Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ದೋಸೆಗಿಂತ ರುಚಿ ನೀಡುವ ಉತ್ತಪ್ಪ..! ಮಾಡೋದು ಸಹ ಸುಲಭ
ಬೆಳಗ್ಗೆ ಸಮಯದ ತಿಂಡಿ ಅಂದ್ರೆ ಏನು ಮಾಡಬೇಕು ಅನ್ನೋದೆ ದೊಡ್ಡ ಪ್ರಶ್ನೆಯಾಗಿರುತ್ತೆ. ಗೃಹಿಣಿಯರಂತು ತಿಂಡಿಗೆ ಏನು ಮಾಡಬೇಕು ಅನ್ನೋದನ್ನ ಯೋಚನೆ ಮಾಡಿ ಮಾಡಿ ಬಳಿಕ ತೋಚಿದನ್ನ ಮಾಡಿ ಬಿಡುತ್ತಾರೆ. ಇನ್ನು ಹಲವರು ದೋಸೆ, ಇಡ್ಲಿಯಂತು ತಪ್ಪಿಸುವುದೇ ಇಲ್ಲ. ಸುಲಭವಾಗಿ ಮಾಡಬಹುದಾದ ತಿಂಡಿಗಳಲ್ಲಿ ಈ ದೋಸೆ, ಇಡ್ಲಿಯೂ ಒಂದಾಗಿವೆ. ಹೀಗಾಗಿ ವಾರದಲ್ಲಿ ಒಮ್ಮೆಯಾದರು ದೋಸೆ ಇಡ್ಲಿ ಖಾಯಂ ಪದಾರ್ಥ.
ನೀವೇನಾದರು ತಿಂಡಿಗೆ ವಿಶೇಷ ಖಾದ್ಯ ಮಾಡುವ ಆಲೋಚನೆಯಲ್ಲಿದ್ದರೆ. ಅಥವಾ ಈ ವರಮಹಾಲಕ್ಷ್ಮಿಯ ದಿನದಂದು ಏನಾದರು ವಿಶೇಷ ತಿಂಡಿ ಮಾಡಲು ಭಯಸಿದ್ದರೆ ದೋಸೆಗಿಂತಲೂ ರುಚಿ ನೀಡುವ ಈ ಈರುಳ್ಳು ಉತ್ತಪ್ಪ ಮಾಡಿ ನೋಡಿ. ಈರುಳ್ಳಿ ಉತ್ತಮ ಈರುಳ್ಳಿ ದೋಸೆಯಂತೆಯೇ ಕಂಡರು ಕೂಡ ರುಚಿಯಲ್ಲಿ ಭಿನ್ನವಾಗಿರುತ್ತೆ.

ಈರುಳ್ಳಿ ಉತ್ತಪ್ಪ ಸವಿಯುತ್ತಿದ್ದರೆ ಮತ್ತೆಂದು ನೀವು ಸಾಮಾನ್ಯ ದೋಸೆಗಳ ರುಚಿ ನೋಡಲು ಬಯಸುವುದಿಲ್ಲ. ಈಗಂತು ಹೋಟೆಲ್ಳಲ್ಲಿ ವಿಶೇಷ ಹಾಗೂ ವಿಭಿನ್ನ ರುಚಿಯ ಉತ್ತಪ್ಪಗಳ ನೋಡಬಹುದು. ರವಾ ಉತ್ತಪ್ಪ, ಈರುಳ್ಳಿ ಉತ್ತಪ್ಪ ಇದರಲ್ಲಿ ಫೇಮಸ್ ವಿಧಗಳಾಗಿವೆ. ಹಾಗಾದ್ರೆ ನಾವಿಂದು ವರಮಹಾಲಕ್ಷ್ಮಿ ಹಬ್ಬಕ್ಕೆ ಈರುಳ್ಳಿ ಉತ್ತಪ್ಪ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಈರುಳ್ಳಿ ಉತ್ತಪ್ಪ ಮಾಡಲು ಬೇಕಾಗುವ ವಸ್ತುಗಳೇನು? ಈರುಳ್ಳಿ ಉತ್ತಪ್ಪ ಮಾಡುವುದು ಹೇಗೆ? ಹಿಟ್ಟು ಹೇಗೆ ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈರುಳ್ಳಿ ಉತ್ತಪ್ಪ ಮಾಡಲು ಬೇಕಾಗುವ ಪದಾರ್ಥಗಳು
- ಅಕ್ಕಿ - 2 ಕಪ್
- ಅಲವಕ್ಕಿ - 1 ಕಪ್
- ಉದ್ದಿನ ಬೇಳೆ - 1 ಕಪ್
- ಮೆಂತ್ಯ
- ಈರುಳ್ಳಿ
- ತುಪ್ಪ
- ಕರಿಬೇವು
- ಕೊತ್ತಂಬರಿ ಸೊಪ್ಪು
- ಉಪ್ಪು
- ಹಸಿ ಮೆಣಸು
ಈರುಳ್ಳಿ ಉತ್ತಪ್ಪ ಮಾಡುವುದು ಹೇಗೆ?
ಒದಲು ಒಂದು ಬೌಲ್ನಲ್ಲಿ 2 ಕಪ್ ಅಕ್ಕಿ ಹಾಕಿ ಚೆನ್ನಾಗಿ ತೊಳೆದು ನೆನೆಸಿಡಬೇಕು. ಹಾಗೆ ಇನ್ನೊಂದು ಬೌಲ್ ತೆಗೆದುಕೊಂಡು ಅದಕ್ಕೆ ಅರ್ಧ ಕಪ್ ಉದ್ದಿನ ಬೇಳೆ, ಅರ್ಧ ಕಪ್ ಗಟ್ಟಿ ಅವಲಕ್ಕಿ, ಒಂದು ಚಮಚ ಮೆಂತ್ಯ ಹಾಕಿ ಚೆನ್ನಾಗಿ ತೊಳೆದು ನೆನೆಸಿಡಬೇಕು. ಸುಮಾರು 3ರಿಂದ 4 ಗಂಟೆ ನೆನೆಸಿಡಬೇಕು.
ಈಗ ನೆನೆಸಿಟ್ಟಿರುವ ಉದ್ದಿನ ಬೇಳೆ, ಅವಲಕ್ಕಿ, ಮೆಂತ್ಯ ತೆಗೆದುಕೊಂಡು ನೀರು ತೆಗೆದು ಮಿಕ್ಸಿ ಜಾರ್ಗೆ ಹಾಕಿಕೊಂಡು ರುಬ್ಬಿಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಹಾಕಿಕೊಂಡು ನುಣ್ಣಗೆ ರುಬ್ಬಿಕೊಳ್ಳಬೇಕು. ಈಗ ಅಕ್ಕಿಯನ್ನು ಸಹ ನುಣ್ಣಗೆ ರುಬ್ಬಿಕೊಂಡು ಅದೇ ಹಿಟ್ಟಿಗೆ ಮಿಕ್ಸ್ ಮಾಡಿ. ನೀರು ಎಷ್ಟು ಬೇಕು ಎಂಬುದನ್ನು ನೋಡಿಕೊಂಡು ಹಾಕಿಕೊಳ್ಳಿ.
ಹಿಟ್ಟು ತೆಳುವಾಗಿರುವುದು ಬೇಡ. ನಂತರ ಚೆನ್ನಾಗಿ ಕೈಯಲ್ಲಿ ಕಲಸಿ ಹಿಟ್ಟನ್ನು ಮುಚ್ಚಿಡಬೇಕು. ಸುಮಾರು 7ರಿಂದ 8 ಗಂಟೆ ಮುಚ್ಚಿಡಬೇಕು. ಮಾರನೆ ದಿನ ಬೆಳಗ್ಗೆ ಉಪ್ಪು ಹಾಕಿಕೊಂಡು ಮತ್ತೆ ಕಲಸಿಕೊಳ್ಳಿ.
ಈಗ ಒಂದು ಪ್ಲೇಟ್ನಲ್ಲಿ ಸಣ್ಣದಾಗಿ ಹೆಚ್ಚಿಕೊಂಡಿರುವ ಈರುಳ್ಳಿ, ಕೊತ್ತಂಬರಿ ಸೊಪ್ಪು, ಕರಿಬೇವು, ಉಪ್ಪು, ಹಸಿಮೆಣಸು ತೆಗೆದುಕೊಂಡು ಕಲಸಿಕೊಂಡು ಇಟ್ಟುಕೊಳ್ಳಿ. ಈಗ ದೋಸೆ ಕಾವಲಿ ಒಲೆ ಮೇಲೆ ಇಟ್ಟು ಬಿಸಿಯಾಗಲು ಬಿಡಿ. ಅದು ಬಿಸಿಯಾದಾಗ ಎಣ್ಣೆ ಹಚ್ಚಿಕೊಂಡು ಸೆಟ್ ದೋಸೆ ಹಾಕಿದಂತೆಯೇ ಹಿಟ್ಟನ್ನು ಅದರ ಮೇಲೆ ಹಾಕಿ. ಈ ದೋಸೆ ದಪ್ಪವಾಗಿ ಬರಬೇಕು. ಹಿಟ್ಟು ಹಾಕಿದ ಬಳಿಕ ಅದರ ಮೇಲೆ ಈ ಈರುಳ್ಳಿ, ಕೊತ್ತಂಬರಿಯ ಎಲ್ಲಾ ಮಿಶ್ರಣವನ್ನು ಸ್ವಲ್ಪ ಸ್ವಲ್ಪ ಉದುರಿಸಿಕೊಂಡು ಬೇಯಲು ಬಿಡಬೇಕು. ಉತ್ತಪ್ಪ ಮೇಲೆ ಸ್ವಲ್ಪ ತುಪ್ಪ ಹಾಕಿದರೆ ಮತ್ತಷ್ಟು ರುಚಿ ಬರುತ್ತೆ. ನಂತರ ಉತ್ತಪ್ಪವನ್ನು ಎರಡೂ ಕಡೆ ಕಾಯಿಸಿಕೊಳ್ಳಿ.
ಇಷ್ಟಾದರೆ ನಿಮ್ಮ ಮುಂದೆ ರುಚಿಕರ ಉತ್ತಪ್ಪ ರೆಡಿಯಾಗಿರುತ್ತದೆ. ಇದನ್ನು ಚಟ್ನಿ, ಸಾಂಬಾರ್, ಚಟ್ನಿ ಪುಡಿ ಜೊತೆಗೆ ಸವಿಯಲು ನೀಡಬಹುದು.



Click it and Unblock the Notifications
