾಯಿ - 1 ರಿಂದ 2, ಸಣ್ಣದಾಗಿ ಹೆಚ್ಚಿದ್ದು
• ಶುಂಠಿ - 1 ಇಂಚು ತುಂಡು, ತುರಿದದ್ದು
• ಈರುಳ್ಳಿ - 1 ಮಧ್ಯಮ ಗಾತ್ರದ, ಸಣ್ಣದಾಗಿ ಹೆಚ್ಚಿದ್ದು
• ಅರಿಶಿನ ಪುಡಿ - ಅರ್ಧ ಸ್ಪೂನ್
• ಉಪ್ಪು - ರುಚಿಗೆ ತಕ್ಕಷ್ಟು
• ಸಾಸಿವೆ - 1 ಸ್ಪೂನ್
• ಕರಿಬೇವಿನ ಎಲೆಗಳು - 6 ರಿಂದ 7
• ಕೊತ್ತಂಬರಿ ಸೊಪ್ಪು - ಅಲಂಕಾರಕ್ಕೆ
• ನಿಂಬೆ ರಸ - 1 ಸ್ಪೂನ್
• ಅಡುಗೆ ಎಣ್ಣೆ - 2 ಸ್ಪೂನ್

ವೆಜಿಟೇಬಲ್ ಪೋಹಾ ಕಿಚಡಿ ತಯಾರಿಸುವ ವಿಧಾನ
ಮೊದಲಿಗೆ, ಅವಲಕ್ಕಿಯನ್ನು (Avalakki) ಜರಡಿ ಹಿಡಿದು, ನೀರು ಹಾಕಿ ನಯವಾಗಿ ತೊಳೆಯಿರಿ. ಬಳಿಕ 10 ನಿಮಿಷಗಳ ಕಾಲ ಪಕ್ಕಕ್ಕಿಡಿ. ನಂತರ ಅಕ್ಕಿ ಮತ್ತು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆಯಿರಿ. ಇದನ್ನು 15 ನಿಮಿಷ ನೆನೆಸಿಡಿ. ಈಗ ಒಂದು ಪಾತ್ರೆಯಲ್ಲಿ (ಕಡಾಯಿ) ಎಣ್ಣೆಯನ್ನು ಬಿಸಿ ಮಾಡಿ, ಸಾಸಿವೆ ಹಾಕಿ ಸಿಡಿಸಿ. ಬಳಿಕ, ಕರಿಬೇವಿನ ಎಲೆಗಳು, ಹಸಿ ಮೆಣಸಿನಕಾಯಿ ಮತ್ತು ಶುಂಠಿ ಹಾಕಿ, ಲಘುವಾಗಿ ಹುರಿಯಿರಿ.
ಈಗ ಈರುಳ್ಳಿಯನ್ನು ಹಾಕಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ. ಬಳಿಕ ಕ್ಯಾರೆಟ್, ಬೀನ್ಸ್ ಮತ್ತು ಹಸಿ ಬಟಾಣಿ ಸೇರಿಸಿ 2 ರಿಂದ 3 ನಿಮಿಷ ಬೇಯಿಸಿ. ನಂತರ ಅರಿಶಿನ ಮತ್ತು ಉಪ್ಪು ಸೇರಿಸಿ, ಅವಲಕ್ಕಿ, ಅಕ್ಕಿ ಮತ್ತು ಹೆಸರು ಬೇಳೆಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.
ಒಂದು ಕಪ್ ನೀರನ್ನು ಹಾಕಿ ಮುಚ್ಚಳ ಮುಚ್ಚಿ. ಅಕ್ಕಿ ಮತ್ತು ಬೇಳೆ ಮೃದುವಾಗುವವರೆಗೆ 10 ರಿಂದ 12 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಅಂತಿಮವಾಗಿ ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪು ಹಾಕಿ, ನಿಧಾನವಾಗಿ ಕಲಸಿ. ಇಷ್ಟು ಮಾಡಿದರೆ, ಬಿಸಿ ಬಿಸಿಯಾದ ವೆಜಿಟೇಬಲ್ ಪೋಹಾ ಕಿಚಡಿ ಸಿದ್ದ. ಇದನ್ನು ಮೊಸರು, ಉಪ್ಪಿನಕಾಯಿ ಅಥವಾ ಹಪ್ಪಳದೊಂದಿಗೆ ಸವಿಯಬಹುದು.



Click it and Unblock the Notifications
