Latest Updates
-
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು
ಬಾಯಲ್ಲಿ ನೀರು ತರಿಸುವ ಉದ್ದಿನ ಬೋಂಡಾ ಚಟ್ನಿ! 10 ನಿಮಿಷದಲ್ಲಿ ಮಾಡಿ!
ಮನೆಯಲ್ಲಿ ಎಲ್ಲರು ಕುಳಿತು ಸವಿಯುವಂತೆ ಹಾಗೆ ಊಟದೊಂದಿಗೆ, ಸಂಜೆ ಸ್ನ್ಯಾಕ್ಸ್ ಆಗಿ ಸವಿಯುವಂತೆ ಯಾವುದಾದರು ಖಾದ್ಯ ಮಾಡುವ ನಿಮ್ಮ ಬಯಕೆ ಇದ್ದರೆ ಈ ಬೋಂಡಾ ಮಾಡಿ ಸವಿಯಬಹುದು. ಅದ್ರಲ್ಲೂ ಉದ್ದಿನ ಬೋಂಡಾ ಹೆಸರು ಕೇಳಿದ್ರೆ ಹಲವರ ಬಾಯಲ್ಲಿ ನೀರು ತರಿಸುತ್ತೆ. ಊಟದೊಂದಿಗೆ ಹಾಗೆ ಸಂಜೆ ಸ್ನ್ಯಾಕ್ಸ್ ಸವಿಯುವಾಗಲು ಇದು ನಿಮ್ಮ ಬಾಯಿ ರುಚಿ ಹೆಚ್ಚಿಸುವ ತಿಂಡಿ ಆಗಿರಲಿದೆ.
ನೀವು ಮನೆಯಲ್ಲಿ ವಿಶೇಷ ಖಾದ್ಯಗಳ ಮಾಡಿ ಸವಿಯುವಾಗಲು ಅದರೊಂದಿಗೆ ಸೈಡ್ ಡಿಷ್ ಆಗಿ ಈ ಬೋಂಡಾ ಮಾಡಿಕೊಳ್ಳಬಹುದು. ಹಬ್ಬದಿಂದ ಹಿಡಿದು, ಮಕ್ಕಳಿಗೆ ಈ ಬೋಂಡಾ ಮಾಡಿ ನೀಡಿದರೆ ಬಾಯಿ ಚಪ್ಪರಿಸಿ ಸವಿಯೋದು ನೋಡಬಹುದು. ತಿಂಡಿ ಊಟದೊಂದಿಗೆ ಸವಿಯಲು ಈ ಬೋಂಡಾ ಬಹಳ ರುಚಿ ನೀಡಲಿದೆ.

ಹಾಗಾದ್ರೆ ಮನೆಯಲ್ಲಿ ಮಾಡಿ ಸವಿಯಬಹುದಾದ ಈ ಉದ್ದಿನ ಬೋಂಡಾ ಮಾಡುವ ವಿಧಾನದ ಕುರಿತು ಇಲ್ಲಿ ತಿಳಿದುಕೊಳ್ಳೋಣ. ಹಾಗಾದ್ರೆ ಈ ಉದ್ದಿನ ಬೋಂಡಾ ಮಾಡಲು ಯಾವೆಲ್ಲಾ ವಸ್ತುಗಳು ಬೇಕು? ಮಾಡುವ ವಿಧಾನವೇನು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.
ಉದ್ದಿನ ಬೋಂಡಾ ಮಾಡಲು ಬೇಕಾಗುವ ವಸ್ತುಗಳು ಯಾವುದು?
- ಉದ್ದಿನ ಬೇಳೆ - 1 ಕಪ್
- ತೊಗರಿ ಬೇಳೆ - 1/4 ಕಪ್
- ಈರುಳ್ಳಿ - 1/2
- ಬೆಳ್ಳುಳ್ಳಿ
- ಶುಂಠಿ
- ಹಸಿ ಮೆಣಸಿನಕಾಯಿ
- ಕೊತ್ತಂಬರಿ ಸೊಪ್ಪು
- ಕರಿಬೇವು
- ಅಡುಗೆ ಸೋಡಾ
- ರುಚಿಗೆ ಉಪ್ಪು
- ಅಡುಗೆ ಎಣ್ಣೆ
ಉದ್ದಿನ ಬೋಂಡಾ ಮಾಡುವ ಸುಲಭದ ವಿಧಾನವೇನು?
ಮೊಲದು ಒಂದು ಕಪ್ ಉದ್ದಿನ ಬೇಳೆ ಹಾಗೂ ಕಾಲು ಕಪ್ ತೊಗರಿ ಬೇಳೆಯನ್ನು ಬೇರೆ ಬೇರೆ ಬೌಲ್‌ನಲ್ಲಿ ಹಾಕಿ ಚೆನ್ನಾಗಿ ತೊಳೆದುಕೊಂಡು ಬಳಿಕ ಮುಳುಗುವಷ್ಟು ನೀಡು ಹಾಕಿ ನೆನೆಸಿಡಬೇಕು. ಸುಮಾರು 1 ಗಂಟೆಯಾದರು ಇದನ್ನು ನೆನೆಯಲು ಬಿಡಿ. ಈಗ ಒಂದು ಮಿಕ್ಸಿ ಜಾರ್‌ನಲ್ಲಿ ಈ ಎರಡೂ ಪದಾರ್ಥಗಳನ್ನು ರುಬ್ಬಿಕೊಳ್ಳಬೇಕು. ರುಬ್ಬಿಕೊಳ್ಳುವಾಗಲೇ ಇದಕ್ಕೆ ಹಸಿ ಮೆಣಸು, ಶುಂಠಿ, ಬೆಳ್ಳುಳ್ಳಿ ಹಾಕಿಕೊಂಡು ರುಬ್ಬಬೇಕು.
ಇದು ಗಟ್ಟಿಯಾಗಿ ರುಬ್ಬಿರಬೇಕು. ಅಂದರೆ ಮೆಣಸಿನ ಬೋಂಡಾ ಮಾಡಲು ಬಳಸುವ ಹಿಟ್ಟಿನ ಹದದಂತೆ ಮಾಡಬೇಕು. ಈಗ ಈ ಬೌಲ್‌ಗೆ ಸ್ವಲ್ಪ ಉಪ್ಪು ಸಹ ಹಾಕಿಕೊಂಡು ಮಿಕ್ಸ್ ಮಾಡಿ ಇದಕ್ಕೆ ಕೊತ್ತಂಬರಿ, ಈರುಳ್ಳಿ, ಕರಿಬೇವು ಸಣ್ಣದಾಗಿ ಕತ್ತರಿಸಿ ಹಾಕಿಕೊಳ್ಳಿ. ಹಾಗೆ ಚಿಟಿಕೆ ಸೋಡಾ ಕೂಡ ಹಾಕಿಕೊಂಡು ಮಿಕ್ಸ್ ಮಾಡಿಕೊಳ್ಳಿ.
ಚೆನ್ನಾಗಿ ಮಿಕ್ಸ್ ಮಾಡುವಾಗ ಒಲೆ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ ಕಾಯಲು ಬಿಡಿ. ನಂತರ ಕೈಯನ್ನು ನೀರಿನಲ್ಲಿ ಅದ್ದಿಕೊಂಡು ನಿಂಬೆ ಗಾತ್ರಕ್ಕಿಂತ ಸ್ವಲ್ಪ ಚಿಕ್ಕದಾದ ಉಂಡೆಯನ್ನು ಎಣ್ಣೆಗೆ ಇಳಿಬಿಡಿ. ಇದು 10 ನಿಮಿಷ ಆದರೂ ಕರಿಯಬೇಕು. ಹೊರಗೆ ಮಾತ್ರವಲ್ಲ ಒಳಗೂ ಕೂಡ ಬೇಯಬೇಕಾದರೆ ಮಧ್ಯಮ ಉರಿಯಲ್ಲಿ ಬೇಯಿಸಿಕೊಳ್ಳಬೇಕು.
ಇಷ್ಟಾದರೆ ನಿಮ್ಮ ಮುಂದೆ ಈ ಉದ್ದಿನ ಬೋಂಡಾ ರೆಡಿಯಾಗುತ್ತದೆ. ಊಟದೊಂದಿಗೆ ತಿಂಡಿಯೊಂದಿಗೆ ಸ್ನ್ಯಾಕ್ಸ್ ಆಗಿ ಸವಿಯಲು ಇದು ಅದ್ಭುತ ರುಚಿ ನೀಡಲಿದೆ. ನೀವು ಕೂಡ ಇದನ್ನು ಮನೆಯಲ್ಲಿ ಟ್ರೈ ಮಾಡಿ ನೋಡಿ. ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಇದರೊಂದಿಗೆ ಶೇಂಗಾ ಅಥವಾ ಕಾಯಿ ಚಟ್ನಿಯ ಕಾಂಬಿನೇಷನ್ ರುಚಿ ಹೆಚ್ಚಿಸಲಿದೆ.
ನೀವು ಕೂಡ ಮನೆಯಲ್ಲಿ ಮಕ್ಕಳಿಗೆ ಇಷ್ಟವಾಗುವ ಈ ಬೋಂಡಾ ಮಾಡಿ ನೋಡಿ. ಹಬ್ಬದ ಸಮಯದಲ್ಲೂ ಇದನ್ನು ಮಾಡಬಹುದು. ಕಡಿಮೆ ಸಮಯದಲ್ಲಿ ಮಾಡಿ ಮುಗಿಸಬಹುದು.



Click it and Unblock the Notifications
