Latest Updates
-
ಸಣ್ಣ ಫ್ಲ್ಯಾಟ್ನಲ್ಲಿ ಗಣೇಶೋತ್ಸವ: ಅತಿಥಿಗಳಿಗಾಗಿ ಜಾಗ ಮತ್ತು ಸುರಕ್ಷತೆಗಾಗಿ ಈ 5 ಟಿಪ್ಸ್ ಫಾಲೋ ಮಾಡಿ -
ಗಣೇಶೋತ್ಸವದ ಪ್ರಸಾದ ಬೇಗ ಹಾಳಾಗುತ್ತಿದೆಯೇ? ಮೋದಕ ಮತ್ತು ಸಿಹಿ ತಿಂಡಿಗಳನ್ನು ತಾಜಾವಾಗಿಡಲು ಈ ಟಿಪ್ಸ್ ಪಾಲಿಸಿ! -
ಗಣೇಶೋತ್ಸವ 2026: ಲಾಲ್ಬಾಗ್ಚಾ ರಾಜನ ದರ್ಶನಕ್ಕೆ ಬೆಸ್ಟ್ ಟೈಮ್ ಯಾವುದು? ಮೆಟ್ರೋ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ! -
ಹಬ್ಬದ ಪೂಜೆಯ ವೇಳೆ ಮೊಣಕಾಲು ಮತ್ತು ಬೆನ್ನು ನೋವು ಕಾಡುತ್ತಿದೆಯೇ? ನೋವಿಲ್ಲದೆ ಪೂಜೆ ಮಾಡಲು ಇಲ್ಲಿದೆ 10 ನಿಮಿಷಗಳ ಸಿಂಪಲ್ ಟಿಪ್ಸ್! -
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್!
ಯುಗಾದಿ ಸ್ಪೆಷಲ್: ವಿಭಿನ್ನ ರುಚಿ ನೀಡುವ ತೊಗರಿ ಬೇಳೆ ಹೋಳಿಗೆ!
ಯುಗಾದಿಯನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸಲಾಗುತ್ತದೆ. ಹಿಂದೂಗಳಿಗೆ ಇದು ಹೊಸ ವರ್ಷದಂತೆ ಆಚರಿಸಲಾಗುತ್ತದೆ. ವಸಂತ ಋತು ಆರಂಭವಾಗುವ ಸಮಯವನ್ನು ಯುಗಾದಿ ಹಬ್ಬವೆಂದು ಆಚರಿಸಲಾಗುತ್ತದೆ. ಈ ಹಬ್ಬ ಹೊಸತನ್ನು ತರುವ, ಸಂತಸ ತರುವ ಹಬ್ಬ. ಈ ದಿನ ಹಿಂದೂಗಳು ಬೇವು ಬೆಲ್ಲ ಸವಿದು ಹಬ್ಬದ ಸಂಭ್ರಮ ದುಪ್ಪಟ್ಟಾಗಿಸುತ್ತಾರೆ. ಹಾಗೆ ಹಬ್ಬ ಅಂದ ಮೇಲೆ ಆ ದಿನ ಸಿಹಿ ತಿಂಡಿ ಇದ್ದೇ ಇರುತ್ತೆ.
ಹಬ್ಬದಲ್ಲಿ ಸಿಹಿ ತಿಂಡಿ ಮಾಡುವುದು ಸಾಮಾನ್ಯ ಹಾಗೆ ಈ ಯುಗಾದಿಯಲ್ಲಿ ಎಲ್ಲರ ಮನೆಯಲ್ಲು ಮಾಡುವಂತಹ ಸಿಹಿ ಅಂದ್ರೆ ಅದು ಹೋಳಿಗೆ. ಯುಗಾದಿಯಲ್ಲಿ ಬಹುತೇಕರು ಹೋಳಿಗೆ ಮಾಡಿ ಸವಿಯುತ್ತಾರೆ. ಹಾಗೆ ಇದು ಎಲ್ಲರಿಗೂ ಇಷ್ಟವಾಗುವಂತಹ ಸಿಹಿ ತಿಂಡಿ. ಈ ಹಬ್ಬದಲ್ಲಿ ವಿಶೇಷ ಬಗೆಯಲ್ಲಿ ಹಲವು ರೀತಿ ತಿಂಡಿ ಮಾಡುತ್ತಾರೆ.
ನಾವಿಂದು ಸುಲಭವಾಗಿ ಮಾಡುವಂತಹ ಹಾಗೆ ವಿಶೇಷ ಬಗೆಯ ಹೋಳಿಗೆ ಮಾಡುವ ಕುರಿತು ತಿಳಿದುಕೊಳ್ಳೋಣ. ಹೋಳಿಗೆಗಳಲ್ಲಿ, ಕಾಯಿ ಹೋಳಿಗೆ, ಬೇಳೆ ಹೋಳಿಗೆ, ಕಾಯಿ ಹೋಳಿಗೆ, ಕ್ಯಾರೆಟ್ ಹೋಳಿಗೆ ಹೀಗೆ ಹಲವು ರೀತಿಯ ಹೋಳಿಗೆಗಳ ಮಾಡುವುದು ನೋಡಿರಬಹುದು. ಹಾಗೆ ಈ ರೀತಿಯ ಹೋಳಿಗೆಗಳ ಹೆಸರು ಕೇಳಿದ್ರೆ ಬಾಯಲ್ಲಿ ನೀರು ಬರಲಿದೆ.
ನಾವಿಂದು ಈ ಯುಗಾದಿಗೆ ವಿಶೇಷವಾಗಿ ಮಾಡುವಂತಹ ವಿಭಿನ್ನ ರೀತಿಯ ತೊಗರಿ ಬೇಳೆ ಹೋಳಿಗೆ ಮಾಡುವ ಕುರಿತು ತಿಳಿಯೋಣ. ಈ ಹೋಳಿಗೆ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು ಎಂಬುದನ್ನು ತಿಳಿದುಕೊಳ್ಳಿ.
ತೊಗರಿ ಬೇಳೆ ಹೋಳಿಗೆ ಮಾಡಲು ಬೇಕಾಗುವ ಪದಾರ್ಥಗಳು
- ತೊಗರಿ ಬೇಳೆ
- ಮೈದಾ
- ಬೆಲ್ಲ
- ಏಲಕ್ಕಿ
- ತೆಂಗಿನ ಕಾಯಿ ತುರಿ
- ಉಪ್ಪು
- ಅರಶಿಣ ಪುಡಿ
ತೊಗರಿ ಬೇಳೆ ಹೋಳಿಗೆ ಮಾಡುವ ವಿಧಾನವೇನು?
ಮೊದಲು ಒಂದು ಪಾತ್ರೆಗೆ 3 ಕಪ್ ಅಳತೆಯಲ್ಲಿ ಮೈದಾ ಹಿಟ್ಟು ಹಾಕಿಕೊಳ್ಳಿ. ಅದಕ್ಕೆ ಚೂರು ಅರಶಿಣ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿ. ಅನಂತರ ಸ್ವಲ್ಪ ಸ್ವಲ್ಪ ನೀರು ಹಾಕಿಕೊಳ್ಳುತ್ತಾ ಚೆನ್ನಾಗಿ ಮಿಶ್ರಣ ಮಾಡಬೇಕು. ಈ ಹಿಟ್ಟು ನಿಧಾನವಾಗಿ ಹದ ಮಾಡಬೇಕು. 2 ಸ್ಪೂನ್ ಎಣ್ಣೆ ಹಾಕಿ ಹಂತ ಹಂತವಾಗಿ ಎಣ್ಣೆ ಹಾಕುತ್ತಾ ಹದ ಮಾಡಬೇಕು. ಹಿಟ್ಟು ಮೃದುವಾಗಿ ಬರುವವರೆಗೂ ಹದ ಮಾಡಬೇಕು.
ಚಪಾತಿಗಿಂತ ಮದುವಾಗಿ ಈ ಹಿಟ್ಟನ್ನು ಹದ ಮಾಡಬೇಕು. ನಂತರ ಹಿಟ್ಟನ್ನು ಒಂದು ಪಾತ್ರೆಯಲ್ಲಿ ಹಾಕಿ ಎಣ್ಣೆ ಹಚ್ಚಿ ಮುಚ್ಚಿ 2 ಗಂಟೆ ಇಡಬೇಕು. ಈಗ ಹೂರ್ಣ ಮಾಡಬೇಕು. ಒಂದು ಪಾತ್ರೆ ತೆಗದುಕೊಂಡು ಅದಕ್ಕೆ ಬೇಳೆ ಹಾಕಿಕೊಂಡು ತೊಳೆದು ನೀರು ಹಾಕಿ ಬೇಯಲು ಬಿಡಿ. ಅದಕ್ಕೆ 1 ಸ್ಪೂನ್ ಎಣ್ಣೆ ಅರಶಿಣ ಹಾಕಿಕೊಂಡು ಕುದಿಬರಲು ಬಿಡಿ.
ನಂತರ ತೊಗರಿ ಬೇಳೆಯನ್ನು ಒಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಅದಕ್ಕೆ ಪುಡಿ ಮಾಡಿಕೊಂಡ ಒಂದೂವರೆ ಕಪ್ ಬೆಲ್ಲ ಹಾಕಿ 2 ಕಪ್ ತೆಂಗಿನ ತುರಿ ಸಹ ಹಾಕಿಕೊಂಡು ಮಧ್ಯಮ ಉರಿಯಲ್ಲಿ ಬೇಯಲು ಬಿಡಿ. 5 ನಿಮಿಷ ಮಿಕ್ಸ್ ಮಾಡುತ್ತಾ ಬೇಯಿಸಿ. ಬೆಲ್ಲ ಕರಗಿದರೆ ಸಾಕು. ಕೊನೆಯಲ್ಲಿ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿ ಇಳಿಸಿಕೊಳ್ಳಿ.
ಇದನ್ನು ತಣ್ಣಗಾಗಲು ಬಿಟ್ಟು ಅನಂತರ ಮಿಕ್ಸಿ ಜಾರ್ಗೆ ಹಾಕಿ ರುಬ್ಬಬೇಕು. ನೀರು ಹಾಕದೆ ಗಟ್ಟಿಯಾಗಿದ್ದಾಗಲೇ ರುಬ್ಬಬೇಕು. ಇದು ಮೃದುವಾಗಿ ಹೂರ್ಣ ಬರಬೇಕು, ನಂತರ ಇದನ್ನು ಸಹ ಒಂದು ಪಾತ್ರೆಗೆ ಹಾಕಿಡಿ.
ಈಗ ಮೈದಾ ಹಿಟ್ಟನ್ನು ಮತ್ತೆ ಹದ ಮಾಡಿಕೊಂಡು , ಚಪಾತಿಯಂತೆ ಲಟ್ಟಿಸಬೇಕು. ಆದ್ರೆ ಎಣ್ಣೆ ಹಚ್ಚಿಕೊಂಡು ಲಟ್ಟಿಸಿಕೊಳ್ಳಿ. ಹಾಗೆ ಅದರ ಮಧ್ಯದಲ್ಲಿ ಹೂರ್ಣ ಇಟ್ಟು ಚಂಡಿನಂತೆ ಉಂಡೆ ಕಟ್ಟಿಕೊಂಡು ಮತ್ತೆ ಲಟ್ಟಿಸಿಕೊಳ್ಳಬೇಕು. ಅನಂತರ ಕಾವಲಿಯಲ್ಲಿ ಕಾಯಿಸಿಕೊಂಡರೆ ನಿಮ್ಮ ಮುಂದೆ ತೊಗರಿ ಬೇಳೆಯ ಹೋಳಿಗೆ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ಹೋಳಿಗೆ ಮಾಡಿ ನೋಡಿ.



Click it and Unblock the Notifications

