Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಉಡುಪಿ ಹೋಟೆಲ್ ಶೈಲಿಯ ಈ ಬದನೆಕಾಯಿ ಸಾಂಬಾರ್ ಸವಿದು ನೋಡಿ..! ಬಾಯಲ್ಲಿ ನೀರು ಬರೋದು ಪಕ್ಕ!
ನೀವು ಊಟದೊಂದಿಗೆ ಸವಿಯಲು ಯಾವುದಾದರೊಂದು ತರಕಾರಿ ಬಳಸಿ ಸಂಬಾರ್ ಮಾಡಿಯೇ ಮಾಡುತ್ತೀರಿ. ಅದರಲ್ಲೂ ರುಚಿ ರುಚಿಯಾಗಿ ಸಂಬಾರ್ ಘಮ ಘಮ ಎನ್ನುವಂತೆ ಮಾಡಲು ಸರಿಯಾದ ಪ್ರಮಾಣದಲ್ಲಿ ಅದಕ್ಕೆ ಮಸಾಲೆಗಳ ಬಳಸಬೇಕಾಗುತ್ತದೆ. ಹಾಗೆ ಸಾಂಬಾರ್ ಪೌಡರ್ ರುಚಿಯಾಗಿದ್ದರೆ ಸಂಬಾರ್ ಕೂಡ ರುಚಿಯಾಗಿರಲಿದೆ. ಇನ್ನು ಹೋಟೆಲ್‌ಗಳಲ್ಲಿ ಸಿಗುವಂತಹ ಸಾಂಬಾರ್ ಬಾಯಲ್ಲಿ ನೀರು ತರಿಸುವುದು ನೋಡಬಹುದು.
ಅದ್ರಲ್ಲೂ ಉಡುಪಿ ಹೋಟೆಲ್‌ನ ರುಚಿಯಾದ ಅಡುಗೆಯಲ್ಲಿ ಈ ಸಾಂಬಾರ್ ಕೂಡ ಒಂದು ಎನ್ನಬಹುದು. ಅದ್ರಲ್ಲೂ ಬದನೆಕಾಯಿಯಿಂದ ಅವರು ಮಾಡುವಂತಹ ಸಾಂಬಾರ್ ಅದ್ಭುತ ರುಚಿಗೆ ಕಾರಣವಾಗುತ್ತದೆ. ಇದರಿಂದ ಊಟದ ರುಚಿ ಕೂಡ ದುಪ್ಪಟ್ಟಾಗಿರಲಿದೆ. ಹೀಗಾಗಿ ಊಟದ ಜೊತೆಗೆ ನೀವಲ್ಲಿ ಬದನೆಕಾಯಿ ಹೀರೆಕಾಯಿ ನುಗ್ಗೆಕಾಯಿಯಿಂದ ಮಾಡಿದ ಸಾಂಬಾರ್ ಹೆಚ್ಚಾಗಿ ನೋಡುವಿರಿ.

ನಾವಿಂದು ಉಡುಪಿ ಹೋಟೆಲ್ ಶೈಲಿಯಲ್ಲಿ ಬದನೆಕಾಯಿ ಸಾಂಬಾರ್ ಮಾಡುವ ಕುರಿತಾಗಿ ತಿಳಿಯೋಣ, ಒಮ್ಮೆ ಸವಿದರೆ ನೀವು ಒದೇ ಒದೇ ಇದೇ ಸಾಂಬಾರ್ ಸವಿಯಲು ಮನಸ್ಸಾಗುವಂತಹ ರೆಸಿಪಿ ಇದು. ಈ ಸಾಂಬಾರ್ ಗೆ ಏನೆಲ್ಲಾ ಹಾಕಬೇಕು? ಮಾಡುವ ವಿಧಾನಗಳ ಕುರಿತು ತಿಳಿಯೋಣ. ಹಾಗೆ ಮನೆಯಲ್ಲೇ ಇದನ್ನು ಊಟದೊಂದಿಗೆ ಸವಿಯಲು ಮಾಡುವ ಪ್ರಯತ್ನ ಮಾಡೋಣ.
ಬದನೆಕಾಯಿ ಸಾಂಬಾರ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಉಡುಪಿ ಹೋಟೆಲ್ ಶೈಲಿ ಬದನೆಕಾಯಿ ಸಾಂಬಾರ್ ಮಾಡಲು ಬೇಕಾಗುವ ಪದಾರ್ಥಗಳು
- ಬದನೆಕಾಯಿ
- ಎಳ್ಳು
- ಎಣ್ಣೆ
- ಉಪ್ಪು
- ಅರಶಿಣ
- ಮೆಣಸು
- ಕರಿಬೇವು
- ಕಡಲೆ ಬೇಳೆ
- ಇಂಗು
- ಜೀರಿಗೆ
- ಮೆಂತ್ಯ
- ದನಿಯಾ ಕಾಳು
- ಹುಣಸೆ ಹುಳಿ
- ಬೆಲ್ಲ
ಉಡುಪಿ ಹೋಟೆಲ್ ಶೈಲಿ ಬದನೆಕಾಯಿ ಸಾಂಬಾರ್ ಮಾಡುವುದು ಹೇಗೆ?
ಮೊದಲು ಬದನೆಕಾಯಿಯನ್ನು ಕತ್ತಿರಿಸಿಕೊಂಡು ನೀರಿನಲ್ಲಿ ಹಾಕಿಟ್ಟುಕೊಳ್ಳಿ. ಯಾವುದೇ ಬದನೆಕಾಯಿ ಬಳಸಬಹುದು. ಈಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಬಿಳಿ ಎಳ್ಳು ಹಾಕಿ ಹುರಿದುಕೊಳ್ಳಿ. ನಂತರ ಎಳ್ಳು ತೆಗೆದಿಟ್ಟು ಈಗ ಎಣ್ಣೆ ಹಾಕಿಕೊಂಡು ಕಡಲೆ ಬೇಳೆ ಕೂಡ ಹಾಕಿ ಹುರಿದುಕೊಂಡು ಬಳಿಕ ದನಿಯಾ ಕಾಳು, ಜೀರಿಗೆ, ಮೆಂತ್ಯ, ಇಂಗು ಹಾಕಿಕೊಂಡು ಪ್ರೈ ಮಾಡಿಕೊಳ್ಳಿ.
ಹಾಗೆ ಬ್ಯಾಡಗಿ ಮೆಣಸು, ಕರಿಬೇವು ಕೊನೆಯಲ್ಲಿ ಹಾಕಿ ಫ್ರೈ ಮಾಡಿಕೊಳ್ಳಿ. ಈಗ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈಗ ಒಂದು ಪಾತ್ರೆ ಒಲೆ ಮೇಲೆ ಇಟ್ಟು ಅದಕ್ಕೆ ಹುಣಸೆ ಹುಳಿ ಹಾಕಿಕೊಳ್ಳಿ. ನಿಂಬೆ ಹಣ್ಣು ಗಾತ್ರದ ಹುಳಿಯನ್ನು ನೀರಿನಲ್ಲಿ ಹಿಂಡಿಕೊಂಡು ಇದಕ್ಕೆ ಹಾಕಿಕೊಳ್ಳಿ. ಹಾಗೆ 1 ಗ್ಲಾಸ್ ನೀರು ಕೂ ಹಾಕಿಕೊಳ್ಳಿ.

ಹಾಗೆ ಅದಕ್ಕೆ ಅರಶಿಣ, ಉಪ್ಪು, ಬೆಲ್ಲ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಈಗ ತಣ್ಣಗಾಗಿರುವ ಮಸಾಲೆಗಳನ್ನು ಮಿಕ್ಸಿ ಜಾರ್‌ಗೆ ಹಾಕಿಕೊಂಡು ನುಣ್ಣಗೆ ಪುಡಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಕುದಿಯುತ್ತಿರುವ ನೀರಿಗೆ ಹೆಚ್ಚಿಕೊಂಡಿರುವ ಬದನೆಕಾಯಿಗಳನ್ನು ಹಾಕಿಕೊಳ್ಳಿ. ನಂತರ ಮಿಕ್ಸ್ ಮಾಡಿ ಮತ್ತೆ ಕುದಿಯಲು ಬಿಡಿ. ಈಗ ಪುಡಿ ಮಾಡಿಕೊಂಡಿರುವ ಎಲ್ಲಾ ಮಸಾಲೆ ಪದಾರ್ಥಗಳನ್ನು ಸಾರಿಗೆ ಹಾಕಿ ಕುದಿಬರಲು ಬಿಡಿ.
3 ನಿಮಿಷಗಳ ಕಾಲ ಮುಚ್ಚಳ ಮುಚ್ಚಿ ಕುದಿಬರಲು ಬಿಡಿ. ಕುದಿಬರುವಾಗ ಈಗ ಒಂದು ಒಗ್ಗರಣೆ ಹಾಕಿ. ಬಾಣಲೆಗೆ ಎಣ್ಣೆ ಅಥವಾ ಸಾಸಿವೆ ಹಾಕಿ, ಉದ್ದಿನ ಬೇಳೆ, ಕರಿಬೇವು ಬಿಸಿ ಮಾಡಿ ಇದನ್ನು ಸಾಂಬಾರ್‌ಗೆ ಹಾಕಿ ಮಿಕ್ಸ್ ಮಾಡಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಉಡುಪಿ ಹೋಟೆಲ್ ಶೈಲಿಯ ಈ ಬದನೆಕಾಯಿ ಸಾಂಬಾರ್ ರೆಡಿಯಾಗುತ್ತದೆ. ನೀವು ಸಹ ಮನೆಯಲ್ಲಿ ಊಟಕ್ಕೆ ಇದನ್ನು ಟ್ರೈ ಮಾಡಿ.



Click it and Unblock the Notifications