Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬ್ರೇಕ್ಫಾಸ್ಟ್ಗೆ ಸ್ಪೆಷಲ್ ವೆಜ್ ಸ್ಯಾಂಡ್ವಿಚ್ ಮಾಡಿ..! ಮಕ್ಕಳಿಗಿದು ಸಿಕ್ಕಾಪಟ್ಟೆ ಇಷ್ಟ!
ನೀವು ಮನೆಯಲ್ಲಿ ಯಾವಾಗಲು ಮಾಡುವ ತಿಂಡಿಯ ಬದಲಾಗಿ ಹೊಸದಾಗಿ ಏನಾದರು ಮಾಡಲು ಮುಂದಾಗುವುದು ಕಾಮನ್. ಹಾಗೆ ಸಮಯ ಇಲ್ಲದಾಗ ಗಡಿಬಿಡಿಯಲ್ಲಿ ಥಟ್ ಅಂತ ನೆನಪಿಗೆ ಬರುವ ಒಂದಿಷ್ಟು ತಿಂಡಿಗಳು ಕೂಡ ಇವೆ. ನೀವು ಸ್ಪೆಷಲ್ ಆಗಿ ಯಾವುದೇ ತಿಂಡಿ ಮಾಡಲು ಆಗದೆ ಇದ್ದಾಗ ಅಥವಾ ಬೆಳಗ್ಗೆ ಸಮಯ ಇಲ್ಲದೇ ಇದ್ದಾಗ ಕಡಿಮೆ ಸಮಯದಲ್ಲಿ ಮಾಡುವಂತಹ ತಿಂಡಿಗಳ ಕುರಿತು ಯೋಚಿಸಿರುತ್ತೀರಿ.
ಹೆಚ್ಚಾಗಿ ಚಿತ್ರಾನ್ನ, ಅವಲಕ್ಕಿ, ಎಗ್ ರೊಲ್, ಬ್ರೆಡ್ ಜಾಮ್ ಹಾಗೆ ಸ್ಯಾಂಡ್ವಿಚ್ ಸಹ ಮಾಡಿ ಸವಿಯುವುದು ನೋಡಬಹುದು. ಸ್ಯಾಂಡ್ವಿಚ್ ಗಡಿಬಿಡಿಯಲ್ಲಿ ಮಾಡಬಹುದಾದ ಅತ್ಯಂತ ಸುಲಭವಾಗಿ ಮಾಡಬಹುದಾದ ತಿಂಡಿಯಾಗಿದೆ. ಮಕ್ಕಳಿಗಂತು ಸ್ಯಾಂಡ್ ವಿಚ್ ಬಹಳ ಇಷ್ಟವಾಗೋದ್ರಲ್ಲಿ ಅನುಮಾನವಿಲ್ಲ.

ಬೇಕರಿಯಲ್ಲಿ ಸಿಗುವಂತೆ ಈ ಸ್ಯಾಂಡ್ವಿಚ್ ಅನ್ನು ಮನೆಯಲ್ಲಿಯೇ ನಾವು ಮಾಡಬಹುದು. ಹಾಗಾದ್ರೆ ಈ ಸ್ಯಾಂಡ್ವಿಚ್ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ಇಲ್ಲಿ ತಿಳಿದುಕೊಳ್ಳೋಣ. ಸ್ಯಾಂಡ್ ವಿಚ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಈ ವೆಜ್ ಸ್ಯಾಂಡ್ ವಿಚ್ ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವೆಜ್ ಸ್ಯಾಂಡ್ವಿಚ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಬ್ರೆಡ್
- ಈರುಳ್ಳಿ
- ಟೊಮೆಟೋ
- ಕಾಳು ಮೆಣಸಿನ ಪುಡಿ
- ಸೌತೆಕಾಯಿ
- ಟೊಮೆಟೋ ಕೆಚಪ್
- ಮಯೋನಿಸ್ ಸಾಸ್
ವೆಜ್ ಸ್ಯಾಂಡ್ವಿಚ್ ಮಾಡುವ ವಿಧಾನವೇನು?
ಮೊದಲು ಈರುಳ್ಳಿ, ಸೌತೆಕಾಯಿ, ಟೊಮೆಟೋ ಮೂರನ್ನು ವೃತ್ತಾಕಾರವಾಗಿ ಹೆಚ್ಚಿಕೊಳ್ಳಬೇಕು. ಎಷ್ಟು ತೆಳುವಾಗಿ ಹೆಚ್ಚಿಕೊಳ್ಳಲು ಸಾಧ್ಯವೋ ಅಷ್ಟು ಹೆಚ್ಚಿಕೊಳ್ಳಿ. ಹಾಗೆ ಸ್ಯಾಂಡ್ವಿಚ್ಗೆ ಅಂಗಡಿ, ಬೇಕರಿಯಲ್ಲಿ ಸಿಗುವ ಬ್ರೆಡ್ ಅನ್ನೇ ಬಳಸಬಹುದು. 4 ಬ್ರೆಡ್ ತೆಗೆದುಕೊಳ್ಳಿ. ಇದಲ್ಲೆ ಇದಕ್ಕೆ ನೀವು ಯಾವ ತರಕಾರಿ ಬೇಕಾದರೂ ಬಳಸಬಹುದು.
ಈಗ ಎರಡು ಬ್ರೆಡ್ ತೆಗೆದುಕೊಂಡು ಅದರ ಮೇಲೆ ಟೊಮೆಟೋ ಕೆಚಪ್ ಹಾಕಿಕೊಳ್ಳಿ. ಇನ್ನೊಂದು ಕಡೆ ಮಯೋನಿಸ್ ಸಾಸ್ ಹಾಕಿಕೊಳ್ಳಿ. ಈಗ ಒಂದು ಬ್ರೆಡ್ ಮೇಲೆ ಈರುಳ್ಳಿ, ಸೌತೆಕಾಯಿ, ಟೊಮೆಟೋ ಇಟ್ಟುಕೊಳ್ಳಿ. ಹಾಗೆ ಅದರ ಮೇಲೆ ಉಪ್ಪು, ಕಾಳು ಮೆಣಸಿನ ಪುಡಿ ಚಿಮುಕಿಸಿಕೊಳ್ಳಿ. ಈಗ ಬ್ರೆಡ್ ಅನ್ನು ಒಂದರ ಮೇಲೆ ಒಂದನ್ನು ಇಟ್ಟು ರೆಡಿ ಮಾಡಿ.
ಈಗ ಕಾವಲಿ ಒಲೆ ಮೇಲಿಟ್ಟು ಅದಕ್ಕೆ ನೀವು ಎಣ್ಣೆ ಅಥವಾ ತುಪ್ಪ ಕೂಡ ಹಾಕಿಕೊಳ್ಳಬಹುದು. ಇಲ್ಲವೆ ಹಾಗೆ ಡ್ರೈ ಫ್ರೈ ಕೂಡ ಮಾಡಬಹುದು. ಇದಕ್ಕೆ ಒಂದು ರೆಡಿ ಮಾಡಿಕೊಂಡಿರುವ ಬ್ರೆಡ್ ಅನ್ನು ಇಟ್ಟು ಎರಡೂ ಕಡೆ ಸುಮಾರು 2 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಬೇಕು. ಹಾಗೆ ಅದನ್ನು ಡೀಪ್ ಫ್ರೈ ಕೂಡ ಮಾಡಿಕೊಳ್ಳಬಹುದು. ಇದನ್ನು ಮಕ್ಕಳ ಟಿಫಿನ್ ಬಾಕ್ಸ್ಗೂ ಕೂಡ ಹಾಕಿ ಕಳುಹಿಸಹುದು. ಬೆಳಗ್ಗೆ ಗಡಿ ಬಿಡಿ ಸಮಯದಲ್ಲಿ ಕಡಿಮೆ ವಸ್ತುಗಳ ಬಳಸಿಕೊಂಡು ಕಡಿಮೆ ಸಮಯದಲ್ಲಿ ಮಾಡಬಹುದಾದ ಬ್ರೇಕ್ ಫಾಸ್ಟ್ ಇದಾಗಿದೆ. ನೀವು ಕೂಡ ಮನೆಯಲ್ಲಿ ಇದನ್ನೊಮ್ಮೆ ಟ್ರೈ ಮಾಡಿ ನೋಡಿ. ಮಕ್ಕಳಲ್ಲದೆ ಎಲ್ಲರಿಗೂ ಇದು ಇಷ್ಟವಾಗುತ್ತೆ.



Click it and Unblock the Notifications
