Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಉಡುಪಿ ಹೋಟೆಲ್ ರುಚಿಯ ಎಲೆಕೋಸಿನ ಪಲ್ಯ ಮನೆಯಲ್ಲೇ ಮಾಡಿ! ವಿಶೇಷ ದಿನಕ್ಕೆ ಬೆಸ್ಟ್ ಪಲ್ಯ!
ಊಟದೊಂದಿಗೆ ರುಚಿ ರುಚಿಯಾದ ಪಲ್ಯ ಮಾಡುವುದು ಸಾಮಾನ್ಯ. ಅದ್ರಲ್ಲೂ ವಿಶೇಷ ದಿನಗಳಲ್ಲಿ ವಿಶೇಷ ರೀತಿಯಲ್ಲಿ ಪಲ್ಯ ಮಾಡಲು ಮುಂದಾಗುವುದು ನೋಡಬಹುದು. ಸಾಮಾನ್ಯವಾಗಿ ಹಬ್ಬದಲ್ಲಿ, ಶುಭ ಕಾರ್ಯವಿದ್ದಾಗ, ಅತಿಥಿಗಳು ಬಂದಾಗ ಮನೆಯಲ್ಲಿ ವಿಶೇಷ ರೀತಿಯ ಅಡುಗೆ ಮಾಡುತ್ತಾರೆ. ಈ ಸಮಯಲ್ಲಿ ಬಗೆ ಬಗೆಯ ಖಾದ್ಯಗಳಲ್ಲಿ ಪಲ್ಯವೂ ಸಹ ಸೇರಿರಲಿದೆ.
ನಾನ್ವೆಜ್ ಪ್ರಿಯರು ಸಹ ತರಕಾರಿ ಪಲ್ಯಗಳನ್ನು ಬಹಳ ಇಷ್ಟಪಟ್ಟು ಸವಿಯುತ್ತಾರೆ. ಹಾಗೆ ನಾವಿಂದು ಊಟದ ಸಮಯಕ್ಕೆ ಸವಿಯಲು ಹಾಗೆ ಬಾಯಲ್ಲಿ ನೀರು ತರಿಸುವ ಎಲೆಕೋಸಿನ ಪಲ್ಯ ಮಾಡುವ ಕುರಿತಾಗಿ ತಿಳಿದುಕೊಳ್ಳೋಣ. ಆದ್ರೆ ಈ ಪಲ್ಯವನ್ನು ವಿಶೇಷ ರೀತಿಯಲ್ಲಿ ಮಾಡಿ ಸವಿಯುವ ಕುರಿತು ಅರಿಯೋಣ. ಅದ್ರಲ್ಲೂ ಉಡುಪಿ ಹೋಟೆಲ್ನಲ್ಲಿ ನೀವು ಊಟಕ್ಕೆ ತೆರಳಿದ್ದಾಗ ಅಲ್ಲಿ ನೀಡುವ ಕೋಸು ಪಲ್ಯ ನೀವು ಸಹ ಸವಿದಿರಬಹುದು.

ಈ ಹೋಟೆಲ್ನಲ್ಲಿ ನೀಡುವ ಕೋಸು ಪಲ್ಯವು ಬಹಳ ರುಚಿ ನೀಡಲಿದೆ. ಮತ್ತೆ ಮತ್ತೆ ನೀವು ಹಾಕಿಸಿಕೊಂಡು ಸವಿಯುತ್ತೀರಿ. ಅದೇ ರೀತಿ ಮನೆಯಲ್ಲಿ ಹಬ್ಬ, ವಿಶೇಷ ದಿನದ ಸಂದರ್ಭದಲ್ಲಿ ಸಹ ಇದೇ ರೀತಿಯ ಎಲೆಕೋಸಿನ ಪಲ್ಯ ಮಾಡಿದ್ರೆ ಎಲ್ಲರಿಗೂ ಇಷ್ಟವಾಗೋದು ಖಚಿತ, ಹಾಗಾದ್ರೆ ಈ ರುಚಿ ರುಚಿಯಾದ ಹೋಟೆಲ್ ರುಚಿಯಲ್ಲಿ ಎಲೆಕೋಸಿನ ಪಲ್ಯ ಮಾಡೋದು ಹೇಗೆ?
ಎಲೆಕೋಸಿನ ಪಲ್ಯ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಹೋಟೆಲ್ ಸ್ಟೈಲ್ನ ಎಲೆಕೋಸಿನ ಪಲ್ಯ ಮಾಡಲು ಬೇಕಾಗುವ ವಸ್ತುಗಳು
- ಎಲೆಕೋಸು
- ಜೀರಿಗೆ
- ಸಾಸಿವೆ
- ತೆಂಗಿನಕಾಯಿ ತುರಿ
- ಕಡಲೆ ಬೇಳೆ
- ಉದ್ದಿನ ಬೇಳೆ
- ಇಂಗು
- ಕರಿಬೇವು
- ಅರಶಿಣ ಪುಡಿ
- ಎಣ್ಣೆ
- ಉಪ್ಪು
- ಈರುಳ್ಳಿ
ಹೋಟೆಲ್ ಸ್ಟೈಲ್ನ ಎಲೆಕೋಸಿನ ಪಲ್ಯ ಮಾಡುವ ವಿಧಾನವೇನು?
ಮೊದಲು ಎಲೆಕೋಸನ್ನು ಸಣ್ಣದಾಗಿ ಹೆಚ್ಚಿಕೊಂಡು ನೀರಿಗೆ ಹಾಕಬೇಕು. ನಿಮಗೆ ಯಾವ ವಿಧಾನದಲ್ಲಿ ಬೇಕಾದರು ಹೆಚ್ಚಿಕೊಳ್ಳಿ. ಇಲ್ಲವೆ ತುರಿದುಕೊಳ್ಳಿ. ನೀರಿಗೆ ಹಾಕಿ ಉಪ್ಪು ಹಾಕಿ 5 ನಿಮಿಷ ನೆನೆಸಿಟ್ಟು ಬಳಿಕ ಹಿಂಡಿಕೊಂಡು ಮತ್ತೊಂದು ಪಾತ್ರೆಗೆ ಹಾಕಿಟ್ಟುಕೊಳ್ಳಿ. ಈಗ ಒಲೆ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಬಿಸಿಯಾದ ಬಳಿಕ ಸಾಸಿವೆ, ಜೀರಿಗೆ, ಉದ್ದಿನ ಬೇಳೆ, ಕರಿಬೇವು, ಇಂಗು, ಕಡಲೆ ಬೇಳೆ, ಹಸಿ ಮೆಣಸು, ಅರಶಿಣ ಸಹ ಹಾಕಿಕೊಂಡು ಬಿಸಿ ಮಾಡಿ.
ಅನಂತರ ಇದಕ್ಕೆ ತೊಳೆದುಕೊಂಡಿದ್ದ ಕೋಸನ್ನು ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಗೆ 2 ಸ್ಪೂನ್ ಅಷ್ಟು ಪುಡಿ ಬೆಲ್ಲ ಹಾಕಿಕೊಂಡು ಮಿಶ್ರಣ ಮಾಡಿ ಮುಚ್ಚಳ ಮುಚ್ಚಿ ಬೇಯಲು ಬಿಡಿ.
ಇನ್ನೊಂದು ಕಡೆ ಮಿಕ್ಸಿ ಜಾರ್ಗೆ ತೆಂಗಿನಕಾಯಿ ತುರಿ, ಒಣ ಮೆಣಸು, ಸಾಸಿವೆ ಹಾಕಿ ನೀರು ಹಾಕದೆಯೇ ಪುಡಿ ಮಾಡಿಕೊಳ್ಳಿ. ಈಗ ಒಲೆ ಮೇಲೆ ಬೇಯುತ್ತಿರುವ ಪಲ್ಯಕ್ಕೆ ಈ ಮಸಾಲೆ ಪುಡಿಯನ್ನು ಹಾಕಿಕೊಂಡು ಮಿಶ್ರಣ ಮಾಡಿಕೊಳ್ಳಿ. ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ ಹಾಗೆ ಮತ್ತೆ ಬೇಯಲು ಬಿಡಿ. ತಳ ಹಿಡಿಯದಂತೆ ಆಗಾಗ ಮಿಕ್ಸ್ ಮಾಡುತ್ತಾ ಇರಿ. ಇಷ್ಟಾದರೆ ಹೋಟೆಲ್ನಲ್ಲಿ ಮಾಡುವ ಅದ್ಭುತ ರುಚಿಯ ಸಿಂಪಲ್ ಎಲೆಕೋಸಿನ ಪಲ್ಯ ಸಿದ್ದವಾಗುತ್ತೆ. ನೀವು ಸಹ ಮನೆಯಲ್ಲಿ ಈ ಪಲ್ಯವನ್ನು ಮಾಡಿ ಸವಿದು ನೋಡಿ.



Click it and Unblock the Notifications