For Quick Alerts
ALLOW NOTIFICATIONS  
For Daily Alerts

ತರಕಾರಿ ಪಲಾವ್‌ ಮಾಡುವ ವಿಧಾನ

|

ಆಹಾರ ಎಂದರೆ ಬಾಯಿ ರುಚಿಯ ಜತೆಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಮಹಿಳೆಯರ ಜವಾಬ್ದಾರಿಯಾಗಿದೆ. ದಿನ ನಿತ್ಯ ರುಚಿಕರ ಹಾಗೂ ಆರೋಗ್ಯಕರ ತಿಂಡಿ ಮಾಡುವುದು ಕಷ್ಟವೇ ಹೌದು. ಆರೋಗ್ಯದ ಜತೆಗೆ ಮನೆಯ ಹಿರಿಯರಿಂದ ಕಿರಿಯವರೆಗೆ ಎಲ್ಲರೂ ಇಷ್ಟಪಡುವ, ರುಚಿಗೂ ಸೈ ಎನಿಸುವ ತಿಂಡಿ ತರಕಾರಿ ಪಲಾವ್‌.

Vegetable Pulao

ದಕ್ಷಿಣ ಹಾಗೂ ಉತ್ತರ ಭಾರತದ ಎಲ್ಲೆಡೆ ತನ್ನದೇ ಶೈಲಿಯಲ್ಲಿ ತಯಾರಿಸುವ ಪಲಾವ್‌ ಅನ್ನು ಹತ್ತಾರು ವಿಧಾನಗಳಲ್ಲಿ ತಯಾರಿಸಬಹುದು. ನಾವಿಲ್ಲಿ ಸಿಂಪಲ್‌ ಹಾಗೂ ಶೀಘ್ರದಲ್ಲೇ ತಯಾರಿಸಬಹುದಾದ ಪಲಾವ್‌ ರೆಸಿಪಿಯನ್ನು ತಿಳಿಸಿಕೊಡಲಿದ್ದೇವೆ.

Vegetable Pulao
Vegetable Pulao Recipe/ತರಕಾರಿ ಪಲಾವ್‌ ಮಾಡುವ ವಿಧಾನ
Vegetable Pulao Recipe/ತರಕಾರಿ ಪಲಾವ್‌ ಮಾಡುವ ವಿಧಾನ
Prep Time
15 Mins
Cook Time
20M
Total Time
35 Mins

Recipe By: Meghashree Devaraju

Recipe Type: Breakfast

Serves: 4

Ingredients
  • ಬೇಕಾಗುವ ವಸ್ತುಗಳು

    ಅರ್ಧ ಕೆಜಿ ಸೋನಾಮಸೂರಿ ಅಥವಾ ಬಾಸುಮತಿ ಅಕ್ಕಿ

    ಕ್ಯಾರೆಟ್‌ 100 ಗ್ರಾಂ

    ಬೀನ್ಸ್‌ 100 ಗ್ರಾಂ

    ಹಸಿ ಬಟಾಣಿ 100 ಗ್ರಾಂ

    ಗೆಡ್ಡೆಕೋಸು 100 ಗ್ರಾಂ

    ಅಲೂಗಡ್ಡೆ 100 ಗ್ರಾಂ

    ಹೂಕೋಸು 100 ಗ್ರಾಂ

    ಪುದೀನಾ ಒಂದು ಕಪ್

    ಕೊತ್ತಂಬರಿ ಸೊಪ್ಪು ಒಂದು ಕಪ್

    ಬೆಳ್ಳುಳ್ಳಿ ಎರಡು

    ಶುಂಠಿ

    ಮೆಣಸಿನಕಾಯಿ 8

    ಟಮೋಟೋ 2

    ಈರುಳ್ಳಿ 2

    ಪಲಾವ್‌ ಎಲೆ 2

    ಚಕ್ಕೆ ಒಂದು

    ಲವಂಗ 3

    ಏಲಕ್ಕಿ 2

    ಮೆಣಸು 4

    ಜೀರಿಗೆ ಅರ್ಧ ಚಮಚ

    ಕಸೂರಿ ಮೇತಿ ಒಂದು ಸ್ಪೂನ್‌

    ತುಪ್ಪು 2 ಚಮಚ

    ಎಣ್ಣೆ ಅರ್ಧ ಕಪ್‌

    ಉಪ್ಪು

Red Rice Kanda Poha
How to Prepare
  • ತಯಾರಿಸುವ ವಿಧಾನ

    * ಅಕ್ಕಿಯನ್ನು ಚೆನ್ನಾಗಿ ತೊಳೆದು ನೆನೆಸಿಡಿ

    * ಗ್ಯಾಸ್‌ ಅನ್ನು ಕಡಿಮೆ ಉರಿಯಲ್ಲಿಟ್ಟು ಪಾತ್ರೆಗೆ ಅರ್ಧ ಕಪ್‌ ಎಣ್ಣೆ ಹಾಕಿ ನಂತರ ಅದಕ್ಕೆ ಪಲಾವ್‌, ಚಕ್ಕೆ, ಲವಂಗ, ಏಲಕ್ಕಿ, ಮೆಣಸು, ಜೀರಿಗೆ, ಕಸೂರಿ ಮೇತಿ ಹಾಕಿ

    * ಸಣ್ಣದಾಗಿ ಕತ್ತರಿಸಿರಿಸಿದ ಅರ್ಧ ಈರುಳ್ಳಿಯನ್ನು ಹಾಕಿ

    * ನಂತರ ಚೆನ್ನಾಗಿ ಪೇಸ್ಟ್‌ ಮಾಡಿದ ಶುಂಠಿ ಹಾಗೂ ಬೆಳ್ಳುಳ್ಳಿ ಹಾಕಿ

    * ಪೇಸ್ಟ್‌ ಮಾಡಿದ ಈರುಳ್ಳಿ ಮತ್ತು ಟಮೋಟೋ ಪ್ಯೂರಿ ಹಾಕಿ

    * ಪೇಸ್ಟ್ ಮಾಡಿದ ಕೊತ್ತಂಬರಿ, ಪುದೀನ ಹಾಗೂ ಮೆಣಸಿನಕಾಯಿ ಹಾಕಿ ಎಲ್ಲವನ್ನು ಚೆನ್ನಾಗಿ ಎಣ್ಣೆಯಲ್ಲಿ ಬಾಡಿಸಿ

    * ನಂತರ ಎಲ್ಲಾ ತರಕಾರಿಗಳನ್ನು ಹಾಕಿ ಅರ್ಧ ಕಪ್‌ ನೀರು ಹಾಕಿ ಚೆನ್ನಾಗಿ ಕಲಸಿ ತಟ್ಟೆ ಮುಚ್ಚಿ 10 ನಿಮಿಷ ಚೆನ್ನಾಗಿ ಬೇಯಿಸಿ

    * ತರಕಾರಿ ಅರ್ಧ ಬೆಂದ ನಂತರ ಬಟಾಣಿ ಹಾಗೂ ಅಕ್ಕಿಯನ್ನು ಹಾಕಿ ಅಕ್ಕಿಗೆ ಎರಡು ಪ್ರಮಾಣದಷ್ಟು ನೀರು ಹಾಕಿ

    * ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅಂತಿಮವಾಗಿ ತುಪ್ಪ ಹಾಕಿ ತಟ್ಟೆ ಮುಚ್ಚಿಡಿ

Instructions
  • ಪಲಾವ್‌ ರುಚಿಗೆ ಮಾತ್ರ ಸೀಮಿತವಾಗದೆ ಹಲವಾರು ತರಕಾರಿಗಳು ಇರುವುದರಿಂದ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಇನ್ನು ಹೆಚ್ಚು ಮಸಾಲೆ ಬೇಕು ಎನ್ನುವವರು ಸ್ವಲ್ಪ ಗರಂ ಮಸಾಲೆ, ಒಂದು ಚಮಚ ದನಿಯಾ ಪುಡಿ ಹಾಗೂ ಕಾರದ ಪುಡಿ ಹಾಕಬಹುದು.
Nutritional Information
  • Protein - 9.5 g
  • Magnesium - 17.9 %
  • Calories - 264.9
  • Fat - 9.1 g
  • Zinc - 7.2 %
[ 4 of 5 - 46 Users]
X
Desktop Bottom Promotion