Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಉಡುಪಿ ಹೋಟೆಲ್ ಶೈಲಿಯ ಬಿಸಿ ಬೇಳೆ ಬಾತ್; ಮಾಡುವ ವಿಧಾನ ಬಹಳ ಸುಲಭ!
ಬೆಳಗ್ಗಿನ ತಿಂಡಿಗೆ ನೀವು ಹಲವು ಬಗೆಯ ತಿಂಡಿಗಳ ಮಾಡಿ ಸವಿದಿರುತ್ತೀರಿ. ಅದ್ರಲ್ಲೂ ರೈಸ್ ಬಳಸಿಕೊಂಡು ಮಾಡುವಂತಹ ರುಚಿ ರುಚಿಯಾದ ಖಾದ್ಯಗಳ ಮಾಡಿ ಸವಿಯೋದು ಕಾಮನ್. ಪಲಾವ್, ಚಿತ್ರಾನ್ನ, ರೈಸ್ ಬಾತ್, ಪುಳಿಯೋಗರೆ ಹೀಗೆ ಹತ್ತು ಹಲವು ರೀತಿಯ ಖಾದ್ಯಗಳ ಮಾಡಿ ಸವಿಯೋದು ನೋಡಬಹುದು. ಆದ್ರೆ ನಾವಿಂದು ಉಪುಪಿ ಹೋಟೆಲ್ ಶೈಲಿಯಲ್ಲಿ ಬಿಸಿ ಬೇಳೆ ಬಾತ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ.
ಕೆಲ ದಿನದ ಹಿಂದೆ ನಾವು ಈ ಬಿಸಿ ಬೇಳೆ ಬಾತ್‌ಗೆ ಹೇಗೆ ಮಸಾಲ ಪುಡಿಯನ್ನು ರೆಡಿ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸಿದ್ದೆವು. ಈಗ ಇದೇ ಪುಡಿಯನ್ನು ಬಳಸಿ ಮನೆಯಲ್ಲಿ ಬಿಸಿ ಬೇಳೆ ಬಾತ್ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಅದ್ರಲ್ಲೂ ಬೆಳಗ್ಗೆ ತಿಂಡಿಗೆ ಈ ರುಚಿ ರುಚಿಯ ಬಿಸಿ ಬೇಳೆ ಬಾತ್ ಸವಿಯಲು ಬಹಳ ರುಚಿ ನೀಡಲಿದೆ. ಅದ್ರಲ್ಲೂ ನಿಮ್ಮ ಆರೋಗ್ಯದ ದೃಷ್ಟಿಯಿಂದಲೂ ಸಹ ಬಹಳ ಉತ್ತಮ ಖಾದ್ಯ.

ನೀವು ಉಡುಪಿ ಹೋಟೆಲ್‌ಗಳಿಗೆ ಭೇಟಿ ನೀಡಿದಾಗ ಅಲ್ಲಿ ಸಿಗುವ ವಿಶೇಷ ಖಾದ್ಯದಲ್ಲಿ ಈ ಬಿಸಿ ಬೇಳೆ ಬಾತ್ ಸಹ ಒಂದು. ಘಮ ಘಮ ಎನ್ನುವ ರುಚಿಯು ಮೂಗಿಗೆ ಬಡಿದರೆ ಸವಿಯುವ ಮನಸ್ಸಾಗೋದು ನೋಡಬಹುದು. ಈ ರೈಸ್ ರೆಸಿಪಿಯನ್ನು ಬೆಳಗ್ಗೆ ತಿಂಡಿಯ ಸಮಯಕ್ಕೆ ಸವಿದರೆ ಇಡೀ ದಿನ ನಿಮಗೆ ಉತ್ತಮವಾಗಿರಲಿದೆ. ಹಾಗೆ ಇದನ್ನು ಮನೆಯಲ್ಲಿ ಮಾಡೋದು ಕೂಡ ಬಹಳ ಸುಲಭ.
5 ನಿಮಿಷಕ್ಕೆ ಬಿಸಿ ಬೇಳೆ ಬಾತ್ ಬೇಕಾ? ಈ ರೀತಿ ಮಸಾಲ ಪುಡಿ ಮಾಡಿಟ್ಟುಕೊಳ್ಳಿ
ಹಾಗಾದ್ರೆ ಮನೆಯಲ್ಲಿ ಬಿಸಿ ಬೇಳೆ ಬಾತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?, ಮಾಡುವ ವಿಧಾನವೇನು ಎಷ್ಟು ಸಮಯ ಹಿಡಿಯಲಿದೆ? ತಯಾರಿ ಹೇಗೆ ಮಾಡಿಕೊಳ್ಳಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಬಿಸಿ ಬೇಳೆ ಬಾತ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಅಕ್ಕಿ
- ತೊಗರಿ ಬೇಳೆ
- ಬಿಸಿ ಬೇಳೆ ಬಾತ್ ಪುಡಿ
- ಈರುಳ್ಳಿ
- ಟೊಮೆಟೋ
- ಕರಿಬೇವು
- ಕೊತ್ತಂಬರಿ ಪುಡಿ
- ಶೇಂಗಾ ಕಾಳು
- ಗೆಡ್ಡೆಕೋಸು
- ಆಲೂಗಡ್ಡೆ
- ಬೀನ್ಸ್
- ಕ್ಯಾರೆಟ್
- ಉಪ್ಪು
- ಎಣ್ಣೆ
- ಇಂಗು
- ಸಾಸಿವೆ
ಬಿಸಿ ಬೇಳೆ ಬಾತ್ ಮಾಡುವ ವಿಧಾನವೇನು?
ಮೊದಲು ಅಳತೆ ಕಪ್‌ನಲ್ಲಿ 1 ಕಪ್ ಅಥವಾ ನಿಮಗೆ ಬೇಕಾದಷ್ಟು ಅಕ್ಕಿ ತೆಗೆದುಕೊಂಡು ಪಾತ್ರೆಗೆ ಹಾಕಿಕೊಳ್ಳಿ. ಈಗ ಅದೇ ಕಪ್‌ನಲ್ಲಿ 1 ಕಪ್ ತೊಗರಿ ಬೇಳೆ ಹಾಕಿಕೊಂಡು ಮಿಕ್ಸ್ ಮಾಡಿ ಇಟ್ಟುಕೊಳ್ಳಿ.
ಈಗ ಒಲೆ ಮೇಲೆ ಒಂದು ಕುಕ್ಕರ್ ಇಟ್ಟು ಅದಕ್ಕೆ ಸ್ವಲ್ಪ ನೀರು ಹಾಕಿಕೊಂಡು ಬಿಸಿಯಾಗಲು ಬಡಿ. ನೀರು ಬಿಸಿಯಾದಾಗ ಅದಕ್ಕೆ ಹೆಚ್ಚಿಕೊಂಡಿರುವ ಕ್ಯಾರೆಟ್, ಬೀನ್ಸ್, ಗೆಡ್ಡೆಕೋಸು, ಆಲೂಗಡ್ಡೆ, ಬಟಾಣಿ, ಶೇಂಗಾ ಬೀಜಗಳು, ಒಂದು ಈರುಳ್ಳಿ, 2 ಟೊಮೆಟೋ, ಕರಿಬೇವು ಹಾಕಿ ಮಿಕ್ಸ್ ಮಾಡಿಕೊಂಡು ಬೇಯಲು ಬಿಡಿ.
ಈ ನೀರು ಕುದಿಬರಲು ಆರಂಭಿಸಿದಾಗ ಇದಕ್ಕೆ ಅಕ್ಕಿ ಹಾಗೂ ತೊಗರಿ ಬೇಳೆಯನ್ನು ತೊಳೆದುಕೊಂಡು ಹಾಕಿ. ಮಿಶ್ರಣ ಮಾಡಿ. ಹಾಗೆ ರುಚಿಗೆ ಉಪ್ಪು ಸೇರಿಸಿ. ಈಗ ಒಂದು ನಿಂಬೆ ಗಾತ್ರದ ಹುಳಿಯನ್ನು ನೀರಿನಲ್ಲಿ ನೆನೆಸಿ ನೀರು ತೆಗೆದಿಟ್ಟುಕೊಳ್ಳಿ. ಇದಕ್ಕೆ ಬಿಸಿ ಬೇಳೆ ಬಾತ್ ಪುಡಿ ಸೇರಿಸಿಕೊಳ್ಳಿ. ಮನೆಯಲ್ಲಿ ಮಾಡಿದ ಪುಡಿ ಅಥವಾ ಅಂಗಡಿಯಿಂದ ತಂದ ಪುಡಿಯನ್ನು ಸಹ ಇದಕ್ಕೆ ಹಾಕಿಕೊಳ್ಳಿ.
ನಿಂಬೆ ರಸದೊಂದಿಗೆ ಮಿಶ್ರಣ ಮಾಡಿಕೊಂಡು ಬೇಯುತ್ತಿರುವ ಕುಕ್ಕರ್‌ಗೆ ಈ ಮಿಶ್ರಣವನ್ನು ಹಾಕಿಕೊಳ್ಳಿ. ಕೊನೆಗೆ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸ್ ಮಾಡಿಕೊಂಡು ಸ್ವಲ್ಪ ನೀರು ಸಹ ಹಾಕಿಕೊಂಡು ಒಂದು ಉಂಡೆ ಬೆಲ್ಲ ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಬೇಡಿ. ನಂತರ ಮಧ್ಯಮ ಉರಿಯಲ್ಲಿ 3 ಸೀಟಿ ಹೊಡೆಯಲು ಬಿಡಿ.
ಕುಕ್ಕರ್ ಸೀಟಿ ಹೊಡೆದು ಗ್ಯಾಸ್ ಹೋದ ಬಳಿಕ ಮುಚ್ಚಳ ತೆಗೆದು ಮಿಕ್ಸ್ ಮಾಡಿ. ಈಗ ಬಾಣಲೆ ಒಲೆ ಮೇಲೆ ಇಟ್ಟು ತುಪ್ಪ ಅಥವಾ ಎಣ್ಣೆ ಹಾಕಿ ಬಳಿಕ ಸಾಸಿವೆ, ಒಣ ಮೆಣಸು, ಇಂಗು, ಕರಿಬೇವು ಹಾಕಿ ಒಗ್ಗರಣೆ ಮಾಡಿಕೊಂಡು ಈ ಬಾತ್‌ಗೆ ಹಾಕಿಕೊಂಡು ಮಿಶ್ರಣ ಮಾಡಿ.



Click it and Unblock the Notifications