Latest Updates
-
2026ರಲ್ಲಿ ಚಿನ್ನದ ಆಭರಣ: ತೂಕದಲ್ಲಿ ಕಡಿಮೆ ಖರೀದಿ, ಖರ್ಚಿ ನಲ್ಲಿ ಹೆಚ್ಚು — ಕುಟುಂಬಗಳ ಖರೀ ದಿ ಹೇಗೆ ಬದಲಾಗುತ್ತಿದೆ? -
ನಥಿಂಗ್ ಫೋನ್ (4b) RCB ಎಡಿಷನ್ ಸೇಲ್ ಶುರು: ಫ್ಯಾನ್ಸ್ ಮಿಸ್ ಮಾಡ್ಬೇಡಿ, ಇಂದೇ ಖರೀದಿಸಿ! -
ಆಷಾಢ ಅಮಾವಾಸ್ಯೆ: ಉಪವಾಸದ ದಿನ ಸುಸ್ತಾಗದಂತೆ ಇರಲು ಈ 7 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮಳೆಗಾಲದ ಮದುವೆ: ನಿಮ್ಮ ಸಂಭ್ರಮಕ್ಕೆ ಅಡ್ಡಿಯಾಗದಂತೆ ಪ್ಲಾನ್ ಮಾಡುವುದು ಹೇಗೆ? -
ಮುಂಗಾರು ಮಳೆ: ನಿಮ್ಮ ಬಾಲ್ಕನಿ ಮತ್ತು ಎಸಿ ಸುರಕ್ಷಿತವೇ? ಈ 10 ನಿಮಿಷದ ಕೆಲಸ ಜೀವ ಉಳಿಸಬಹುದು! -
ಮಳೆಗಾಲದಲ್ಲಿ ಆರೋಗ್ಯದ ರಕ್ಷಣೆ: ಕೇವಲ 20 ರೂಪಾಯಿಯಲ್ಲಿ ಸಿಗುವ ಈ ಆಹಾರಗಳು ನಿಮ್ಮನ್ನು ರೋಗಗಳಿಂದ ಕಾಪಾಡುತ್ತವೆ! -
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್
ಉಡುಪಿ ಹೋಟೆಲ್ ಸ್ಟೈಲ್‌ನ ಬಿಸಿ ಬೇಳೆ ಬಾತ್..! ಬಾಯಲ್ಲಿ ನೀರು ಬರೋದು ಪಕ್ಕಾ..!
ಬೆಳಗ್ಗೆ ತಿಂಡಿಗೆ ಪುಳಿಯೋಗರೆ, ಚಿತ್ರಾನ್ನ, ಪಲಾವ್ ಹೀಗೆ ಅನ್ನದಿಂದ ಮಾಡುವ ಹಲವು ಖಾದ್ಯಗಳು ಎಲ್ಲರಿಗೂ ಇಷ್ಟವಾಗುತ್ತೆ. ಹಾಗೆ ಬಿಸಿಬೇಳೆ ಬಾತ್ ಅಂದ್ರೆ ಹಲವರ ಬಾಯಲ್ಲಿ ನೀರು ಬರುವು ಪಕ್ಕಾ. ಬಿಸಿ ಬಿಸಿಯಾಗಿ ಖಾರದ ಜೊತೆಗೆ ಬೇಳೆ ಬಾತ್ ಸವಿಯಲು ನೀಡಿದರೆ ಅದರ ಮಜವೇ ಬೇರೆ. ಹೀಗಾಗಿ ಮನೆಯಲ್ಲಿ ಮಾತ್ರವಲ್ಲ ಹೋಟೆಲ್‌ನಲ್ಲೂ ಕೆಲವರು ಬಿಸಿ ಬೇಳೆ ಬಾತ್ ಸವಿಯುತ್ತಾರೆ.
ಬೆಳಗ್ಗೆ ಮಾತ್ರವಲ್ಲ ಮಧ್ಯಾಹ್ನವೂ ಕೂಡ ಹೋಟೆಲ್‌ಗಳಲ್ಲಿ ಬಿಸಿ ಬೇಳೆ ಬಾತ್ ಸವಿಯುವವರನ್ನು ನಾವು ನೋಡುತ್ತಲೇ ಇರುತ್ತೇವೆ. ಬಿಸಿ ಬೇಳೆ ಬಾತ್‌ನಲ್ಲಿ ತರಕಾರಿಗಳ ಹಾಕಿ ಮೇಲೆ ಒಂದಿಷ್ಟು ಖಾರ ಹಾಕಿಕೊಂಡು ಸವಿಯುವುದು ಎಲ್ಲರಿಗೂ ಇಷ್ಟವಾಗಿತ್ತೆ. ಇನ್ನು ಉಡುಪಿ ಹೋಟೆಲ್‌ಗಳಲ್ಲಿ ಸಿಗುವ ಈ ಬಿಸಿ ಬೇಳೆ ಬಾತ್ ಮತ್ತೆಲ್ಲೂ ನೀವು ಸವಿದಿರಲು ಸಾಧ್ಯವಿಲ್ಲ.

ಉಡುಪಿ ಹೋಟೆಲ್‌ನ ಈ ಬಿಸಿ ಬೇಳೆ ಬಾತ್ ಎಷ್ಟೊಂದು ಫೇಮಸ್ ಅಂದ್ರೆ ಎಲ್ಲರು ಇದನ್ನೇ ಇಷ್ಟ ಪಡುತ್ತಾರೆ, ನಾವು ಕೂಡ ಇಂದು ಈ ಉಡುಪಿ ಹೋಟೆಲ್ ಸ್ಟೈಲ್‌ನಲ್ಲಿ ಬಿಸಿ ಬೇಳೆ ಬಾತ್ ಮಾಡುವ ಕುರಿತಂತೆ ತಿಳಿದುಕೊಳ್ಳೋಣ. ಬೆಳಗ್ಗೆ ತಿಂಡಿಗೆ ಮನೆಯಲ್ಲಿಯೇ ಈ ಬಿಸಿ ಬೇಳೆ ಬಾತ್ ಮಾಡಿ ಸವಿಯುವುದು ಹೇಗೆ ಎಂಬುದನ್ನು ನೋಡಣ.
ಉಡುಪಿ ಹೋಟೆಲ್ ಸ್ಟೈಲ್‌ನ ಬಿಸಿ ಬೇಳೆ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?, ಮಾಡುವ ವಿಧಾನವೇನು?, ಮಾಡಲು ಎಷ್ಟು ಸಮಯ ಹಿಡಿಯಲಿದೆ? ಎಂಬ ಕುರಿತು ಈ ರೆಸಿಪಿಯಲ್ಲಿ ತಿಳಿದುಕೊಳ್ಳೋಣ.
ಉಡುಪಿ ಸ್ಟೈಲ್‌ನಲ್ಲಿ ಬಿಸಿ ಬೇಳೆ ಬಾತ್ ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು?
- ತೊಗರಿ ಬೇಳೆ
- ಅಕ್ಕಿ
- ಅರಶಿನ
- ಹುಣಸೆ ಹುಳಿ
- ಎಣ್ಣೆ
- ಉಪ್ಪು
- ಬೀನ್ಸ್
- ಕ್ಯಾರೆಟ್
- ನವಿಲು ಕೋಸು
- ಕ್ಯಾಪ್ಸಿಕಂ
- ಎಣ್ಣೆ
- ತುಪ್ಪ
- ಕರಿಬೇವು
- ಟೊಮೆಟೋ
- ಒಣ ಮೆಣಸು
- ಸಾಸಿವೆ
ಉಡುಪಿ ಸ್ಟೈಲ್‌ನಲ್ಲಿ ಬಿಸಿ ಬೇಳೆ ಬಾತ್ ಮಾಡುವುದು ಹೇಗೆ?
ಮೊದಲು ಬಿಸಿ ಬೇಳೆ ಬಾತ್‌ಗೆ ಬೇಕಾದ ತರಕಾರಿಗಳ ಚೆನ್ನಾಗಿ ತೊಳೆದುಕೊಂಡು ಹೆಚ್ಚಿಟ್ಟುಕೊಳ್ಳಬೇಕು. ಎಲ್ಲಾ ತರಕಾರಿಗಳನ್ನು ಸಣ್ಣದಾಗಿ ಹೆಚ್ಚಿಕೊಳ್ಳಿ. ಈಗ ಒಂದು ಬೌಲ್‌ನಲ್ಲಿ ಮುಕ್ಕಾಲು ಕಪ್ ತೊಗರಿ ಬೇಳೆ ಹಾಕಿಕೊಳ್ಳಿ, ಹಾಗೆ 1 ಕಪ್ ಅಕ್ಕಿ ಹಾಕಿ 3 ಬಾರಿ ತೊಳೆದುಕೊಂಡು ನೆನೆಸಿಡಬೇಕು. ಸುಮಾರು 45 ನಿಮಿಷ ಆದರೂ ನೆನೆಯಬೇಕು.
ಈಗ ಕುಕ್ಕರ್ ಅನ್ನು ಒಲೆ ಮೇಲೆ ಇಟ್ಟು ಅದಕ್ಕೆ ನೆನೆಸಿಟ್ಟಿರುವ ಬೇಳೆ ಹಾಗೂ ಅಕ್ಕಿ ಹಾಕಿಕೊಂಡು ಹೆಚ್ಚಿಕೊಂಡಿರುವ ಎಲ್ಲಾ ತರಕಾರಿಗಳನ್ನು ಇದಕ್ಕೆ ಹಾಕಿಕೊಳ್ಳಿ. ನೀವು ಅಕ್ಕಿ ತೆಗೆದುಕೊಂಡ ಕಪ್‌ನಲ್ಲಿಯೇ 7 ಅಥವಾ 8 ಕಪ್ ನೀರು ಹಾಕಿಕೊಳ್ಳಿ. ಇದಕ್ಕೆ ಅರಶಿನ, ಉಪ್ಪು, ಎಣ್ಣೆ ಹಾಕಿ ಮಿಕ್ಸ್ ಮಾಡಿಕೊಂಡು ಕುಕ್ಕರ್ ಮುಚ್ಚಳ ಹಾಕಿ 5 ಸೀಟಿ ಹೊಡೆಯಲು ಬಿಡಬೇಕು.
ಈಗ ಮತ್ತೊಂದು ಕಡೆ ಪಾತ್ರೆಗೆ ನಿಂಬೆ ಹುಳಿ ರಸವನ್ನು ಹಾಕಿಕೊಂಡು ಅದಕ್ಕೆ ಬಿಸಿ ಬೇಳೆ ಪೌಡರ್ ಹಾಕಿಕೊಳ್ಳಿ. ಹಾಗೆ ಇದಕ್ಕೆ ಖಾರದ ಪುಡಿ, ಚಿಕ್ಕದಾದ ಬೆಲ್ಲ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಎಲ್ಲಾ ಅಂಶಗಳು ಕರಗುವಂತೆ ಮಿಕ್ಸ್ ಮಾಡಿಕೊಳ್ಳಿ. ಈಗ ಒಲೆ ಮೇಲೆ ಒಂದು ಪಾತ್ರೆ ಇಟ್ಟು ಅದಕ್ಕೆ ಎಣ್ಣೆ ಹಾಕಿ, ಸಾಸಿವೆ, ಒಣ ಮೆಣಸು, ಟೊಮೆಟೋ, ಕರಿಬೇವು ಹಾಕಿಕೊಂಡು ಫ್ರೈ ಮಾಡಿಕೊಳ್ಳಿ. 5 ನಿಮಿಷ ಫ್ರೈ ಮಾಡಿಕೊಂಡ ಬಳಿಕ ಇದಕ್ಕೆ ಮೊದಲು ಮಿಕ್ಸ್ ಮಾಡಿಕೊಂಡ ಹುಣಸೆ ಹುಳಿ, ಬಿಸಿ ಬೇಳೆ ಬಾತ್ ಪೌಡರ್‌ನ ಮಿಶ್ರಣವನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ನೀರು ಹಾಕಿ (ಅರ್ಧ ಲೋಟ ಹಾಕಿದರೆ ಸಾಕು)
ಬೆಳ್ಳುಳ್ಳಿ ಹಸಿ ಖಾರ ಮಂಡಕ್ಕಿ ಮಾಡಿ ನೋಡಿ..! ನಾಲಗೆ ರುಚಿಗೆ ಇದು ಬೆಸ್ಟ್..
ನಂತರ ಇದನ್ನು ಕುದಿಯಲು ಬಿಡಬೇಕು. ಈಗ ಕುಕ್ಕರ್ ಮುಚ್ಚಳ ತೆಗೆದು ಸ್ವಲ್ಪ ಕಲಸಿಕೊಳ್ಳಿ. ನಂತರ ಒಲೆ ಮೇಲೆ ಕುದಿಯುತ್ತಿರುವ ಮಿಶ್ರಣವನ್ನು ತೆಗೆದುಕೊಂಡು ಕುಕ್ಕರ್‌ನಲ್ಲಿರುವ ಅನ್ನದ ಮಿಶ್ರಣಕ್ಕೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು 3 ನಿಮಿಷ ಕುದಿಯಲು ಬಿಡಿ. ಆಗಾಗ ಕೈ ಆಡಿಸುತ್ತಾ ತುಪ್ಪ ಇದ್ದರೆ ಹಾಕಿ ಒಲೆ ಆಫ್ ಮಾಡಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ರುಚಿ ರುಚಿಯ ಉಡುಪಿ ಸ್ಟೈಲ್‌ನ ಬಿಸಿ ಬೇಳೆ ಬಾತ್ ರೆಡಿಯಾಗುತ್ತೆ.



Click it and Unblock the Notifications