Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ತರಕಾರಿಯೇ ಬೇಡ ಈ ರೈಸ್ ಬಾತ್ ಮಾಡಲು..! ಮಾಡುವ ವಿಧಾನ ಇಲ್ಲದೆ!
ನೀವು ಬೆಳಗ್ಗೆ ತಿಂಡಿಗೆ ವಿಶೇಷವಾಗಿ ರೈಸ್ನಿಂದ ಮಾಡುವ ಹಲವು ಖಾದ್ಯಗಳ ಮಾಡಿ ಸವಿಯುತ್ತೀರಿ. ಅದರಲ್ಲೂ ಮುಖ್ಯವಾಗಿ ರೈಸ್ಬಾತ್, ಪಲಾವ್, ಚಿತ್ರಾನ್ನ, ಪುಳಿಯೋಗರೆ, ವಾಂಗೀಬಾತ್, ಫ್ರೈಡ್ ರೈಸ್ ಹೀಗೆ ಹತ್ತಾರು ಬಗೆಯ ಖಾದ್ಯ ಥಟ್ ಅಂತ ನೀವು ರೆಡಿ ಮಾಡುತ್ತೀರಿ. ಆದ್ರೆ ಎಲ್ಲಾ ದಿನವೂ ನಿಮ್ಮ ಮನೆಯಲ್ಲಿ ತರಕಾರಿ ಇದ್ದೇ ಇರುತ್ತೆ ಎನ್ನಲಾಗಲ್ಲ. ಕೆಲವೊಮ್ಮೆ ನಿಮ್ಮ ಅಡುಗೆಗ ಮುಖ್ಯವಾಗಿ ಬೇಕಾಗುವ ತರಕಾರಿ ಇಲ್ಲದೇ ಇದ್ದಾಗ ಗಡಿಬಿಡಿಯಲ್ಲಿ ಏನಾದರೊಂದು ಮಾಡಿ ಮುಗಿಸಲು ನೀವು ಮುಂದಾಗುತ್ತೀರಿ.
ಆದ್ರೆ ತರಕಾರಿಯನ್ನೇ ಬಳಸದೆ ನಾವು ಹಲವು ರುಚಿಕರ ಖಾದ್ಯ ಸವಿಯಬಹುದು. ಅದ್ರಲ್ಲೂ ನೀವು ರೈಸ್ ಬಾತ್ ಮಾಡಲು ಹಲವು ತರಕಾರಿ ಬಳಸಬೇಕು ಎಂಬುದಿಲ್ಲ. ರೈಸ್ ಬಾತ್ ಮಾಡಲು ಕೆಲವು ತರಕಾರಿಯ ಅಗತ್ಯತೆ ಇರಲಿದೆ. ಆದ್ರೆ ನಾವಿಂದು ತರಕಾರಿಯನ್ನೇ ಬಳಸದೆ ನೀವು ಹೇಗೆ ರೈಸ್ ಬಾತ್ ಮಾಡಬಹುದು ಎಂಬುದನ್ನು ತಿಳಿಸುತ್ತೇವೆ. ರೈಸ್ ಬಾತ್ ಸುಲಭವಾಗಿ ಮಾಡಬಹುದಾದ ಖಾದ್ಯ, ಅದರಲ್ಲೂ ಬೆಳಗ್ಗೆ ತಿಂಡಿಯ ಸಮಯಕ್ಕೆ ಥಟ್ ಅಂತ ರೆಡಿ ಮಾಡಬಹುದು.

ಇಷ್ಟೊಂದು ಸುಲಭದ ರೆಸಿಪಿ ಮಾಡಲು ಯಾವುದೇ ತರಕಾರಿಯ ಅಗತ್ಯವೂ ಇಲ್ಲ. ಸುಲಭವಾಗಿ ಮನೆಯಲ್ಲಿ ಮಾಡಬಹುದು. ಹಾಗಾದ್ರೆ ಈ ರೈಸ್ ಬಾತ್ ಅನ್ನು ತರಕಾರಿ ಹಾಕದೆಯೇ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ರೈಸ್ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತರಕಾರಿ ಬಳಸದೆ ರೈಸ್ ಬಾತ್ ಮಾಡುವುದು ಹೇಗೆ?
- ಅನ್ನ
- ಈರುಳ್ಳಿ
- ಚಕ್ಕೆ
- ಲವಂಗ
- ಏಲಕ್ಕಿ
- ಬ್ಯಾಡಗಿ
- ಕೊತ್ತಂಬರಿ ಸೊಪ್ಪು
- ಮೊಸರು
- ಬೆಳ್ಳುಳ್ಳಿ
- ಹಸಿ ಶುಂಠಿ
- ಖಾರದ ಪುಡಿ
- ದನಿಯ ಪುಡಿ
- ಸೋಂಪು ಕಾಳು
- ಕಸೂರಿ ಮೆಂತ್ಯ
- ಎಣ್ಣೆ
ತರಕಾರಿ ಬಳಸದೆ ರೈಸ್ ಬಾತ್ ಮಾಡುವುದು ಹೇಗೆ?
ಮೊದಲಿಗೆ ಬೌಲ್ಗೆ 1 ಕಪ್ ಅಕ್ಕಿ ಹಾಕಿ ನೀರು ಹಾಕಿ ತೊಳೆದು ನೆನೆಸಿಡಬೇಕು. ಈಗ ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಒಣ ಮೆಣಸು, ಚಕ್ಕೆ, ಲವಂಗ, ಏಲಕ್ಕಿ, ಬೆಳ್ಳುಳ್ಳಿ, ಶುಂಠಿ, ಧನಿಯ ಪುಡಿ, ಖಾರದ ಪುಡಿ, ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಒಲೆ ಮೇಲೆ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಅದಕ್ಕೆ ಸೋಂಪು ಕಾಳು, ಕಸೂರಿ ಮೇಥಿ, ಈರುಳ್ಳಿ ಹಾಕಿ 5 ನಿಮಿಷ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.
ಈಗ ರುಬ್ಬಿಕೊಂಡಿರುವ ಮಸಾಲೆ ಪೇಸ್ಟ್ ಅನ್ನು ಕೂಡ ಹಾಕಿಕೊಂಡು 2 ನಿಮಿಷ ಫ್ರೈ ಮಾಡಿ. ಇಗ ಈ ಮಸಾಲೆಗೆ ಸ್ವಲ್ಪ ಮೊಸರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಒಂದೂವರೆ ಕಪ್ ನೀರು ಹಾಕಿಕೊಳ್ಳಿ ಇದು ಅಕ್ಕಿ ತೆಗೆದುಕೊಂಡ ಅಳತೆಗಿಂತ ಸ್ವಲ್ಪ ಹೆಚ್ಚಾಗಿರಲಿ. ಈಗ ನೆನೆಸಿರುವ ಅಕ್ಕಿಯನ್ನು ಕುಕ್ಕರ್ಗೆ ಹಾಕಿ ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ನಂತರ ಮುಚ್ಚಳ ಮುಚ್ಚಿ 2 ಸೀಟಿ ಹೊಡೆಯಲು ಬಿಡಿ. 2 ಸೀಟಿ ಹೊಡೆದ ಬಳಿಕ ಕುಕ್ಕರ್ ತಣ್ಣಗಾಗಲು ಬಿಡಿ. ನಂತರ ಮುಚ್ಚಳ ತೆಗೆದು ಒಮ್ಮೆ ಕಲಸಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ತರಕಾರಿ ಬಳಸದ ರೈಸ್ ಬಾತ್ ರೆಡಿಯಾಗುತ್ತದೆ. ತುಪ್ಪ ಇದ್ದರೆ ಒಂದು ಸ್ಪೂನ್ ತುಪ್ಪ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಬಹುದು. ಹಾಗೆ ಕೊತ್ತಂಬರಿ ಸೊಪ್ಪು ಕೂಡ ಮಿಕ್ಸ್ ಮಾಡಿಕೊಂಡರೆ ಅದ್ಭುತ ರುಚಿಯ ರೈಸ್ ಬಾತ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಬ್ರೇಕ್ ಫಾಸ್ಟ್ಗೆ ಇದನ್ನು ಮಾಡಿಕೊಳ್ಳಿ.



Click it and Unblock the Notifications
