Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಉಡುಪಿ ಉಪಹಾರ್ ಸ್ಟೈಲ್‌ನ ಬಿಸಿಬೇಳೆ ಬಾತ್ ಮಾಡಿ..! ರುಚಿ ಅದ್ಭುತವಾಗಿರುತ್ತೆ..!
ಬೆಳಗ್ಗೆ ತಿಂಡಿಗೆ ನೀವು ಮನೆಯಲ್ಲಿ ಚಿತ್ರಾನ್ನ, ಪಲಾವ್, ಪುಳಿಯೋಗರೆ, ರೈಸ್ ಬಾತ್, ಮಸಾಲ ರೈಸ್ ಹೀಗೆ ಅನ್ನದಿಂದ ಮಾಡುವ ಹಲವು ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಇದರ ಜೊತೆಗೆ ಬಿಸಿ ಬೇಳೆ ಬಾತ್ ಕೂಡ ಬಾಯಲ್ಲಿ ನೀರು ತರಿಸುತ್ತದೆ. ಅದರಲ್ಲೂ ಹೋಟೆಲ್‌ನಲ್ಲಿ ಸಿಗುವಂತಹ ಬಿಸಿ ಬೇಳೆ ಬಾತ್ ಮನೆ ಮಂದಿ ಎಲ್ಲ ಕುಳಿತು ಸವಿಯಬಹುದಾ ತಿಂಡಿಯಾಗಿರುತ್ತೆ.
ಅದರಲ್ಲೂ ಕೆಲವೊಂದು ಹೋಟೆಲ್‌ನಲ್ಲಿ ಈ ಬಿಸಿ ಬೇಳೆ ಬಾತ್ ತುಂಬಾನೆ ಫೆಮಸ್ ಆಗಿರುತ್ತೆ. ಅದರಲ್ಲಿ ಈ ಉಡುಪಿ ಹೋಟೆಲ್‌ಗಳಲ್ಲಿ ಸಿಗುವಂತಹ ಬಿಸಿ ಬೇಳೆ ಬಾತ್‌ಗೆ ಒಂದಿಷ್ಟು ಅಭಿಮಾನಿಗಳು ಸಹ ಇದ್ದಾರೆ. ಈ ಬಿಸಿ ಬೇಳೆ ಬಾತ್ ಮೇಲೆ ಸ್ವಲ್ಪ ಕರಿದ ತಿಂಡಿ ಇದ್ದರೆ ಎಂತವರಿಗೂ ಬಾಯಿಯಲ್ಲಿ ನೀರು ಬರುವುದು ಪಕ್ಕ. ಹಾಗೆ ಈ ಬಿಸಿ ಬೇಳೆ ಬಾತ್ ಮಾಡುವುದು ಕೂಡ ತುಂಬಾನೆ ಸುಲಭ.

ನೀವು ಹಲವು ಬಗೆಯಲ್ಲಿ ಬಿಸಿ ಬೇಳೆ ಬಾತ್ ಮಾಡಬಹುದು. ತರಕಾರಿ, ಖಾದ್ಯಗಳು ಹೆಚ್ಚು ಜೆಚ್ಚು ಹಾಕಿದಷ್ಟು ಅದರ ರುಚಿ ಬೊಂಬಾಟ್ ಆಗುತ್ತದೆ. ಬೆಳಗ್ಗೆ ಬ್ರೇಕ್ ಫಾಸ್ಟ್‌ಗೆ ಮಾಡಿದ್ರೆ ಮಧ್ಯಾಹ್ನದ ಲಂಚ್ ಬಾಕ್ಸ್‌ಗೂ ಕೂಡ ಇದನ್ನು ಸವಿಯಬಹುದು. ಅಷ್ಟೊಂದು ರುಚಿಯಾದ ಬಿಸಿ ಬೇಳೆ ಬಾತ್ ಅನ್ನು ನಾವಿಂದು ಉಡುಪಿ ಉಪಹಾರ ಸ್ಟೈಲ್‌ನಲ್ಲಿ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಡುಪಿ ಉಪಹಾರದ ಸ್ಟೈಲ್‌ನಲ್ಲಿ ಬಿಸಿ ಬೇಳೆ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಡುಪಿ ಉಪಹಾರದ ಸ್ಟೈಲ್‌ನಲ್ಲಿ ಬಿಸಿ ಬೇಳೆ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ತೊಗರಿ ಬೇಳೆ
- ಅಕ್ಕಿ
- ಕ್ಯಾಪ್ಸಿಕಂ
- ಎಣ್ಣೆ
- ಕರಿಬೇವು
- ಟೊಮೆಟೋ
- ಒಣ ಮೆಣಸು
- ಅರಶಿನ
- ಹುಣಸೆ ಹುಳಿ
- ಬೀನ್ಸ್
- ಕ್ಯಾರೆಟ್
- ನವಿಲು ಕೋಸು
- ಸಾಸಿವೆ
- ಉಪ್ಪು
ಉಡುಪಿ ಉಪಹಾರದ ಸ್ಟೈಲ್‌ನಲ್ಲಿ ಬಿಸಿ ಬೇಳೆ ಬಾತ್ ಮಾಡುವ ವಿಧಾನ
ಈ ಬಿಸಿ ಬೇಳೆ ಬಾತ್‌ಗೆ ಹಾಕಲು ನೀವು ಎಲ್ಲಾ ತರಕಾರಿಗಳ ಕತ್ತರಿಸಿ ಇಟ್ಟುಕೊಳ್ಳಿ. ಒಂದು ಬೌಲ್‌ನಲ್ಲಿ ತೊಗರಿ ಬೇಳೆ ಚೆನ್ನಾಗಿ ತೊಳೆದು ನೆನೆಸಿಡಬೇಕು. ಅಕ್ಕಿಯನ್ನು ಕೂಡ ಈ ವೇಳೆ ನೆನೆಸಿಟ್ಟುಕೊಳ್ಳಿ. 1 ಗಂಟೆ ಎರಡೂ ಪದಾರ್ಥ ನೆನೆಸಿಟ್ಟರೆ ಉತ್ತಮ.
ನಂತರ ಒಂದು ಕುಕ್ಕರ್ ತೆಗೆದುಕೊಂಡು ಒಲೆ ಮೇಲಿಟ್ಟು ಅದಕ್ಕೆ ನೆನೆಸಿದ್ದ ತೊಗರಿ ಬೇಳೆ ಹಾಗೂ ಅಕ್ಕಿಯನ್ನು ಹಾಕಿಕೊಂಡು ಹೆಚ್ಚಿರುವ ಎಲ್ಲಾ ತರಕಾರಿಗಳ ಹಾಕಿ. ಹಾಗೆ ಅಕ್ಕಿ ತೆಗೆದುಕೊಂಡ ಗ್ಲಾಸ್‌ನಲ್ಲಿ 7 ಗ್ಲಾಸ್ ನೀರು ಸಹ ಹಾಕಿಕೊಳ್ಳಿ. 1 ಕಪ್ ಅಕ್ಕಿಗೆ 7 ಕಪ್ ನೀರಿನ ಅಳತೆ ಮಾಡಿಕೊಳ್ಳಿ. ನಂತರ ಇದಕ್ಕೆ ಅರಶಿನ, ಉಪ್ಪು, ಎಣ್ಣೆ ಹಾಕಿ ಚೆನ್ನಾಗಿ ಕಲಸಿಕೊಂಡು ಕುಕ್ಕರ್ ಮುಚ್ಚಳ ಹಾಕಿ.
ಹಾಗೆ ಸುಮಾರು 5 ಸೀಟಿ ಹೊಡೆಯಲು ಬಿಡಿ. ಈಗ ಇನ್ನೊಂದು ಕಡೆ ಪಾತ್ರೆಗೆ ನಿಂಬೆ ಹುಳಿ ಹಾಕಿ ಅದಕ್ಕೆ ಬಿಸಿ ಬೇಳೆ ಬಾತ್ ಪೌಡರ್ ಹಾಕಿ. ನಂತರ ಇದಕ್ಕೆ ಸಣ್ಣ ಬೆಲ್ಲದ ಉಂಡೆ, ಅಚ್ಚು ಖಾರದ ಪುಡಿ ಹಾಕಿ ಮಿಕ್ಸ್ ಮಾಡಿ ಕರಗಿಸಿ. ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಎಣ್ಣೆ ಹಾಕಿ ಸಾಸಿವೆ, ಒಣ ಮೆಣಸು, ಟೊಮೆಟೋ, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ ಹುಣಸೆ ಹುಳಿ, ಬಿಸಿ ಬೇಳೆ ಬಾತ್ ಪೌಡರ್‌ನ ಮಿಶ್ರಣವನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಹಾಕಿ.
ಹಾಗೆ ಸ್ವಲ್ಪ ಕುದಿಬರಲು ಬಿಡಬೇಕು. ಈಗ ಕುಕ್ಕರ್‌ನಲ್ಲಿರುವ ಬಿಸಿ ಬೇಳೆ ಬಾತ್ ಅನ್ನು ಕಲಸಿಕೊಳ್ಳಿ. ಹಾಗೆ ಒಲೆ ಮೇಲೆ ಕುದಿಯುತ್ತಿರುವ ಮಸಾಲೆಯನ್ನು ಕುಕ್ಕರ್‌ನ ಬಿಸಿ ಬೇಳೆ ಬಾತ್‌ಗೆ ಹಾಕಿಕೊಂಡಿ ಮಿಕ್ಸ್ ಮಾಡಿದರೆ ನಿಮ್ಮ ಮುಂದೆ ಬಿಸಿ ಬೇಳೆ ಬಾತ್ ರೆಡಿಯಾಗುತ್ತದೆ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ.



Click it and Unblock the Notifications