Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಉಡುಪಿ ಶೈಲಿಯ ಸೆಟ್ ದೋಸೆ ಮಾಡುವುದು ಹೇಗೆ? ಇಲ್ಲಿದೆ ಸುಲಭದ ರೆಸಿಪಿ..!
ನೀವು ದೋಸೆಯಲ್ಲಿ ಒಂದೇ ರೀತಿಯ ರೆಸಿಪಿ ಮಾಡಿ ಸೇವಿಸಿ ಬೇಸರವಾಗಿದ್ಯಾ? ಏಕೆಂದ್ರೆ ದೋಸೆಯಲ್ಲಿ ಹತ್ತಾರು ವೆರೈಟಿಗಳಿವೆ. ಆದ್ರೆ ನಾವು ಮಾತ್ರ ಮಸಾಲಾ ದೋಸೆ ಇಲ್ಲವೆ ರವೆ ದೋಸೆ, ಖಾಲಿ ದೋಸೆ, ನೀರು ದೋಸೆ ಮಾಡಿ ತಿನ್ನುತ್ತೇವೆ. ಆದ್ರೆ ನಾವು ಉಡುಪಿ ಶೈಲಿಯ ಸೆಟ್ ದೋಸೆಯನ್ನ ಹೋಟೆಲ್ಗಳಲ್ಲಿ ಸೇವಿಸಿ ರುಚಿ ನೋಡಿರುತ್ತೇವೆ.
ಆದ್ರೆ ನಾವಿಂದು ಹೋಟೆಲ್ ಶೈಲಿಯ ಸೆಟ್ ದೋಸೆಯನ್ನು ಮಾಡುವುದು ಹೇಗೆ? ಸೆಟ್ ಮಾಡಲು ಬೇಕಾದ ಪದಾರ್ಥಗಳೇನು? ಸೆಟ್ ದೋಸೆ ಪಾಕವಿಧಾನವೇನು ಎಂಬುದನ್ನು ನಾವಿಂದು ನೋಡೋಣ.

ಹೋಟೆಲ್ ಶೈಲಿಯ ಸೆಟ್ ದೋಸೆ ಮಾಡಲು ಯಾವ ಪದಾರ್ಥಗಳು
ಬೇಕು?
- ಅಕ್ಕಿ - 200 ಗ್ರಾಂ
- ಅವಲಕ್ಕಿ - ಅರ್ಧ ಕಪ್
- ಉದ್ದು - 2 ಟೀಸ್ಪೂನ್
- ಮೆಂತ್ಯ - 1 ಟೀಸ್ಪೂನ್
- ಅಡಿಗೆ ಸೋಡಾ - ಕಾಲು ಟೀಚಮಚ
- ಸಕ್ಕರೆ - ಕಾಲು ಟೀಚಮಚ
- ನೀರು
- ಉಪ್ಪು
- ತುಪ್ಪ
ಸೆಟ್ ದೋಸೆ ಮಾಡುವ ಪಾಕವಿಧಾನ
ಒಂದು ಬಟ್ಟಲಿನಲ್ಲಿ ಅಕ್ಕಿ, ಬೇಳೆ ಮತ್ತು ಮೆಂತ್ಯ ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ನೀವು ಅಕ್ಕಿ ಬದಲಿಗೆ ರವೆಯನ್ನೂ ಬಳಸಬಹುದು. ಅವುಗಳಿಂದ ನೀರು ತೆಗೆದು ಬದಿಗೆ ಇಡಿ. ಈಗ ಇನ್ನೊಂದು ಬಟ್ಟಲಿನಲ್ಲಿ ಅವಲಕ್ಕಿ ತೆಗೆದುಕೊಂಡು ಎರಡು ಬಾರಿ ನೀರಿನಿಂದ ತೊಳೆಯಿರಿ. ಈಗ ಅಕ್ಕಿ, ಬೇಳೆ, ಮೆಂತ್ಯ, ಅವಲಕ್ಕಿ ಸೇರಿಸಿ ಮತ್ತು ನೀರು ಹಾಕಿ. 5 ಗಂಟೆಗಳ ಕಾಲ ಅವುಗಳನ್ನು ನೆನೆಯಲು ಬಿಡಿ.
ಇವು ಚೆನ್ನಾಗಿ ನೆನೆಸಿದ ನಂತರ ನೀರನ್ನು ಸೋಸಿ ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಅವುಗಳನ್ನು ಸಂಪೂರ್ಣವಾಗಿ ಮೃದುವಾಗಿ ಮತ್ತು ದೋಸೆ ಹಿಟ್ಟಿನಂತೆ ಸಿದ್ಧಗೊಳಿಸಿ. ಅಗತ್ಯವಿರುವಂತೆ ನೀರು ಸೇರಿಸಿ.
ತಯಾರಾದ ಮಿಶ್ರಣವನ್ನು ಒಂದು ಪಾತ್ರೆಯಲ್ಲಿ ತೆಗೆದುಕೊಳ್ಳಿ. ಈ ಹಿಟ್ಟಿಗೆ ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಈ ಹಿಟ್ಟನ್ನು 8 ಗಂಟೆಗಳ ಕಾಲ ಹುದುಗಲು ಬಿಡಿ. ಹಿಟ್ಟು ಹುಳಿಯಾಗಲು ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟು ದಪ್ಪವಾಗಿದ್ದರೆ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ಮೊದಲು ಒಲೆ ಮೇಲೆ ದೋಸೆ ತವಾವನ್ನು ಬಿಸಿ ಮಾಡಿ. ಸ್ವಲ್ಪ ತುಪ್ಪ ಹಾಕಿ.. ಹಿಟ್ಟನ್ನು ಒಮ್ಮೆ ಚೆನ್ನಾಗಿ ಕಲಸಿ ಬಳಿಕ ದೋಸೆ ಹಿಟ್ಟನ್ನು ಪ್ಯಾನ್ ಮೇಲೆ ಹಾಕಿ. ಈ ಹಿಟ್ಟಿಗೆ ನೀವು ಕ್ಯಾರೆಟ್, ಹಸಿರು ಮೆಣಸು, ಈರುಳ್ಳಿ ಹೆಚ್ಚಿಕೊಂಡು ಹಾಕಬಹುದು. ಇದರಿಂದ ದೋಸೆಯ ರುಚಿ ಹೆಚ್ಚುತ್ತದೆ. ಹೀಗೆ ದೋಸೆಯ ಬಂದು ಭಾಗವನ್ನು ಮಾತ್ರ ಬೇಯಿಸಬಹುದು. ಆದರೆ ದೋಸೆ ಹೆಚ್ಚು ಕ್ರಿಸ್ಪಿಯಾಗಬೇಕು ಅಂತಾದರೆ ಎರಡೂ ಬದಿಗಳಲ್ಲೂ ಗೋಲ್ಡನ್ ಕಲರ್ ಬರುವವರೆಗೂ ಕಾಯಿಸಬಹುದು. ಇಷ್ಟಾದರೆ ನಿಮ್ಮ ಮುಂದೆ ಉಡುಪಿ ಶೈಲಿಯ ಸೆಟ್ ದೋಸೆ ರೆಡಿ
ನೀವು ಈ ಸೆಟ್ ದೋಸೆಗೆ ತೆಂಗಿನಕಾಯಿ ಚಟ್ನಿ, ಟೊಮೆಟೋ ಚಟ್ನಿ, ಆಲು ಕುರ್ಮಾ, ಸಾಂಬಾರ್ ಜೊತೆಗೆ ಸವಿಯಬಹುದು. ದೋಸೆ ಮಾಡುವಾಗ ತುಪ್ಪದ ಬದಲು ಎಣ್ಣೆಯನ್ನೂ ಬಳಸಬಹುದು. ಹಿಟ್ಟು ಹುದುಗುತ್ತಿರುವಾಗ ಅದನ್ನು ಫ್ರಿಜ್ನಲ್ಲಿ ಇಡಬೇಡಿ.



Click it and Unblock the Notifications
