Latest Updates
-
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು
ಯಾವುದೇ ತಿಂಡಿಗೆ ತರಕಾರಿ ಕುರ್ಮಾ ಮಾಡಿ..! ಇಲ್ಲಿದೆ ನೋಡಿ ರೆಸಿಪಿ
ಸಸ್ಯಹಾರಿಗಳಿಗೆ ಅಚ್ಚುಮೆಚ್ಚಿನ ಖಾದ್ಯದಲ್ಲಿ ಈ ಕುರ್ಮ ಸಹ ಒಂದು. ರೊಟ್ಟಿ, ಚಪಾತಿ, ಅನ್ನ, ಪಲಾವ್, ಹೀಗೆ ಎಲ್ಲಾ ಖಾದ್ಯದ ಜೊತೆಗೂ ತರಕಾರಿ ಕುರ್ಮ ಇದ್ದರೆ ಆ ಊಟದ ಮಜವೇ ಬೇರೆಯಾಗುತ್ತದೆ. ಕುರ್ಮ ಇದ್ದರೆ ಊಟ ಒಂದು ತುತ್ತು ಹೆಚ್ಚಿಗೆ ಸೇರುತ್ತದೆ.
ಕುರ್ಮಾ ಮಾಡುವುದು ಹೇಗೆ ಎಂಬ ಕುರಿತು ನಿಮಗೆ ತಿಳಿದಿಲ್ಲದಿರಬಹುದು. ಆದ್ರೆ ಕುರ್ಮಾ ಮಾಡೋದು ತುಂಬಾನೆ ಸುಲಭ, ನೀವು ಇಡ್ಲಿ, ದೋಸೆ, ಪೂರಿ, ಚಪಾತಿಗೆ ಕುರ್ಮಾ ಇಲ್ಲದಿದ್ದರೆ ಅದರ ರುಚಿ ನಿಮಗೆ ತಿಳಿಯೋದಿಲ್ಲ. ಕುರ್ಮಾ ಆರೋಗ್ಯ ದೃಷ್ಟಿಯಲ್ಲಿ ಒಳ್ಳೆಯದು. ಎಲ್ಲಾ ತರಕಾರಿ ಸೇರಿಸಿ ಮಾಡುವ ಕುರ್ಮಾ ರುಚಿಕರ ಖಾದ್ಯದಲ್ಲಿ ಒಂದು.

ನೀವೇನಾದರು ಮಾಂಸಹಾರಿಗಳಾಗಿದ್ದರೆ ನಿಮಗೆ ಮಟನ್ ಹಾಗೂ ಚಿಕನ್ ಕುರ್ಮಾದ ರುಚಿ ತಿಳಿದಿರುತ್ತೆ. ಇದೂ ಸಹ ಅದೇ ರುಚಿ ಹೋಲುವ ತರಕಾರಿ ಕುರ್ಮಾ. ಹಾಗಾದ್ರೆ ಈ ತರಕಾರಿ ಕುರ್ಮಾ ಮಾಡೋದು ಹೇಗೆ? ಕುರ್ಮಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತರಕಾರಿ ಕುರ್ಮಾ ಮಾಡಲು ಬೇಕಾಗುವ ಪದಾರ್ಥಗಳು
- ಬೀನ್ಸ್
- ಕ್ಯಾರೆಟ್
- ಹೂಕೋಸು
- ಆಲೂಗಡ್ಡೆ
- ಉಪ್ಪು
- ಕೊತ್ತಂಬರಿ ಸೊಪ್ಪು
- ಎಣ್ಣೆ
- ನವಿಲುಕೋಸು
- ಬಟಾಣಿ
- ಶುಂಠಿ ಬೆಳ್ಳುಳ್ಳಿ ಪೇಸ್ಟ್ - 1 ಟೀಸ್ಪೂನ್
- ಈರುಳ್ಳಿ - 2
- ಅರಶಿನ- 1 ಟೀಸ್ಪೂನ್
- ಗರಂ ಮಸಾಲ- 1 ಟೀಸ್ಪೂನ್
- ಖಾರದ ಪುಡಿ- 1 ಟೀಸ್ಪೂನ್
- ತೆಂಗಿನಕಾಯಿ
- ಗಸಗಸೆ
- ಗೋಡಂಬಿ
- ಟೊಮೆಟೊ- 1
ತರಕಾರಿ ಕುರ್ಮಾ ಮಾಡುವ ವಿಧಾನ
ಮೊದಲು ತೆಂಗಿನಕಾಯಿ, ಗೋಡಂಬಿ, ಗಸಗಸೆಯನ್ನು ತೆಗೆದುಕೊಂಡು ಒಂದು ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ಹಿಟ್ಟಿನ ರೀತಿ ಆಗುವಂತೆ ಚೆನ್ನಾಗಿ ರುಬ್ಬಿಕೊಂಡು ಬದಿಗಿಟ್ಟುಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆಯಿಟ್ಟು ಅದಕ್ಕೆ ಎಣ್ಣೆ ಹಾಕಿ.
ಈ ಎಣ್ಣೆಗೆ ಈರುಳ್ಳಿ ಹಾಕಿ ಹುರಿದುಕೊಳ್ಳಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಎಲ್ಲಾ ತರಕಾರಿಗಳನ್ನು ಸಹ ಹಾಕಿಕೊಂಡಿ ಫ್ರೈ ಮಾಡಿಕೊಳ್ಳಿ. ಒಂದು 3 ನಿಮಿಷ ಫ್ರೈ ಮಾಡಿಕೊಳ್ಳಿ. ಯಾವುದೇ ನೀರು ಹಾಕದೆ ಫ್ರೈ ಮಾಡಿ. ಇದಕ್ಕೆ ಉಪ್ಪು ಹಾಕಿ ಬೇಯಿಸಿಕೊಳ್ಳಿ.
ಬಳಿಕ ಇದನ್ನು ಮುಚ್ಚಳ ಮುಚ್ಚಿ 15 ನಿಮಿಷ ಬೇಯಿಸಿಕೊಳ್ಳಿ. ಬಳಿಕ ಅರಶಿನ ಪುಡಿ, ಗರಂ ಮಸಾಲ, ಖಾರದ ಪುಡಿ, ಟೊಮೆಟೋ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಇದು ತರಿ ತರಿಯಾಗಿ ಹುರಿದಂತೆ ಆಗಬೇಕು. ಇದಕ್ಕೆ ಅರ್ಧ ಗ್ಲಾಸ್‌ನಲ್ಲಿ ನೀರು ಹಾಕಿ ಮಿಕ್ಸ್ ಮಾಡಿ 4 ನಿಮಿಷ ಬಿಡಿ.
ಬಳಿಕ ಇದಕ್ಕೆ ಮೊದಲು ರುಬ್ಬಿಕೊಂಡಿದ್ದ ತೆಂಗಿನಕಾಯಿ, ಗೋಡಂಬಿ, ಗಸೆಗಸೆ ಮಿಕ್ಸ್ ಅನ್ನು ಹಾಕಿಕೊಳ್ಳಿ. ಸ್ವಲ್ಪ ನೀರು ಸಹ ಹಾಕಿಕೊಂಡು ಚೆನ್ನಾಗಿ ಮಿಶ್ರಣ ಮಾಡಿ. 8 ರಿಂದ 10 ನಿಮಿಷ ಕುದಿಯಲು ಬಿಡಿ. ಇಷ್ಟಾದರೆ ನಿಮ್ಮ ಮುಂದೆ ತರಕಾರಿ ಕುರ್ಮಾ ಸವಿಯಲು ರೆಡಿ.
ಈ ಕುರ್ಮಾವನ್ನು ಚಪಾತಿ, ಅನ್ನ, ದೋಸೆ, ಇಡ್ಲಿ, ಪೂರಿ ಜೊತೆಗೆ ಸವಿಯಲು ನೀಡಿದರೆ ಅದರ ರುಚಿಯೇ ಬೇರೆ. ಈಗ ಈ ರೆಸಿಪಿ ನೋಡಿಕೊಂಡು ಸುಲಭವಾಗಿ ಕುರ್ಮಾ ಮಾಡಿ ನೋಡಿ. ತುಂಬಾನೆ ಸುಲಭದ ರೆಸಿಪಿ ಇದಾಗಿದ್ದು, ಎಲ್ಲಾ ಖಾದ್ಯಗಳಿಗೂ ಹಿಡಿಸುತ್ತದೆ.



Click it and Unblock the Notifications
